ಕಾಮಿಡಿ ಕಾರಿನಲ್ಲಿ ಥ್ರಿಲ್ಲಿಂಗ್‌ ಪಯಣ


Team Udayavani, May 18, 2018, 5:56 PM IST

rambo-2-1.jpg

“ನಾವು ಅವನ್ನ ಟಾರ್ಗೆಟ್‌ ಮಾಡಿಲ್ಲ. ಅವನೇ ನಮ್ಮನ್ನ ಟಾರ್ಗೆಟ್‌ ಮಾಡ್ತಿದ್ದಾನೆ …’ ಹಾಗಂತ ಅವನಿಗೆ ಜ್ಞಾನೋದಯವಾಗುವಷ್ಟರಲ್ಲಿ, ಕಾಲ ಮೀರಿ ಹೋಗಿರುತ್ತದೆ. ಅದಕ್ಕೂ ಮುನ್ನ ತಾನು, ಅವನಿಗೆ ಆಟ ಆಡಿಸುತ್ತಿದ್ದೇನೆ ಎಂದು ಅವನು ನಂಬಿರುತ್ತಾನೆ. ಯಾವಾಗ ಇನ್ನೊಂದು ಕಾರಿನಲ್ಲಿರುವ ಅಪರಿಚಿತ ಇವನನ್ನು ಬೆನ್ನತ್ತಿ, ಸಾವಿನ ಅಂಚಿಗೆ ತಂದು ನಿಲ್ಲಿಸುತ್ತಾನೋ, ಆಗ ಕ್ರಮೇಣ ಅವನಿಗೆ ಅರ್ಥವಾಗುತ್ತಾ ಹೋಗುತ್ತದೆ. ಆದರೆ, ಇಷ್ಟಕ್ಕೂ ತನ್ನನ್ನು ಟಾರ್ಗೆಟ್‌ ಮಾಡುತ್ತಿರುವುದಾದರೂ ಯಾಕೆ?

ನೀವು ಸ್ಟೀವನ್‌ ಸ್ಪೀಲ್‌ಬರ್ಗ್‌ ನಿರ್ದೇಶನದ “ಡ್ಯುಯಲ್‌’ ಎಂಬ ಚಿತ್ರ ನೋಡಿರಬಹುದು ಅಥವಾ ಕೇಳಿರಬಹುದು. ಅದರಲ್ಲಿ ನಾಯಕನನ್ನು ಒಬ್ಬ ಅಪರಿಚಿತ ವ್ಯಕ್ತಿಯೊಬ್ಬ ಅದೇ ತರಹ ಆಟ ಆಡಿಸುತ್ತಿರುತ್ತಾನೆ. ಹೈವೇನಲ್ಲಿ ನಾಯಕ ಕಾರು ಓಡಿಸಿಕೊಂಡು ಪರ ಊರಿಗೆ ಹೋಗುವ ಸಂದರ್ಭದಲ್ಲಿ ಅವನನ್ನು ಬೆನ್ನಟ್ಟುವ ಟ್ರಕ್‌ ಡ್ರೈವರ್‌ ಒಬ್ಬ, ವಿಚಿತ್ರವಾಗಿ ಆಟ ಆಡಿಸುತ್ತಾನೆ. ನಾಯಕನಿಗೆ ದಾರಿ ಬಿಡದೆ, ಬಿಟ್ಟರೂ ಅವನ ಬೆನ್ನುಬಿಡದೆ ವಿಲಕ್ಷಣವಾಗಿ ಸೇಡು ತೀರಿಸಿಕೊಳ್ಳುತ್ತಾನೆ.

“ರ್‍ಯಾಂಬೋ 2′ ಸಹ ಅದೇ ಮಾದರಿಯ ಚಿತ್ರವಾದರೂ, ಅದೇ ಚಿತ್ರವಲ್ಲ. ಇಲ್ಲಿ ತನ್ನ ಗರ್ಲ್ಫ್ರೆಂಡ್‌ನೊಂದಿಗೆ ಲಾಂಗ್‌ ಡ್ರೈವ್‌ಗೆಂದು ಹೋಗುವ ನಾಯಕ, ದಾರಿಯಲ್ಲಿ ದೊಡ್ಡ ಕಾರ್‌ವೊಂದರಿಂದ ನೂರೆಂಟು ಸಮಸ್ಯೆಗಳನ್ನು ಎದುರಿಸುತ್ತಾನೆ. ಆ ಸಮಸ್ಯೆಗಳಿಂದ ಹೇಗೆ ಪಾರಾಗುತ್ತಾನೆ ಎಂಬುದೇ ಚಿತ್ರದ ಕಥೆ. ಮೊದಲೇ ಹೇಳಿದಂತೆ ಇದು “ಡ್ಯುಯಲ್‌’ ತರಹದ ಚಿತ್ರವೇ ಹೊರತು, ಅದೇ ಚಿತ್ರವಲ್ಲ. ಅದೊಂದು ಪಕ್ಕಾ ಥ್ರಿಲ್ಲರ್‌ ಚಿತ್ರವಾಗಿತ್ತು. ಆದರೆ, ಇಲ್ಲಿ ಥ್ರಿಲ್ಲರ್‌ ಅಂಶಗಳೊಂದಿಗೆ ಕಾಮಿಡಿ, ಸೆಂಟಿಮೆಂಟ್‌ ಎಲ್ಲವನ್ನೂ ಸೇರಿಸಿ ಚಿತ್ರಕಥೆ ಮಾಡಲಾಗಿದೆ.

ಮೊದಲಾರ್ಧ ಚಿತ್ರ ಕಾಮಿಡಿಯಿಂದ ಸಾಗುತ್ತದೆ. ಕ್ರಮೇಣ ಒಂದು ಹಂತದಲ್ಲಿ ಗಂಭೀರವಾಗುವುದಷ್ಟೇ ಅಲ್ಲ, ಎಮೋಷನಲ್‌ ಸಹ ಆಗುತ್ತದೆ. ಕೊನೆಗೆ ಒಂದು ಸಂದೇಶದೊಂದಿಗೆ ಮುಕ್ತಾಯವಾಗುತ್ತದೆ. ಚಿತ್ರದ ಒಂದು ವಿಶೇಷತೆಯೆಂದರೆ, ಎಲ್ಲೂ ಬೋರ್‌ ಆಗದಂತೆ ನೋಡಿಸಿಕೊಂಡು ಹೋಗುತ್ತದೆ. ಎಲ್ಲೋ ಸ್ವಲ್ಪ ನಿಧಾನವಾಯಿತು ಎನ್ನುವಷ್ಟರಲ್ಲಿ ಒಂದು ಚೇಸ್‌, ಕಾಮಿಡಿ ದೃಶ್ಯ ಅಥವಾ ಹಾಡು ಬಂದು, ಚಿತ್ರಕ್ಕೊಂದು ವೇಗ ಕೊಡುತ್ತದೆ. ಇಲ್ಲಿ ಲಾಜಿಕ್‌ ಹುಡುಕುತ್ತಾ ಕೂತರೆ, ನಿರಾಸೆಯಾಗಬಹುದು.

ಲಾಜಿಕ್‌ ಬಿಟ್ಟು “ಮ್ಯಾಜಿಕ್‌’ಗಾಗಿ ಚಿತ್ರ ನೋಡಿದರೆ ಮೋಸವಾಗಲಾರದು. ಮೊದಲೇ ಗೊತ್ತಿರಲಿ, ಈ ಚಿತ್ರಕ್ಕೂ “ರ್‍ಯಾಂಬೋ’ಗೂ ಯಾವುದೇ ಸಂಬಂಧವಿಲ್ಲ ಅಥವಾ ಇದು ಮೂಲ ಚಿತ್ರದ ಮುಂದುವರೆದ ಭಾಗವೂ ಅಲ್ಲ. ಎರಡೂ ಚಿತ್ರಗಳ ಕಾಮನ್‌ ಅಂಶಗಳೆಂದರೆ ಅದು ಶರಣ್‌. ಆ ಚಿತ್ರದಲ್ಲಿ ಶರಣ್‌ ಅದೆಷ್ಟು ಲವಲವಿಕೆಯಿಂದ ನಟಿಸಿದ್ದರೋ, ಇಲ್ಲೂ ಅಷ್ಟೇ ಚೆನ್ನಾಗಿ ತಮ್ಮ ಪಾತ್ರವನ್ನು ಮಾಡಿದ್ದಾರೆ.

ತುಂಟತನ, ಹತಾಶೆ, ನೋವು ಎಲ್ಲವನ್ನೂ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಹಾಗೆ ನೋಡಿದರೆ, ಚಿತ್ರದಲ್ಲಿ ಪಾತ್ರಗಳು ಕಡಿಮೆಯೇ, ಆಶಿಕಾ, ಚಿಕ್ಕಣ್ಣ, ರವಿಶಂಕರ್‌, ಕುರಿ ಪ್ರತಾಪ್‌, ಸಾಧು ಕೋಕಿಲ ಹೀಗೆ ಕೆಲವೇ ಕೆಲವು ಪಾತ್ರಗಳ ಸುತ್ತ ಚಿತ್ರ ಸುತ್ತುತ್ತದೆ. ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪ್ರೇಕ್ಷಕರನ್ನು ಸಖತ್‌ ನಗಿಸುವುದಕ್ಕೆ ಚಿಕ್ಕಣ್ಣ ಮತ್ತು ಕುರಿ ಪ್ರತಾಪ್‌ ಇದ್ದರೆ, ಅಳಿಸುವುದಕ್ಕೆ ರವಿಶಂಕರ್‌ ಬರುತ್ತಾರೆ.

ಇನ್ನು ಆಶಿಕಾ ಬರೀ ಗ್ಲಾಮರ್‌ ಗೊಂಬೆಯಷ್ಟೇ ಅಲ್ಲ, ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಬರೀ ಕಲಾವಿದರಷ್ಟೇ ಅಲ್ಲ, ತಂತ್ರಜ್ಞರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರದ ಹೈಲೈಟ್‌ ಎಂದರೆ ಅದು ಸುಧಾಕರ್‌ ರಾಜ್‌ ಅವರ ಛಾಯಾಗ್ರಹಣ. ಪ್ರಯಾಣದ ಹಿನ್ನೆಲೆಯಲ್ಲಿ ಸಾಗುವ ಕಥೆಯಾದ್ದರಿಂದ ಸುಧಾಕರ್‌ ಕೆಲಸ ಹೆಚ್ಚು.

ಆ ಕೆಲಸವನ್ನು ಬಹಳ ಚೆನ್ನಾಗಿ ಮಾಡಿದ್ದಾರೆ ಸುಧಾಕರ್‌. ಅರ್ಜುನ್‌ ಜನ್ಯ ಹಾಡುಗಳು, ಕೆ.ಎಂ. ಪ್ರಕಾಶ್‌ ಅವರ ಸಂಕಲನ ಮತ್ತು ವೇಗ, ಅನಿಲ್‌ ಅವರ ಸಂಭಾಷಣೆ ಎಲ್ಲವೂ ಗಮನಸಳೆಯುತ್ತದೆ. ಶರಣ್‌ ಬರೀ ನಟನಾಗಿಯಷ್ಟೇ ಅಲ್ಲ, ಡ್ಯಾನ್ಸ್‌ನಲ್ಲೂ ಗಮನಸೆಳೆಯುತ್ತಾರೆ. ಇನ್ನು ಚಿತ್ರಕ್ಕೆ ಹಾಕಿರುವ ಸೆಟ್‌ಗಳು, ನೃತ್ಯ ನಿರ್ದೇಶನ, ಕಾಸ್ಟೂಮ್‌ಗಳು … ಒಳ್ಳೆಯ ಮಾರ್ಕ್ಸ್ ಗಿಟ್ಟಿಸಿಕೊಳ್ಳುತ್ತದೆ.

ಚಿತ್ರ: ರ್‍ಯಾಂಬೋ 2
ನಿರ್ದೇಶನ: ಅನಿಲ್‌ ಕುಮಾರ್‌
ನಿರ್ಮಾಣ: ಶರಣ್‌ ಮತ್ತು ಅಟ್ಲಾಂಟ ನಾಗೇಂದ್ರ
ತಾರಾಗಣ: ಶರಣ್‌, ಆಶಿಕಾ, ಚಿಕ್ಕಣ್ಣ, ಕುರಿ ಪ್ರತಾಪ್‌, ರವಿಶಂಕರ್‌, ಸಾಧು ಕೋಕಿಲ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Naa Ninna Bidalare Movie Review

Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

15-

Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.