BBK10: ಬಿಗ್ ಬಾಸ್ ಮನೆಗೆ ಮತ್ತೆ ಎಂಟ್ರಿ ಕೊಟ್ಟ ಹಳೆಯ ಸ್ಪರ್ಧಿಗಳು; ಯಾರಿಗೆ ಲಾಭ, ನಷ್ಟ?
Team Udayavani, Jan 16, 2024, 8:58 AM IST
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಫಿನಾಲೆಗೆ ಹತ್ತಿರವಾಗುತ್ತಿದೆ. ಸ್ಪರ್ಧಿಗಳು ಫಿನಾಲೆಯತ್ತ ಸಾಗುತ್ತಿದ್ದು, ಅಂತಿಮವಾಗಿ ಯಾರೆಲ್ಲಾ ಫೈನಲ್ ವೇದಿಕೆಯಲ್ಲಿರುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ.
ಕಾರ್ಯಕ್ರಮ ಸಾಗುತ್ತಿದ್ದಂತೆ ದೊಡ್ಮನೆಯಲ್ಲಿ ಇಷ್ಟುದಿನ ಸ್ಪರ್ಧಿಗಳ ನಡುವೆಯಿದ್ದ ಶೀತಲ ಸಮರ ನಿಧಾನವಾಗಿ ಕರಗುತ್ತಿದೆ. ಮತ್ತೆ ಹಳೆಯ ಸ್ನೇಹವನ್ನು ಬೆಳೆಸಿ ಸ್ಪರ್ಧಿಗಳು ಫಿನಾಲೆ ದಿನದತ್ತ ಸಾಗುತ್ತಿದ್ದಾರೆ.
ಇತ್ತ ಬಿಗ್ ಬಾಸ್ ಮನೆಯಿಂದ ಆಚೆ ಹೋದ ಸ್ಪರ್ಧಿಗಳು ಮತ್ತೆ ಮನೆಯೊಳಗೆ ಬಂದಿದ್ದಾರೆ. ಬಿಗ್ ಬಾಸ್ ನಿಮ್ಮಗಾಗಿ ಒಂದು ಸರ್ಪ್ರೈಸ್ ಕಾದಿದೆ ಎಂದು ಗಾರ್ಡನ್ ಏರಿಯಾದಲ್ಲಿಟ್ಟ ಬಾಕ್ಸ್ ಒಳಗೆ ಹಳೆ ಸ್ಪರ್ಧಿಯೊಬ್ಬರನ್ನು ಕೂರಿಸಿ, ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ.
ಇಶಾನಿ, ಮೈಕಲ್, ಭಾಗ್ಯಶ್ರೀ, ಸಿರಿ, ಸ್ನೇಹಿತ್, ನೀತು ಅವರು ಬಿಗ್ ಬಾಸ್ ಮನೆಗೆ ಬಂದಿದ್ದು, ಹಳೆಯ ಸ್ನೇಹಿತರನ್ನು ನೋಡಿ ಸ್ಪರ್ಧಿಗಳು ಸಂತಸದ ಜತೆ ಭಾವುಕರಾಗಿದ್ದಾರೆ.
ಪ್ರತಾಪ್ ಸಿಂಪತಿ ಕಾರ್ಡ್ ಪ್ಲೇ ಮಾಡುತ್ತಾ ಇದ್ದಾನೆ ಎಂದು ಇಶಾನಿ ಸಂಗೀತಾಗೆ ಹೇಳಿದ್ದಾರೆ. ಇನ್ನೊಂದೆಡೆ “ಈ ಮನೆಯಲ್ಲಿ ನಿನಗೆ ಸರ್ಪೋರ್ಟ್ ಇರೋದೇ ಸಂಗೀತದು, ಅಲ್ಲೇ ಬ್ರೇಕ್ ಆದರೆ ನೀನು ಒಂಟಿಯಾಗಿ ಬಿಡ್ತೀಯಾ” ಎಂದು ನೀತು ಪ್ರತಾಪ್ ಗೆ ಕಿವಿಮಾತನ್ನು ಹೇಳಿದ್ದಾರೆ. “ನೀನು ನಿನ್ನ ಬಗ್ಗೆ ಮಾತ್ರ ಯೋಚನೆ ಮಾಡು” ಎಂದು ಇಶಾನಿ ನಮೃತಾಗೆ ಹೇಳಿದ್ದಾರೆ. ಇನ್ನು ಸ್ನೇಹಿತ್ ನನ್ನು ನೋಡಿ ನಮೃತಾ ನಾಚಿ ನೀರಾಗಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಹಳೆಯ ಸ್ನೇಹಿತರ ಭೇಟಿ ಹಾಗೂ ಕಿವಿಮಾತಿನಿಂದ ಯಾರಿಗೆ ಹೇಗೆ ಲಾಭವಾದೀತು ಎನ್ನುವುದನ್ನು ಕಾದು ನೋಡಬೇಕಿದೆ.
ಇಂದು ರಾತ್ರಿ(ಜ.16 ರಂದು) ಕಾರ್ಯಕ್ರಮ ಪ್ರಸಾರವಾಗಲಿದೆ.
ಹಳೆ ಗೆಳೆಯರ ಭೇಟಿಯಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/h4GskELA4v
— Colors Kannada (@ColorsKannada) January 16, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಗ್ರೂಪ್ ಕಟ್ಕೊಂಡು ಆಡುವವರಿಗೆ ನಾನು ಸಿಂಗಲ್ ಸಿಂಹವೆಂದು ಎಚ್ಚರಿಕೆ ಕೊಟ್ಟ ಚೈತ್ರಾ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
BBK11: ಬಿಗ್ ಬಾಸ್ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್ ಚುಪ್ ಆದ ಮಂಜು.!
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.