BBK11: “ಮಾನಸಗೆ ಪ್ರಬುದ್ಧತೆ ಇಲ್ಲ..” ನಾಮಿನೇಷನ್ ಕಾರಣ ಕೇಳಿ ಗರಂ ಆದ ತುಕಾಲಿ ಪತ್ನಿ
Team Udayavani, Oct 22, 2024, 3:50 PM IST
ಬೆಂಗಳೂರು: ಬಿಗ್ ಬಾಸ್(Bigg Boss Kannada-11) ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಕಿಚ್ಚು ಹಚ್ಚಿದೆ. ಸ್ಪರ್ಧಿಗಳ ನಡುವೆ ನಾಮಿನೇಷನ್ ವಿಚಾರ ವಾಗ್ವಾದಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಮನೆಯ ಮುಂದಿನ ಕ್ಯಾಪ್ಟನ್ಸಿಗಾಗಿ ಟಾಸ್ಕ್ ನಡೆದಿದೆ. 7 ಜೋಡಿಗಳು ಕ್ಯಾಪ್ಟನ್ಸಿ ಪಟ್ಟಕ್ಕಾಗಿ ಟಾಸ್ಕ್‌ನಲ್ಲಿ ಜಿದ್ದಾಜಿದ್ದಿಯ ಹೋರಾಟ ಮಾಡಿದೆ.
ಈ ನಡುವೆ ನಾಲ್ಕನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಯಾರು ನಾಮಿನೇಟ್ ಆಗುತ್ತಾರೆ ಎನ್ನುವುದಕ್ಕೆ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಕೆಲವರು ನಾಮಿನೇಷನ್ ಮಾಡಲು ಕೊಟ್ಟ ಕಾರಣ ಕೇಳಿ ವಾಗ್ವಾದಕ್ಕಿಳಿದಿದ್ದಾರೆ.
ತಿವಿಕ್ರಮ್ ಹಾಗೂ ಐಶ್ವರ್ಯಾ ಮಾನಸ ಅವರು ಅಪ್ರಬುದ್ಧತೆಯಿಂದ ಇದ್ದಾರೆ ಎನ್ನುವ ಕಾರಣ ಕೊಟ್ಟು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಇದನ್ನು ಕೇಳಿದ ಮಾನಸ “ನನ್ನ ಗುಣ ಡಿಸೈಡ್ ಮಾಡೋಕೆ ನೀನು ಯಾವಳೋ..” ಎಂದಿದ್ದಾರೆ. ಇದಕ್ಕೆ ಐಶ್ವರ್ಯಾ ಅವಳು ಗಿವಳು ಏನು ಬೇಡ ಅಂಥ ಮಾತನಾಡುತ್ತಾ ಮುಂದೆ ಬಂದಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಇನ್ನೊಂದು ಕಡೆ ತಿವಿಕ್ರಮ್ ಅವರು ಮಂಜು ಅವರ ಹೆಸರನ್ನು ಉಲ್ಲೇಖಿಸಿ,”ಮಂಜಣ್ಣ ಎಲ್ಲೋ ಒಂದು ಕಡೆ ಕಾರಣರಾದರು ಅಂಥ ಮನೋಭಾವನೆ ನನ್ನದು..” ಎಂದಿದ್ದಾರೆ. ಇದಕ್ಕೆ ಮಂಜು “ನಾನು ಯಾರ ಜತೆ ಕೂತ್ಕೊಂಡು ಮಾತನಾಡಬೇಕೆನ್ನುವುದು ಬಿಗ್ ಬಾಸ್ ರೂಲ್ಸ್ ಅಲ್ಲಿ ಇಲ್ಲ. ಮನರಂಜನೆ ಮಾಡಲೇಬೇಕು ಅಂಥ ಆರ್ಡರ್ ಮಾಡೋದು ಯಾವುದು ಇಲ್ಲ.. ಎಂದಿದ್ದಾರೆ. ಇದಕ್ಕೆ ನೀವು ಹುಲಿ ಅಂಥ ತೋರಿಸಿಕೊಂಡು ಈಗ ಬದಲಾದರೆ ನಾವೇನು ಮಾಡೋಕೆ ಆಗಲ್ಲ ಎಂದು ತಿವಿಕ್ರಮ್ ಹೇಳಿದಾಗ, ಮಂಜು ಮಾತು ಮುಂದುವರೆಸಿ, “ ನಿಮ್ಮ ಹತ್ರನೇ ಬರಬೇಕು.. ಹಿಡಿಕ್ಕೋಬೇಕು.. ಎಂದು ಮಂಜು ಗರಂ ಆಗಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಮತ್ತೆ ಮನೆಯೊಳಗೆ ಕಿಚ್ಚು ಹಚ್ಚಿದ ನಾಮಿನೇಷನ್!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/E3s082PJhR
— Colors Kannada (@ColorsKannada) October 22, 2024
ಮಂಗಳವಾರ ರಾತ್ರಿ(ಅ.22ರಂದು) ಈ ಸಂಚಿಕೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.