ಚಿತ್ರ ವಿಮರ್ಶೆ: ‘ಶ್ರೀರಂಗ’ನ ಮದುವೆ ಪ್ರಸಂಗ
Team Udayavani, Jul 23, 2022, 12:23 PM IST
ಕಾಲಕ್ಕೆ ತಕ್ಕಂತೆ ಬದಲಾಗಬೇಕೆಂಬುದು ನಾಯಕನ ತಾಯಿಯ ಪಾಲಿಸಿ. ಆದರೆ ನಾಯಕ ಶ್ರೀರಂಗ ಸಾಫ್ಟ್ವೇರ್ ಉದ್ಯೋಗಿ. ಆದರೆ ಆತನಿಗೆ ಬೇಸಿಕ್ ಸೆಟ್ ಮೊಬೈಲ್ ಬಳಸುವುದೇ ಹಿತ. ಹೀಗಾಗಿ ಸಾಮಾಜಿಕ ಜಾಲತಾಣಗಳಿಂದ ದೂರ ಬಲು ದೂರ! ಬಿಡುವಿದ್ದಾಗ ಓದಲು ಪುಸ್ತಕ, ಪರಿಚಯ ಆದವರಿಗೆ ಮುಟ್ಟಿದ್ರೆ ಮುನಿ ಗಿಡ ಉಡುಗೊರೆ ಯಾಗಿ ನೀಡುವುದು ನಾಯಕನ ಹವ್ಯಾಸ. ಇಂತಹ ವ್ಯಕ್ತಿತ್ವದ ನಾಯಕನಿಗೆ ವಧುವಿನ ಹುಡುಕಾಟ ಶುರುವಾಗುತ್ತದೆ. ಈಗಿನ ಕಾಲ ಹುಡುಗಿಯರಿಗೆ ಹ್ಯಾಂಡ್‌ಸಮ್ ಹುಡುಗ, ಅಪ್‌ಡೇಟೆಡ್ ವರನನ್ನೇ ಕನಸು- ಮನಸಿ ನಲ್ಲೂ ತುಂಬಿಕೊಂಡಿರುತ್ತಾರೆ. ಆದರೆ ಶ್ರೀರಂಗ ಮಾತ್ರ ತಾನು ಹಾಕಿಕೊಂಡಿರುವ ಗೆರೆ ದಾಟಿ ಒಂದು ಹೆಜ್ಜೆಯನ್ನೂ ಇಡಲಾರದೇ ತನ್ನದೇ ಲೋಕದಲ್ಲಿ ಜೀವಿಸುತ್ತಿರುತ್ತಾನೆ. ಹಾಗಾದರೆ ಮದುವೆ ಕಥೆಯೇನು ಎಂಬ ಕುತೂಹಲವಿದ್ದರೆ ನೀವು ಚಿತ್ರ ನೋಡಬಹುದು.
ಸಿನಿಮಾದ ಬಹುತೇಕ ಭಾಗ ವಧುವಿನ ಹುಡುಕಾಟದಲ್ಲೇ ಸಾಗುತ್ತದೆ. ಕಥೆಯ ಓಟ ಹಾಗೂ ನಿರೂಪಣೆ ಕೆಲವೆಡೆ ಹೊಸ ರೀತಿಯಲ್ಲಿ ಕೂಡಿದ್ದು, ಅಲ್ಲಲ್ಲಿ ನಗೆಗುಳಿಗೆಯ ಮೂಲಕ ಮನಸ್ಸನ್ನು ಹಗುರಗೊಳಿಸುವಂತೆ ಮಾಡುವಲ್ಲಿ ನಿರ್ದೇಶಕರ ಪ್ರಯತ್ನ ಸಫಲವಾಗಿದೆ.
ಇದನ್ನೂ ಓದಿ:ಗಣಪನ ಜತೆ ಬರಲಿದ್ದಾನೆ ಅಪ್ಪು: ಮೂರ್ತಿ ತಯಾರಿಕೆಗೆ ಭಾರಿ ಬೇಡಿಕೆ
ಅಮ್ಮ-ಮಗ, ತಂದೆ-ಮಗಳ ಸಂಬಂಧ, ಜೀವನದ ಪಾಠವನ್ನು ಬೇರೆ ರೂಪದಲ್ಲಿ ಕಟ್ಟಿಕೊಡುವ ಅಜ್ಜ, ಇವೆಲ್ಲದರ ಜತೆಗೆ ಗೆಳೆತನ… ಹೀಗೆ ಎಲ್ಲಾ ಅಂಶಗಳ ಮೇಲೆ ಬೆಳಕು ಚೆಲ್ಲುತ್ತಾ ಔಟ್ ಡೇಟೆಡ್ ಹಾಗೂ ಅಪ್‌ಡೇಟೆಡ್ ಜನರೇಷನ್‌ಗಳ ಬಂಧ-ಅನುಬಂಧವನ್ನು ಬಿಚ್ಚಿಡುತ್ತಾ ಹೋಗುತ್ತಾರೆ ನಿರ್ದೇಶಕ ವೆಂಕಟ್.
ನಾಯಕ ಶಿನವ್ ಸಹಜಾಭಿನಯ ಸಿನಿಮಾದ ಪ್ಲಸ್ ಪಾಯಿಂಟ್. ಗುರುರಾಜ್ ಹೊಸಕೋಟೆ, ಯಮುನಾ ಶ್ರೀನಿಧಿ, ರಚನಾ ರಾಯ್, ರೂಪಾ ರಾಯಪ್ಪ, ವಂದನಾ ಶೆಟ್ಟಿ ಮೊದಲಾದವರದ್ದು ಪಾತ್ರಕ್ಕೆ ತಕ್ಕ ಅಭಿನಯ.
ನಿರ್ದೇಶಕ ವೆಂಕಟ್ ಕಥೆಯನ್ನು ನಿರೂಪಣೆ ಮಾಡುತ್ತಾ ಥರೇವಾರಿ ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡಿದ್ದಾರೆ. ಮಿಥುನ್ ಕ್ಯಾಮೆರಾ ಕೆಲಸ, ಸಮೀರ್ ಕುಲಕರ್ಣಿ ಸಂಗೀತ ಸಂಯೋಜನೆ ಸಿನಿಮಾಕ್ಕೆ ಪೂರಕವಾಗಿದೆ.
ಜಿಎಸ್ ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.