BBK11: ಜಗದೀಶ್‌ ಬಿಟ್ಟು ಈ ವ್ಯಕ್ತಿ ಬಿಗ್‌ಬಾಸ್‌ ಮನೆಯಲ್ಲಿ ಇರೋದು ತುಂಬಾ ಡೇಂಜರ್..‌ ಯಮುನಾ


Team Udayavani, Oct 7, 2024, 4:22 PM IST

0821

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada-11) ದ ದೊಡ್ಮನೆ ಆಟದಿಂದ ಮೊದಲ ವಾರವೇ ಯಮುನಾ ಶ್ರಿನಿಧಿ ಅವರು ಮನೆಯಿಂದ ಆಚೆ ಬಂದಿದ್ದಾರೆ.

ಬಿಗ್‌ ಬಾಸ್‌ ಮನೆಗೆ ಸ್ವರ್ಗದ ನಿವಾಸಿಯಾಗಿ ಎರಡನೇ ಸ್ಪರ್ಧಿಯಾಗಿ ಯಮುನಾ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಅವರು ಚೈತ್ರಾ ಅವರೊಂದಿಗಿನ ವಾದದಿಂದ ಸದ್ದು ಮಾಡಿದ್ದರು. ಆದರೆ ಆದಾದ ಬಳಿಕ ಅವರು ಅಷ್ಟಾಗಿ ಕಾಣಿಸಿಕೊಳ್ಳಿಲ್ಲ.

ಮನೆಯಲ್ಲಿ ಹಿರಿಯರಾಗಿದ್ದ ಅವರು, ಜಗದೀಶ್‌ ಹಾಗೂ ಮಂಜು ಅವರೊಂದಿಗೆ ವಾಗ್ವಾದಕ್ಕಿಳಿದಿದ್ದರು. ಅತ್ತ ಕೆಲ ಸ್ಪರ್ಧಿಗಳೊಂದಿಗೆ ಆತ್ಮೀಯವಾಗಿದ್ದರು. ಆದರೆ ಆಟದ ವಿಚಾರದಲ್ಲಿ ಯಮುನಾ ಹಿಂದೆ ಉಳಿದಿದ್ದರು. ಆಡಿದ ಟಾಸ್ಕ್‌ ನಲ್ಲಿ ಅವರು ಅಷ್ಟೇನು ಕಮಾಲ್‌ ಮಾಡಿಲ್ಲ.

ಪರಿಣಾಮ ಯಮುನಾ ಶ್ರೀನಿಧಿ (Actress Yamuna Srinidhi) ಮೊದಲ ವಾರವೇ ಮನೆಯಿಂದ ಆಚೆ ಬಂದಿದ್ದಾರೆ. ಮನೆಯಿಂದ ಹೊರಬಂದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಬಿಗ್‌ ಬಾಸ್‌ ಮನೆಯಲ್ಲಿನ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಅತ್ಯಂತ ಅಪಾಯಕಾರಿಯ ವ್ಯಕ್ತಿತ್ವದ ಯಾರದ್ದು ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, “ ಲಾಯರ್​ ಜಗದೀಶ್​ಗಿಂತ ಉಗ್ರಂ ಮಂಜು ತುಂಬಾ ಡೇಂಜರಸ್​. ಸಿಕ್ಕಪಟ್ಟೆ ಮ್ಯಾನಿಪುಲೇಟ್​, ಎಲ್ಲರನ್ನು ವಶಕ್ಕೆ ತೆಗೆದುಕೊಳ್ಳುವವರು. ಏನು ಹೇಳದೆ ಏನು ಗೊತ್ತಾಗದೆ ಟ್ರಿಕ್​ ಮಾಡುತ್ತಾರೆ ಹಾಗಾಗಿ ಅವರು ಡೇಂಜರಸ್” ಎಂದಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ತನ್ನ ಆಟವನ್ನು ಶುರು ಮಾಡಿರುವವರು ಯಾರು ಮತ್ತು ಆಟನ್ನೇ ಶುರು ಮಾಡದವರು ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, “ಮೊದಲ ಸೆಕೆಂಡ್‌ನಿಂದ ಸಂಶಯವೇ ಬೇಡ ತನ್ನ ಆಟವನ್ನು ಶುರು ಮಾಡಿದವರು ಜಗದೀಶ್‌ ಅವರು. ಹೇಳ್ಕೊಂಡು ಹೇಳ್ಕೊಂಡು ಬಿಂದಾಸ್‌ ಆಗಿ ತನ್ನ ಆಟವನ್ನು ಆಡುತ್ತಿದ್ದಾರೆ. ಇನ್ನು ಧರ್ಮ ಕೀರ್ತಿರಾಜ್‌ ಹಾಗೂ ಧನರಾಜ್‌ ಅವರು ತನ್ನ ಆಟವನ್ನು ಇನ್ನು ಶುರುಮಾಡಿಲ್ಲ” ಎಂದು ಅವರು ಹೇಳಿದ್ದಾರೆ.

ಧರ್ಮ ಯಾವ ಪರದೆ, ಮುಖವಾಡ ಇಲ್ಲದೆ ಇದ್ದಾರೆ. ಧನರಾಜ್‌ ಅವರು ಇನ್ನು ಕೂಡ ಬಿಗ್‌ ಬಾಸ್‌ ಮನೆಗೆ ಒಗ್ಗಿಕೊಂಡಿಲ್ಲ. ಅವರು ನಾನು ನನ್ನಗಿಲ್ಲ ಎನ್ನುವಂತಿದ್ದಾರೆ. ಅವರಿಗೆ ಭಯ ಜಾಸ್ತಿ ಎಂದು ಯಮುನಾ ಹೇಳಿದ್ದಾರೆ.

ವೇದಿಕೆಯಲ್ಲಿ ಯಮುನಾ ಹೇಳಿದ್ದೇನು?

ಬಿಗ್ ಬಾಸ್ ಮನೆಯಿಂದ ಆಚೆ ಬಂದು ಮಾತನಾಡಿದ ಯಮುನಾ ಅವರು, ನಾನು ಮನೆಯಲ್ಲಿ ಸ್ವಲ್ಪ ದಿನ ಇರುತ್ತೇನೆ ಅನ್ಕೊಂಡಿದ್ದೆ. ಶಿಶಿರ್, ತಿವಿಕ್ರಮ್, ಧರ್ಮ ಕೀರ್ತಿರಾಜ್ ಫಿನಾಲೆವರೆಗೂ ಇರಬಹುದು. ಮುಂದಿನ ವಾರ ಮೋಕ್ಷಿತಾ ಅಥವಾ ಐಶ್ವರ್ಯಾ ಅವರು ಎಲಿಮಿನೇಟ್ ಆಗಬಹುದು ಎಂದು ಹೇಳಿದ್ದಾರೆ.

ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಗುರುತಿಸಿಕೊಂಡಿರುವ ಅವರು, ‘ಸಪ್ತ ಸಾಗರದ ಆಚೆ ಎಲ್ಲೋ’, ‘ಕೌಸಲ್ಯ ಸುಪ್ರಜಾ ರಾಮ’ದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ನಟಿ ಯಮುನಾ ಶ್ರೀನಿಧಿ ಅವರು ಸದ್ಯಕ್ಕೆ ‘ನನ್ನ ದೇವ್ರು’ ಧಾರಾವಾಹಿಯಲ್ಲಿ ಪಾತ್ರವೊಂದನ್ನು ಮಾಡಿದ್ದಾರೆ.

ಟಾಪ್ ನ್ಯೂಸ್

manish sisodia

AAP;ಎಂಪಿ ಮೇಲೆ ಇಡಿ ದಾಳಿ: ಸೋಲಿಸಲಾಗದೆ ಮೋದಿ ಈ ರೀತಿ ಮಾಡುತ್ತಿದ್ದಾರೆ..

BJP–Cong-sdpi

By Polls: ವಿಧಾನ ಪರಿಷತ್‌ ಉಪಚುನಾವಣೆ: ಅಂತಿಮ ಕಣದಲ್ಲಿ ನಾಲ್ವರು ಅಭ್ಯರ್ಥಿಗಳು

rape

Vadodara ; ಗಾರ್ಬಾ ಸಂಭ್ರಮಿಸಲು ಹೋಗುತ್ತಿದ್ದ 16 ವರ್ಷದ ಬಾಲಕಿಯ ರೇ*ಪ್!

ಈ ಕೆರೆಯಲ್ಲಿ ಮಿಂದೆದ್ದರೆ ಸಕಲ ಚರ್ಮ ರೋಗಗಳು ಮಾಯವಾಗುತ್ತಂತೆ… ಎಲ್ಲಿದೆ ಈ ಪುಣ್ಯ ಕ್ಷೇತ್ರ

ಈ ಕೆರೆಯಲ್ಲಿ ಮಿಂದೆದ್ದರೆ ಸಕಲ ಚರ್ಮ ರೋಗಗಳು ಮಾಯವಾಗುತ್ತೆ… ಎಲ್ಲಿದೆ ಈ ಪುಣ್ಯ ಕ್ಷೇತ್ರ

Result 2024: ಅ.8ರಂದು ಜಮ್ಮು-ಕಾಶ್ಮೀರ, ಹರ್ಯಾಣ ಚುನಾವಣ ಫಲಿತಾಂಶ, ಯಾರಿಗೆ ಗದ್ದುಗೆ?

Result 2024: ಅ.8ರಂದು ಜಮ್ಮು-ಕಾಶ್ಮೀರ, ಹರ್ಯಾಣ ಚುನಾವಣ ಫಲಿತಾಂಶ, ಯಾರಿಗೆ ಗದ್ದುಗೆ?

1-chir

Video viral; ಬನ್ನೇರುಘಟ್ಟ ಉದ್ಯಾನವನದಲ್ಲಿ ಸಫಾರಿ ಬಸ್‌ಗೆ ನುಗ್ಗಲು ಮುಂದಾದ ಚಿರತೆ!

Veerashaiva Lingayat Mahasabha’s opposition to caste census: Shamanur Shivshankarappa

Davanagere: ಜಾತಿಗಣತಿಗೆ ವೀರಶೈವ ಲಿಂಗಾಯತ ಮಹಾಸಭಾದ ವಿರೋಧ: ಶಾಮನೂರು ಶಿವಶಂಕರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBT8: ವಿವಾದಾತ್ಮಕ ನಿರ್ಮಾಪಕ ಟು ಖ್ಯಾತ ನಟಿ.. ಇವರೇ ನೋಡಿ ಬಿಗ್‌ಬಾಸ್‌ ತಮಿಳು ಸ್ಪರ್ಧಿಗಳು

BBT8: ವಿವಾದಾತ್ಮಕ ನಿರ್ಮಾಪಕ ಟು ಖ್ಯಾತ ನಟಿ.. ಇವರೇ ನೋಡಿ ಬಿಗ್‌ಬಾಸ್‌ ತಮಿಳು ಸ್ಪರ್ಧಿಗಳು

Bigg Boss Marathi 5: ಬಿಗ್‌ ಬಾಸ್‌ ಮರಾಠಿ ಟ್ರೋಫಿ ಗೆದ್ದ ಅನಾಥ ಹುಡುಗ; ಯಾರೀತ?

Bigg Boss Marathi 5: ಬಿಗ್‌ ಬಾಸ್‌ ಮರಾಠಿ ಟ್ರೋಫಿ ಗೆದ್ದ ಅನಾಥ ಹುಡುಗ; ಯಾರೀತ?

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

8

Koratagere: ಕುಸಿದು ಬಿದ್ದು ವಿದ್ಯಾರ್ಥಿ ಸಾವು; ಹೃದಯಾಘಾತ ಶಂಕೆ

manish sisodia

AAP;ಎಂಪಿ ಮೇಲೆ ಇಡಿ ದಾಳಿ: ಸೋಲಿಸಲಾಗದೆ ಮೋದಿ ಈ ರೀತಿ ಮಾಡುತ್ತಿದ್ದಾರೆ..

ನಶಿಸಿ ಹೋಗಿದ್ದ ಅಲಸಂದೆ ತಳಿಗೆ ಮರುಜೀವ! ಯಾವ ಜಿಲ್ಲೆಗೆ ಈ ತಳಿ ಸೂಕ್ತ?

ನಶಿಸಿ ಹೋಗಿದ್ದ ಅಲಸಂದೆ ತಳಿಗೆ ಮರುಜೀವ! ಯಾವ ಜಿಲ್ಲೆಗೆ ಈ ತಳಿ ಸೂಕ್ತ?

BJP–Cong-sdpi

By Polls: ವಿಧಾನ ಪರಿಷತ್‌ ಉಪಚುನಾವಣೆ: ಅಂತಿಮ ಕಣದಲ್ಲಿ ನಾಲ್ವರು ಅಭ್ಯರ್ಥಿಗಳು

rape

Vadodara ; ಗಾರ್ಬಾ ಸಂಭ್ರಮಿಸಲು ಹೋಗುತ್ತಿದ್ದ 16 ವರ್ಷದ ಬಾಲಕಿಯ ರೇ*ಪ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.