Sandalwood; ಶೆಟ್ರ ಗ್ಯಾಂಗ್ ಸೇರಲು ತುದಿಗಾಲಲ್ಲಿ ನಿಂತಿರೋ ಸ್ಕೂಲ್ ಪುಟ್ಟಿ!
ಅರ್ಚನಾ ಕೊಟ್ಟಿಗೆ ಕೈಯಲ್ಲಿವೆ ಸಾಲು ಸಾಲು ಸಿನಿಮಾಗಳು
Team Udayavani, Aug 11, 2023, 11:06 PM IST
ಅರ್ಚನಾ ಕೊಟ್ಟಿಗೆ ಹೀಗಂದರೆ ಯಾರಂತ ನಿಮಗೆ ನೆನಪಾಗದೇ ಇರಬಹುದು. ಆದರೆ, `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಸ್ಕೂಲ್ ಪುಟ್ಟಿ ಅಥವಾ ಚಿನ್ನಿ ಎಂದಾಕ್ಷಣ ನಿಮ್ಮೆಲ್ಲರಿಗೂ ಆಕೆ ನೆನಪಾಗ್ತಾರೆ. ನಿಮ್ಮ ಕಣ್ಣಮುಂದೆ ಬಂದು ನಿಲ್ತಾರೆ. ಯಸ್, ಆಕೆನೇ ಅರ್ಚನಾ ಕೊಟ್ಟಿಗೆ. ಸ್ಯಾಂಡಲ್‍ವುಡ್ ಅಂಗಳದಲ್ಲಿ ಭರವಸೆ ಮೂಡಿಸಿರೋ ತಾರೆ.
ಸಿನಿಮಾ ಕುಟುಂಬದ ಹಿನ್ನಲೆಯಿಲ್ಲದೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈಕೆ ಸ್ವಂತ ಪ್ರತಿಭೆಯಿಂದಲೇ ಗುರ್ತಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬಂದು ಅತೀ ಕಡಿಮೆ ಸಮಯದಲ್ಲಿ ಸರಿಸುಮಾರು 18 ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಅದ್ರಲ್ಲಿ ಹತ್ತಾರು ಸಿನಿಮಾಗಳು ಈಗಾಗಲೇ ಬಿಡುಗಡೆಗೊಂಡಿದ್ದು, ನಾಯಕಿಯಾಗಿ ನಟಿ ಅರ್ಚನಾ ಬೆಳ್ಳಿಭೂಮಿ ಮೇಲೆ ಮೆರವಣಿಗೆ ಹೋಗಿ ಬಂದಿದ್ದಾರೆ. ಇತ್ತೀಚೆಗೆ ಹಾಸ್ಟೆಲ್ ಹುಡುಗ್ರು ಬೇಕಾಗಿದ್ದಾರೆ ಸಿನಿಮಾದಿಂದ ಸ್ಕೂಲ್ ಪುಟ್ಟಿಯಾಗಿ, ಚಿನ್ನಿಯಾಗಿ ಗುರ್ತಿಸಿಕೊಂಡಿದ್ದಾರೆ. ವಿಶೇಷ ಅಂದರೆ ಈ ಸಿನಿಮಾದಿಂದ ಪಡ್ಡೆಹುಡುಗರ ಪ್ರೀತಿ ಜೊತೆಗೆ ಕೊಂಚ ಖ್ಯಾತಿನೂ ಸಿಕ್ಕಿದೆ. ಹೀಗಾಗಿ ನಟಿ ಅರ್ಚನಾ ಫುಲ್ ಖುಷಿಯಲ್ಲಿದ್ದಾರೆ. ಕೈಯಲ್ಲಿರುವ ಸಾಲು ಸಾಲು ಸಿನಿಮಾಗಳ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ನಟಿ ಅರ್ಚನಾ 2018ರಲ್ಲಿ ಚಂದನವನಕ್ಕೆ ಬಲಗಾಲಿಟ್ಟು ಬಂದರು. `ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದಲ್ಲಿ ಒಂದು ಸಣ್ಣ ಕ್ಯಾರೆಕ್ಟರ್ ನ ಪ್ಲೇ ಮಾಡಿದರು. `ಅರಣ್ಯಕಾಂಡ’ ಹೆಸರಿನ ಸಿನಿಮಾದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯಗೊಂಡರು. ಅನಂತರ ಈಕೆ ಹಿಂತಿರುಗಿ ನೋಡಿದ್ದೇ ಇಲ್ಲ. ಬೇರೆಯವರ ಥರ ಒಂದೋ, ಎರಡೋ ಚಿತ್ರಕ್ಕೆ ಸ್ಟಾರ್ ಹೀರೋಯಿನ್ ಆಗುವಂತಹ ಚಾನ್ಸ್ ಸಿಗದೇ ಇರಬಹುದು ಆದರೆ ಭರಪೂರ ಅವಕಾಶಗಳಂತೂ ಈಕೆಯನ್ನೂ ಅರಸಿಕೊಂಡು ಬಂದಿವೆ. ಯೆಲ್ಲೋ ಗ್ಯಾಂಗ್ಸ್, ಮೇಡ್ ಇನ್ ಬೆಂಗಳೂರು, ಡಿಯರ್ ಸತ್ಯ, ಕಟ್ಟಿಂಗ್ ಶಾಪ್, ಹೊಂದಿಸಿ ಬರೆಯಿರಿ, ವಿಜಯಾನಂದ, ತ್ರಿಬಲ್ ರೈಡಿಂಗ್, ಸೇರಿದಂತೆ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಮಿಂಚು ಹರಿಸುವ ಚಾನ್ಸ್ ದಕ್ಕಿದೆ.
ಅಷ್ಟಕ್ಕೂ, ನಾನು ನಾಯಕಿಯಾಗ್ಬೇಕು, ಬೆಳ್ಳಿತೆರೆ ಮೇಲೆ ಮಿಂಚಬೇಕು ಇದ್ಯಾವ ಕನಸು ಅರ್ಚನಾಗಿರಲಿಲ್ಲವಂತೆ. ಬಿಕಾಂ ಮುಗಿದ್ಮೇಲೆ ಸಿಎ ಮಾಡ್ಕೊಂಡು ಚಾರ್ಟೆಂಡ್ ಅಕೌಂಟೆಂಟ್ ಆಗ್ಬೇಕೆಂದುಕೊಂಡಿದ್ದರು. ಆದರೆ, ಈ `ಮೈಸೂರ್ ಪಾಕ್’ ನಟಿ ಅರ್ಚನಾ ಲೈಫ್‍ನ ಬದಲಾಯಿಸಿಬಿಡ್ತಂತೆ. ಇದೇನಿದು ಮೈಸೂರು ಪಾಕ್ ಕಥೆ ಅಂತೀರಾ? ಸ್ಕೂಲ್ ಪುಟ್ಟಿ ಬಿಚ್ಚಿಟ್ಟ ಸ್ಟೋರಿನಾ ನಿಮ್ಮ ಮುಂದೆ ಬಿಚ್ಚಿಡ್ತೀವಿ ನೋಡಿ. ನಟಿ ಅರ್ಚನಾ ಆಗಿನ್ನೂ ಪಿಯೂಸಿ ಓದುತ್ತಿದ್ದರು. ಯೂನಿಫಾರ್ಮ್ ತೊಟ್ಟು ಎಂದಿನಂತೆ ಕಾಲೇಜ್‍ಗೆ ಹೋಗಿದ್ದರು. ಬ್ರೇಕ್ ಸಮಯದಲ್ಲಿ ಸ್ನೇಹಿತರಿಂದ ಒಂದು ಕರೆ ಬರುತ್ತೆ. ಈ ಮಯ್ಯಾಸ್‍ನವರು `ಮೈಸೂರ್ ಪಾಕ್’ ಆ್ಯಡ್ ಶೂಟ್ ಮಾಡ್ತಿದ್ದಾರೆ. ಅವರಿಗೆ ಹೋಮ್ಲಿ ಲುಕ್ ಇರುವ ಒಂದು ಹುಡುಗಿ ಬೇಕಂತೆ. ನೀನು ಹೇಗೂ ನೋಡೋದಕ್ಕೆ ಪಕ್ಕದ್ಮನೆ ಹುಡುಗಿ ಥರಾನೇ ಇದ್ದೀಯಾ. ಆ್ಯಕ್ಟ್ ಮಾಡಿದರೆ ಚೆನ್ನಾಗಿರುತ್ತೆ, ಕೈಗೊಂದಿಷ್ಟು ದುಡ್ಡು ಸಿಗುತ್ತೆ ಅಂತ ಹೇಳ್ತಾರೆ. ಜಾಹೀರಾತೊಂದ್ರಲ್ಲಿ ನಟಿಸೋಕೆ ಚಾನ್ಸ್ ಸಿಗ್ತು ಅನ್ನೋದಕ್ಕಿಂತ ಅವರು ಕೊಡುವ ದುಡ್ಡು ಪಾಕೆಟ್ ಮನಿಗಾಗುತ್ತೆ ಅಂತ ಅರ್ಚನಾ ಹೈ ಸ್ಪೀಡ್‍ನಲ್ಲಿ ಶೂಟಿಂಗ್ ಸ್ಪಾಟ್‍ಗೆ ಹೋಗಿ `ಮಯ್ಯಾಸ್ ಮೈಸೂರ್ ಪಾಕ್’ ಆ್ಯಡ್‍ಗೆ ಬಣ್ಣ ಹಚ್ಚಿದ್ದರು. ಅಲ್ಲಿಂದ ಶುರುವಾಯ್ತು ನೋಡಿ ಬಣ್ಣದ ನಂಟು.
ಅಂದ್ಹಾಗೇ, ಕಳೆದ ಐದು ವರ್ಷಗಳಿಂದ ನಟಿ ಅರ್ಚನಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಒಂದಾದ್ಮೇಲೊಂದರಂತೆ ಸಿನಿಮಾಗಳನ್ನೂ ಮಾಡ್ತಿದ್ದಾರೆ. ಆದರೆ, ನಿರೀಕ್ಷಿತ ಮಟ್ಟದ ನೇಮು, ಫೇಮು ಮಾತ್ರ ಸಿಕ್ಕಿಲ್ಲ. ಡಿಮ್ಯಾಂಡಿಂಗ್ ನಟಿಯಾಗಿ ಮಿಂಚುವ ಅದೃಷ್ಟ ಈಕೆಗಿನ್ನೂ ಒದಗಿಬಂದಿಲ್ಲ. ಅದಕ್ಕೇನು ಬೇಜಾರಿಲ್ಲ ಎನ್ನುವ ಈ ನಟಿ, ಹೊಂದಿಸಿ ಬರೆಯಿರಿ ಸಿನಿಮಾ ನೋಡಿವರು ನನ್ನ `ಸೀನಿಯರ್ ಬಾನು’ ಪಾತ್ರದಿಂದ ಗುರ್ತಿಸ್ತಾರೆ. `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ನೋಡಿದವರು ಸ್ಕೂಲ್ ಪುಟ್ಟಿ, ಚಿನ್ನಿ ಅಂತ ಕೂಗ್ತಾರೆ ಸದ್ಯಕ್ಕೆ ಇಷ್ಟು ಸಾಕು ಅಂತಾರೇ. ಅಷ್ಟಕ್ಕೂ, ನಂಗೆ ಸ್ಟಾರ್ ಹೀರೋಯಿನ್ ಪಟ್ಟಕ್ಕೇರಿ ಕುಳಿತುಕೊಳ್ಳಬೇಕೆನ್ನುವ ಆಸೆಯೇನೂ ಇಲ್ಲ. ಜನ ನನ್ನನ್ನ ಅದ್ಭುತ ನಟಿ ಅಂತ ಒಪ್ಪಿಕೊಂಡರೆ ಅಷ್ಟೇ ಸಾಕೆನ್ನುವ ಅರ್ಚನಾ ಕೊಟ್ಟಿಗೆ ಬಹುಭಾಷಾ ನಟಿ ಊರ್ವಶಿಯಂತೆ ಅಭಿನಯಿಸೋದನ್ನ ಕಲಿಬೇಕು. `ರಾಮ ಶ್ಯಾಮ ಭಾಮ’ ದಲ್ಲಿ ಊರ್ವಶಿಯವರಿಗೆ ಸಿಕ್ಕಂತಹ ಪಾತ್ರ ನಂಗೂ ಸಿಗಬೇಕು. ಆ ತರಹ ಕ್ಯಾರೆಕ್ಟರ್ ಯಾರಾದ್ರೂ ಡೈರೆಕ್ಟರ್ ನನಗಾಗಿ ಸೃಷ್ಟಿ ಮಾಡಿದರೆ ಕಣ್ಣಿಗೆ ಹೊತ್ಕೊಂಡು ಆ್ಯಕ್ಟ್ ಮಾಡ್ತೀನಿ ಅಂತಾರೇ.
ಸದ್ಯಕ್ಕೆ ಅರ್ಚನಾ ಕೈಲಿ ಶೂಟಿಂಗ್ ಹಂತದಲ್ಲಿರೋದು ಒಂದೇ ಸಿನಿಮಾ. ಆದರೆ, ರಿಲೀಸ್ ಆಗ್ಬೇಕಾಗಿರೋದು ಹತ್ತಕ್ಕೂ ಹೆಚ್ಚು ಸಿನಿಮಾಗಳಿವೆ. 2019ರಿಂದ 2022 ರವೆಗೆ ಚಿತ್ರೀಕರಣಗೊಂಡ ಬಹುತೇಕ ಚಿತ್ರಗಳು ಈಗ ಬಿಡುಗಡೆ ಹಂತದಲ್ಲಿವೆ. ಅದರಲ್ಲಿ, ಪ್ರಮುಖವಾಗಿ ಎಲ್ಲರ ಕಾಲೆಳೆಯುತ್ತೆ ಕಾಲ, ಬಯಲು ಸೀಮೆ, ಜುಗಲ್‍ಬಂಧಿ, ಶೇಷ ಸಿನಿಮಾಗಳು ಬೆಳ್ಳಿತೆರೆಗೆ ಲಗ್ಗೆ ಇಡಲು ರೆಡಿಯಾಗಿವೆ. ಇದೇ ಖುಷಿಯಲ್ಲಿ ನಮ್ಮೊಟ್ಟಿಗೆ ಮಾತನಾಡಿದ ಅರ್ಚನಾ, ಹಣೆಬರಹ ಬದಲಾಗೋಕೆ ಒಂದು ಸಿನಿಮಾ, ಒಂದು ಪಾತ್ರ, ಒಂದು ಫ್ರೈಡೇ ಸಾಕು. ಹೀಗಾಗಿ, ನಾನು ಕುತೂಹಲದಿಂದ ಕಾಯ್ತಿದ್ದೇನೆ. ರಿಷಬ್, ರಕ್ಷಿತ್, ರೋಹಿತ್, ಹೇಮಂತ್ ರಾವ್, ರಾಜ್ ಬಿ ಶೆಟ್ಟಿಯವರ ನಿರ್ದೇಶನದ ಸಿನಿಮಾಗಳಲ್ಲಿ ನಟಿಸೋಕೆ ಎದುರುನೋಡ್ತಿದ್ದೇನೆ ಎಂದು ಹೇಳಿಕೊಳ್ತಾರೆ. ಪ್ರತಿಭಾವಂತ ನಟಿಮಣಿಯರಿಗೆ ಶೆಟ್ರ ಗ್ಯಾಂಗ್‍ನಲ್ಲಿ ಅವಕಾಶಗಳು ಸಿಕ್ಕಿವೆ. ಸೋ ಕನ್ನಡತಿ ಅರ್ಚನಾಗೂ ಕರಾವಳಿ ಬಳಗದಲ್ಲಿ ಅವಕಾಶ ಸಿಗುತ್ತಾ? ಕಾದುನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.