Ronny Movie Review: ಬಣ್ಣದ ಕನಸಿಗೆ ರಕ್ತ ಲೇಪನ
Team Udayavani, Sep 14, 2024, 10:44 AM IST
ಜೀವನವೇ ಹಾಗೆ, ಅಂದು ಕೊಂಡಿದ್ದು ಯಾವುದೂ ಆಗುವುದಿಲ್ಲ. ಎಲ್ಲವೂ ಸುಸೂತ್ರವಾಗಿ ಸಾಗುವಾಗ ಒಂದಿಲ್ಲೊಂದು ಅಡಚಣೆ ಎದುರಾಗುತ್ತಲೇ ಇರುತ್ತವೆ. ಕೆಲ ಆಕಸ್ಮಿಕ ಘಟನೆಗಳು ಬದುಕಿನ ದಿಕ್ಕನ್ನೇ ಬದಲಿಸುತ್ತವೆ. ಇದೇ ಎಳೆಯನ್ನು ಕಥೆಯನ್ನಾಗಿ ಪೋಣಿಸಿದ್ದಾರೆ ನಿರ್ದೇಶಕ ಗುರುತೇಜ್ ಶೆಟ್ಟಿ. ಈ ವಾರ ತೆರೆಕಂಡಿರುವ “ರಾನಿ’ ಚಿತ್ರ (Ronny Movie), ಮೇಲ್ನೋಟಕ್ಕೆ ರೌಡಿಸಂ, ಭೂಗತಲೋಕ ಎಂದೆಲ್ಲ ಬಿಂಬಿತವಾದರೂ ಇಲ್ಲಿ ಕಥಾನಾಯಕನ ಸಂವೇದನೆಯನ್ನು ಮನಮುಟ್ಟುವಂತೆ ತೋರಿಸಿದ್ದಾರೆ.
ರಾಘವ ಅಲಿಯಾಸ್ ರಾನಿ ಚಿತ್ರದ ಕಥಾನಾಯಕ. ಅವನ ಬದುಕಿನ ವ್ಯಥೆಯೇ ಈ ಸಿನಿಮಾದ ಮೂಲ ವಿಷಯ. ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಮಿಂಚಿ, ದೊಡ್ಡ ಸ್ಟಾರ್ ಆಗಬೇಕೆಂಬ ಕನಸು ಹೊತ್ತ ನಾಯಕನಿಗೆ ಜೊತೆಯಾಗುತ್ತಾಳೆ ನಾಯಕಿ. ತನ್ನ ಕನಸಿನಂತೆ ಸಿನಿಮಾದಲ್ಲಿ ಕ್ಯಾಮರಾ ಮುಂದೆ ನಟಿಸಬೇಕಿದ್ದ ನಾಯಕ ದುರ್ಘಟನೆಯೊಂದರಲ್ಲಿ ಸಿಲುಕುತ್ತಾನೆ. ಮುಂದೇನಾಗುತ್ತದೆ ಎಂಬುದನ್ನು ತೆರೆಮೇಲೆ ನೋಡಿದರೆ ಚೆಂದ.
ಬಹುತೇಕ ಚಿತ್ರಗಳಲ್ಲಿ ನಾಯಕ ನಟಿಯ ಪಾತ್ರಗಳನ್ನು ಸೀಮಿತ ಗೊಳಿಸಲಾಗುತ್ತದೆ. ಆದರೆ ರಾನಿ ಹಾಗಲ್ಲ. ಇಲ್ಲಿ ಬರುವ ಮೂರೂ ನಾಯಕಿಯರು ಕಥೆಗೆ ಹೊಸ ತಿರುವು ನೀಡುತ್ತಾರೆ. ನಾಯಕನ ಪಾತ್ರದ ತೂಕಕ್ಕೆ ಸರಿಸಮವಾಗಿ ನಾಯಕಿಯರದ್ದೂ ಇರುವುದು ವಿಶೇಷ ಎನ್ನಬಹುದು.
ಕಥೆ ಸಾಗುತ್ತಿದ್ದಂತೆ ಅಲ್ಲಲ್ಲಿ ಗೊಂದಲಗಳೂ ಸೃಷ್ಟಿಯಾದರೂ, ಕ್ಲೈಮಾಕ್ಸ್‌ನಲ್ಲಿ ಉತ್ತರ ಕಂಡುಕೊಳ್ಳಬಹುದು. ಎರಡು ಟ್ರ್ಯಾಕ್‌ನಲ್ಲಿ ಆರಂಭವಾಗುವ ಕಥೆ, ಪ್ರೇಕ್ಷಕ ನಿರೀಕ್ಷಿಸದ ಅಂತ್ಯವನ್ನು ಕಾಣುತ್ತದೆ. ಸಾಮಾನ್ಯ ಕಥೆಯೊಂದನ್ನು ತಾಂತ್ರಿಕ ಅಂಶಗಳು ಮುನ್ನಡೆಸಿಕೊಂಡು ಹೋಗುತ್ತವೆ. ನಿರ್ದೇಶಕ ಗುರುತೇಜ್ ಶೆಟ್ಟಿ ಇಲ್ಲಿ ಜಾಣ್ಮೆ ತೋರಿದ್ದಾರೆ.
ಕ್ಲಾಸ್ ಪಾತ್ರಗಳಿಂದ ಮನೆಮಾತಾಗಿದ್ದ ನಟ ಕಿರಣ ರಾಜ್, ಮಾಸ್ ಅವತಾರದಲ್ಲೂ ನಟಿಸಬಲ್ಲೆ ಎಂದು ರಾನಿ ಮೂಲಕ ಸಾಬೀತು ಪಡಿಸಿದ್ದಾರೆ. ಇಲ್ಲಿ ಅವರದ್ದು ಒಂದೇ ಪಾತ್ರ ಎರಡೂ ಛಾಯೆ. ರಾದ್ಯಾ ಹಾಗೂ ಸಮೀಕ್ಷಾ ತಮ್ಮ ನಟನೆ ಮೂಲಕ ಭರವಸೆ ಮೂಡಿಸಿದ್ದಾರೆ. ಅಪೂರ್ವ ಅವರ ಪೊಲೀಸ್ ಪಾತ್ರ ಗಮನ ಸೆಳೆಯುತ್ತದೆ. ರವಿಶಂಕರ್ ಅವರ ಖಳನಟನೆ ಬಗ್ಗೆ ಎರಡು ಮಾತಿಲ್ಲ.
ಸಂಭಾಷಣೆ ಹಾಗೂ ಛಾಯಾಗ್ರಹಣ ಚಿತ್ರದ ಪ್ಲಸ್ ಪಾಯಿಂಟ್. ಉಳಿದಂತೆ ಧರ್ಮಣ್ಣ ಕಡೂರ್, ಸೂರ್ಯ ಕುಂದಾಪುರ, ಯಶ್ ಶೆಟ್ಟಿ, ಉಗ್ರಂ ಮಂಜು ನಟಿಸಿದ್ದಾರೆ. ಕ್ಲಾಸ್ ಹಾಗೂ ಮಾಸ್ ಎರಡೂ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುತ್ತಾನೆ ರಾನಿ.
ನಿತೀಶ ಡಂಬಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.