‘ಟಾಮ್‌ ಅಂಡ್‌ ಜೆರ್ರಿ’ ಚಿತ್ರ ವಿಮರ್ಶೆ: ಆಟದ ನಡುವೆ ಜೀವನ ಪಾಠ


Team Udayavani, Nov 13, 2021, 12:39 PM IST

tom-and-jerry

ಕಾರ್ಟೂನ್‌ನಲ್ಲಿ “ಟಾಮ್‌ ಅಂಡ್‌ ಜೆರ್ರಿ’ ನೋಡಿದವರಿಗೆ ಅಲ್ಲೊಂದು ಕ್ಯೂಟ್‌ ಕಿತ್ತಾಟ, ಮುದ್ದಾಟ ಇಷ್ಟವಾಗಿರುತ್ತದೆ. ಅಂಥದ್ದೇ ಕಿತ್ತಾಟ, ಮುದ್ದಾಟ ಜೊತೆಗೊಂದು ಜೀವನ ಪಾಠ ಈ ವಾರ ತೆರೆಗೆ ಬಂದಿರುವ “ಟಾಮ್‌ ಅಂಡ್‌ ಜೆರ್ರಿ’ ಸಿನಿಮಾದಲ್ಲೂ ಕಾಣ ಸಿಗುತ್ತದೆ.

ಹೆಸರೇ ಹೇಳುವಂತೆ, “ಟಾಮ್‌ ಅಂಡ್‌ ಜೆರ್ರಿ’ಯಂಥ ಎರಡು ವೈರುಧ್ಯವಿರುವ ಧರ್ಮ (ನಾಯಕ) ಮತ್ತು ಸತ್ಯ (ನಾಯಕಿ) ವ್ಯಕ್ತಿತ್ವ, ಮನಸ್ಥಿತಿಯ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಇಲ್ಲೊಂದು ನವಿರಾದ ಲವ್‌ಸ್ಟೋರಿ ಇದೆ. ಪ್ರೀತಿಯನ್ನು ಹಂಬಲಿಸುವ ಹೃದಯಗಳಿವೆ, ಸಂಬಂಧಗಳನ್ನು ಬೆಂಬಲಿಸುವ ಮನಸ್ಸುಗಳಿವೆ, ಜೀವನ ದರ್ಶನ ಮಾಡಿಸುವಂಥ ಪಾತ್ರಗಳಿವೆ. ಇವೆಲ್ಲವನ್ನೂ ಒಂದೇ ಫ್ರೇಮ್‌ನಲ್ಲಿ “ಟಾಮ್‌ ಅಂಡ್‌ ಜೆರ್ರಿ’ ಜೊತೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಯುವ ನಿರ್ದೇಶಕ ರಾಘವ ವಿನಯ್‌ ಶಿವಗಂಗೆ.

ಇದನ್ನೂ ಓದಿ:‘ಫಸ್ಟ್ ನೈಟ್’ ಹೇಳಿಕೆ: ರಚಿತಾ ರಾಮ್ ಮೇಲೆ ನಿಷೇಧ ಹೇರಲು ಕ್ರಾಂತಿ ದಳ ಕೋರಿಕೆ

ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವಂತ ಸಿನಿಮ್ಯಾಟಿಕ್‌ ಅಂಶಗಳ ಜೊತೆಗೇ, ಜೀವನದ ಅರ್ಥ, ಆಯಾಮ, ವ್ಯಾಖ್ಯಾನ ಹೀಗೆ ಗಂಭೀರ ಅಂಶಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಸ್ನೇಹ, ಪ್ರೀತಿ, ಸಂಬಂಧಗಳ ಜೊತೆಗೊಂದು ಜೀವನ ಪಾಠ ಚಿತ್ರದಲ್ಲಿದೆ. ಭೋದನೆ, ರಂಜನೆ ನಡುವೆ “ಟಾಮ್‌ ಅಂಡ್‌ ಜೆರ್ರಿ’ ಆಟ ನಡೆಯುತ್ತದೆ.  ಚಿತ್ರಕಥೆಗೆ ಇನ್ನಷ್ಟು ವೇಗ ಸಿಕ್ಕಿ ಮತ್ತು ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಬಿದ್ದಿದ್ದರೆ, “ಟಾಮ್‌ ಅಂಡ್‌ ಜೆರ್ರಿ’ ಆಟ-ಪಾಠ ಎರಡೂ ಇನ್ನಷ್ಟು ಪರಿಣಾಮಕಾರಿಯಾಗುವ ಸಾಧ್ಯತೆಗಳಿದ್ದವು.

ಈ ಹಿಂದೆ “ಗಂಟುಮೂಟೆ’ ಚಿತ್ರದಲ್ಲಿ ಗಮನ ಸೆಳೆದು ಭರವಸೆ ಮೂಡಿಸಿದ್ದ ಯುವ ನಟ ನಿಶ್ಚಿತ್‌ ಕೊರೋಡಿ “ಟಾಮ್‌ ಅಂಡ್‌ ಜೆರ್ರಿ’ಯಲ್ಲಿ ರಫ್ ಆ್ಯಂಡ್‌ ಟಫ್ ಲುಕ್‌ನಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಗೆಟಪ್‌, ಮ್ಯಾನರಿಸಂ, ಡೈಲಾಗ್‌ ಡೆಲಿವರಿ, ಆ್ಯಕ್ಷನ್‌ ದೃಶ್ಯಗಳನ್ನು ನಿಶ್ಚಿತ್‌ ಸಮರ್ಥವಾಗಿ ನಿರ್ವಹಿಸಿದ್ದಾರೆ.

ಇನ್ನು ಕಿರುತೆರೆಯಿಂದ ಮೊದಲ ಬಾರಿಗೆ ಹಿರಿತೆರೆಗೆ ನಾಯಕಿಯಾಗಿ ಪರಿಚಯವಾಗುತ್ತಿರುವ ಚೈತ್ರಾ ರಾವ್‌ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ತನ್ನಿಚ್ಛೆಯಂತೆ ಬದುಕುವ ತುಂಬ ಬೋಲ್ಡ್‌ ಹುಡುಗಿಯಾಗಿ ಚೈತ್ರಾ ರಾವ್‌ ಭಾವಾಭಿನಯ ನೋಡುಗರಿಗೆ ಇಷ್ಟವಾಗುವಂತಿದೆ. ಮಗನ ಪ್ರೀತಿ ಹಂಬಲಿಸುವ ತಂದೆ -ತಾಯಿಯಾಗಿ ತಾರಾ ಅನುರಾಧಾ, ಜೈಜಗದೀಶ್‌ ಅವರದ್ದು ಮನ ಮುಟ್ಟುವ ಅಭಿನಯ. ಉಳಿದಂತೆ ಇತರ ಬಹುತೇಕ ಕಲಾವಿದರು ತಮ್ಮ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದು, ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಾರಾಂತ್ಯದಲ್ಲಿ ಕುಟುಂಬ ಸಮೇತರಾಗಿ “ಟಾಮ್‌ ಅಂಡ್‌ ಜೆರ್ರಿ’ ಗೇಮ್‌ ಒಮ್ಮೆ ನೋಡಿ ಬರಲು ಅಡ್ಡಿಯಿಲ್ಲ.

 ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Ugravatara Review:

Ugravatara Review: ದುರ್ಗಿ ಭರ್ಜರಿ ಬೇಟೆ

bagheera movie review

Bagheera Review: ಕಣ್ಣಾಮುಚ್ಚಾಲೆ ಆಟದಲ್ಲಿ ಬಘೀರ!

Prapthi Movie Review

Prapthi Movie Review: ಭಾವನೆಗಳ ಸುತ್ತ ಪ್ರಾಪ್ತಿ

mooka jeeva kannada movie review

Mooka Jeeva Review: ಮುಗ್ಧ ಮನಸ್ಸಿನ ಪ್ರತಿಬಿಂಬ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.