Kaatera review: ಕಾಟೇರ ಕಿಚ್ಚು ಝಳಪಿಸಿದ ಮಚ್ಚು

Team Udayavani, Dec 30, 2023, 11:26 AM IST

Tarun sudhir’s Kaatera review

“ಇದೊಂದು ಕಂಟೆಂಟ್‌ ಸಿನಿಮಾ. ಇಲ್ಲಿ ನೀವು ಮೊದಲ ಫೈಟ್‌ ನೋಡಲು ಮುಕ್ಕಾಲು ಗಂಟೆ ಕಾಯಲೇಬೇಕು. ನನ್ನ ಕೆರಿಯರ್‌ನಲ್ಲಿ ತುಂಬಾ ವಿಶೇಷವಾದ ಚಿತ್ರವಿದು…’ ಹೀಗೆ ದರ್ಶನ್‌ “ಕಾಟೇರ’ ಬಗ್ಗೆ ಹೇಳಿಕೊಂಡಿದ್ದರು. ಸಿನಿಮಾ ನೋಡಿದ ಮೇಲೆ ಅವರ ಮಾತಿಗೆ ಫ್ಯಾನ್ಸ್‌ ಹಾಗೂ ಸಿನಿಮಾ ಪ್ರೇಮಿಗಳು ತಲೆದೂಗಿದ್ದಾರೆ. ಅದಕ್ಕೆ ಕಾರಣ “ಕಾಟೇರ’ದೊಳಗೆ ತುಂಬಿಕೊಂಡಿರುವ ಹಲವು ವಿಚಾರಗಳು.

ಹೌದು, ಈ ವಾರ ತೆರೆಕಂಡಿರುವ “ಕಾಟೇರ’ ದರ್ಶನ್‌ ಕೆರಿಯರ್‌ನಲ್ಲಿ ವಿಭಿನ್ನವಾಗಿ ನಿಲ್ಲುವ ಸಿನಿಮಾ ಎಂದರೆ ತಪ್ಪಲ್ಲ. ಸಾಮಾನ್ಯವಾಗಿ ಕಮರ್ಷಿಯಲ್‌ ಸಿನಿಮಾಗಳು, ಅದರಲ್ಲೂ ಸ್ಟಾರ್‌ ಸಿನಿಮಾಗಳು ಕಂಟೆಂಟ್‌ನಿಂದ, ರೈತರ ಸಮಸ್ಯೆಗಳಿಂದ ದೂರವೇ ಇರುತ್ತವೆ ಎಂಬ ಮಾತು ಆಗಾಗ ಕೇಳಿಬರುತ್ತಿದೆ. ಆ ನಿಟ್ಟಿನಲ್ಲಿ “ಕಾಟೇರ’ ಮಾತ್ರ ವಿಭಿನ್ನ ಪ್ರಯತ್ನ ಮಾಡಿದೆ.

“ಕಾಟೇರ’ ಒಂದು ಗ್ರಾಮೀಣ ಸೊಗಡಿನ ಚಿತ್ರ ಹೇಗೋ, ಅದೇ ರೀತಿ ಒಂದು ಸಂದೇಶ ಸಾರುವ ಚಿತ್ರ ಕೂಡಾ. ಮೇಲು-ಕೀಳು, ಜಾತಿ-ಧರ್ಮ ಕುರಿತಾದ ಅಂಶವನ್ನು ಈ ಚಿತ್ರ ಹೊಂದಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ತರುಣ್‌ ಸುಧೀರ್‌ ಅವರ ಪ್ರಯತ್ನ ಹಾಗೂ ಅದಕ್ಕೆ ದರ್ಶನ್‌ ಅವರ ಸಾಥ್‌ ಅನ್ನು ಮೆಚ್ಚಲೇಬೇಕು. ಸಾಮಾನ್ಯವಾಗಿ ರೆಗ್ಯುಲರ್‌ ಸ್ಟಾರ್‌ ಸಿನಿಮಾಗಳಲ್ಲಿ ಸಿಗುವ ಬಿಲ್ಡಪ್‌ಗ್ಳು, ಹೀರೋ ಇಂಟ್ರೊಡಕ್ಷನ್‌ಗಳಿಂದ “ಕಾಟೇರ’ ಮುಕ್ತ. ಇಡೀ ಸಿನಿಮಾ ಒಂದು “ಉದ್ದೇಶ’ದೊಂದಿಗೆ ಸಾಗುತ್ತದೆ.

ಕಥೆಯ ಬಗ್ಗೆ ಹೇಳುವುದಾದರೆ ಇಡೀ ಸಿನಿಮಾ ಉಳುವವನೇ ಭೂಮಿಯ ಒಡೆಯ ಕಾನೂನು ಹಾಗೂ ಅದರ ವಿರುದ್ಧ ಭೂ ಮಾಲೀಕರ ದರ್ಪ, ಅಮಾಯಕ ರೈತರ ಮೇಲೆ ಮಾಡುವ ಹಲ್ಲೆ ಸುತ್ತ ಸಾಗುತ್ತದೆ. ಮೇಲ್ನೋಟಕ್ಕೆ ಗೊತ್ತಿರುವ ವಿಚಾರ ಎಂದೆನಿಸಿದರೂ ಅದನ್ನು ಕಟ್ಟಿಕೊಟ್ಟ ರೀತಿ ಮಾತ್ರ ಇಷ್ಟವಾಗುತ್ತದೆ. ನಿರ್ದೇಶಕ ತರುಣ್‌ ಭರ್ಜರಿ ಪೂರ್ವತಯಾರಿಯೊಂದಿಗೆ ಅಖಾಡಕ್ಕೆ ಇಳಿದ ಕಾರಣ ಯಾವುದೇ ಅನವಶ್ಯಕ ದೃಶ್ಯವಾಗಲೀ, ಯಾರನ್ನೋ ಮೆಚ್ಚಿಸುವ ಪ್ರಯತ್ನವಾಗಲಿ ಮಾಡಿಲ್ಲ. ಕಥೆಯ ಆಶಯಕ್ಕೆ ಧಕ್ಕೆಯಾಗದಂತೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಹಾಗಂತ ಇಲ್ಲಿ ದರ್ಶನ್‌ ಅಭಿಮಾನಿಗಳಿಗೆ ಭರ್ಜರಿ ಬಾಡೂಟವನ್ನೇ ಹಾಕಿದ್ದಾರೆ. ಅದು ಕಥೆಯ ಜೊತೆ ಜೊತೆಗೆ ಸಾಗಿ ಬಂದಿದೆ.

ತಣ್ಣಗೆ ಆರಂಭವಾಗುವ ಸಿನಿಮಾ ಮುಂದೆ ಸಾಗುತ್ತಾ “ಕಾವು’ ಪಡೆದುಕೊಳ್ಳುತ್ತದೆ. ಆ್ಯಕ್ಷನ್‌ ಅಬ್ಬರಕ್ಕೆ ಕಾಯುತ್ತಿದ್ದ ಮಾಸ್‌ ಪ್ರೇಕ್ಷಕರು ಖುಷಿಪಡುವಂತಹ ಭರ್ಜರಿ ಹಾಗೂ ರೆಗ್ಯುಲರ್‌ ಶೈಲಿ ಬಿಟ್ಟ ಫೈಟ್‌ಗಳು ಈ ಸಿನಿಮಾದ ಹೈಲೈಟ್‌ ಗಳಲ್ಲಿ ಒಂದು. ಚಿತ್ರದಲ್ಲಿ ಅತಿಯಾದ ಮಾತಿಲ್ಲ, ಆದರೆ ಅರ್ಥಪೂರ್ಣವಾದ ಮಾತಿಗೆ ಕೊರತೆಯಿಲ್ಲ. ಅವೆಲ್ಲವೂ ಕಥೆಯ ಚೌಕಟ್ಟಿನಲ್ಲೇ ಸಾಗಿ ಬರುವುದು ಮತ್ತೂಂದು ವಿಶೇಷ. ಸಿನಿಮಾದ ಕಥೆಯನ್ನು ಸುದೀರ್ಘ‌ವಾಗಿ ಮತ್ತು ಅಷ್ಟೇ ಗಂಭೀರವಾಗಿ ಹೇಳಿರುವುದರಿಂದ ಕೊಂಚ ಸಿನಿಮಾದ ಅವಧಿ ಹೆಚ್ಚಾಯಿತು ಎನಿಸುತ್ತದೆ. ಆದರೆ, ಅವೆಲ್ಲವನ್ನು ಮರೆಸುವಂತೆ ಅಕ್ಕ-ತಮ್ಮನ ಸೆಂಟಿಮೆಂಟ್‌, ಪೌರಾಣಿಕ ದೃಶ್ಯಗಳು ಮರೆಸುತ್ತವೆ.

ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿದವರು ನಟ ದರ್ಶನ್‌. ತುಂಬಾ ದಿನಗಳ ನಂತರ ವಿಭಿನ್ನವಾದ ಹಾಗೂ ನಟನೆಗೆ ಹೆಚ್ಚು ಒತ್ತು ಇರುವ ಪಾತ್ರದಲ್ಲಿ ಮಿಂಚಿದ್ದಾರೆ. ಪಕ್ಕಾ ಹಳ್ಳಿ ಸೊಗಡಿನ ಪಾತ್ರಕ್ಕೆ ಎರಡು ಶೇಡ್‌ ಇದ್ದು, ಎರಡರಲ್ಲೂ ದರ್ಶನ್‌ ಇಷ್ಟವಾಗುತ್ತಾರೆ. ಮೊದಲ ಬಾರಿಗೆ ನಾಯಕಿಯಾಗಿ ಎಂಟ್ರಿಕೊಟ್ಟಿರುವ ಆರಾಧನಾ ಈ ಸಿನಿಮಾದ ಅಚ್ಚರಿ. ಮೊದಲ ಚಿತ್ರದಲ್ಲೇ ತೂಕದ ಪಾತ್ರ ಸಿಕ್ಕಿದ್ದು, ಅದನ್ನು ಅಚ್ಚುಕಟ್ಟಾಗಿ ನಿಭಾಹಿಸಿ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಉಳಿದಂತೆ ಶ್ರುತಿ, ಕುಮಾರ್‌ ಗೋವಿಂದ, ಜಗಪತಿ ಬಾಬು, ವಿನೋದ್‌ ಆಳ್ವ, ಬಿರಾದಾರ್‌ ಸೇರಿದಂತೆ ಇತರರು ನಟಿಸಿದ್ದಾರೆ. ಸಿನಿಮಾದಲ್ಲಿ ಹಾಡಿಗಿಂತ ಕಥೆಯೇ

ಹೆಚ್ಚು ಹೈಲೈಟ್‌ ಆಗಿದೆ. ಮಾಸ್ತಿ ಬರೆದಿರುವ ತುಂಬಾ ಹರಿತವಾದ ಸಂಭಾಷಣೆ ಸಿನಿಮಾದ ಹೈಲೈಟ್‌ಗಳಲ್ಲಿ ಒಂದು. ಫ್ಯಾಮಿಲಿ ಡ್ರಾಮಾದ ಜೊತೆಗೆ ಮಾಸ್‌ ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕೆಂದುಕೊಂಡವರಿಗೆ “ಕಾಟೇರ’ ಒಳ್ಳೆಯ ಆಯ್ಕೆಯಾಗಬಹುದು

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Out of syllabus movie review

Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್‌

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.