ದೇಶ-ಭಾಷೆ ಮೀರಿದ ಕಥಾನಕ

ಚಿತ್ರ ವಿಮರ್ಶೆ

Team Udayavani, Jan 25, 2020, 7:01 AM IST

India-Vs-England

ಆತ ಹುಟ್ಟಿ ಬೆಳೆದಿದ್ದು ಇಂಗ್ಲೆಂಡ್‌ನ‌ಲ್ಲಿ. ಆದರೆ, ಆತನ ಮೂಲ ಭಾರತದಲ್ಲಿದೆ. ಅದೇ ಕಾರಣದಿಂದ ಆತನಿಗೆ ಭಾರತದ ಮೇಲೆ ಪ್ರೀತಿ ಇದೆ. ಜೊತೆಗೆ ತನ್ನ ದೇಶ ಇಂಗ್ಲೆಂಡ್‌ ಮೇಲೆ ಗೌರವವೂ ಇದೆ. ಭಾರತದ ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿಯುವ ಉದ್ದೇಶದಿಂದ ಆತನ ಭಾರತಕ್ಕೆ ಭೇಟಿ ನೀಡುತ್ತಾನೆ. ಈ ಭೇಟಿ ಆತನ ಕಣ್ಣು ತೆರೆಸುತ್ತದೆ. ಭಾರತವನ್ನು ಬ್ರಿಟಿಷರು ಆಳಿದ್ದರಿಂದ ದೇಶದ ಉದ್ಧಾರವಾಯಿತು ಎಂದೇ ನಂಬಿದ್ದ ಆತ, ಬ್ರಿಟಿಷರಿಂದಾದ ತೊಂದರೆ, ಪ್ರಾಣ ಬಿಟ್ಟವರ ಬಗ್ಗೆಯೂ ತಿಳಿದುಕೊಳ್ಳುತ್ತಾನೆ.

ಆತನ ಕಣ್ಣು ತೆರೆಸೋದು ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುವ ಅಚ್ಚ ಕನ್ನಡತಿ! ಇಷ್ಟು ಹೇಳಿದ ಮೇಲೆ ಈ ಸಿನಿಮಾ ಬಗ್ಗೆ ಒಂದು ಐಡಿಯಾ ಬಂದಿರುತ್ತದೆ. ಮುಖ್ಯವಾಗಿ ಇಲ್ಲಿ ಎರಡು ಸಂಸ್ಕೃತಿಯನ್ನು ತೋರಿಸುವುದರ ಜೊತೆಗೆ ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆ, ಬ್ರಿಟಿಷರಿಂದ ಅದರ ಮೇಲಾದ ದಬ್ಟಾಳಿಕೆ, ಪರದೇಶದಲ್ಲಿರುವವರ ದೇಶ ಪ್ರೇಮ, ಜೊತೆಗೊಂದು ಲವ್‌ಸ್ಟೋರಿಯನ್ನು ಹೇಳಿದ್ದಾರೆ. ಹಾಗಂತ ಕಥೆ ಇಷ್ಟಕ್ಕೆ ಸೀಮಿತವಾಗಿಲ್ಲ. ಅದರಾಚೆ ಒಂದು ಸಸ್ಪೆನ್ಸ್‌ ಸ್ಟೋರಿಯನ್ನು ಸೇರಿಸಿದ್ದಾರೆ.

ಅದು ಕೂಡಾ ನಮ್ಮ ದೇಶ, ಪುರಾತನ ದೇವಾಲಯಕ್ಕೆ ಸಂಬಂಧಿಸಿದ್ದು. ಅದೇನೆಂಬುದನ್ನು ನೀವು ಸಿನಿಮಾದಲ್ಲಿ ನೋಡಿ. ಈ ಸಿನಿಮಾ ಹೈಲೈಟ್‌ ಎಂದರೆ ಕಥೆಗೆ ಎರಡು ದೇಶಗಳ ಲಿಂಕ್‌ ಬೆಸೆದಿರುವುದು. ಅದೇ ಕಾರಣದಿಂದ ಸಿನಿಮಾದಲ್ಲಿ ದೇಶ ಪ್ರೇಮ, ನಮ್ಮ ಸಂಸ್ಕೃತಿ, ಪರಂಪರೆಯ ಅಂಶಗಳು ಹೆಚ್ಚಿವೆ. ಜೊತೆಗೆ ಯಾವುದು ಸತ್ಯ, ಯಾವುದು ಸುಳ್ಳು ಎಂಬ ಆರೋಗ್ಯಕರ ಚರ್ಚೆಯೂ ಚಿತ್ರದಲ್ಲಿದೆ. ಮುಖ್ಯವಾಗಿ ಈ ಚಿತ್ರ ಭಾರತದ ಸಾಕಷ್ಟು ಐತಿಹಾಸಿಕ, ಪುರಾತನ ಹಿನ್ನೆಲೆ ಇರುವ ಸ್ಥಳಗಳನ್ನು ತೋರಿಸುತ್ತಲೇ ಮುಂದೆ ಸಾಗುತ್ತದೆ.

ಅದಕ್ಕೆ ಕಾರಣ ಕಥೆ. ಆ ಕಥೆಯೇ ಸಾಕಷ್ಟು ಕಡೆ ಟ್ರಾವೆಲ್‌ ಮಾಡುವುದರಿಂದ ಪ್ರೇಕ್ಷಕರಿಗೂ “ಪ್ರವಾಸ’ದ ಅನುಭವವಾಗುತ್ತದೆ. “ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಒಂದು ಕಮರ್ಷಿಯಲ್‌ ಸಿನಿಮಾ ನಿಜ. ಹಾಗಂತ ಗಾಂಧಿನಗರದ ಟಿಪಿಕಲ್‌ ಕಮರ್ಷಿ ಯಲ್‌ ಸಿನಿಮಾ ಅಲ್ಲ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಸಿನಿಮಾಗಳಲ್ಲಿ ಸಿಗುವ ಸ್ವಾದ ಈ ಚಿತ್ರದಲ್ಲೂ ಇದೆ. ಯಾವುದೇ ಆತುರವಿಲ್ಲದ ಹೇಳುವ ಕಥೆಯನ್ನು ನೀಟಾಗಿ ಹೇಳುತ್ತಾ ಹೋಗಿದ್ದಾರೆ ನಿರ್ದೇಶಕರು.

ಮೊದಲೇ ಹೇಳಿದಂತೆ ಸಾಕಷ್ಟು ಲೊಕೇಶನ್‌ಗಳು ಬರುತ್ತವೆ. ಆದರೆ, ಅವೆಲ್ಲವೂ ಪಾಸಿಂಗ್‌ ಶಾಟ್‌ನಲ್ಲಿ ಬಂದು ಹೋದಂತೆ ಭಾಸವಾಗುತ್ತವೆ ಅನ್ನೋದು ಬಿಟ್ಟರೆ ಮಿಕ್ಕಂತೆ ಇದೊಂದು ಕೂಲ್‌ ಸಿನಿಮಾ. ನಿಧಾನವೇ ಪ್ರಧಾನ ಎಂಬಂತೆ ಸಾಗುವ ಈ ಚಿತ್ರದಲ್ಲಿ ಆಗಾಗ ಒಂದಷ್ಟು ಟ್ವಿಸ್ಟ್‌ಗಳು ಬರುತ್ತವೆ. ಆ ಮೂಲಕ ಆಗಾಗ ಪ್ರೇಕ್ಷಕ ನನ್ನು ಜಾಗೃತಗೊಳಿಸುತ್ತವೆ. ಸಿನಿಮಾದಲ್ಲಿ ಹೆಚ್ಚು ಲಾಜಿಕ್‌ ಹುಡುಕಬಾರದೆಂಬ ಮಾತಿದೆ. ಇಲ್ಲೂ ಅಷ್ಟೇ ಕೆಲವು ಅಂಶಗಳಿಗೆ ಲಾಜಿಕ್‌ ಹುಡುಕಬಾರದು. ಅದು ನಿರ್ದೇಶಕನ ಸ್ವತಂತ್ರ್ಯ ಕೂಡಾ.

ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ವಸಿಷ್ಠ ಸಿಂಹ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವರಿಗೆ ಲವರ್‌ಬಾಯ್‌ಗಿಂತ ಆ್ಯಕ್ಷನ್‌ನಲ್ಲಿ ಇಷ್ಟವಾಗುತ್ತಾರೆ. ಮಾನ್ವಿತಾ ಇಲ್ಲಿ ಲವಲವಿಕೆಯ ಹುಡುಗಿಯಾಗಿ ಮಿಂಚಿದ್ದಾರೆ. ಉಳಿದಂತೆ ಅನಂತ್‌ನಾಗ್‌, ಪ್ರಕಾಶ್‌ ಬೆಳವಾಡಿ, ಸುಮಲತಾ ಅಂಬರೀಶ್‌, ಸಾಧುಕೋಕಿಲ, ಶಿವಮಣಿ ತಮ್ಮ ಪಾತ್ರಗಳಲ್ಲಿ ಇಷ್ಟವಾಗುತ್ತಾರೆ. ಚಿತ್ರದ ಎರಡು ಹಾಡು ಇಷ್ಟವಾಗುತ್ತದೆ.

ಚಿತ್ರ: ಇಂಡಿಯಾ ವರ್ಸಸ್‌ ಇಂಗ್ಲೆಂಡ್‌
ನಿರ್ಮಾಣ: ವೈ.ಎನ್‌ ಶಂಕರೇಗೌಡ ಅಂಡ್‌ ಫ್ರೆಂಡ್ಸ್‌
ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್‌
ತಾರಾಗಣ: ವಸಿಷ್ಠ ಸಿಂಹ, ಮಾನ್ವಿತಾ ಹರೀಶ್‌, ಸುಮಲತಾ ಅಂಬರೀಶ್‌, ಅನಂತ್‌ನಾಗ್‌, ಪ್ರಕಾಶ್‌ ಬೆಳವಾಡಿ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.