ವೆನಿಲ್ಲಾಗೆ ಬೆಂಬಲ ಬೆಲೆ ಕಷ್ಟ!


Team Udayavani, Jun 2, 2018, 11:15 AM IST

venilla-3.jpg

“ಆ ಮನೆಯಲ್ಲೊಂದು ಒಂಟಿ ಹುಡುಗಿಯ ಕೊಲೆಯಾಗುತ್ತೆ. ಆ ಕಲ್ಲು ಗುಡ್ಡೆ ಬ್ರಿಡ್ಜ್ನ ರೈಲ್ವೆ ಟ್ರಾಕ್‌ ಮೇಲೆ ವ್ಯಕ್ತಿಯೊಬ್ಬನ ಶವ ಬಿದ್ದಿರುತ್ತೆ. ಹಾಗಾದರೆ, ಆ ಹುಡುಗಿ ಕೊಲೆ ಮಾಡಿದ್ದು ಯಾರು, ಆ ರೈಲ್ವೆ ಟ್ರ್ಯಾಕ್‌ ಮೇಲಿನ ಶವ ಯಾರದ್ದು…? ಈ ಪ್ರಶ್ನೆ ಇಟ್ಟುಕೊಂಡೇ ನಿರ್ದೇಶಕರು ಸುಮಾರು ಎರಡು ತಾಸಿನವರೆಗೆ ಮರ್ಡರ್‌ ಮಿಸ್ಟ್ರಿ ಕಥೆ ಹೆಣೆದಿದ್ದಾರೆ. ಇಲ್ಲಿ ಕುತೂಹಲವಿದೆ, ಗಂಭೀರತೆಯೂ ಇದೆ. ಹಾಗಂತ, ಬಹಳ ಕಾಲ ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾತ್ರ ಆಗಿಲ್ಲ.

ಒಂದು ಪತ್ತೆದಾರಿ ಕಾದಂಬರಿ ಓದುವಾಗ, ಯಾವ ಫೀಲ್‌ ಬರುತ್ತೋ, ಅಂಥದ್ದೇ ಫೀಲ್‌ ಇಲ್ಲಿದೆಯಾದರೂ, ಅದಕ್ಕೆ ಇನ್ನಷ್ಟು “ವ್ಯಾಕರಣ’ ಬೇಕಿತ್ತು. ಎಲ್ಲೋ ಒಂದು ಕಡೆ ಚಿತ್ರ ತುಂಬಾ ಗಂಭೀರತೆಗೆ ದೂಡುತ್ತಿದ್ದಂತೆಯೇ, ಇನ್ನೆಲ್ಲೋ ಕಡೆ ಹಾಡೊಂದು ಬಂದು ಗಂಭೀರತೆಗೆ ಕಲ್ಲು ಹಾಕಿ ಬಿಡುತ್ತೆ. ಅದು ಬಿಟ್ಟರೆ, ಸಣ್ಣ ಪುಟ್ಟ ಕಿರಿಕಿರಿ ನಡುವೆ ನೋಡಿಸಿಕೊಂಡು ಹೋಗುವ ಸಣ್ಣದೊಂದು “ತಾಕತ್ತು’ ಚಿತ್ರಕ್ಕಿದೆ. ಇಲ್ಲಿ ಫ್ರೆಶ್‌ ಕಥೆ ಇದೆ ಅಂದುಕೊಳ್ಳುವಂತಿಲ್ಲ. ಆದರೆ, ಫ್ರೆಶ್‌ ಎನಿಸುವ ಪಾತ್ರಗಳಿವೆ.

ಕಥೆಯಲ್ಲಿ ಕೊಂಚ ಗಟ್ಟಿತನ ಇರುವುದರಿಂದ ತೆರೆ ಮೇಲಿನ ಪಾತ್ರಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಒಂದೆರೆಡು ಕೊಲೆಗಳು, ಅದರ ಸುತ್ತ ನಡೆಯುವ ಚುರುಕುತನದ ತನಿಖೆ ಇದೆಲ್ಲಾ ಕನ್ನಡಕ್ಕೆ ಹೊಸದಲ್ಲ. “ವೆನಿಲ್ಲಾ’ ಅದೇ ಹಾದಿಯಲ್ಲಿ ಸಾಗುವ ಚಿತ್ರವಾದರೂ, ಕೆಲವೆಡೆ ಹಲವು ಪ್ರಶ್ನೆಗಳಿಗೆ, ಕೆಲವು ಕುತೂಹಲಕ್ಕೆ ಕಾರಣವಾಗುತ್ತಲೇ, ಅಲ್ಲಲ್ಲೇ ಉತ್ತರ ಕೊಡುವ ಮೂಲಕ ಒಂದೊಂದು ದೃಶ್ಯದಲ್ಲಿ ಸಣ್ಣದೊಂದು ತಿರುವು ಇಟ್ಟು ನೋಡುಗನ ತಾಳ್ಮೆಯನ್ನು ಸಮಾಧಾನಪಡಿಸುವಲ್ಲಿ ಸಫ‌ಲವಾಗುತ್ತೆ.

ಇಂತಹ ಚಿತ್ರಗಳಿಗೆ ನಿರೂಪಣೆ ಬಹಳ ಮುಖ್ಯ. ಅದರ ಬಗ್ಗೆ ಮಾತಾಡುವಂತಿಲ್ಲ. ಆದರೆ, ಅದಕ್ಕೆ ಪೂರಕವಾದಂತಹ “ಲಾಜಿಕ್‌’ ಕೂಡ ಅಷ್ಟೇ ಮುಖ್ಯ. ಆದರೆ, ಇಲ್ಲಿರುವ ಕೆಲ ದೃಶ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಾಕಷ್ಟು “ಲಾಜಿಕ್‌ ಎರರ್‌’ ಕಾಣಸಿಗುತ್ತವೆ. ಅವನ್ನೆಲ್ಲಾ ಪಕ್ಕಕ್ಕಿಟ್ಟು ನೋಡಿದರೂ, ಕೆಲವೆಡೆ ಇಷ್ಟ, ಹಲವೆಡೆ ಕಷ್ಟ ಎನಿಸದೇ ಇರದು. ಆಳವಾದ ಪ್ರೀತಿ, ಅನಿರೀಕ್ಷಿತ ಘಟನೆಗಳು, ಅಲ್ಲೊಂದು ಮಾಫಿಯಾ, ಸಿನಿಮಾದುದ್ದಕ್ಕೂ ಕಂಡುಬರುವ ತರಹೇವಾರಿ ಪಾತ್ರಗಳು ಚಿತ್ರದ ಏರಿಳಿತವನ್ನು ನಿಭಾಯಿಸಲು ಹರಸಾಹಸ ಮಾಡಿವೆ.

ಒಂದು ಮರ್ಡರ್‌ ಮಿಸ್ಟ್ರಿ ಕಥೆಯಲ್ಲಿ ಇರಬೇಕಾದ ಎಲ್ಲಾ ಅಂಶಗಳು, ಸೂಕ್ಷ್ಮ ಸಂಗತಿಗಳು ಇಲ್ಲಿವೆಯಾದರೂ, ಸಿನಿಮಾದುದ್ದಕ್ಕೂ ಅದನ್ನು ಬಿಗಿಹಿಡಿತದಲ್ಲಿಟ್ಟುಕೊಳ್ಳಲು ನಿರ್ದೇಶಕರು ಹಿಂದೇಟು ಹಾಕಿದ್ದಾರೆ. ಹಾಗಾಗಿ ಆ ಪ್ರಯತ್ನ ಇಲ್ಲಿ ಹೆಚ್ಚಾಗಿ ವಕೌìಟ್‌ ಆಗಿಲ್ಲ. ಬಹುಶಃ ಅದನ್ನು ಸರಿಪಡಿಸಿಕೊಂಡಿದ್ದರೆ, ನೋಡುಗನಿಗೆ “ವೆನಿಲ್ಲಾ ಬಂಪರ್‌ ಬೆಳೆ’ ಎನ್ನಬಹುದಿತ್ತು. ಆದರೂ ಒಂದು ಮರ್ಡರ್‌ ಮಿಸ್ಟ್ರಿಯನ್ನು ಹೇಗೆಲ್ಲಾ ತೋರಿಸಬಹುದು, ಎಷ್ಟೆಲ್ಲಾ ಕುತೂಹಲಕ್ಕೆ ಕಾರಣಪಡಿಸಬಹುದು ಎಂಬುದಕ್ಕಾದರು ಒಮ್ಮೆ “ವೆನಿಲ್ಲಾ’ ನೋಡಲ್ಲಡ್ಡಿಯಿಲ್ಲ.

ಅವಿನಾಶ್‌ ಮತ್ತು ಅನಗ ಬಾಲ್ಯದ ಗೆಳೆಯರು. ಒಂದು ಹಂತದಲ್ಲಿ ಅನಗ ಬೇರೆ ಊರಿಗೆ ಶಿಫ್ಟ್ ಆಗುತ್ತಾಳೆ. ಆಕೆ ಶಿಫ್ಟ್ ಆದ ಊರಿಗೇ ಹನ್ನೆರೆಡು ವರ್ಷಗಳ ಬಳಿಕ ಅವಿನಾಶ್‌ ಕುಟುಂಬವೂ ಹೋಗುತ್ತೆ. ಆಕಸ್ಮಿಕವಾಗಿ ಅವರಿಬ್ಬರ ಭೇಟಿಯಾಗುತ್ತೆ, ಪ್ರೀತಿಯೂ ಚಿಗುರುತ್ತೆ. ಇನ್ನೇನು ಇಬ್ಬರೂ ಡ್ಯುಯೆಟ್‌ ಹಾಡಬೇಕೆನ್ನುವಷ್ಟರಲ್ಲಿ ಒಂದು ಕೊಲೆ ನಡೆಯುತ್ತೆ. ಅದಕ್ಕೊಂದು ತನಿಖೆ ಶುರುವಾಗುತ್ತೆ. ಆ ಕೊಲೆ ಯಾಕಾಯ್ತು ಅನ್ನೋದೇ ಚಿತ್ರದ ಸಾರಾಂಶ. ಅದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ, “ವೆನಿಲ್ಲಾ’ ರುಚಿ ಮಾಡಬಹುದು!

ಮೊದಲ ಚಿತ್ರವಾದರೂ ಅವಿನಾಶ್‌ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಿತ್ರದ ಮತ್ತೂಂದು ವಿಶೇಷತೆ ಅಂದರೆ, ರವಿಶಂಕರ್‌ಗೌಡ ಪಾತ್ರ. ಇದುವರೆಗೆ ಹಾಸ್ಯ ಪಾತ್ರಗಳಲ್ಲೇ ಕಾಣಿಸುತ್ತಿದ್ದ ಅವರಿಲ್ಲಿ, ಇಮೇಜ್‌ ಬದಲಿಸಿಕೊಳ್ಳುವಂತಹ ಪಾತ್ರ ಮಾಡಿದ್ದಾರೆ. ಒಬ್ಬ ದಕ್ಷ ಪೊಲೀಸ್‌ ಅಧಿಕಾರಿಯಾಗಿ ತನಿಖೆ ನಡೆಸುವ ಶೈಲಿಯಲ್ಲಿ ಗಮನಸೆಳೆಯುತ್ತಾರೆ. ಸ್ವಾತಿಕೊಂಡೆ “ಕ್ಯಾಪ್ನ ಫೋಬಿಯಾ’ ರೋಗಿ ಹೇಗೆಲ್ಲಾ ಭಯಪಡುತ್ತಾಳೆ, ಎಷ್ಟೆಲ್ಲಾ ದ್ವೇಷಿಸುತ್ತಾಳೆ ಎಂಬುದನ್ನಿಲ್ಲಿ ತೋರಿಸುವ ಮೂಲಕ ಇಷ್ಟವಾಗುತ್ತಾರೆ.

ಪಾವನಾ, ರೆಹಮಾನ್‌, ಬಿ.ಸುರೇಶ ಪಾತ್ರಗಳಲ್ಲಿ ಸೂಕ್ಷ್ಮತೆ ಇದೆ. ಇಡೀ ಕಥೆಯ ಆಧಾರ ಈ ಮೂರು ಪಾತ್ರಗಳು. ಮೂವರು ಸಲೀಸಾಗಿ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಅನುಮಾನಸ್ಪದವಾಗಿ ಕಾಣುವ ಪಾತ್ರಗಳಲ್ಲಿ ನಟಿಸಿರುವ ಕಲಾವಿದರ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಬಿ.ಜೆ.ಭರತ್‌ ಸಂಗೀತದಲ್ಲಿ ಒಂದು ಹಾಡು ಪರವಾಗಿಲ್ಲ. ಇಂತಹ ಚಿತ್ರಕ್ಕೆ ಹಿನ್ನೆಲೆ ಸಂಗೀತ ಜೀವಾಳ. ಅದಿಲ್ಲಿ ಸಾಂಗವಾಗಿ ನೆರವೇರಿದೆ. ಕಿರಣ್‌ ಹಂಪಾಪುರ ಛಾಯಾಗ್ರಹಣದಲ್ಲಿ “ವೆನಿಲ್ಲಾ’ ಫ‌ಸಲು ಸೊಗಸಾಗಿದೆ.

ಚಿತ್ರ: ವೆನಿಲ್ಲಾ
ನಿರ್ಮಾಣ: ಎಸ್‌.ಜಯರಾಮು
ನಿರ್ದೇಶನ: ಜಯತೀರ್ಥ
ತಾರಾಗಣ: ಅವಿನಾಶ್‌, ಸ್ವಾತಿಕೊಂಡೆ, ಪಾವನಾ, ರೆಹಮಾನ್‌, ರವಿಶಂಕರ್‌ಗೌಡ, ಬಿ.ಸುರೇಶ, ಗಿರಿ, ನಂದ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Naa Ninna Bidalare Movie Review

Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.