ಕಥೆ ಪ್ಲಸ್ಸು; ರೋಚಕತೆ ಮಿಸ್ಸು


Team Udayavani, Apr 22, 2018, 11:32 AM IST

ATM_(114).jpg

“ಸಿಗದೇ ಇರೋಕೆ ಆತ ಏನ್‌ ದೇವ್ರ, ಸಿಕ್ಕೇ ಸಿಕ್ತಾನೆ …’ ತನಿಖಾಧಿಕಾರಿ ಹೀಗೆ ಹೇಳಿ ಸಿಗರೇಟಿನ ಹೊಗೆ ಬಿಡುತ್ತಾನೆ. ಅಷ್ಟೊತ್ತಿಗಾಗಲೇ ಕೊಲೆಗಾರ ಒಂಭತ್ತು ಕೊಲೆಗಳನ್ನು ಮಾಡಿ ಮುಗಿಸಿರುತ್ತಾನೆ. ಎಲ್ಲಾ ಕೊಲೆಗಳಲ್ಲೂ ಒಂದು ಸಾಮ್ಯತೆ ಇರುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ತನಿಖಾಧಿಕಾರಿ ಈತ ಒಬ್ಬ ಸೈಕೋ ಕಿಲ್ಲರ್‌ ಎಂಬ ನಿರ್ಧಾರಕ್ಕೆ ಬರುತ್ತಾನೆ. ತನಿಖೆ ತೀವ್ರವಾಗುತ್ತಾ ಹೋಗುತ್ತದೆ.

ಹಾಗಾದರೆ ಆ ಕೊಲೆಗಾರ ಸಿಗುತ್ತಾನಾ, ಆತನ ಹಿನ್ನೆಲೆಯೇನು ಎಂಬ ಕುತೂಹಲ ನಿಮಗಿದ್ದರೆ ನೀವು “ಅಟೆಂಪ್ಟ್ ಟು ಮರ್ಡರ್‌’ ಸಿನಿಮಾ ನೋಡಬಹುದು. ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಎಟಿಎಂ ದರೋಡೆ ಹಾಗೂ ಹಲ್ಲೆ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಅಮರ್‌ “ಎಟಿಎಂ’ ಸಿನಿಮಾ ಮಾಡಿದ್ದಾರೆ. ಮಹಿಳೆಯೊಬ್ಬರ ಮೇಲೆ ಎಟಿಎಂನೊಳಗೆ ನಡೆಯುವ ಹಲ್ಲೆಯಿಂದ ಚಿತ್ರದ ಕಥೆ ತೆರೆದುಕೊಳ್ಳುತ್ತದೆ.

ಹಾಗೆ ನೋಡಿದರೆ ಇಲ್ಲಿ ಎಟಿಎಂ ದರೋಡೆ ಅಂಶ ಚಿತ್ರದ ಕಥೆಗೊಂದು ಲೀಡ್‌ ಕೊಟ್ಟಿದೆಯಷ್ಟೇ. ಉಳಿದಂತೆ ನಿರ್ದೇಶಕರು ತಮ್ಮದೇ ಕಲ್ಪನೆಯೊಂದಿಗೆ ಸಿನಿಮೀಯ ಅಂಶ ಸೇರಿಸಿ ಕಥೆ ಬೆಳೆಸಿದ್ದಾರೆ. ಕಥೆಯ ಮುಖ್ಯ ಉದ್ದೇಶ ಎಟಿಎಂ ದರೋಡೆಕೋರನನ್ನು ಬಂಧಿಸೋದು. ಹಾಗೆ ನೋಡಿದರೆ, ನಿರ್ದೇಶಕರು ಆಯ್ಕೆಮಾಡಿಕೊಂಡಿರುವ ಕಥೆ ತುಂಬಾ ರೋಚಕವಾಗಿದೆ. ಇಡೀ ಸಿನಿಮಾದಲ್ಲಿ ಹೈಲೈಟ್‌ ಆಗಬೇಕಾದ ವಿಷಯ ಕೂಡಾ ತನಿಖೆ.

ಪೊಲೀಸರು ಅಪರಾಧಿಯ ಜಾಡನ್ನು ಹೇಗೆ ಹಿಡಿಯುತ್ತಾರೆ ಮತ್ತು ಆ ಅಪರಾಧಿ ಹೇಗೆ ತಪ್ಪಿಸಿಕೊಳ್ಳುತ್ತಿರುತ್ತಾನೆಂಬುದು. ಚಿತ್ರದಲ್ಲಿ ಈ ಅಂಶವನ್ನೇ ಮುಂದುವರೆಸಿಕೊಂಡು ಹೋಗಿದ್ದಾರೆ. ಆದರೆ, ಆ ತನಿಖೆಗೆ ಇನ್ನಷ್ಟು ಸತ್ವ ಇದ್ದಿದ್ದರೆ ಥ್ರಿಲ್ಲರ್‌ ಸಿನಿಮಾವನ್ನು ಇಷ್ಟಪಡುವ ಪ್ರೇಕ್ಷಕನಿಗೆ “ಎಟಿಎಂ’ ಇಷ್ಟವಾಗುತ್ತಿತ್ತು. ಆದರೆ, ಇಲ್ಲಿನ ತನಿಖೆ ಸದ್ದಿಲ್ಲದೇ ತುಂಬಾ ತಣ್ಣಗೆ ಮತ್ತು ಸುಲಭವಾಗಿ ಸಾಗುತ್ತದೆ.

ತನಿಖಾಧಾರಿತ ಸಿನಿಮಾಗಳ ಮುಖ್ಯ ಸರಕು ಎಂದರೆ ಅದು ರೋಚಕತೆ ಮತ್ತು ಪ್ರೇಕ್ಷಕನ ಕುತೂಹಲ ಹೆಚ್ಚಿಸುತ್ತಾ ಹೋಗುವುದು. ಆದರೆ “ಎಟಿಎಂ’ನಲ್ಲಿ ಆ ಅಂಶಗಳ ಕೊರತೆ ಕಾಡುತ್ತದೆ. ತನಿಖಾ ಅಂಶಗಳಿಗೆ ಹೆಚ್ಚು ಮಹತ್ವ ಕೊಟ್ಟಿದ್ದರೆ “ಎಟಿಎಂ’ನ ಖದರ್‌ ಹೆಚ್ಚುತ್ತಿತ್ತು. ಆದರೆ, ನಿರ್ದೇಶಕರು ತನಿಖಾ ಅಂಶದ ಜೊತೆಗೆ ಲವ್‌ಸ್ಟೋರಿಯೊಂದನ್ನು ಸೇರಿಸಿದ್ದಾರೆ. ಕೆಲವೊಮ್ಮೆ ಈ ಟ್ರ್ಯಾಕ್‌ ಮೊಸರಿನಲ್ಲಿ ಕಲ್ಲು ಸಿಕ್ಕಂತಾಗುತ್ತದೆ. 

ನಿರೂಪಣೆಯ ವಿಷಯಕ್ಕೆ ಬರುವುದಾದರೆ ನಿರ್ದೇಶಕರು ಸಿನಿಮಾವನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ. ಎಲ್ಲೂ ಲಿಂಕ್‌ ಮಿಸ್‌ ಆಗದಂತೆ ನೋಡಿಕೊಂಡಿದ್ದಾರೆ. ನಿರೂಪಣೆ ಇನ್ನಷ್ಟು ವೇಗದಿಂದ ಕೂಡಿರಬೇಕಿತ್ತು. ಜೊತೆಗೆ ಈ ಹಿಂದೆ ನಿರ್ದೇಶಕರೇ ಹೇಳಿದಂತೆ ಚಿತ್ರದ ವಿಲನ್‌ ಪಾತ್ರ ಹೈಲೈಟ್‌ ಅಂದಿದ್ದರು. ಆದರೆ, ಚಿತ್ರದಲ್ಲಿ ವಿಲನ್‌ ಪಾತ್ರ ಇಂಟ್ರೋಡಕ್ಷನ್‌ ಸಾಂಗ್‌ ಹಾಗೂ ಕೆಲವೇ ಕೆಲವು ದೃಶ್ಯಗಳಿಗೆ ಸೀಮಿತವಾಗಿದೆ.

ಹಾಗೆ ಬಂದು ಹೀಗೆ ಮುಗಿದು ಹೋಗುತ್ತದೆ ಕೂಡಾ. ಅದು ಬಿಟ್ಟರೆ ಹೊಸಬರ ಮೊದಲ ಪ್ರಯತ್ನವಾಗಿ “ಎಟಿಎಂ’ ಅನ್ನು ಮೆಚ್ಚಿಕೊಳ್ಳಬಹುದು. ಕೆಲವೇ ಕೆಲವು ಪಾತ್ರಗಳನ್ನಿಟ್ಟುಕೊಂಡು ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ನಟಿಸಿರುವ ವಿನಯ್‌ ಗೌಡ, ಸೂರ್ಯ, ಚಂದು, ಶೋಭಿತಾ, ಹೇಮಲತಾ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.

ಚಿತ್ರ: ಅಟೆಂಪ್ಟ್ ಟು ಮರ್ಡರ್‌
ನಿರ್ಮಾಣ: ನಾರಾಯಣ್‌
ನಿರ್ದೇಶನ: ಅಮರ್‌
ತಾರಾಗಣ: ವಿನಯ್‌ ಗೌಡ, ಸೂರ್ಯ, ಚಂದು, ಶೋಭಿತಾ, ಹೇಮಲತಾ ಮುಂತಾದವರು

* ರವಿ ಪ್ರಕಾಶ್ ರೈ

ಟಾಪ್ ನ್ಯೂಸ್

Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ

Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ

BJP-flag

Congress ಸರ್ಕಾರದಿಂದ ರಾಜ್ಯ ಬರ್ಬಾದ್‌ ; ಬಿಜೆಪಿ ಟೀಕೆ

ಸಿ.ಟಿ ರವಿ

Chikkamagaluru; ರಾಹುಲ್ ಗಾಂಧಿ ತನ್ನ ಅಯೋಗ್ಯತನ ಪ್ರದರ್ಶಿಸಿದ್ದಾರೆ: ಸಿ.ಟಿ ರವಿ

laxmi-hebbalkar

Belagavi; ಅಭಯ್ ಪಾಟೀಲ್ ‘ಕೇಂದ್ರದ ಮೊಬೈಲ್’ ಹೇಳಿಕೆಗೆ ಸಚಿವೆ ಹೆಬ್ಬಾಳ್ಕರ್ ಗರಂ

Vijayapura; ರಾಜ್ಯದ ಅಭಿವೃದ್ಧಿ ಆಗಬೇಕಾದರೆ ನಾನು ಸಿಎಂ ಆಗಬೇಕು: ಯುವಕನ ವಿಡಿಯೋ ವೈರಲ್

Vijayapura; ರಾಜ್ಯದ ಅಭಿವೃದ್ಧಿ ಆಗಬೇಕಾದರೆ ನಾನು ಸಿಎಂ ಆಗಬೇಕು: ಯುವಕನ ವಿಡಿಯೋ ವೈರಲ್

Uttar Pradesh: ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ-ಮಕ್ಕಳು ಸೇರಿ 27 ಮಂದಿ ದುರ್ಮರಣ

Uttar Pradesh: ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ-ಮಕ್ಕಳು ಸೇರಿ 50 ಮಂದಿ ದುರ್ಮರಣ

Miracle: ಈ ಊರಿನ ಮನೆ, ಅಂಗಡಿ, ಕಚೇರಿಗಳಿಗೆ ಬಾಗಿಲೇ ಇಲ್ವಂತೆ… ಶನಿಯೇ ಇದರ ರಕ್ಷಕನಂತೆ

Miracle: ಈ ಊರಿನ ಮನೆ, ಅಂಗಡಿ, ಕಚೇರಿಗಳಿಗೆ ಬಾಗಿಲೇ ಇಲ್ವಂತೆ… ಶನಿಯೇ ಇದರ ರಕ್ಷಕನಂತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sambhavami Yuge Yuge Review

Sambhavami Yuge Yuge Review; ಊರು ಗೆದ್ದ ಹಳ್ಳಿಹೈದ

love li movie review

Love Li movie review: ಪ್ರೀತಿ, ದ್ವೇಷ ಮತ್ತು ಅವನು!

Shivamma movie review;

Shivamma movie review; ಗಟ್ಟಿಗಿತ್ತಿಯ ಬದುಕಿನ ಕನಸು

Kotee movie review: ಕೋಟಿ ಲೆಕ್ಕ ಹುಲಿಬೇಟೆ ಪಕ್ಕಾ

Kotee movie review: ಕೋಟಿ ಲೆಕ್ಕ ಹುಲಿಬೇಟೆ ಪಕ್ಕಾ

Anartha Movie Review

Anartha Movie Review; ‘ಅನರ್ಥ’ದಿಂದ ಅರ್ಥದೆಡೆಗೆ ಸಸ್ಪೆನ್ಸ್‌ ಯಾನ

MUST WATCH

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

ಹೊಸ ಸೇರ್ಪಡೆ

Drought Relief: 4168 ರೈತರ ಖಾತೆಗೆ 2.25ಕೋಟಿ ಜಮೆ

Drought Relief: 4168 ರೈತರ ಖಾತೆಗೆ 2.25ಕೋಟಿ ಜಮೆ

Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ

Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ

BJP-flag

Congress ಸರ್ಕಾರದಿಂದ ರಾಜ್ಯ ಬರ್ಬಾದ್‌ ; ಬಿಜೆಪಿ ಟೀಕೆ

ಡಿಸಿ ಸಂಕೀರ್ಣಕ್ಕೆ “ಸ್ಮಾರ್ಟ್‌ ಸಿಟಿ’ ನೆರವು: 20 ಕೋಟಿ ರೂ. ಮೀಸಲು

ಡಿಸಿ ಸಂಕೀರ್ಣಕ್ಕೆ “ಸ್ಮಾರ್ಟ್‌ ಸಿಟಿ’ ನೆರವು: 20 ಕೋಟಿ ರೂ. ಮೀಸಲು

ಸಿ.ಟಿ ರವಿ

Chikkamagaluru; ರಾಹುಲ್ ಗಾಂಧಿ ತನ್ನ ಅಯೋಗ್ಯತನ ಪ್ರದರ್ಶಿಸಿದ್ದಾರೆ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.