Bigg Boss: ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆಯಿಂದ ಹಿಂದೆ ಸರಿದ ಖ್ಯಾತ ನಟ
Team Udayavani, Aug 7, 2024, 2:59 PM IST
ಚೆನ್ನೈ: ಟಿವಿ ಲೋಕದ ಜನಪ್ರಿಯ ಶೋಗಳಲ್ಲಿ ಬಿಗ್ ಬಾಸ್ (BIGG BOSS) ಕೂಡ ಒಂದು. ನಾನಾ ಭಾಷೆಯಲ್ಲಿ ಬರುವ ಈ ಕಾರ್ಯಕ್ರಮಕ್ಕೆ ಪ್ರತ್ಯೇಕ ವೀಕ್ಷಕರಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮವನ್ನು ಆಯಾ ಭಾಷೆಯಲ್ಲಿ ಖ್ಯಾತ ಕಲಾವಿದರು ನಿರೂಪಣೆ ಮಾಡುತ್ತಾರೆ. ತಮಿಳಿನಲ್ಲಿ ಕಮಲ್ ಹಾಸನ್ (KAMAL HASAN) ಕಳೆದ ಏಳು ಸೀಸನ್ ಗಳಿಂದ ನಿರೂಪಣೆ ಮಾಡುತ್ತಾ ಬಂದಿದ್ದಾರೆ.
8ನೇ ಸೀಸನ್ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವಾಗಲೇ, ಕಮಲ್ ಹಾಸನ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ . ಈ ಬಾರಿ ತಾವು ಬಿಗ್ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಈ ಬಾರಿ ತಾವು ಬಿಗ್ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಆಗುವುದಿಲ್ಲ ಎಂದು ಅವರು ಹೇಳಿದ್ದು, ವೀಕ್ಷಕರಿಗೆ ಶಾಕ್ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕಮಲ್ ಹಾಸನ್ ಸುದೀರ್ಘ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ.
ಕಳೆದ 7 ವರ್ಷಗಳಿಂದ ನಿಮ್ಮ ಮನೆಗಳಲ್ಲಿ ನಿಮ್ಮನ್ನು ತಲುಪುವ ಸೌಭಾಗ್ಯ ನನಗೆ ಸಿಕ್ಕಿದೆ. ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ನಾನು ಕೃತಜ್ಞನಾಗಿದ್ದೇನೆ. ನಿಮ್ಮೆಲ್ಲರ ಬೆಂಬಲವು ಬಿಗ್ ಬಾಸ್ ತಮಿಳನ್ನು ಭಾರತದ ಅತ್ಯುತ್ತಮ ರಿಯಾಲಿಟಿ ಶೋಗಳಲ್ಲಿ ಒಂದನ್ನಾಗಿ ಮಾಡಿದೆ ಎಂದು ಅವರು ಹೇಳಿದ್ದಾರೆ.
ಕಾರ್ಯಕ್ರಮ ನಿರೂಪಣೆಯ ಹಾದಿಯಲ್ಲಿ ನಾನು ಹತ್ತಾರು ಪಾಠಗಳನ್ನುನ ಕಲಿತಿದ್ದೇನೆ. ಕಾರ್ಯಕ್ರಮದಲ್ಲಿ ಇದುವರೆಗೆ ಕಾಣಿಸಿಕೊಂಡ ಎಲ್ಲಾ ಸ್ಪರ್ಧಿಗಳಿಗೆ ನಾನು ಧನ್ಯವಾದವನ್ನು ಹೇಳುತ್ತೇನೆ. ಹಾಗೂ ಈ ಅವಕಾಶವನ್ನು ಕೊಟ್ಟ ವಿಜಯ್ ಟಿವಿ, ಸಿಬ್ಬಂದಿಗಳಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ಈ ಸೀಸನ್ ದೊಡ್ಡ ಯಶಸ್ಸಾಗಲಿ ಎಂದು ನಾನು ಹಾರೈಸುತ್ತೇನೆ ಎಂದು ಅವರು ಹೇಳಿದ್ದಾರೆ.
என்றும் உங்கள் நான்.@vijaytelevision pic.twitter.com/q6v0ynDaLr
— Kamal Haasan (@ikamalhaasan) August 6, 2024
ಕಮಲ್ ಹಾಸನ್ ಸದ್ಯ ʼಥಗ್ ಲೈಫ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಇದಾದ ಬಳಿಕ ʼಕಲ್ಕಿ-2ʼ ಹಾಗೂ ‘KH 237’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Martin: ಕಿರುತೆರೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಧ್ರುವ ಸರ್ಜಾ ನಟನೆಯ ʼಮಾರ್ಟಿನ್ʼ
BBK11: ದಯವಿಟ್ಟು ಬಿಗ್ ಬಾಸ್ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್
BBK11: ಮೋಕ್ಷಿತಾ ತೊಡೆ ಮೇಲೆ ಕೂತ ರಜತ್.. ಅತಿಥಿಗಳ ವರ್ತನೆಗೆ ಸಿಬ್ಬಂದಿಗಳು ಸುಸ್ತು.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.