ಚಿತ್ರ ವಿಮರ್ಶೆ; ಗೆಲುವಿನ ಓಟದತ್ತ ಚಾಂಪಿಯನ್‌


Team Udayavani, Oct 15, 2022, 12:26 PM IST

champion

ಆತ ಅಥ್ಲೆಟ್‌ನಲ್ಲಿ “ಚಾಂಪಿಯನ್‌’ ಆಗುವ ಕನಸು ಕಟ್ಟಿಕೊಂಡಿರುವ ಹುಡುಗ. ಅದಕ್ಕಾಗಿ ಹಗಲಿರುಳು ಕಠಿಣ ತರಬೇತಿ ಪಡೆದುಕೊಳ್ಳುತ್ತಿರುವ, ಆತನ ಕನಸಿಗೆ ಹೆತ್ತವರು, ಸ್ನೇಹಿತರು, ಕೋಚ್‌ ಹೀಗೆ ಎಲ್ಲರೂ ಸಾಥ್‌ ನೀಡುತ್ತಿರುತ್ತಾರೆ. ಯಂಗ್‌ ಆ್ಯಂಡ್‌ ಎನರ್ಜಿಟಿಕ್‌ ಆಗಿರುವ, ನೋಡಲು ಫಿಟ್‌ ಆ್ಯಂಡ್‌ ಫೈನ್‌ ಆಗಿ ಕಾಣುವ ಈ ಹುಡುಗನಿಗೊಂದು ಅಪರೂಪದ ಖಾಯಿಲೆ. ತನ್ನ ದೇಹದಲ್ಲಿ ಏನಾದರೂ ಚಿಕ್ಕ ಗಾಯವಾದರೂ ಸಾಕು, ಅದರಿಂದ ರಕ್ತ ಸ್ರವಿಸಿ ಆತ ಸಾಯುವ ಸ್ಥಿತಿಗೆ ತಲುಪುತ್ತಾನೆ. ಇಂಥದ್ದೊಂದು ಮಾರಣಾಂತಿಕ ವಿಷಯ ಗೊತ್ತಿದ್ದರೂ, ಆತ ರಿಸ್ಕ್ ತೆಗೆದುಕೊಂಡು ಮುನ್ನಡೆಯುತ್ತಿರುತ್ತಾನೆ. ಇದೇ ವೇಳೆ ಎದುರಾಗುವ ಕೆಲವು ಅನಿರೀಕ್ಷಿತ ತಿರುವುಗಳು ಈ ಹುಡುಗನಿಗೆ ಹೆಜ್ಜೆ ಹೆಜ್ಜೆ ಎದುರಾಳಿಗಳು ಹುಟ್ಟಿಕೊಳ್ಳುವಂತೆ ಮಾಡುತ್ತದೆ. ಅಂತಿಮವಾಗಿ ಈ ಎಲ್ಲ ಎದುರಾಳಿಗಳನ್ನು ಎದುರಿಸಿ ಹುಡುಗ “ಚಾಂಪಿಯನ್‌’ ಆಗುತ್ತಾನಾ? ಇಲ್ಲವಾ? ಎನ್ನುವುದು ಕ್ಲೈಮ್ಯಾಕ್ಸ್‌ ವೇಳೆಗೆ ಗೊತ್ತಾಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಚಾಂಪಿಯನ್‌’ ಸಿನಿಮಾದ ಕಥಾಹಂದರ.

ಒಂದು ಕ್ರೀಡಾ ಹಿನ್ನೆಲೆಯ ಕಥೆಯನ್ನು ಇಟ್ಟುಕೊಂಡು, ಅದರ ಜೊತೆಗೆ ಲವ್‌, ಆ್ಯಕ್ಷನ್‌, ಫ್ಯಾಮಿಲಿ ಸೆಂಟಿಮೆಂಟ್‌, ಕಾಮಿಡಿ ಹೀಗೆ ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಅಂಶಗಳನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ “ಚಾಂಪಿಯನ್‌’. ಒಂದು ಸರಳವಾದ ಕಥೆಯನ್ನು ಇಟ್ಟುಕೊಂಡು ಎಲ್ಲೂ ಬೋರ್‌ ಆಗದಂತೆ, ತೆರೆಮೇಲೆ ಹೇಳುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.

ಇನ್ನು ನವನಟ ಸಚಿನ್‌ ಧನ್ಪಾಲ್‌ ಮೊದಲ ಸಿನಿಮಾದಲ್ಲೇ ನಾಯಕ ನಟನಾಗಿ ತನ್ನ ಮ್ಯಾನರಿಸಂ ಮೂಲಕ ತೆರೆಮೇಲೆ ಗಮನ ಸೆಳೆಯುತ್ತಾರೆ. ಆ್ಯಕ್ಷನ್‌, ಡ್ಯಾನ್ಸ್‌ ಎಲ್ಲದರಲ್ಲೂ ಸಚಿನ್‌ ತೆರೆಹಿಂದೆ ಹಾಕಿರುವ ಪರಿಶ್ರಮ ತೆರೆಮೇಲೆ ಕಾಣುತ್ತದೆ. ಪಾತ್ರ ಪೋಷಣೆ ಕಡೆಗೆ ಇನ್ನಷ್ಟು ಗಮನ ನೀಡಿದರೆ, ಸಚಿನ್‌ ಚಿತ್ರರಂಗದಲ್ಲಿ ಭವಿಷ್ಯದ ಭರವಸೆಯ ನಟನಾಗುವ ಭರವಸೆ ಮೂಡಿಸುತ್ತಾರೆ. ನಾಯಕಿ ಅದಿತಿ ಪ್ರಭುದೇವ ಕಾಲೇಜ್‌ ಹುಡುಗಿಯಾಗಿ ತುಂಬ ಲೈವ್ಲಿಯಾಗಿ ತೆರೆ ಮೇಲೆ ಕಾಣುತ್ತಾರೆ. ಖಳನಟರಾಗಿ ಪ್ರದೀಪ್‌ ರಾವತ್‌, ಆದಿ ಲೋಕೇಶ್‌, ಕೋಚ್‌ ಆಗಿ ದೇವರಾಜ್‌ ಅವರದ್ದು ಪಾತ್ರಕ್ಕೆ ತಕ್ಕನಾದ ಪರಿಪೂರ್ಣ ಅಭಿನಯ. ಇನ್ನಿತರ ಪಾತ್ರಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.

ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ, ಸಂಕಲನ, ಕಲರಿಂಗ್‌, ಸುಂದರ ಲೊಕೇಶನ್ಸ್‌, ಬೃಹತ್‌ ಸೆಟ್‌ಗಳು “ಚಾಂಪಿಯನ್‌’ ಸಿನಿಮಾವನ್ನು ತೆರೆಮೇಲೆ ಕಲರ್‌ಫ‌ುಲ್‌ ಆಗಿ ಕಾಣುವಂತೆ ಮಾಡುತ್ತದೆ. ಸಿನಿಮಾದ ಎರಡು ಹಾಡುಗಳು ಪ್ರೇಕ್ಷಕರು ಗುನುಗುವಂತಿದೆ. ಅತಿಯಾದ ನಿರೀಕ್ಷೆಯಿಲ್ಲದೆ ವಾರಾಂತ್ಯದಲ್ಲಿ ಔಟ್‌ ಆ್ಯಂಡ್‌ ಔಟ್‌ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಸಿನಿಮಾ ಬಯಸುವವರು ಒಮ್ಮೆ “ಚಾಂಪಿಯನ್‌’ ನೋಡಿ ಬರಬಹುದು.

 ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

8-

Panaji: ಕಲಂಗುಟ್ ಬೀಚ್ ನಲ್ಲಿ ಪ್ರವಾಸಿ ಕೊಲೆ

Glass Bridge: India’s first glass bridge inaugurated at Kanyakumari

Glass Bridge: ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗಾಜಿನ ಸೇತುವೆ ಉದ್ಘಾಟನೆ

Rane-Kerala-Cm

Rane’s Remark: ಕೇರಳ ʼಮಿನಿ ಪಾಕಿಸ್ಥಾನʼವೆಂದ ಸಚಿವ ನಿತೇಶ್ ರಾಣೆ; ಸಿಎಂ ಪಿಣರಾಯಿ ಖಂಡನೆ

Team India;  key players to miss England series; young batsman takes on leadership role

Team India: ಇಂಗ್ಲೆಂಡ್‌ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್‌ ಗೆ ನಾಯಕತ್ವದ ಹೊಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Out of syllabus movie review

Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್‌

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-

Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ

ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.