‘ಸ್ಫೂಕಿ ಕಾಲೇಜ್’ ಚಿತ್ರ ವಿಮರ್ಶೆ: ಪ್ರೀತಿಯ ನೋಟದಲ್ಲಿ ದೆವ್ವದ ಆಟ!
Team Udayavani, Jan 7, 2023, 11:38 AM IST
ಅಲ್ಲಲ್ಲಿ ಬೆಚ್ಚಿಬೀಳಿಸುತ್ತಾ, ಇನ್ನೊಂದಿಷ್ಟು ಕಡೆಗಳಲ್ಲಿ ಕುತೂಹಲ ಹೆಚ್ಚಿಸುತ್ತಾ ನೆರಳು ಬೆಳಕಿನ “ಆಟ’ದಲ್ಲಿ “ಆತ್ಮ’ ಸಂಚಾರ ಮಾಡಿದರೆ ಖಂಡಿತಾ ಪ್ರೇಕ್ಷಕ ತೃಪ್ತನಾಗುತ್ತಾನೆ. ಇಂತಹ ಅಂಶಗಳೊಂದಿಗೆ ಬರುವ ಹಾರರ್ ಸಿನಿಮಾಗಳು ಹೊಸ ಫೀಲ್ ಕೂಡಾ ಕೊಡುತ್ತವೆ. ಈ ವಾರ ತೆರೆಕಂಡಿರುವ “ಸ್ಫೂಕಿ ಕಾಲೇಜ್’ ಇದೇ ಕೆಟಗರಿಗೆ ಸೇರುವ ಹಾರರ್ ಸಿನಿಮಾ. ಇಲ್ಲಿ ಆತ್ಮದ ಆಟ, ವಿದ್ಯಾರ್ಥಿಗಳ ಪರದಾಟ, ಚೀರಾಟ ..ಎಲ್ಲವೂ ಇದೆ. ಅದೇ ಕಾರಣದಿಂದ ಹಾರರ್ ಸಿನಿಮಾವನ್ನು ಇಷ್ಟಪಡುವವರಿಗೆ ಈ ಚಿತ್ರ ರುಚಿಸಬಹುದು.
ಇಡೀ ಸಿನಿಮಾ ನಡೆಯೋದು ಕಾಲೇಜಿನಲ್ಲಿ. ಅದಕ್ಕೆ ಕಾರಣ ಕಥೆಯ ಕೇಂದ್ರಬಿಂದು ಕೂಡಾ ಅದೇ ಕಾಲೇಜು. ಕಾಲೇಜಿನಲ್ಲಿ ಏಕಾಏಕಿ ಶುರುವಾಗುವ ಆತ್ಮಗಳ ಆಟದ ಮೂಲಕ ಇಡೀ ಸಿನಿಮಾ ತೆರೆದುಕೊಳ್ಳುತ್ತದೆ. ಇದರ ಹಾರರ್ ಸ್ಟೋರಿಗೆ ಲವ್‌ಸ್ಟೋರಿಯೂ ಕೂಡಾ ಸೇರಿಕೊಂಡಿದೆ. ಈ ಎರಡು ಸ್ಟೋರಿಗಳು “ಆತ್ಮ’ಕ್ಕೆ “ದಾರಿ ತೋರಿಸುತ್ತವೆ. ನಿರ್ದೇಶಕರು ಹಲವು ಸನ್ನಿವೇಶಗಳ ಮೂಲಕ “ಹಾರರ್’ ಫೀಲ್ ಕೊಡಲು ಪ್ರಯತ್ನಿಸಿದ್ದಾರೆ.
ಕಾಲೇಜಿನಲ್ಲಿ ದೆವ್ವ ಇರೋದು ನಿಜಾನಾ, ಸುಳ್ಳಾ? ಒಂದು ವೇಳೆ ಇದ್ದರೆ ಆ “ದೆವ್ವ ಹಿನ್ನೆಲೆ’ ಏನು … ಹೀಗೆ ಹಲವು ಕುತೂಹಲಗಳನ್ನು ಆಗಾಗ ಪ್ರೇಕ್ಷಕರಲ್ಲಿ ಮೂಡಿಸುತ್ತಾ ಸಾಗುವುದು ಈ ಸಿನಿಮಾದ ಪ್ಲಸ್. ಚಿತ್ರದಲ್ಲಿ ಬರುವ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿ, ಸಿನಿಮಾದ ವೇಗವನ್ನು ಮತ್ತಷ್ಟು ಹೆಚ್ಚುಸುವ ಅವಕಾಶವಿತ್ತು. ಅದರಾಚೆಗೆ ಒಂದು ಉತ್ತಮ ಪ್ರಯತ್ನವಾಗಿ “ಸ್ಫೂಕಿ ಕಾಲೇಜು’ ಚಿತ್ರವನ್ನು ಮೆಚ್ಚಬಹುದು.
ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಬರುತ್ತವೆ. ಆದರೆ, ಅದರಲ್ಲಿ ಗಮನ ಸೆಳೆಯುವುದು ಕೆಲವೇ ಕೆಲವು ಪಾತ್ರಗಳು. ನಾಯಕಿ ಖುಷಿ ರವಿ, ನಾಯಕ ವಿವೇಕ್ ಸಿಂಹ, ಹನುಮಂತೇಗೌಡ, ಶ್ರೀಧರ್ ಪಾತ್ರಗಳು ಗಮನ ಸೆಳೆಯುತ್ತವೆ. ಚಿತ್ರದ ಹಿನ್ನೆಲೆ ಸಂಗೀತ “ಹಾರರ್’ ಫೀಲ್ ಹೆಚ್ಚಿಸಿದೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.