ಚಿತ್ರ ವಿಮರ್ಶೆ: ‘ತೂತು ಮಡಿಕೆ’ಯಲ್ಲಿ ಸಿಕ್ಕ ಕಾಮಿಡಿ ಕಿಲಾಡಿಗಳು
Team Udayavani, Jul 10, 2022, 12:40 PM IST
ಒಂದು ಸಮಾನ ಮನಸ್ಕ ಯುವ ತಂಡ ಒಟ್ಟಾಗಿ, ಸಿನಿಮಾವನ್ನು ಪ್ರೀತಿಸುತ್ತಾ ಅದರಲ್ಲಿ ತೊಡಗಿಕೊಂಡರೆ ಯಾವ ತರಹದ ಫಲಿತಾಂಶ ಸಿಗಬಹುದು ಎಂಬುದಕ್ಕೆ ಈ ವಾರ ತೆರೆಕಂಡಿರುವ “ತೂತು ಮಡಿಕೆ’ ಚಿತ್ರ ಒಂದು ಒಳ್ಳೆಯ ಉದಾಹರಣೆ.
ಪ್ರತಿಯೊಬ್ಬರು ಇಲ್ಲಿ ಮುಕ್ತ ಮನಸ್ಸಿನಿಂದ ತೊಡಗಿಸಿಕೊಂಡ ಪರಿಣಾಮ “ತೂತು ಮಡಿಕೆ’ ಒಂದು ನಗೆಹಬ್ಬವಾಗಿ ಹೊರಹೊಮ್ಮಿದೆ. ಆರಂಭದ ಕೊನೆಯವರೆಗೆ ಈ ಸಿನಿಮಾ ನಿಮ್ಮನ್ನು ನಗಿಸುತ್ತಲೇ ಸಾಗುತ್ತದೆ. ಆ ಮಟ್ಟಿಗೆ ನಿರ್ದೇಶಕರು ಪ್ರೇಕ್ಷಕರನ್ನು ನಗಿಸಲೇಬೇಕೆಂಬ ಪರಮ ಉದ್ದೇಶದೊಂದಿಗೆ ಕಥೆ ಮಾಡಿಕೊಂ ಡಂತಿದೆ. ಹಾಗೆ ನೋಡಿದರೆ ಸಿನಿಮಾದ ಕತೆ ಸಿಂಪಲ್.
ಪಂಚಲೋಹ ವಿಗ್ರಹದ ಹಿಂದೆ ಬೀಳುವ ಗ್ಯಾಂಗ್‌ವೊಂದರ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಮನುಷ್ಯ ದುರಾಸೆಯ ಹಿಂದೆ ಬಿದ್ದರೆ ಅದರ ಪರಿಣಾಮ ಏನಾಗುತ್ತದೆ ಎಂಬುದು ಸಿನಿಮಾದ ಮೂಲ ಆಶಯ.
ಮೇಲ್ನೋಟಕ್ಕೆ ತುಂಬಾ ಗಂಭೀರವಾದ ವಿಷಯ ಎನಿಸಿದರೂ ನಿರೂಪಣೆಯಲ್ಲಿ ಇಡೀ ಸಿನಿಮಾದ ಹಾಸ್ಯದ ಲೇಪನದೊಂದಿಗೆ ಕಟ್ಟಿಕೊಟ್ಟಿದ್ದಾರೆ. ನಿರ್ದೇಶನದ ಜೊತೆಗೆ ರಘು ನಿಡುವಳ್ಳಿ ಅವರ ಸಂಭಾಷಣೆ ಚಿತ್ರದ ಹೈಲೈಟ್.ಸಂಭಾಷಣೆ ಮೂಲಕವೇ ಅನೇಕ ದೃಶ್ಯಗಳನ್ನು ಕಟ್ಟಿಕೊಡುವ ಜಾಣ್ಮೆಯನ್ನು ಚಿತ್ರತಂಡ ಮೆರೆದಿದೆ.
ಇದನ್ನೂ ಓದಿ:ಪರಾರಿಯಾದ ಶ್ರೀಲಂಕಾ ಅಧ್ಯಕ್ಷರು ರಾಜೀನಾಮೆ ನೀಡಿದರೆ ಏನಾಗುತ್ತದೆ? ಲಂಕಾದ ಮುಂದಿನ ಕಥೆಯೇನು
ನಿರ್ದೇಶಕ ಚಂದ್ರಕೀರ್ತಿ ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಭರವಸೆ ಮೂಡಿಸಿದ್ದಾರೆ. ನಾಯಕನಾಗಿ ನಟಿಸುವ ಜೊತೆಗೆ ನಿರ್ದೇಶನ ದಲ್ಲೂ ಸೈ ಎನಿಸಿಕೊಂಡಿದ್ದಾರೆ.
ಮೊದಲೇ ಹೇಳಿದಂತೆ ನಾಯಕ ಚಂದ್ರಕೀರ್ತಿ ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಹಿಸಿ ದ್ದಾರೆ. ನಾಯಕಿ ಪಾವನಾ ಗೌಡ ಅವರು ಹೊಸ ಬಗೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಗಿರಿ, ಉಗ್ರಂ ಮಂಜು ಸೇರಿದಂತೆ ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸ್ವಾಮಿನಾಥನ್ ಸಂಗೀತ, ನವೀನ್ ಛಾಯಾಗ್ರಹಣ ಚಿತ್ರಕ್ಕೆ ಮತ್ತಷ್ಟು ಸಾಥ್ ನೀಡಿದೆ.
ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.