ಸಮರ್ಥನೆ ಕಷ್ಟ; ಹೇಗಿದೆ ನೋಡಿ ಈ ಸಿನಿಮಾ!


Team Udayavani, Jul 21, 2018, 3:41 PM IST

samartha102.jpg

ನಿರ್ದೇಶಕ ಎಸ್‌ಜಿಆರ್‌ (ಗೋವಿಂದು) ಅವರ ಕಲ್ಪನೆ ನಿಜಕ್ಕೂ ಅದ್ಭುತ! ಇಷ್ಟು ಹೇಳಿದ ಮೇಲೆ ಸಿನಿಮಾದಲ್ಲಿ ಏನೋ ಇರಬೇಕು, ಅಂತಂದುಕೊಂಡು ಹೋದರೆ ಅದು ಅವರವರ ಜವಾಬ್ದಾರಿ. ಮೊದಲೇ ಹೇಳಿದಂತೆ, ಇಲ್ಲಿ ನಿರ್ದೇಶಕರು ಕನಸಿಗೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ಸಿನಿಮಾದುದ್ದಕ್ಕೂ ಕೆಲ ದೃಶ್ಯಗಳನ್ನು ತೋರಿಸಿ, ಆ ಬಳಿಕ ಅದು “ಕನಸು’ ಅಂತ ಹೇಳುವುದರಲ್ಲೇ ಅರ್ಧ ಸಿನಿಮಾ ಮುಗಿಸುವ ಪ್ರಯತ್ನದಲ್ಲಿ ತಕ್ಕಮಟ್ಟಿಗೆ ಯಶಸ್ವಿ. ಯಾವುದೇ ಒಂದು ಕಥೆಗಾದರೂ ಚೌಕಟ್ಟು ಬಹಳ ಮುಖ್ಯ. ಆದರೆ, ಇಲ್ಲಿ ಚೌಕಟ್ಟೇ ಇಲ್ಲದ ಕಥೆ ಹಿಡಿದು, ಮನಸ್ಸಿಗೆ ಬಂದ ದೃಶ್ಯಗಳನ್ನು ಪೋಣಿಸಿ, ನೋಡುಗರ ತಾಳ್ಮೆ ಪರೀಕ್ಷಿಸಲಾಗಿದೆ. ಎಲ್ಲವನ್ನೂ ಸಮಾಧಾನವಾಗಿ ಯೋಚಿಸಿ, ಮಾಡಿದ್ದರೆ ಚಿತ್ರವನ್ನು “ಸಮರ್ಥ’ವಾಗಿ ಕಟ್ಟಿಕೊಡಲು ಸಾಧ್ಯವಿತ್ತು.

ಕಥೆಯಲ್ಲಿ ತಕ್ಕಮಟ್ಟಿಗೆ ಸಾರವಿದೆ. ಆದರೆ, ಅದನ್ನು ಸರಿಯಾಗಿ ನಿರೂಪಿಸುವುದಕ್ಕೆ ನಿರ್ದೇಶಕರಿಂದ ಆಗಿಲ್ಲ. ಯಾರಿಗಾದರೂ ಒಳ್ಳೆಯದ್ದನ್ನು ಮಾಡಿದರೆ, ಬೇರೆಯವರು ಯಾವಾಗಾದರೂ ನಮಗೆ ಒಳ್ಳೆಯದ್ದನ್ನು ಮಾಡುತ್ತಾರೆ ಎಂಬ ಒಂದೇ ಒಂದು ಅಂಶ ಇಟ್ಟುಕೊಂಡು, ಇಡೀ ಚಿತ್ರಕಥೆಯನ್ನು ಎಳೆದಾಡಿರುವುದೇ ಬೇಸರದ ಸಂಗತಿ. ಇದು ಬಿಟ್ಟರೆ “ಸಮರ್ಥ’ನೆ ಕಂಡುಕೊಳ್ಳುವುದು ಕಷ್ಟ. ಸಿನಿಮಾ ಅಂದಮೇಲೆ ಹಾಸ್ಯಕ್ಕೆ ಜಾಗ ಇರಲೇಬೇಕು. 

ಆದರೆ, ಇಲ್ಲಿ ಸಿಕ್ಕ ಜಾಗದಲ್ಲೆಲ್ಲಾ ಹಾಸ್ಯವನ್ನು ಬಲವಂತವಾಗಿ ತುರುಕಲಾಗಿದೆ. ಹೋಗಲಿ, ಆ ಹಾಸ್ಯ ಸನ್ನಿವೇಶಗಳಿಗೆ ನಗುವಾದರೂ ಬರುತ್ತಾ? ಅದನ್ನಂತೂ ಕೇಳುವಂತಿಲ್ಲ. ಹಾಸ್ಯ ಅಪಹಾಸ್ಯವಾಗಿರುವುದೇ ಹೆಚ್ಚು. ಒಂದಕ್ಕೊಂದು ಲಿಂಕ್‌ ಇಲ್ಲದ ದೃಶ್ಯಗಳನ್ನು ಆದಷ್ಟು ಬದಿಗಿರಿಸಿದ್ದರೆ, “ಸಮರ್ಥ’ನ ಹೋರಾಟವನ್ನಾದರೂ ಮೆಚ್ಚಬಹುದಿತ್ತು. ಸಮರ್ಥನ ಹೋರಾಟದ ಹಾದಿಯೇನೋ ಚೆನ್ನಾಗಿದೆ. ಇಡೀ ಚಿತ್ರದಲ್ಲಿ ಪರಿಸರದ ಕಾಳಜಿಯ ಜೊತೆಗೆ, ಮಾನವೀಯ ಮೌಲ್ಯವುಳ್ಳ ಸಂದೇಶವೂ ಇದೆ. ಅದನ್ನು ಇನ್ನಷ್ಟು ಅಚ್ಚುಕಟ್ಟಾಗಿ ನಿರ್ವಹಿಸಿದ್ದರೆ, ಸಮರ್ಥನ ಪ್ರಾರ್ಥನೆ ಫ‌ಲಿಸುತ್ತಿತ್ತು. ಆದರೆ, ಅದಕ್ಕೆ ನಿರ್ದೇಶಕರು ಅವಕಾಶ ಮಾಡಿಕೊಟ್ಟಿಲ್ಲ.

ಸಮರ್ಥ ಒಬ್ಬ ಕಾಲೇಜು ಪ್ರೊಫೆಸರ್‌. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಪ್ರೊಫೆಸರ್‌ ಅಂದುಕೊಳ್ಳುವಂತಿಲ್ಲ. ಅಂತಹ ಯಾವುದೇ ದೃಶ್ಯವೂ ಇಲ್ಲ. ಆದರೆ, ಪ್ರೊಫೆಸರ್‌ ಪಾಠದ ಬದಲು ಫೈಟು ಮಾಡ್ತಾನೆ, ತನ್ನ ಕಾಲೇಜು ವಿದ್ಯಾರ್ಥಿನಿಯನ್ನು ಲವ್ವು ಮಾಡ್ತಾನೆ. ಕಿಡ್ನಾಪ್‌ ನಾಟಕವಾಡಿ, ಕಷ್ಟದಲ್ಲಿರುವವರ ಸಹಾಯಕ್ಕೆ ನಿಲ್ಲುತ್ತಾನೆ. ಪ್ರೊಫೆಸರ್‌ ಹೊಡೆದಾಡೋದು, ಲವ್‌ ಮಾಡೋದು, ಕಿಡ್ನಾಪ್‌ ಮಾಡೋದು ಯಾಕೆ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ, ಚಿತ್ರ ನೋಡುವ ಮನಸ್ಸು ಮಾಡಬಹುದು. ಇಷ್ಟೆಲ್ಲಾ ಇದ್ದರೂ, ಕೊನೆಯಲ್ಲೊಂದು ಚಿಕ್ಕ ಸಂದೇಶವಿದೆ. ಅದನ್ನು ತಿಳಿಯುವ ಕುತೂಹಲಕ್ಕಾದರೂ ಚಿತ್ರ ನೋಡಲ್ಲಡ್ಡಿಯಿಲ್ಲ.

ರವಿ ಶಿರೂರ್‌ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಹರ”ಸಾಹಸ’ ಪಟ್ಟಿದ್ದಾರೆ. ರಚನಾ ದಶರಥ ಪಾತ್ರದಲ್ಲಿ ಇನ್ನಷ್ಟು ಲವಲವಿಕೆ ಇರಬೇಕಿತ್ತು. ಬೋಲ್ಡ್‌ ಎನಿಸುವ ಪಾತ್ರವಿದ್ದರೂ, ಅದು ಅಷ್ಟಾಗಿ ರುಚಿಸಿಲ್ಲ. ಉಳಿದಂತೆ ಬರುವ ಪಾತ್ರಗಳಾÂವೂ ಅಷ್ಟೊಂದು ಗಮನಸೆಳೆಯಲ್ಲ. ಅಭಿಮನ್‌ ರಾಯ್‌  ಸಂಗೀತದಲ್ಲಿ “ಬಿಡುವಿಲ್ಲದ …’ ಮತ್ತು “ಅಮ್ಮ …’ ಹಾಡುಗಳು ಖುಷಿಕೊಡುತ್ತವೆ. ಸತೀಶ್‌ ಆರ್ಯನ್‌ ಅವರ ಹಿನ್ನೆಲೆ ಸಂಗೀತದಲ್ಲಿ ಹೂರಣ ಕಮ್ಮಿ. ಎ.ಸಿ. ಮಹೇಂದ್ರನ್‌ ಅವರ ಕ್ಯಾಮೆರಾ ಕೈಚಳಕ ಸಮರ್ಥವಾಗಿದೆ.

ಚಿತ್ರ : ಸಮರ್ಥ
ನಿರ್ದೇಶನ : ಎಸ್‌ಜಿಆರ್‌ (ಗೋವಿಂದು)
ನಿರ್ಮಾಣ : ಸರ್ವ ಕ್ರಿಯೇಷನ್ಸ್‌
ತಾರಾಗಣ : ರವಿ ಶಿರೂರ್‌, ರಚನಾ ದಶರಥ, ಸಂಗೀತಾ, ನಯನಾ, ಹನುಮಂತೇಗೌಡ, ಚೆಲುವ, ವಿಜಯಕುಮಾರ್‌ ಮುಂತಾದವರು

– ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.