ಶಂಭೋ ಶಿವ ಶಂಕರ ಚಿತ್ರ ವಿಮರ್ಶೆ: ಹಣೆಬರಹ ಬದಲಾದ ಹುಡುಗರ ಕಥೆ
Team Udayavani, Dec 17, 2022, 9:49 AM IST
ಮಾಡದ ತಪ್ಪಿಗೆ ಬಾಲಪರಾಧಿಗಳಾಗಿ ಜೈಲು ಸೇರಿದ ಮೂವರು ಹುಡುಗರು. ಬೇರೆ ಬೇರೆ ಹಿನ್ನೆಲೆಯಿಂದ ಬಂದ ಈ ಮೂವರು ಹುಡುಗರ ನಡುವೆ ಜೈಲಿನಲ್ಲೇ ಗಾಢವಾದ ಸ್ನೇಹ ಬೆಳೆಯುತ್ತದೆ. ಶಿಕ್ಷೆ ಮುಗಿಸಿ ಜೈಲಿನಿಂದ ಹೊರಬಂದರೂ, ಸಮಾಜ ಮಾತ್ರ ಈ ಹುಡುಗರನ್ನು ಹಳದಿ ಕಣ್ಣಿನಿಂದಲೇ ನೋಡುತ್ತಿರುತ್ತದೆ. ಬೇರೆಯವರಿಗೆ ಸಹಾಯ ಮಾಡುವಂತೆ ಬದುಕಲು ಹೊರಟ ಈ ಹುಡುಗರ ಪಾಲಿಗೆ ಕೊನೆಗೆ ವಿಧಿಯೇ ವಿಲನ್ ಆಗಿ ಹೆಜ್ಜೆ ಹೆಜ್ಜೆಗೂ ಎದುರಾಗುತ್ತದೆ. ಒಳ್ಳೆಯ ಜೀವನ ಕಟ್ಟಿಕೊಳ್ಳಲು ಹೊರಟ ಶಂಭು, ಶಿವ, ಶಂಕರ ಎಂಬ ಮೂವರು ಅಮಾಯಕ ಹುಡುಗರ ಹೋರಾಟ, ನೋವು, ನಲಿವುಗಳ ಚಿತ್ರಣವೇ ಈ ವಾರ ತೆರೆಗೆ ಬಂದಿರುವ “ಶಂಭೋ ಶಿವ ಶಂಕರ’ ಚಿತ್ರ.
ಸ್ನೇಹ, ಪ್ರೀತಿ, ಕಾಮಿಡಿ, ಆ್ಯಕ್ಷನ್, ಹಾಡು, ಡ್ಯಾನ್ಸ್, ಎಮೋಶನ್ಸ್ ಹೀಗೆ ಒಂದು ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾದಲ್ಲಿ ಏನೆಲ್ಲ ಇರಬೇಕೋ ಅದೆಲ್ಲವನ್ನೂ ಜೋಡಿಸಿ “ಶಂಭೋ ಶಿವ ಶಂಕರ’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ಶಂಕರ್ ಕೋನಮಾನಹಳ್ಳಿ. ಮಾಸ್ ಆಡಿಯನ್ಸ್‌ಗೆ ಕನೆಕ್ಟ್ ಆಗುವಂಥ ಕಥಾಹಂದರ ಸಿನಿಮಾದಲ್ಲಿದ್ದರೂ, ನಿರ್ದೇಶಕರು ಅದನ್ನು ಚಿತ್ರಕಥೆ ಮತ್ತು ನಿರೂಪಣೆಯ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಾಧ್ಯತೆಗಳಿದ್ದವು.
ಕೆಲವೊಂದು ಸನ್ನಿವೇಶಗಳಿಗೆ ಕತ್ತರಿ ಪ್ರಯೋಗ ಮಾಡಿ, ಚಿತ್ರಕಥೆಗೆ ಇನ್ನಷ್ಟು ವೇಗ ಕೊಟ್ಟಿದ್ದರೆ, “ಶಂಭೋ ಶಿವ ಶಂಕರ’ ಇನ್ನಷ್ಟು ಬೇಗನೆ ಮತ್ತು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಮುಟ್ಟುವ ಸಾಧ್ಯತೆಯಿತ್ತು.
ಇದನ್ನೂ ಓದಿ:ಉಕ್ರೇನ್ ಮೇಲೆ ಮುಗಿಬಿದ್ದ ರಷ್ಯಾ: ಒಂದೇ ದಿನ 70ಕ್ಕೂ ಹೆಚ್ಚು ಕ್ಷಿಪಣಿ ದಾಳಿ
ಇನ್ನು ಮೊದಲ ಸಿನಿಮಾವಾದರೂ ನಾಯಕ ಅಭಯ್ ಪುನೀತ್, ರೋಹಿತ್, ರಕ್ಷಕ್ ಮೂವರು ಕೂಡ ತಮ್ಮ ಅಭಿನಯದಲ್ಲಿ ಗಮನ ಸೆಳೆಯುತ್ತಾರೆ. ನಾಯಕಿ ಸೋನಾಲ್ ತೆರೆಮೇಲೆ ಇದ್ದಷ್ಟು ಹೊತ್ತು ಇಷ್ಟವಾಗುತ್ತಾರೆ. ಉಳಿದಂತೆ ಬಹುತೇಕ ಹೊಸ ಕಲಾವಿದರು ತಮ್ಮ ಪಾತ್ರಕ್ಕೆ ಒಪ್ಪುವಂಥ ಅಚ್ಚುಕಟ್ಟು ಅಭಿನಯ ನೀಡಿದ್ದಾರೆ. ಕೆಲವೊಂದು ಪಾತ್ರಗಳಿಗೆ ತೆರೆಮೇಲೆ ಹೆಚ್ಚು ಸಮಯ ನಿಲ್ಲದ ಕಾರಣ ಅವುಗಳ ಬಗ್ಗೆ ಹೆಚ್ಚೇನೂ ಹೇಳಲಾಗದು.
“ಶಂಭೋ ಶಿವ ಶಂಕರ’ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿರುವುದು ಪ್ರತಿ ಫ್ರೆàಮ್‌ನಲ್ಲಿಯೂ ಕಾಣುತ್ತದೆ. ತಾಂತ್ರಿಕವಾಗಿ ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಒಳ್ಳೆಯ ಲೊಕೇಶನ್ಸ್, ಕಲರಿಂಗ್ ಸಿನಿಮಾದಲ್ಲಿ ನೋಡುಗರ ಗಮನ ಸೆಳೆಯುವಂತಿದೆ. ಒಂದೆರಡು ಹಾಡುಗಳು, ಕೆಲ ಸಂಭಾಷಣೆ ಕೂಡ ಮಾಸ್ ಆಡಿಯನ್ಸ್ ಶಿಳ್ಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಒಂದಷ್ಟು ಲೋಪಗಳನ್ನು ಬದಿಗಿಟ್ಟು ಹೇಳುವುದಾದರೆ, ಬಹುತೇಕ ಹೊಸ ಪ್ರತಿಭೆಗಳ “ಶಂಭೋ ಶಿವ ಶಂಕರ’ ಒಂದೊಳ್ಳೆ ಪ್ರಯತ್ನ ಎನ್ನಲು ಅಡ್ಡಿಯಿಲ್ಲ. ತುಂಬ ಲಾಜಿಕ್ ಹುಡುಕದೇ ಔಟ್ ಆ್ಯಂಡ್ ಔಟ್ ಮಾಸ್ ಸಿನಿಮಾಗಳನ್ನು ಇಷ್ಟಪಡುವವರು “ಶಂಭೋ ಶಿವ ಶಂಕರ’ ದರ್ಶನ ಪಡೆಯಲು ಅಡ್ಡಿಯಿಲ್ಲ.
ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.