ವೀಕೆಂಡ್‌ ಮೋಜು-ಮಸ್ತಿ!

ಚಿತ್ರ ವಿಮರ್ಶೆ

Team Udayavani, May 25, 2019, 3:00 AM IST

weekend

ಒಂದು ಕಡೆ ಐಟಿ ಕಂಪೆನಿಯಲ್ಲಿ ಕೆಲಸ ಮಾಡುವವರ ವೀಕೆಂಡ್‌ ಮೋಜು-ಮಸ್ತಿ, ಇನ್ನೊಂದು ಕಡೆ ತಾತನನ್ನು ತುಂಬಾನೇ ಪ್ರೀತಿಸುವ ಹುಡುಗನ ಲವ್‌ಸ್ಟೋರಿ … ಹೀಗೆ ಎರಡು ಟ್ರ್ಯಾಕ್‌ಗಳೊಂದಿಗೆ “ವೀಕೆಂಡ್‌’ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಚಿತ್ರದ ಹೆಸರಿಗೆ ತಕ್ಕಂತೆ ಇದು ಯೂತ್‌ಫ‌ುಲ್‌ ಸಿನಿಮಾ.

ಐಟಿ ಕಂಪೆನಿಗಳಲ್ಲಿ ಕೈ ತುಂಬಾ ಸಂಬಳ ಪಡೆದು ವೀಕೆಂಡ್‌ ಬಂದರೆ ಪಾರ್ಟಿ ಎಂದು ಕುಣಿದಾಡುವ ಯುವಜನತೆಯ ಜೊತೆಗೆ ಏಕಾಏಕಿ ಕೆಲಸದಿಂದ ಕಿತ್ತುಹಾಕುವ ಐಟಿ ಕಂಪೆನಿಗಳಿಗೊಂದು ಸಂದೇಶ ಕೊಡುವ ಉದ್ದೇಶ ಕೂಡಾ ಈ ಚಿತ್ರದ್ದು. ಅದೇ ಕಾರಣದಿಂದ ಲವ್‌ಸ್ಟೋರಿಯೊಂದಿಗೆ ಆರಂಭವಾಗುವ ಸಿನಿಮಾ, ಆ ನಂತರ ಐಟಿ ಕಂಪೆನಿಯ ಸುತ್ತ ಸುತ್ತುತ್ತದೆ.

ಇಲ್ಲಿ ಚಿತ್ರದ ಆಶಯ ಚೆನ್ನಾಗಿದೆ. ಇವತ್ತಿನ ಕಾಲಘಟ್ಟಕ್ಕೆ ಹೆಚ್ಚು ಸೂಕ್ತವಾಗಿದೆ. ವಾಸ್ತವತೆಗೆ ಹತ್ತಿರವಾಗಿರುವುದರಿಂದ ಯೋಚಿಸುವ ವಿಚಾರವೂ ಇದೆ. ಕಾಸಿದ್ದಾಗ ಮಜಾ ಮಾಡುವ ಹಾಗೂ ಕೆಲಸ ಕಳೆದುಕೊಂಡಾಗ ಚಡಪಡಿಸಿ ಅಡ್ಡದಾರಿ ಹಿಡಿಯುವ ಯುವ ಜನತೆಯನ್ನಿಟ್ಟುಕೊಂಡು ಇಡೀ ಸಿನಿಮಾ ಸಾಗುತ್ತದೆ.

ಚಿತ್ರದಲ್ಲಿ ಸಂದೇಶವಿದ್ದರೂ, ಅದನ್ನೇ ಅತಿಯಾಗಿ ಹೇಳಿ ಬೋರ್‌ ಹೊಡೆಸಿಲ್ಲ. ಯೂತ್‌ಫ‌ುಲ್‌ ಸಿನಿಮಾವಾದ್ದರಿಂದ ಕಲರ್‌ಫ‌ುಲ್‌ ಹಾಡು, ಫ‌ನ್ನಿ ಸನ್ನಿವೇಶಗಳ ಮೂಲಕ ಆಗಾಗ ಪ್ರೇಕ್ಷಕರನ್ನು ಲವಲವಿಕೆಯಿಂದ ಇಡಲು ಪ್ರಯತ್ನಿಸಲಾಗಿದೆ. ಹಾಗಂತ ಸಿನಿಮಾದಲ್ಲಿ ತಪ್ಪುಗಳು ಇಲ್ಲವೇ ಎಂದರೆ, ಖಂಡಿತಾ ಇದೆ. ಮುಖ್ಯವಾಗಿ ಆರಂಭದಲ್ಲಿ ಈ ಚಿತ್ರ ಎರಡು ಟ್ರ್ಯಾಕ್‌ನೊಂದಿಗೆ ಸಾಗುತ್ತದೆ.

ಲವ್‌ಸ್ಟೋರಿ ಎಂದು ಆರಂಭವಾಗುವ ಸಿನಿಮಾ ಆ ನಂತರ ಮತ್ತೂಂದು ಆಯಾಮಕ್ಕೆ ತೆರೆದುಕೊಳ್ಳುತ್ತದೆ. ಜೊತೆಗೆ ಚಿತ್ರದಲ್ಲಿ ಕುತೂಹಲಭರಿತವಾದ ಅಂಶಗಳು ಕಡಿಮೆ ಇವೆ. ಒಂದಷ್ಟು ಅನಾವಶ್ಯಕ ಅಂಶಗಳು ಕೂಡಾ ಚಿತ್ರದಲ್ಲಿ ಸೇರಿಕೊಂಡಿವೆ. ಅವೆಲ್ಲದಕ್ಕೆ ಕತ್ತರಿ ಹಾಕುವ ಅವಕಾಶ ನಿರ್ದೇಶಕರಿಗಿತ್ತು.

ಒಂದಷ್ಟು ತಪ್ಪುಗಳನ್ನು ಬದಿಗಿಟ್ಟು ನೋಡಿದರೆ ಒಂದು ಪ್ರಯತ್ನವಾಗಿ “ವೀಕೆಂಡ್‌’ ಮೆಚ್ಚಬಹುದು. ಸುಖಾಸುಮ್ಮನೆ ಬಿಲ್ಡಪ್‌, ಹಾಡು, ಕಾಮಿಡಿಯಿಂದ ಸಿನಿಮಾವನ್ನು ಮುಕ್ತವಾಗಿಸಿದ್ದಾರೆ. ಅದೇ ಕಾರಣದಿಂದ ಸಿನಿಮಾ ನಿಮ್ಮನ್ನು ತುಂಬಾ ಕುತೂಹಲಕ್ಕೂ ದೂಡದೇ, ಕಿರಿಕಿರಿಯೂ ಕೊಡದೇ ನೋಡಿಸಿಕೊಂಡು ಹೋಗುತ್ತದೆ.

ನಾಯಕರಾಗಿ ನಟಿಸಿರುವ ಮಿಲಿಂದ್‌ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಆ್ಯಕ್ಷನ್‌ಗಿಂತ, ಇತರ ದೃಶ್ಯಗಳಲ್ಲಿ ಮಿಲಿಂದ್‌ ಇಷ್ಟವಾಗುತ್ತಾರೆ. ಸಂಜನಾ ಬುರ್ಲಿ ಕೂಡಾ ತಮ್ಮ ನಟನೆ ಮೂಲಕ ಭರವಸೆ ಮೂಡಿಸಿದ್ದಾರೆ. ಉಳಿದಂತೆ ಪೊಲೀಸ್‌ ಆಫೀಸರ್‌ ಆಗಿ ನಟಿಸಿರುವ ಮಂಜುನಾಥ್‌ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ.

ಚಿತ್ರ: ವೀಕೆಂಡ್‌
ನಿರ್ಮಾಣ: ಮಂಜುನಾಥ್‌. ಡಿ
ನಿರ್ದೇಶನ: ಶೃಂಗೇರಿ ಸುರೇಶ್‌
ತಾರಾಗಣ: ಮಿಲಿಂದ್‌, ಸಂಜನಾ ಬುರ್ಲಿ, ಮಂಜುನಾಥ್‌ ಮತ್ತಿತರರು.

* ರವಿ ರೈ

ಟಾಪ್ ನ್ಯೂಸ್

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Love Reddy Movie Review

Love Reddy Movie Review: ಕಾಡುವ ಪ್ರೀತಿ ಹೊಸ ರೀತಿ

Tenant Movie Review

Tenant Movie Review: ಅಕ್ರಮ-ಸಕ್ರಮದಲ್ಲೊಂದು ಸಂಗ್ರಾಮ!

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.