OTT release: ಓಟಿಟಿಗೆ ಬರಲಿದೆ ಪೃಥ್ವಿರಾಜ್ ಸುಕುಮಾರನ್ ʼಆಡುಜೀವಿತಂʼ; ಎಲ್ಲಿ, ಯಾವಾಗ?
Team Udayavani, Jul 14, 2024, 2:15 PM IST
ಕೊಚ್ಚಿ: ಮಾಲಿವುಡ್ ನಲ್ಲಿ(Mollywood) ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡಿರುವ ಸಿನಿಮಾಗಳಲ್ಲಿ ಒಂದಾಗಿರುವ ಪೃಥ್ವಿರಾಜ್ ಸುಕುಮಾರನ್ ಅಭಿನಯದ ʼಆಡುಜೀವಿತಂʼ(Aadujeevitham) ಮೂರು ತಿಂಗಳ ಬಳಿಕ ಓಟಿಟಿ ರಿಲೀಸ್ ಸಿದ್ದವಾಗಿದೆ.
ಬ್ಲೆಸ್ಸಿ ನಿರ್ದೇಶನದ ನೈಜ ಕಥಾಹಂದರದ ಈ ಸಿನಿಮಾ ಇದೇ ವರ್ಷದ ಮಾ.28 ರಂದು ರಿಲೀಸ್ ಆಗಿತ್ತು. ಕೇರಳ ಮಾತ್ರವಲ್ಲದೆ ಸಿನಿಮಾಕ್ಕೆ ಇತರೆ ಕಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು.
ನಜೀಬ್ ಹೆಸರಿನ ವ್ಯಕ್ತಿ ಸೌದಿ ಅರೇಬಿಯಾಗೆ ಕೆಲಸ ಅರಸಿ ಹೋಗುತ್ತಾರೆ. ಅಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಹಲವು ವರ್ಷಗಳ ತೊಂದರೆ ಬಳಿಕ ಅವರು ದೇಶಕ್ಕೆ ಮರಳುವ ಕಥೆಯನ್ನು ಭಾವನಾತ್ಮಕವಾಗಿ ನೈಜ ರೀತಿಯಲ್ಲೇ ತೋರಿಸಲಾಗಿದೆ.
ಇದನ್ನೂ ಓದಿ: Kollywood: ʼಇಂಡಿಯನ್-2ʼ ಥಿಯೇಟರ್‌ನಲ್ಲಿರವಾಗಲೇ ಓಟಿಟಿಗೆ ಬರಲಿದೆ ʼಇಂಡಿಯನ್ʼ
ಪೃಥ್ವಿರಾಜ್ (Prithviraj Sukumaran) ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಸಿನಿಮಾ ರಿಲೀಸ್ ಆಗಿ ಮೂರು ತಿಂಗಳು ಕಳೆದರೂ ಓಟಿಟಿಗೆ ಬಂದಿರಲಿಲ್ಲ. ಅನೇಕರು ಓಟಿಟಿ ರಿಲೀಸ್ ವಿಳಂಬದ ಬಗ್ಗೆ ಪ್ರಶ್ನೆ ಮಾಡಿದ್ದರು. ವರದಿಗಳ ಪ್ರಕಾರ ಚಿತ್ರತಂಡ ಓಟಿಟಿ ರೈಟ್ಸ್ ಮಾರಾಟಕ್ಕೆ ಭಾರೀ ಮೊತ್ತದ ಬೇಡಿಕೆಯಿಟ್ಟಿದ್ದರಿಂದ ಓಟಿಟಿ ರಿಲೀಸ್ ಗೆ ತಡವಾಗುತ್ತಿದೆ ಎನ್ನಲಾಗಿತ್ತು.
ʼಇದೀಗ ಕೊನೆಗೂ ನೆಟ್ ಫ್ಲಿಕ್ಸ್ ʼಆಡುಜೀವಿತಂʼ ಓಟಿಟಿ ರಿಲೀಸ್ ಗೆ ಮುಂದಾಗಿದೆ.
ಇದೇ ಜು.19ರಿಂದ ಮ ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಸಿನಿಮಾ ಸ್ಟ್ರೀಮ್ ಆಗಲಿದೆ.
ಪೃಥ್ವಿರಾಜ್ ಜೊತೆ ಸಿನಿಮಾದಲ್ಲಿ ಅಮಲಾ ಪೌಲ್, ಕೆಆರ್ ಗೋಕುಲ್ , ಜಿಮ್ಮಿ ಜೀನ್-ಲೂಯಿಸ್ ನಟಿಸಿದ್ದಾರೆ.
Pradheekshayum porattavum niranja Najeebinde jeevitha katha. #Aadujeevitham is coming to Netflix on 19th July in Malayalam, Tamil, Telugu, Kannada and Hindi!#AadujeevithamOnNetflix pic.twitter.com/k95Lg4dChH
— Netflix India South (@Netflix_INSouth) July 14, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.