ಹೀಗೊಂದು ದಿನದಲ್ಲಿ ಹಾಗೊಂದು ಘಟನೆ!


Team Udayavani, Mar 30, 2018, 6:28 PM IST

higondu.jpg

“ಇಲ್ಲಿ ಏನಾಗ್ತಾ ಇದೆಯೋ ನಂಗೇ ಗೊತ್ತಿಲ್ಲ ಕಣೇ. ಇನ್ನು ಹತ್ತು ನಿಮಿಷದೊಳಗೆ ನಾನು ಅಲ್ಲಿರ್ತೀನಿ…’ ಪದೇ ಪದೇ ಅವಳು ಹೀಗೆ ಫೋನ್‌ನಲ್ಲಿ ಹೇಳ್ತಾನೆ, ತಾನಂದುಕೊಂಡ ಸ್ಥಳಕ್ಕೆ ಹೋಗಲು ಹರಸಾಹಸ ಪಡ್ತಾಳೆ. ಆದರೆ, ಸಂದರ್ಭ, ಪರಿಸ್ಥಿತಿ ಅವಳನ್ನು ಅಲ್ಲಿಗೆ ಸರಿಯಾದ ಸಮಯಕ್ಕೆ ಹೋಗಲು ಬಿಡಲ್ಲ. ಅದು ಯಾಕೆ ಮತ್ತು ಹೇಗೆ ಎಂಬುದೇ ಸಸ್ಪೆನ್ಸ್‌. ಬೆಳಗ್ಗೆ 6 ರಿಂದ 8 ಗಂಟೆವರೆಗೆ ನಡೆಯುವ ಕಥೆಯಲ್ಲಿ ತರಹೇವಾರಿ ಪಾತ್ರಗಳು ಎದುರಾಗುತ್ತವೆ. ಅಂದುಕೊಳ್ಳದ ಘಟನೆಗಳೂ ನಡೆದು ಹೋಗುತ್ತವೆ.

ಟೈಮ್‌ ಅನ್ನೋದು ಸರಿ ಇಲ್ಲದಿದ್ದಾಗ, ಎಷ್ಟೆಲ್ಲಾ ಎಡವಟ್ಟುಗಳಾಗುತ್ತವೆ ಎಂಬುದಕ್ಕೊಂದು ಸ್ಪಷ್ಟ ಉದಾಹರಣೆ “ಹೀಗೊಂದು ದಿನ’. ಇಲ್ಲಿ ನಿರ್ದೇಶಕರ ಶ್ರಮ ಎದ್ದು ಕಾಣುತ್ತೆ. ಅವರ ಪರಿಕಲ್ಪನೆಯೂ ಇಷ್ಟವಾಗುತ್ತೆ. ಆದರೆ, ಹೇಳಿದ್ದನ್ನೇ, ಹೇಳಿಸಿ, ತೋರಿಸಿದ್ದನ್ನೇ ತೋರಿಸುವುದು ಮಾತ್ರ ಸ್ವಲ್ಪ ತಾಳ್ಮೆಗೆಡಿಸುತ್ತದೆ. ಮನುಷ್ಯ ನಿತ್ಯದ ಜಂಜಾಟದಲ್ಲಿ ಇನ್ನೇನು ಸೋತೆ ಅಂತ ನಂಬಿಕೆ ಕಳಕೊಂಡು ಹತಾಶನಾದಾಗ, ಬದಕಲ್ಲಿನ್ನೂ ಆಟ ಬಾಕಿ ಇದೆ ಎಂದು ಗೊತ್ತಾಗಿ, ಪುನಃ ನಂಬಿಕೆಯಲ್ಲೇ ಗುರಿ ತಲುಪಲು ಶ್ರಮಿಸಿದರೆ ಸಿಗುವ ಫ‌ಲ ಏನೆಂಬುದನ್ನು ಇಲ್ಲಿ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.

ಕಥೆಯಲ್ಲಿ ಹೇಳಿಕೊಳ್ಳುವಂತಹ ವಿಶೇಷತೆ ಇಲ್ಲ. ಚಿತ್ರಕಥೆಯಲ್ಲಿ ಇನ್ನೊಂದಷ್ಟು ಬಿಗಿ ಹಿಡಿತ ಇರಬೇಕಿತ್ತು. ಒಂದು ಸರಳ ಕಥೆಗೆ ಬೇಕಾದ ತಯಾರಿಯ ಕೊರತೆ ಇಲ್ಲಿ ಎದ್ದು ಕಾಣುತ್ತೆ. ಏನೋ ಹೇಳಿ ಬಿಡಬೇಕು ಎಂಬ ಧಾವಂತದಲ್ಲಿ ಚಿತ್ರ ಮಾಡಲಾಗಿದೆ. ಇಲ್ಲಿ ಸೂಕ್ಷ್ಮವಾಗಿ ಗಮನಿಸುವ ಅಂಶವೆಂದರೆ, ಯಾವುದೇ ಟ್ವಿಸ್ಟ್‌ ಇಲ್ಲ, ಆದರೆ, ನೋಡುಗನ ತಾಳ್ಮೆಯನ್ನು ಸಿಕ್ಕಾಪಟ್ಟೆ ಟೆಸ್ಟ್‌ ಮಾಡುವುದರಲ್ಲಿ ಅನುಮಾನವಿಲ್ಲ. 

ಕಥೆ, ಚಿತ್ರಕಥೆಯನ್ನು ಪಕ್ಕಕ್ಕಿಟ್ಟು ನೋಡುವುದಾದರೆ, ಇದೊಂದು ಹೊಸ ಪ್ರಯೋಗವಾಗಿ ಇಷ್ಟವಾಗುತ್ತೆ. ನೋಡುಗರಿಗೆ “ಅನ್‌ಕಟ್‌ ಮೂವಿ’ ಎಂಬ ಫೀಲ್‌ ಸಿಗುತ್ತೆ. ಅಂದರೆ, ಇಡೀ ಚಿತ್ರವನ್ನು ಒಂದೇ ಶಾಟ್‌ನಲ್ಲಿ ಚಿತ್ರೀಕರಿಸಲಾಗಿದೆಯೇನೋ ಎಂಬ ಸಣ್ಣ ಪ್ರಶ್ನೆ ಎದುರಾಗುವ ಪ್ರಯತ್ನ ಮಾಡಿರುವುದನ್ನು ಒಪ್ಪಬೇಕು. ಆರಂಭದಿಂದ ಅಂತ್ಯದವರೆಗೂ ದೃಶ್ಯಗಳಲ್ಲಿ ಕಾಣಸಿಗುವ ಕಲಾವಿದರಾಗಲಿ, ಕ್ಯಾಮೆರಾ ಆಗಲೀ, ಎಲ್ಲೂ ಆ್ಯಂಗಲ್‌ ಬದಲಾಗುವುದಿಲ್ಲ.

ಕ್ಯಾಮೆರಾ ಇರಲಿ, ಪಾತ್ರಗಳ ಡೈಲಾಗ್‌ಗಳಿರಲಿ ಕಟ್‌ ಆಗುವುದಿಲ್ಲ. ನೋಡುಗರಿಗೆ ಮಾತ್ರ ಇಡೀ ಚಿತ್ರ ಒಂದೇ ಶಾಟ್‌ನಲ್ಲಿ ಚಿತ್ರೀಕರಿಸಿರುಸುವಂತೆ ಭಾಸವಾಗುತ್ತೆ. ಒಂದು ಹುಡುಗಿ ಮುಂಜಾನೆ 6 ಗಂಟೆಗೆ ತನ್ನ ಮನೆಯಿಂದ ರೆಡಿಯಾಗಿ, ಅಪ್ಪ, ಅಮ್ಮನೊಂದಿಗೆ ಮಾತನಾಡಿ, ಕಚೇರಿಗೆ ಹೋಗಿ ಬರುವುದಾಗಿ ಹೇಳಿ ಹೊರಗೆ ಬಂದು, ತಾನಂದುಕೊಂಡ ಸ್ಥಳಕ್ಕೆ ಹೋಗಲಾಗದೆ ಚಡಪಡಿಸೋ ಘಟನೆಗಳನ್ನೆಲ್ಲಾ ಒಂದೇ ಏಟಿಗೆ ಸೆರೆ ಹಿಡಿದಿರುವಂತೆ ಮಾಡಿರುವ ಪ್ರಯತ್ನ ಹೊಸದೆನಿಸುವುದು ಬಿಟ್ಟರೆ, ಬೇರೇನೂ ಹೇಳುವಂತಿಲ್ಲ.

ಮೊದಲರ್ಧ ಅವಳದೇ ನೋಟ, ಇತರರ ಜೊತೆ ಮಾತುಕತೆಯಲ್ಲೇ ಮುಗಿದು ಹೋಗುತ್ತದೆ. ದ್ವಿತಿಯಾರ್ಧದಲ್ಲೇನಾದರೂ ಕಥೆ “ತಿರುವು’ ಪಡೆದುಕೊಳ್ಳುತ್ತಾ ಅಂದರೆ, ರಸ್ತೆಯ ತಿರುವುಗಳಲ್ಲೇ ಆಕೆಯ ಓಡಾಟ, ಮತ್ತದೇ ಮಾತುಕತೆ ಮುಂದುವರೆಯುತ್ತದೆ. ಸಣ್ಣ ಅವಧಿಯಲ್ಲೇ ಚಿತ್ರ ಮುಗಿಯುತ್ತಾದರೂ, ಆ ಅವಧಿಯಲ್ಲೂ ನೋಡುಗ ಸೀಟಿಗೆ ಒರಗಿಕೊಳ್ಳುವಷ್ಟರ ಮಟ್ಟಿಗೆ ಚಿತ್ರ ನಿಧಾನವೆನಿಸುತ್ತೆ.

ಅಲ್ಲಲ್ಲಿ ಬರುವ ಹಿನ್ನೆಲೆ ಹಾಡು ಸ್ವಲ್ಪ ಚೇತರಿಕೆ ತರುವುದು ಬಿಟ್ಟರೆ “ಹಾಗೊಂದು ಕಥೆ’ ಹೆಚ್ಚೇನೂ ಪ್ರಭಾವ ಬೀರುವುದಿಲ್ಲ. ಜಾಹ್ನವಿಗೆ ತಾನೊಬ್ಬ ನಟಿ ಆಗಬೇಕೆಂಬ ಆಸೆ. ಅವಳ ಅಮ್ಮನಿಗೆ ಮದುವೆ ಮಾಡಬೇಕೆಂಬ ಯೋಚನೆ. ಅಂದು ಹುಡುಗಿ ನೋಡಲು ಗಂಡು ಬರುವ ದಿನ. ಆದರೆ, ಜಾಹ್ನವಿಗೊಂದು ಮುಖ್ಯವಾದ ಕೆಲಸ. ಮುಂಜಾನೆ 6 ಕ್ಕೆ ಎದ್ದವಳೇ ಮನೆಯಲ್ಲಿ ಅಮ್ಮನಿಗೊಂದು ಸುಳ್ಳು ಹೇಳಿ ಹೊರಡುತ್ತಾಳೆ.

ಒಂದು ಗುರಿ ಇಟ್ಟುಕೊಂಡು ಮನೆಯಿಂದ ಹೊರ ಹೋಗುವ ಜಾಹ್ನವಿ, ಸರಿಯಾದ ಸಮಯಕ್ಕೆ ತಾನಂದುಕೊಂಡ ಸ್ಥಳಕ್ಕೆ ಹೋಗಲು ಆಗಲ್ಲ. ದಾರಿ ಮಧ್ಯೆ ಹತ್ತಾರು ಸಮಸ್ಯೆಗಳು ಎದುರಾಗುತ್ತವೆ, ಆಕಸ್ಮಿಕ ಘಟನೆಗಳು ನಡೆದು ಹೋಗುತ್ತವೆ. ಅವೆಲ್ಲವನ್ನೂ ದಾಟಿಕೊಂಡು ಕೊನೆಗೂ ಆಕೆ ಅಂದುಕೊಂಡ ಸ್ಥಳ ತಲುಪುತ್ತಾಳೆ. ಆದರೆ, ಅವಳ ಕೆಲಸ ಆಗುತ್ತೋ, ಇಲ್ಲವೋ ಎಂಬ ಉತ್ತರ ಬೇಕಿದ್ದರೆ ಚಿತ್ರ ನೋಡಬಹುದು.

ಸಿಂಧು ಲೋಕನಾಥ್‌ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎರಡು ಗಂಟೆಯ ಕಥೆ ಭಾರವನ್ನು ಅವರೇ ಹೊತ್ತಿರುವುದು ಖುಷಿ ಕೊಡುತ್ತೆ. ದಾರಿ ಮಧ್ಯೆ ಸಿಗುವ ಮಿತ್ರ, ಗಿರಿಜಾ ಲೋಕೇಶ್‌, ಶೋಭರಾಜ್‌, ಪ್ರವೀಣ್‌ ತಮ್ಮ ಪಾತ್ರಕ್ಕೆ ಮೋಸ ಮಾಡಿಲ್ಲ. ಎಂದಿನಂತೆ ಗುರುಪ್ರಸಾದ್‌ ಇಲ್ಲೂ ನಿರ್ದೇಶಕನ ಪಾತ್ರವನ್ನ ತಮ್ಮ ಶೈಲಿಯಲ್ಲೇ ನಿರ್ವಹಿಸಿದ್ದಾರೆ. ಅಭಿಲಾಶ್‌ ಗುಪ್ತ ಸಂಗೀತದಲ್ಲಿ ವಿಶೇಷಗುಣಗಳೇನೂ ಇಲ್ಲ. ವಿಕ್ರಮ್‌ ಯೋಗಾನಂದ್‌ ಛಾಯಾಗ್ರಹಣ ಬಗ್ಗೆ ಹೇಳುವಂಥದ್ದೇನೂ ಇಲ್ಲ.

ಚಿತ್ರ: ಹೀಗೊಂದು ದಿನ
ನಿರ್ಮಾಣ: ಚಂದ್ರಶೇಖರ್‌
ನಿರ್ದೇಶನ: ವಿಕ್ರಂ ಯೋಗಾನಂದ್‌
ತಾರಾಗಣ: ಸಿಂಧು ಲೋಕನಾಥ್‌, ಪ್ರವೀಣ್‌, ಮಿತ್ರ, ಪದ್ಮಜಾರಾವ್‌, ಶೋಭರಾಜ್‌, ನಾಗೇಂದ್ರ ಶಾ, ಗಿರಿಜಾ ಲೋಕೇಶ್‌ ಮುಂತಾದವರು

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ugravatara Review:

Ugravatara Review: ದುರ್ಗಿ ಭರ್ಜರಿ ಬೇಟೆ

bagheera movie review

Bagheera Review: ಕಣ್ಣಾಮುಚ್ಚಾಲೆ ಆಟದಲ್ಲಿ ಬಘೀರ!

Prapthi Movie Review

Prapthi Movie Review: ಭಾವನೆಗಳ ಸುತ್ತ ಪ್ರಾಪ್ತಿ

mooka jeeva kannada movie review

Mooka Jeeva Review: ಮುಗ್ಧ ಮನಸ್ಸಿನ ಪ್ರತಿಬಿಂಬ

Ellige Payana Yavudo Daari Review: ರೋಚಕ ಹಾದಿಯ ಸುಖಕರ ಪಯಣವಿದು…

Ellige Payana Yavudo Daari Review: ರೋಚಕ ಹಾದಿಯ ಸುಖಕರ ಪಯಣವಿದು…

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

CID

CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.