Arrested: ಶವವಾಗಿ ಪತ್ತೆಯಾದ ಖ್ಯಾತ ನಟಿಯ ಪುತ್ರ.. ಸ್ನೇಹಿತರಿಂದಲೇ ಘೋರ ಕೃತ್ಯ
Team Udayavani, Dec 11, 2024, 5:01 PM IST
ಮುಂಬಯಿ: ಖ್ಯಾತ ಕಿರುತೆರೆ ನಟಿಯೊಬ್ಬರ 14 ವರ್ಷದ ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆಗೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ನಾಪತ್ತೆಯಾಗಿದ್ದ ಕಿರುತೆರೆ ನಟಿ ಸಪ್ನಾ ಸಿಂಗ್ (Sapna Singh) ಅವರ 14 ವರ್ಷ ಮಗ ಸಾಗರ್ ಗಂಗ್ವಾರ್ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಈ ಸಂಬಂಧ ಪೊಲೀಸರು ಸಾಗರ್ ಸ್ನೇಹಿತರನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಏನಿದು ಘಟನೆ?: 8ನೇ ತರಗತಿಯಲ್ಲಿ ಓದುತ್ತಿದ್ದ ಸಾಗರ್ ಉತ್ತರ ಪ್ರದೇಶದ ಬರೇಲಿಯ ಆನಂದ್ ವಿಹಾರ್ ಕಾಲೋನಿಯಲ್ಲಿ ಸ್ವಪ್ನಾ ಸಿಂಗ್ ಅವರ ಚಿಕ್ಕಪ್ಪ ಓಂ ಪ್ರಕಾಶ್ ಅವರೊಂದಿಗೆ ವಾಸಿಸುತ್ತಿದ್ದ.
ಡಿಸೆಂಬರ್ 7 ರಂದು ಸಾಗರ್ ನಾಪತ್ತೆಯಾಗಿದ್ದಾನೆ ಎಂದು ಓಂ ಪ್ರಕಾಶ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಹುಡುಕಾಟ ನಡೆಸಲು ಶುರು ಮಾಡಿದಾಗ ಭಾನುವಾರ (ಡಿ.8 ರಂದು) ಇಜ್ಜತ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅದಲಾಖಿಯಾ ಗ್ರಾಮದ ಬಳಿ ಸಾಗರ್ ಅವರು ಶವವಾಗಿ ಪತ್ತೆಯಾಗಿದ್ದಾರೆ.
“ಮರಣೋತ್ತರ ಪರೀಕ್ಷೆಯಲ್ಲಿ ವರದಿಯಲ್ಲಿ ಸಾವಿನ ನಿಖರವಾದ ಕಾರಣವನ್ನು ದೃಢೀಕರಿಸಲು ಸಾಧ್ಯವಾಗಲಿಲ್ಲ. ಇದು ವಿಷ ಸೇವನೆ ಆಗಿರಬಹುದೆಂದು” ಪೊಲೀಸರು ಹೇಳಿದ್ದರು. ಆದರೆ ತಮ್ಮ ಮಗನನ್ನು ಶವವಾಗಿ ನೋಡಿ ಸ್ವಪ್ನಾ ಸಿಂಗ್ ಸಾವಿಗೆ ಕಾರಣ ಆದವರನ್ನು ಬಂಧಿಸಬೇಕು. ನಿಖರ ಕಾರಣ ತಿಳಿಯಲು ಮತ್ತೊಮ್ಮೆ ಪೋಸ್ಟ್ ಮಾರ್ಟಂ ನಡೆಸಬೇಕೆಂದು ಗ್ರಾಮಸ್ಥರೊಂದಿಗೆ ರಸ್ತೆ ತಡೆದು ಪ್ರತಿಭಟಿಸಿದ್ದಾರೆ. ಮಗನ ಶವವಿಟ್ಟು ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಪೊಲೀಸರು ಮನವೊಲಿಸಿದ ಬಳಿಕ ಸ್ವಪ್ನಾ ಸಿಂಗ್ ಪ್ರತಿಭಟನೆ ಹಿಂಪಡೆದು ಅಂತ್ಯಕ್ರಿಯೆಯನ್ನು ನಡೆಸಲು ಅನುವು ಮಾಡಿಕೊಟ್ಟಿದ್ದಾರೆ.
ಸ್ನೇಹಿತರಿಂದಲೇ ಕೃತ್ಯ.. ಪೊಲೀಸರು ಸಾಗರ್ ಸ್ನೇಹಿತರಾದ ಅನುಜ್ ಮತ್ತು ಸನ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅನುಜ್, ಸನ್ನಿ ಅವರು ಸಾಗರ್ ಜತೆ ಸೇರಿ ಡ್ರಗ್ಸ್ ಹಾಗೂ ಮದ್ಯವನ್ನು ಸೇವಿಸಿದ್ದಾರೆ. ಮಿತಿಮೀರಿದ ಮದ್ಯ ಸೇವನೆಯಿಂದಾಗಿ ಸಾಗರ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಇದರಿಂದ ಗಾಬರಿಗೊಂಡ ಅನುಜ್ , ಸನ್ನಿ ಸಾಗರ್ ಅವರ ದೇಹವನ್ನು ಹೊಲಕ್ಕೆ ಎಳೆದುಕೊಂಡು ಹೋಗಿ ಅಲ್ಲೇ ಬಿಟ್ಟು ಮನೆಗೆ ಮರಳಿದ್ದಾರೆ. ಸಾಗರ್ ಸತ್ತು ಹೋಗಿದ್ದಾನೆ ಎಂಬುದು ಇಬ್ಬರಿಗೂ ಗೊತ್ತಿರಲಿಲ್ಲವೆಂದು ವಿಚಾರಣೆ ವೇಳೆ ಹೇಳಿದ್ದಾರೆ.
ಸಿಸಿ ಟಿವಿ ದೃಶ್ಯಗಳನ್ನು ಆಧರಿಸಿ ಸನ್ನಿ , ಅನುಜ್‌ರನ್ನು ವಶಕ್ಕೆ ಪಡೆದು ಆ ಬಳಿಕ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಮೊದಲಿಗೆ ಇದೊಂದು ಉದ್ದೇಶಪೂರ್ವಕ ಕೊಲೆಯಲ್ಲವೆಂದು ದೂರು ದಾಖಲಿಸಿದ್ದರು. ಆ ಬಳಿಕ ಮೃತನ ಕುಟುಂಬಸ್ದರ ಪ್ರತಿಭಟನೆಗೆ ಮಣಿದು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.
ʼಕ್ರೈಂ ಪ್ಯಾಟ್ರೋಲ್ʼ, ʼಮತಿ ಕಿ ಬನ್ನೋʼ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಸ್ವಪ್ನಾ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Writer’s audition: ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.