ರಾಮ್ ಚರಣ್ ನಟನೆಯ ಮತ್ತೊಂದು ಸಿನಿಮಾ ಶೂಟಿಂಗ್ ಶುರು : ವಿಶೇಷವಾಗಿದೆ ಪೋಸ್ಟರ್
Team Udayavani, Sep 8, 2021, 12:02 PM IST
ತೆಲುಗು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತಮ್ಮ 15ನೇ ಸಿನಿಮಾದತ್ತ ಮುನ್ನಡೆದಿದ್ದಾರೆ. ಶಂಕರ್ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ರಾಮ್ ಚೆರಣ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮುಹೂರ್ತ ಕಾರ್ಯಕ್ರಮ ಇಂದು ನಡೆದಿದ್ದು, ರಾಮ್ ಚರಣ್ ಫಸ್ಟ್ ಲುಕ್ ರಿವೀಲ್ ಆಗಿದೆ.
ಇನ್ನು ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಹೈದ್ರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದ RC 15 ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್, ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಸದ್ಯ ರಿವೀಲ್ ಆಗಿರುವ ಪೋಸ್ಟರ್ ವಿಶೇಷವಾಗಿದ್ದು ನಿರ್ದೇಶಕ ಶಂಕರ್, ನಿರ್ಮಾಪಕ ದಿಲ್ ರಾಜು, ಛಾಯಾಗ್ರಾಹಕ ಎಸ್ ತಿರುನಾವುಕ್ಕರಸು, ಸಂಗೀತ ಸಂಯೋಜಕ ಎಸ್ ಥಮನ್, ನಿರ್ಮಾಣ ವಿನ್ಯಾಸಕರಾದ ರಾಮಕೃಷ್ಣ ಮತ್ತು ಮೋನಿಕಾ, ಸಹ-ನಿರ್ಮಾಪಕ ಸಿರೀಶ್, ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಮತ್ತು ಅನಂತ ಶ್ರೀರಾಮ್ ಇದ್ದಾರೆ. ಎಲ್ಲರೂ ಬ್ಲಾಕ್ ಡ್ರೆಸ್ ಧರಿಸಿದ್ದಾರೆ.ಇನ್ನು ಪೋಸ್ಟರ್ ಕೆಳಗಡೆ ‘ವಿ ಕಮಿಂಗ್’ ಎಂಬ ಟ್ಯಾಗ್ ಲೈನ್ ಕೂಡ ಬರೆಯಲಾಗಿದೆ.
To new beginnings !!#RC15 #SVC50 kick starts today. Looking forward to deliver a memorable experience to one and all.@shankarshanmugh @advani_kiara @MusicThaman @DOP_Tirru @ramjowrites @saimadhav_burra @SVC_official pic.twitter.com/VRkDfYneQi
— Ram Charan (@AlwaysRamCharan) September 8, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.