ಕನ್ನಡದಲ್ಲಿ ತೆರೆಕಾಣಲಿದೆ ‘ಮರ್ಡರ್’
Team Udayavani, Dec 15, 2020, 8:44 PM IST
ಬೆಂಗಳೂರು: ಬಾಲಿವುಡ್ ಅಂಗಳದಲ್ಲಿ ಬಾರಿ ಹೆಸರು ಮಾಡಿದ್ದ ‘ಮರ್ಡರ್’ ಹೆಸರಿನ ಸಿನಿಮಾವೊಂದು ಇದೀಗ ಕನ್ನಡದಲ್ಲಿಯೂ ತೆರೆಕಾಣುತ್ತಿದೆ. ಹಾಗಂತ ಇದು ಕನ್ನಡ ಸಿನಿಮಾ ಅಲ್ಲ. ಬದಲಾಗಿ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ರಾಮ್ ಗೊಪಾಲ್ ವರ್ಮ ನೇತೃತ್ವದಲ್ಲಿ ತೆಲುಗಿನಲ್ಲಿ ನಿರ್ಮಾಣವಾಗಿದ್ದ ಸಿನಿಮಾ. ಇದೀಗ ಈ ಸಿನಿಮಾವನ್ನು ನವರಸನ್ ಅವರು ಕನ್ನಡಕ್ಕೆ ತರುತ್ತಿದ್ದಾರೆ.
ಡಿಸೆಂಬರ್ 24 ರಂದು ತೆರೆಮೇಲೆ ಬರಲು ಸಜ್ಜಾಗಿರುವ ಈ ಸಿನಿಮಾ ಕನ್ನಡ, ತೆಲುಗು, ತಮಿಳು ಸೇರೆದಂತೆ ಒಟ್ಟು ನಾಲ್ಕು ಭಾಷೆಗಳಲ್ಲಿ ತೆರೆಕಾಣುವುದರ ಮೂಲಕ ಬಾರಿ ಸದ್ದು ಮಾಡಲು ಹೊರಟಿದೆ.
ನೈಜ ಕಥೆಯನ್ನು ಆಧರಿಸಿರುವ ಸಿನಿಮಾ ಇದಾಗಿದ್ದು ಕನ್ನಡದಲ್ಲಿ ಈ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ಆನಂದ್ ಚಂದ್ರ ವಹಿಸಿಕೊಂಡಿದ್ದಾರೆ. ಶ್ರೀ ಲಕ್ಷ್ಮೀ ವೃಷಾದ್ರಿ ಪ್ರೊಡಕ್ಷನ್ನಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ.
ಇದನ್ನೂ ಓದಿ:ಸಭಾಪತಿಗಳಿಗೆ ನಿರ್ಬಂಧ ಹಾಕಲು ಅಧಿಕಾರ ಕೊಟ್ಟಿದ್ದು ಯಾರು?; ಡಿ.ಕೆ ಶಿವಕುಮಾರ್
ಡಿ. ಎಸ್ . ಆರ್ ಸಂಗೀತ ನಿರ್ದೇಶನ , ಜಗದೀಶ್ ಚೀಕಟಿ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಪಟ್ನಾಯಕ್ ಸಂಕಲನವಿರುವ ಈ ಚಿತ್ರದಲ್ಲಿ ಶ್ರೀಕಾಂತ್ ಅಯ್ಯಂಗಾರ್ , ಸಾಹಿತಿ , ಭಾರ್ಗವಿ ಮುಂತಾದವರು ನಟಿಸಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಬಾಲಿವುಡ್ ನಲ್ಲಿ ಇದೇ ಹೆಸರಿನ ಸಿನಿಮಾವೊಂದು ತೆರೆಕಂಡಿದ್ದು, ಆ ಮೂಲಕ ನಟಿ ಮಲ್ಲಿಕಾ ಶೆರಾವತ್ ಅವರಿಗೆ ಹೆಸರು ತಂದಿತ್ತು. ಹಾಗೂ ನಟ ಇಮ್ರಾನ್ ಹಸ್ಮಿಗಂತೂ ಕಿಸ್ಸಿಂಗ್ ಸ್ಟಾರ್ ಎಂಬ ಬಿರುದನ್ನೆ ತಂದು ಕೊಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.