ಸರಸ + ವಿರಸ = ಪಾದರಸ
Team Udayavani, Aug 12, 2018, 11:20 AM IST
ಪರಮ ನೀಚ ಅವನು. ಯಾರಿಗೋ ಕೆಲಸ ಕೊಡಿಸುತ್ತೀನಿ ಅಂತ ಅವರಿಂದ ದುಡ್ಡು ಪಡೆದು ಕುಡಿದು ಮಜಾ ಮಾಡುತ್ತಾನೆ. ತನ್ನ ಬೆಸ್ಟ್ ಫ್ರೆಂಡ್ ಒಬ್ಬ ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದಾನೆ ಎಂದು ಗೊತ್ತಿದ್ದರೂ, ಆ ಹುಡುಗಿಯನ್ನೇ ಪಟಾಯಿಸಿ ತನ್ನ ಸ್ನೇಹಿತನಿಗೇ ಮೋಸ ಮಾಡುತ್ತಾನೆ. ಒಂದು ಲಕ್ಷ ದುಡ್ಡು ಸಿಗುತ್ತದೆ ಎಂಬ ಕಾರಣಕ್ಕೆ ತನ್ನ ಸ್ನೇಹಿತನ ಮಗನನ್ನೇ ಮಾರಾಟ ಮಾಡಿಬಿಡುತ್ತಾನೆ. ಅವನ ಈ ನೀಚ ಬುದ್ಧಿಯ ಬಗ್ಗೆ ಗೊತ್ತಾಗಿ ಅವನನ್ನು ಇಷ್ಟಪಟ್ಟ ಹುಡುಗಿ ದೂರವಾಗುತ್ತಾಳೆ.
ಪೊಲೀಸ್ ಅಧಿಕಾರಿಯೊಬ್ಬ ಅವನನ್ನು ಹೊಡೆದು ಸಾಯಿಸಬೇಕು ಎಂದು ಸಿಟ್ಟಾಗುತ್ತಾನೆ. ಅಷ್ಟೇ ಅಲ್ಲ, ಮಗು ಕಳೆದುಕೊಂಡಿರುವ ಅವನ ಸ್ನೇಹಿತ ಪೊಲೀಸರಿಗೇ ದೂರು ಕೊಡುವುದಕ್ಕೆ ಮುಂದಾಗುತ್ತಾನೆ. ಇಷ್ಟೆಲ್ಲಾ ಅವನು ಮಾಡುವುದಾದರೂ ಯಾಕೆ? ಈ ಪ್ರಶ್ನೆಗಳಿಗೆ ಉತ್ತರ “ಪಾದರಸ’ದಲ್ಲಿದೆ. “ಪಾದರಸ” ಚಿತ್ರವು ಪಾದರಸದಂತಹ ವ್ಯಕ್ತಿತ್ವದ ಪಾದರಸ ಎಂಬ ಯುವಕನ ಸಿನಿಮಾ. ಕುಡಿತ ಬಿಟ್ಟರೆ, ಆತ ಒಂದು ನಿಮಿಷ ಕುಳಿತಲ್ಲ ಕೂರುವುದಿಲ್ಲ, ನಿಂತಲ್ಲಿ ನಿಲ್ಲುವುದಿಲ್ಲ.
ಅವನ ಮನಸ್ಸು, ಯೋಚನೆ ಇನ್ನೂ ಅತ್ತತ್ತ. ಇಂಥವನೊಬ್ಬ ಮಾಡಬಾರದ್ದನ್ನು ಮಾಡಿ, ಸಮಾಜದ ದೃಷ್ಟಿಯಲ್ಲಿ, ಪ್ರೇಕ್ಷಕನ ದೃಷ್ಟಿಯಲ್ಲಿ ಪರಮನೀಚನೆನೆಸಿಕೊಳ್ಳುತ್ತಾನೆ. ಆದರೆ, ಅವನು ನಿಜಕ್ಕೂ ಇರುವುದೇ ಹಾಗಾ? ಅಥವಾ ಯಾವುದಾದರೂ ಕಾರಣಕ್ಕೆ ಹಾಗೆಲ್ಲಾ ಆಡುತ್ತಿರುತ್ತಾನಾ? ಹಾಗೆಲ್ಲಾ ಮಾಡಿದರೂ ಕಾರಣವೇನು? ಈ ಪ್ರಶ್ನೆಗಳನ್ನು ಕೇಳುವುದೂ ಸರಿಯಲ್ಲ, ಉತ್ತರ ಹೇಳುವುದೂ ಸರಿಯಲ್ಲ.
ಬಹುಶಃ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಬಿಟ್ಟರೆ, ಚಿತ್ರದಲ್ಲಿ ವಿಶೇಷವೇನಿಲ್ಲ. ಇದುವರೆಗೂ ಮಾಡದಂತಹ ಒಂದು ವಿಭಿನ್ನ ಪಾತ್ರದಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರೆ. ಅದು ಅವರಿಗೆ ಸ್ವಲ್ಪ ಹೆಚ್ಚಾದಂತೆ ಕಾಣುತ್ತದೆ. ಆದರೂ ವಿಜಯ್ ತಮ್ಮ ಶಕ್ತಿಮೀರಿ, ಪಾತ್ರಕ್ಕೆ ನ್ಯಾಯ ಸಲ್ಲಿಸುವುದಕ್ಕೆ ಒದ್ದಾಡಿದ್ದಾರೆ. ಇದೊಂದು ಅಂಶ ಬಿಟ್ಟರೆ, ಚಿತ್ರದಲ್ಲಿ ಹೊಸತನವಾಗಲೀ, ವಿಶೇಷತೆಗಳಾಗಲೀ ಕಡಿಮೆಯೇ.
ಅದರ ಜೊತೆಗೆ ವಿಪರೀತ ಫ್ಲಾಶ್‌ಬ್ಯಾಕ್‌ಗಳು, ಬೋರ್ ಹೊಡೆಸುವ ದೃಶ್ಯಗಳು, ಅತಿರೇಕ ಎನಿಸುವ ಮಾತುಗಳು ಇವೆಲ್ಲವೂ ಪ್ರೇಕ್ಷಕರನ್ನು ಸಾಕಷ್ಟು ಕಾಡುತ್ತದೆ. ಅದರಲ್ಲೂ ಚಿತ್ರದಲ್ಲಿ ಒಂದು ಕ್ಷಣ ಮೌನವೆನ್ನುವುದಿಲ್ಲ. ಇಡೀ ಚಿತ್ರದಲ್ಲಿ ಎಲ್ಲಾ ಪಾತ್ರಗಳಿಂದ ಮಾತಾಡಿಸಿಯೇ ಆಡಿಸುತ್ತಾರೆ ನಿರ್ದೇಶಕರು. ಇದರಿಂದ ಸುಸ್ತಾಗುವುದು ಪಾತ್ರಧಾರಿಗಳಲ್ಲ, ಪ್ರೇಕ್ಷಕರು. ಇನ್ನು ಚಿತ್ರದಲ್ಲಿರುವ ಒಳ್ಳೆಯ ಅಂಶಗಳ ಬಗ್ಗೆ ಹೇಳುವುದಾದರೆ, ಎ.ಟಿ. ರವೀಶ್ ಸಂಗೀತ ನಿರ್ದೇಶನದಲ್ಲಿ ಎರಡು ಹಾಡುಗಳು ಚೆನ್ನಾಗಿವೆ.
ಚಿತ್ರ: ಪಾದರಸ
ನಿರ್ದೇಶನ: ಹೃಷಿಕೇಶ್ ಜಂಬಗಿ
ನಿರ್ಮಾಣ: ಹಾರ್ಟ್ ಆ್ಯಂಡ್ ಸೋಲ್ ಮೀಡಿಯಾ ಸರ್ವೀಸಸ್
ತಾರಾಗಣ: ಸಂಚಾರಿ ವಿಜಯ್, ವೈಷ್ಣವಿ ಮೆನನ್, ನಿರಂಜನ್ ದೇಶಪಾಂಡೆ, ಗುರುದತ್, ಜೈಜಗದೀಶ್, ಶೋಭರಾಜ್ ಮುಂತಾದವರು
* ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.