ಚಿತ್ರ ಮುಗಿದಿದೆ; ಕಥೆ ಮುಂದುವರೆಯಲಿದೆ


Team Udayavani, Nov 3, 2017, 6:00 PM IST

Nishyabdha.jpg

ಅವನಿಗೆ ಅರ್ಜೆಂಟ್‌ ಆಗಿ 25 ಲಕ್ಷ ಬೇಕು. ಅವಳಿಗೆ ಸಾಲ ತೀರಿಸಿ, ಮಾನ ಉಳಿಸಿಕೊಳ್ಳುವುದಕ್ಕೆ ತುರ್ತಾಗಿ ಹಣ ಬೇಕು. ಹಣ ಹೊಂದಿಸುವುದು ಹೇಗೆಂದು ಯೋಚಿಸುತ್ತಿದ್ದಾಗ, ಮೂರನೆಯವನು ಬಂದು ಒಂದು ಐಡಿಯಾ ಹೇಳುತ್ತಾನೆ. ಊರಾಚೆ ಇರುವ ಒಬ್ಬ ಅಂಧನ ಮನೆಯಲ್ಲಿ ಐದು ಕೋಟಿ ಹಾರ್ಡ್‌ ಕ್ಯಾಶ್‌ ಇರುವುದಾಗಿಯೂ, ಒಮ್ಮೆ ಒಳ ನುಗ್ಗಿದರೆ ಅದನ್ನು ಹೊಡೆದುಕೊಂಡು ಬಂದು ತಮ್ಮೆಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಸಲಹೆ ಕೊಡುತ್ತಾನೆ.

ಅವನು ಹೇಳುವಷ್ಟು ದರೋಡೆ ಮಾಡುವುದು ಸುಲಭವಾ? ಖಂಡಿತಾ ಅಲ್ಲ. ಮನೆಯಲ್ಲಿರುವವನಿಗೆ ಕಣ್ಣಿಲ್ಲದಿದ್ದರೂ ಅವನು ಬಹಳ ಚಾಣಾಕ್ಷ. ಒಂದು ಸಣ್ಣ ಶಬ್ಧ ಬಂದರೂ, ಏನೋ ಆಗಿದೆ ಎಂದು ಅರ್ಥ ಮಾಡಿಕೊಳ್ಳಬಲ್ಲ ಪ್ರಳಯಾಂತಕ. 10 ಜನ ನುಗ್ಗಿದರೂ ಅವರೆಲ್ಲರನ್ನೂ ಬಗ್ಗಬಡಿಯಬಲ್ಲಷ್ಟು ಗಟ್ಟಿಗ. ಇದೆಲ್ಲದರ ಜೊತೆಗೆ ಅವನ ಬಳಿ ಪಿಸ್ತೂಲುಗಳಿವೆ. ಸಾಲದ್ದಕ್ಕೆ  ಮನೆಯೊಳಗೊಂದು ನಾಯಿಯೂ ಇದೆ.

ಇದೆಲ್ಲದರ ಮಧ್ಯೆ ಆ ಮೂವರು ಮನೆಯೊಳಗೆ ನುಗ್ಗಬೇಕು. ದರೋಡೆ ಮಾಡಬೇಕು. ಒಂದು ಚಾನ್ಸ್‌ ತೆಗೆದುಕೊಂಡೇ ಬಿಡೋಣ ಎಂದು ಒಳಕ್ಕೆ ನುಗ್ಗುತ್ತಾರೆ. ಅಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಾ ಹೋಗುತ್ತದೆ. ಅವರು ಅಂದುಕೊಂಡಿದ್ದೇ ಒಂದು, ಅಲ್ಲಿ ಆಗುವುದೇ ಇನ್ನೊಂದು. ಇಷ್ಟಕ್ಕೂ ಏನೇನಾಗುತ್ತದೆ ಎಂದು ಗೊತ್ತಾಗಬೇಕಿದ್ದರೆ “ನಿಶ್ಯಬ್ಧ 2′ ನೋಡಬೇಕು. ದೆವ್ವದ ಸಿನಿಮಾಗಳೇನೋ ಸಾಕಷ್ಟು ಬಂದಿವೆ.

ಆದರೆ, ಒಂದೊಳ್ಳೆಯ ಥ್ರಿಲ್ಲರ್‌ ಸಿನಿಮಾ ಬರದೇ ಬಹಳಷ್ಟು ದಿನಗಳೇ ಆಗಿದ್ದವು. ಆ ಕೊರಗನ್ನು ನೀಗಿಸುವುದಕ್ಕೆ “ನಿಶ್ಯಬ್ಧ 2′ ಬಂದಿದೆ. ಡಾ. ವಿಷ್ಣುವರ್ಧನ್‌ ಅಭಿನಯದ “ನಿಶ್ಯಬ್ಧ’ಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರದ ಪೋಸ್ಟರ್‌ಗಳಲ್ಲಿ ನಾಯಿ ನೋಡಿ, ಸಂಬಂಧ ಕಲ್ಪಿಸುವ ಯೋಚನೆ ಮಾಡಬೇಡಿ. ಇಲ್ಲಿ ಒಂದು ನಾಯಿ ಇದೆಯಾದರೂ, ಅದಕ್ಕೆ ಹೆಚ್ಚು ಕೆಲಸವಿಲ್ಲ. ಎಲ್ಲಾ ಕೆಲಸಗಳನ್ನೂ ಮನುಷ್ಯರೇ ಮಾಡುತ್ತಾರೆ.

ಅವರು ಕರ್ಮ ಮಾಡುವವರಿಗೆ ನಾವು ತಾಳ್ಮೆಯಿಂದ ಕಾಯಬೇಕು ಅಷ್ಟೇ. “ನಿಶ್ಯಬ್ಧ 2′ ಒಂದು ಅಪ್ಪಟ ಥ್ರಿಲ್ಲರ್‌ ಸಿನಿಮಾ. ಸೀಟಿನ ಅಂಚಿಗೆ ತಂದು ಕೂರಿಸುವ ಕೆಲವು ಥ್ರಿಲ್ಲಿಂಗ್‌ ಅಂಶಗಳು ಚಿತ್ರದಲ್ಲಿವೆ.  ಆದರೆ, ಅದಕ್ಕೆ ಸರಿಯಾಗಿ ರೂಪ ಕೊಡುವ ಅಗತ್ಯವಿತ್ತು. ಬೇಡದ ವಿಷಯಗಳನ್ನು ಪಕ್ಕಕ್ಕಿಟ್ಟು, ಇನ್ನಷ್ಟು ನೇರವಾಗಿ ಹೇಳುವ ಸಾಧ್ಯತೆ ಇತ್ತು. ಸರಿಯಾಗಿ ಹೇಳಬೇಕೆಂದರೆ, ಚಿತ್ರದ ಕಥೆ ಶುರುವಾಗುವುದು ಇಂಟರ್‌ವೆಲ್‌ನ ನಂತರ.

ಅದಕ್ಕೂ ಮುನ್ನ ಮೂರು ಹಾಡು, ಫೈಟು, ಬಿಲ್ಡಪ್ಪು … ಅಂತೆಲ್ಲಾ ಒಂದು ಗಂಟೆ ಕಳೆದು ಹೋಗು¤ದೆ. ಇಂಟರ್‌ವೆಲ್‌ಗೆ ಸ್ವಲ್ಪ ಹೊತ್ತಿದೆ ಎನ್ನುವಾಗ ಚಿತ್ರಕ್ಕೊಂದು ವೇಗ ಸಿಗುತ್ತದೆ. ದ್ವಿತೀಯಾರ್ಧದಲ್ಲಿ ಚಿತ್ರ ನೋಡಿಸಿಕೊಂಡು ಹೋಗುತ್ತದಾದರೂ, ಚಿತ್ರ ಅರ್ಥವಾಗುವುದಕ್ಕೆ “ನಿಶ್ಯಬ್ಧ 3′ ಬರುವವರೆಗೂ ಕಾಯಬೇಕು. ಏಕೆಂದರೆ, ಚಿತ್ರವು ಅನೇಕ ಪ್ರಶ್ನೆಗಳೊಂದಿಗೆ ಮುಗಿಯುತ್ತದೆ.

ಪ್ರಮುಖವಾಗಿ ಅಂಧನ ಮನೆಯಲ್ಲಿದ್ದ ಹುಡುಗಿ ಯಾರು, ಅವಳನ್ನಾಕೆ ಕಟ್ಟಿ ಹಾಕಲಾಗಿರುತ್ತದೆ, ಪತ್ರಿಕೆಯೊಂದರಲ್ಲಿ ಬಂದ ವರದಿಗೂ ಆ ಹುಡುಗಿಗೂ ಏನು ಸಂಬಂಧ, ಇಷ್ಟಕ್ಕೂ ಅಂಧ ಯಾಕೆ ಅಷ್ಟು ನಿಗೂಢವಾಗಿರುತ್ತಾನೆ ಮುಂತಾದ ಪ್ರಶ್ನೆಗಳಿಗೆ ಚಿತ್ರ ಮುಗಿದರೂ ಉತ್ತರ ಸಿಗುವುದಿಲ್ಲ. ಚಿತ್ರದ ಕೊನೆಯ ಶಾಟ್‌ನಲ್ಲಿ, “ನಿಶ್ಯಬ್ಧ 3′ ಎಂದು ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ ಮತ್ತು ಆ ಪ್ರಶ್ನೆಗಳಿಗೆಲ್ಲಾ ಉತ್ತರ ಬೇಕಿದ್ದರೆ ಆ ಚಿತ್ರ ಬರುವವರೆಗೂ ಕಾಯಬೇಕು. 

ಇದೆಲ್ಲದರ ಮಧ್ಯೆ ಚಿತ್ರದಲ್ಲಿ ಗಮನಸಳೆಯುವ ಒಂದಿಷ್ಟು ವಿಷಯಗಳಿವೆ. ಪ್ರಮುಖವಾಗಿ ಕತ್ತಲೆ ಮನೆಯೊಳಗಿನ ದೃಶ್ಯಗಳು, ಮನೆಯೊಳಗೆ ಒಂಚೂರು ಶಬ್ಧವಾಗದಂತೆ ಪಾತ್ರಧಾರಿಗಳು ಒದ್ದಾಡುವುದು, ಆ ಸಂದರ್ಭದಲ್ಲಿ ಚಿತ್ರದಲ್ಲಿರುವ ನೀರವ ಮೌನ … ಮುಂತಾದ ಹಲವು ವಿಷಯಗಳು ಗಮನಸೆಳೆಯುತ್ತವೆ. ಸತೀಶ್‌ ಆರ್ಯನ್‌ ಅವರ ಹಿನ್ನೆಲೆ ಸಂಗೀತ, ವೀನಸ್‌ ಮೂರ್ತಿ ಛಾಯಾಗ್ರಹಣ ಮತ್ತು ಅವಿನಾಶ್‌ ಅವರ ಅಭಿನಯ ಚಿತ್ರದ ಪ್ಲಸ್‌ಪಾಯಿಂಟ್‌ಗಳು.

ಈ ಪೈಕಿ ಅವಿನಾಶ್‌ ಅವರ ಬಗ್ಗೆ ಹೇಳಲೇ ಬೇಕು. ಬಹಳ ವಿಭಿನ್ನವಾದ ಗೆಟಪ್‌ವೊಂದರಲ್ಲಿ ಅವಿನಾಶ್‌ ಕಾಣಿಸಿಕೊಂಡಿದ್ದಾರೆ ಮತ್ತು ಬಹಳ ದಿನಗಳ ನಂತರ ಅವರಿಗೊಂದು ವಿಭಿನ್ನ ಪಾತ್ರ ಸಿಕ್ಕಿದೆ. ಆ ಪಾತ್ರವನ್ನು ಅವಿನಾಶ್‌ ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ಮಿಕ್ಕಂತೆ ಇರುವ ಬೆರಳಣಿಕಯಷ್ಟು ಪಾತ್ರಗಳ ಪೈಕಿ ಹೇಳಬೇಕಾದರೆ, ನಾಯಕ ರೂಪೇಶ್‌ ಸಾಕಷ್ಟು ಸುಧಾರಿಸಿದ್ದಾರೆ. ಆರಾಧ್ಯ ಸುಧಾರಿಸಬೇಕು. ಪೆಟ್ರೋಲ್‌ ಪ್ರಸನ್ನ ಎಂದಿನಂತೆ ಲವಲವಿಕೆಯಿಂದ ನಟಿಸಿದ್ದಾರೆ.

ಚಿತ್ರ: ನಿಶ್ಯಬ್ಧ 2
ನಿರ್ದೇಶನ: ದೇವರಾಜ್‌ ಕುಮಾರ್‌
ನಿರ್ಮಾಣ: ತಾರಾನಾಥ ಶೆಟ್ಟಿ ಬೋಳಾರು
ತಾರಾಗಣ: ರೂಪೇಶ್‌ ಶೆಟ್ಟಿ, ಆರಾಧ್ಯ ಶೆಟ್ಟಿ, ಅವಿನಾಶ್‌, ಪೆಟ್ರೋಲ್‌ ಪ್ರಸನ್ನ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ugravatara Review:

Ugravatara Review: ದುರ್ಗಿ ಭರ್ಜರಿ ಬೇಟೆ

bagheera movie review

Bagheera Review: ಕಣ್ಣಾಮುಚ್ಚಾಲೆ ಆಟದಲ್ಲಿ ಬಘೀರ!

Prapthi Movie Review

Prapthi Movie Review: ಭಾವನೆಗಳ ಸುತ್ತ ಪ್ರಾಪ್ತಿ

mooka jeeva kannada movie review

Mooka Jeeva Review: ಮುಗ್ಧ ಮನಸ್ಸಿನ ಪ್ರತಿಬಿಂಬ

Ellige Payana Yavudo Daari Review: ರೋಚಕ ಹಾದಿಯ ಸುಖಕರ ಪಯಣವಿದು…

Ellige Payana Yavudo Daari Review: ರೋಚಕ ಹಾದಿಯ ಸುಖಕರ ಪಯಣವಿದು…

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.