ಇಬ್ಬರು ಪತ್ನಿಯರಿದ್ದರೂ ರಹಸ್ಯವಾಗಿ ಮನೆ ಕೆಲಸದಾಕೆಯನ್ನು ಮದುವೆಯಾದ್ರಾ ಖ್ಯಾತ ಯೂಟ್ಯೂಬರ್?
Team Udayavani, Oct 29, 2024, 4:21 PM IST
ಮುಂಬಯಿ: ಇಬ್ಬರು ಪತ್ನಿಯರನ್ನು ಹೊಂದಿರುವ ಖ್ಯಾತ ಯೂಟ್ಯೂಬರ್, ವ್ಲಾಗರ್ ಅರ್ಮಾನ್ ಮಲಿಕ್(Youtuber Armaan Malik) ಒಂದಲ್ಲ ಒಂದು ವಿವಾದದಿಂದಲೇ ಸುದ್ದಿಯಾಗುತ್ತಿರುತ್ತಾರೆ.
ಇತ್ತೀಚೆಗಷ್ಟೇ ಹಿಂದಿ ಬಿಗ್ ಬಾಸ್ ಓಟಿಟಿ ಸೀಸನ್ -3 (Bigg Boss OTT) ನಲ್ಲಿ ಹೈದರಾಬಾದ್ ಮೂಲದ ಅರ್ಮಾನ್ ಮಲಿಕ್ ತನ್ನ ಇಬ್ಬರು ಪತ್ನಿಯರೊಂದಿಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಆಗಿದ್ದರು.
ವಿವಾದದಿಂದಲೇ ಹೆಚ್ಚು ಸುದ್ದಿಯಾದ ಯೂಟ್ಯೂಬರ್:
ಅರ್ಮಾನ್ ಬಿಗ್ ಬಾಸ್ ಮನೆಗೆ ಪತ್ನಿಯರಾದ ಪಾಯಲ್ ಹಾಗೂ ಕೃತಿಕಾ ಅವರೊಂದಿಗೆ ಹೋಗಿದ್ದರು. ಇವರಗಳ ಪೈಕಿ ಮೊದಲ ಪತ್ನಿ ಪಾಯಲ್ ಬೇಗನೇ ಎಲಿಮಿನೇಟ್ ಅಗಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿ ವಿಶಾಲ್ ಪಾಂಡೆ ಕೃತಿಕಾ ಅವರ ಬಗ್ಗೆ ಮಾತನಾಡಿದ್ದಕ್ಕೆ ಅರ್ಮಾನ್ ಸಿಟ್ಟೆಗೆದ್ದು ಕಪಾಳಕ್ಕೆ ಬಾರಿಸಿದ್ದರು. ಇದು ಅನೇಕ ವಿವಾದಕ್ಕೆ ಕಾರಣವಾಗಿತ್ತು. ಅರ್ಮಾನ್ ಅವರನ್ನು ಕೂಡಲೇ ಶೋನಿಂದ ಹೊರಹಾಕಬೇಕೆಂದು ಅನೇಕರು ಆಗ್ರಹಿಸಿದ್ದರು.
ಪತ್ನಿಯ ಸ್ನೇಹಿತೆಯನ್ನೇ ವರಿಸಿದ..
2011ರಲ್ಲಿ ಖಾಸಗಿ ಬ್ಯಾಂಕ್ ವೊಂದರಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಅರ್ಮಾನ್, ಅದೇ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಪಾಯಲ್ ಅವರೊಂದಿಗೆ ಪರಿಚಯವಾಗಿ ಪ್ರೀತಿಸಲು ಶುರು ಮಾಡುತ್ತಾರೆ. ಕೆಲ ಸಮಯದ ಬಳಿಕ ಕೋರ್ಟಿನಲ್ಲಿ ಅರ್ಮಾನ್ – ಪಾಯಲ್ ಮದುವೆ ಆಗುತ್ತಾರೆ. ಈ ದಂಪತಿಗೆ ಚಿರಾಯ್ ಎಂಬ ಮಗ ಹುಟ್ಟುತ್ತಾನೆ.
2018 ರಲ್ಲಿ ಅರ್ಮಾನ್ ಗೆ ಪಾಯಲ್ ಅವರ ಸ್ನೇಹಿತೆಯಾಗಿದ್ದ ಕೃತಿಕಾ ಎನ್ನುವಾಕೆಯ ಪರಿಚಯವಾಗುತ್ತದೆ. ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗುತ್ತದೆ. ಈ ವಿಚಾರವನ್ನು ಅರ್ಮಾನ್ ಪಾಯಲ್ ಗೆ ಹೇಳುತ್ತಾರೆ. ಮೊದಲ ಪತ್ನಿಯ ಸಮ್ಮುಖದಲ್ಲೇ ಅರ್ಮಾನ್ ಖುಷಿಯಿಂದಲೇ ಕೃತಿಕಾ ಅವರನ್ನು ವಿವಾಹವಾಗುತ್ತಾರೆ.
ನಾಲ್ಕನೇ ಮದುವೆ ಆದರೇ ಅರ್ಮಾನ್?: ಪಾಯಲ್, ಕೃತಿಕಾ ಅವರನ್ನು ವಿವಾಹವಾಗುವ ಮುನ್ನ ಅರ್ಮಾನ್ ಮೊದಲು ಬೇರೆ ಯುವತಿಯೊಂದಿಗೆ ವಿವಾಹವಾಗಿದ್ದರು. ಅವರಿಂದ ದೂರವಾದ ಬಳಿಕ ಪಾಯಲ್, ಕೃತಿಕಾ ಅವರನ್ನು ವಿವಾಹವಾಗಿದ್ದರು.
ಫ್ಯಾಮಿಲಿ ಫಿಟ್ನೆಸ್ ಸೇರಿದಂತೆ ಅರ್ಮಾನ್ ಹಲವು ಯೂಟ್ಯೂಬ್ ಚಾನೆಲ್ ಗಳನ್ನು ಹೊಂದಿದ್ದು ಲಕ್ಷಂತಾರ ಸಬ್ ಸ್ಕ್ರೈಬರ್ಸ್ಗಳನ್ನು ಹೊಂದಿದ್ದಾರೆ. ಅರ್ಮಾನ್ ಅವರ ಮನೆಯಲ್ಲಿ ಕಳೆದ ಕೆಲ ವರ್ಷಗಳಿಂದ ಲಕ್ಷ್ ಎನ್ನುವಾಕೆ ಮನೆ ಕೆಲಸದವಳಾಗಿ ಕೆಲಸ ಮಾಡುತ್ತಿದ್ದಾಳೆ. ಅರ್ಮಾನ್ ಮಕ್ಕಳನ್ನು ನೋಡಿಕೊಳ್ಳುವ, ಮನೆ ಕೆಲಸದ ಜತೆಗೆ ಯೂಟ್ಯೂಬ್ ಚಾನೆಲ್ ಗಳನ್ನು ಲಕ್ಷ್ ಹ್ಯಾಂಡಲ್ ಮಾಡುತ್ತಾಳೆ. ಪಾಯಲ್, ಕೃತಿಕಾ, ಅರ್ಮಾನ್ ಅವರ ಬಹುತೇಕ ಎಲ್ಲ ವ್ಲಾಗ್ ಗಳಲ್ಲಿ ಲಕ್ಷ್ ಕಾಣಿಸಿಕೊಳ್ಳುತ್ತಾಳೆ. ಹಾಗಾಗಿ ಅರ್ಮಾನ್ ಕುಟುಂಬದ ಜತೆ ಲಕ್ಷ್ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
ಇದೀಗ ಮನೆ ಕೆಲಸದವಳನ್ನೇ ಅರ್ಮಾನ್ ರಹಸ್ಯವಾಗಿ ಮದುವೆ ಆಗಿದ್ದಾರೆ ಎನ್ನುವ ಸುದ್ದಿಯೊಂದು ಕಳೆದ ಕೆಲ ದಿನಗಳಿಂದ ಇಂಟರ್ ನೆಟ್ ನಲ್ಲಿ ಭಾರೀ ವೈರಲ್ ಆಗುತ್ತಿದೆ.
ಸುದ್ದಿ ಹಬ್ಬಲು ಕಾರಣವೇನು? : ಇತ್ತೀಚೆಗೆ ಪಾಯಲ್ ಯೂಟ್ಯೂಬ್ ವ್ಲಾಗ್ ಮಾಡುವಾಗ ಲಕ್ಷ್ ಅವರು ಕೋರ್ಟ್ನಲ್ಲಿ ಮದುವೆ ಆಗಿದ್ದಾರೆ. ಅವರ ಗಂಡ ಮುಖ ತೋರಿಸಲು ಇಷ್ಟಪಡುತ್ತಿಲ್ಲ. ಅವರು ಯೂಟ್ಯೂಬ್ನಲ್ಲಿ ಕಾಣಿಸಿಕೊಳ್ಳಲ್ಲ ಎಂದಿದ್ದಾರೆ. ಮದುವೆಯಾದ ಬಳಿಕ ಗಂಡನ ಮನೆಬಿಟ್ಟು ಇಲ್ಲಿಗೆ ಯಾಕೆ ಬಂದಿದ್ದೀಯಾ ಎಂದು ಪಾಯಲ್ ಕೇಳಿದ್ದಾರೆ. ಇದಕ್ಕೆ ಲಕ್ಷ್ , “ಇದು ನನ್ನ ಮನೆ ಸಹ ಆಗಿದೆ ಹಾಗಾಗಿ ನಾನು ಬೇರೆಲ್ಲಿಯೂ ಹೋಗುವುದಿಲ್ಲ. ತಾನು ಮದುವೆಯಾಗಿರುವ ವಿಷಯವನ್ನು ಇನ್ನೂ ತನ್ನ ಮನೆಯಲ್ಲಿ ಬಹಿರಂಗಪಡಿಸಿಲ್ಲ” ಎಂದು ಲಕ್ಷ್ ಹೇಳಿದ್ದಾರೆ.
ಲಕ್ಷ್ ಕೈ ಮೇಲೆ ಅರ್ಮಾನ್ ಹೆಸರು.?: ಪತಿಯ ದೀರ್ಘಾ ಆಯುಷ್ಯಕ್ಕೆ ಉಪವಾಸವಿರುವ ʼಕರ್ವಾ ಚೌತ್ʼ ಸಂದರ್ಭದಲ್ಲಿ ಪಾಯಲ್, ಕೃತಿಕಾ ಅರ್ಮಾನ್ ಅವರಿಗಾಗಿ ಉಪವಾಸ ಇಟ್ಟಿದ್ದಾರೆ. ಉಪವಾಸ ಬಿಡುವ ವೇಳೆ ಅರ್ಮಾನ್ ಇಬ್ಬರು ಪತ್ನಿಯರಿಗೆ ಉಂಗುರ ಕೊಟ್ಟಿದ್ದಾರೆ. ಅರ್ಮಾನ್ ಅವರ ಕೈಯಲ್ಲಿ ಮೂರು ಉಂಗುರಗಳಿತ್ತು. ಒಂದನ್ನು ಅವರು ಕಿಸೆಯಲ್ಲಿಟ್ಟಿದ್ದಾರೆ. ಅಲ್ಲೇ ಪಕ್ಕದಲ್ಲಿ ಲಕ್ಷ್ ಕೂಡ ಇರುವುದು ವ್ಲಾಗ್ನಲ್ಲಿ ಕಂಡಿದೆ. ಇದಲ್ಲದೆ ʼಕರ್ವಾ ಚೌತ್ʼ ಸಂದರ್ಭದಲ್ಲಿ ಕೈಗಿಟ್ಟ ಮೆಹೆಂದಿಯಲ್ಲಿ ಅರ್ಮಾನ್ ಅವರ ಹೆಸರನ್ನು ಲಕ್ಷ್ ಹಾಕಿದ್ದಾರೆ ಎನ್ನುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಹೀಗಾಗಿ ಲಕ್ಷ್ ಜತೆ ಅರ್ಮಾನ್ ನಾಲ್ಕನೇ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ.
View this post on Instagram
ಪತ್ನಿಯ ಸ್ಪಷ್ಟನೆ:
“ಅರ್ಮಾನ್ ಅವರಿಗೆ ಎರಡು ಪತ್ನಿಯರು ಮಾತ್ರ ಇದ್ದಾರೆ. ಅರ್ಮಾನ್ ಅವರನ್ನು ನೀವು ಇತರೆ ಹುಡುಗಿಯರ ಜತೆ ನೋಡಿದರೆ ಮೂರನೇ ಪತ್ನಿ, ನಾಲ್ಕನೇ ಪತ್ನಿ ಎಂದು ಕಮೆಂಟ್ ಮಾಡುತ್ತೀರಿ. ಹಾಗೇ ಯಾವತ್ತೂ ಆಗಲ್ಲ. ಲಕ್ಷ್ ನಮ್ಮ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ಇದ್ದಾಳೆ. ಅವಳು ನಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಾಳೆ. ಮಕ್ಕಳ ಅಕೌಂಟ್ ನಿಂದ ವಿಡಿಯೋ ಮಾಡುತ್ತಾಳೆ. ನಮ್ಮ ಅಕೌಂಟ್ ಮ್ಯಾನೇಜ್ ಮಾಡುತ್ತಾಳೆ. ಅವಳು ನಮ್ಮ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾಳೆ ಎಂದು ಪಾಯಲ್ ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಗ್ರೂಪ್ ಕಟ್ಕೊಂಡು ಆಡುವವರಿಗೆ ನಾನು ಸಿಂಗಲ್ ಸಿಂಹವೆಂದು ಎಚ್ಚರಿಕೆ ಕೊಟ್ಟ ಚೈತ್ರಾ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
BBK11: ಬಿಗ್ ಬಾಸ್ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್ ಚುಪ್ ಆದ ಮಂಜು.!
MUST WATCH
ಹೊಸ ಸೇರ್ಪಡೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.