BBK11: ಮಹಿಳಾ ಸ್ಪರ್ಧಿಯ ಹೊಟ್ಟೆಗೆ ಏಟು; ಉಗ್ರಂ ಮಂಜುರನ್ನು ಆಚೆ ಕರೆಸಿ ಎಂದ ನೆಟ್ಟಿಗರು
Team Udayavani, Oct 24, 2024, 6:59 PM IST
ಬೆಂಗಳೂರು: ಬಿಗ್‌ಬಾಸ್ (Bigg Boss Kannada-11) ಮನೆ ರಾಜಕೀಯ ಅಖಾಡವಾಗಿ ಬದಲಾಗಿದೆ. ಸ್ಪರ್ಧಿಗಳು ಎರಡು ಪಕ್ಷದ ಕಾರ್ಯಕರ್ತರಾಗಿ ಬದಲಾಗಿದ್ದಾರೆ. ಇದೇ ವಿಚಾರದಲ್ಲಿ ದೊಡ್ಮನೆಯಲ್ಲಿ ಮತ್ತೆ ವಾಗ್ವಾದಗಳು ಶುರುವಾಗಿದೆ.
ಪ್ರಾಮಾಣಿಕ, ಸಮರ್ಥರ ನ್ಯಾಯವಾದಿ ಪಕ್ಷ ಹಾಗೂ ಧರ್ಮಪರ ಸೇನಾ ಪಕ್ಷ ಎಂದು ಎರಡು ಪಕ್ಷಗಳ ನಡುವೆ ಶುರುವಾದ ಕಿತ್ತಾಟದಲ್ಲಿ ಮಹಿಳಾ ಸ್ಪರ್ಧಿಯೊಬ್ಬರು ಕಣ್ಣೀರಿಟ್ಟಿದ್ದಾರೆ.
ಒಂದು ಪಕ್ಷದವರು ಪೋಸ್ಟರ್ ಬಾಗಿಲಿಗೆ ಅಂಟಿಸಿದ್ದರು ಈ ವೇಳೆ ಮಾನಸ ಅದನ್ನು ತೆಗೆಯಲು ಯತ್ನಿಸಿದ್ದಾರೆ. ಇದನ್ನು ನೋಡಿದ ಮಂಜು ಸಿಟ್ಟಿನಲ್ಲಿ ಮಾನಸ ಅವರನ್ನು ದೂಡಿ,ಯಾಕೆ, ಏನಕ್ಕೆ.. ಎನ್ನುತ್ತಾ ಗರಂ ಆಗಿದ್ದಾರೆ.
ಪೋಸ್ಟರ್ ಅಂಟಿಸುವ ಸಲುವಾಗಿ ಬಾಗಿಲು ಬಳಿ ನಿಂತಿದ್ದ ಮಾನಸ ಅವರ ಹತ್ತಿರ ಉಗ್ರಂ ಮಂಜು ಅವರು ಮಾತನಾಡುವ ಭರದಲ್ಲಿ ಮಾನಸ ಅವರನ್ನು ದೂಡಿದ್ದಾರೆ. ಇದರಿಂದ ಮಾನಸರ ಕಿಬ್ಬೊಟ್ಟೆಗೆ ಏಟಾಗಿದೆ. ಕೂಡಲೇ ನೋವಿನಲ್ಲಿ ಅತ್ತಿದ್ದಾರೆ. ಇದನ್ನು ನೋಡಿದ ಸಹ ಸ್ಪರ್ಧಿಗಳು ಮಾನವೀಯತೆ ಇಲ್ವಾ ಎಂದು ಪ್ರಶ್ನಿಸಿದ್ದಾರೆ. ಆದರೆ ಮಂಜು ನಾನು ಬೇಕಂಥ ಮಾಡಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.
ಏನ್ ಗುರು ಮಾನಸಾಗೆ ಹಂಗ್ ಕೊಟ್ಟ ಈ ಮಂಜ, ಯಪ್ಪ ಸರಿಯಾಗ್ ಬಿತ್ತು 😵
ಮಂಜನು ಹೊರಗಡೆ ಹೋಗ್ತಾನ ?#BBK11 #BBKS11 #BBKSe#BBK #BiggBossKannada11pic.twitter.com/04CikW6QQv— Abhay Suryaa (@AbhaySuryaa_) October 24, 2024
ಮಂಜು ಮೇಲೆ ನೆಟ್ಟಿಗರು ಗರಂ; ಮನೆಯಿಂದ ಹೊರ ಹಾಕಿ ಎಂದ ಜನ.. : ಸದ್ಯ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಉಗ್ರಂ ಮಂಜು ಅವರ ವಿರುದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಜು ಅವರದ್ದು ಅತಿ ಆಯಿತು ಎಂದು ಕೆಲವರು ಹೇಳಿ, ಅವರನ್ನು ಹೊರಗೆ ಹಾಕಿ ಎಂದಿದ್ದಾರೆ.
ಇನ್ನು ಕೆಲವರು ಮಹಿಳೆಯರಿಗೆ ನಿಂದಿಸಿದ್ದಕ್ಕೆ ಜಗದೀಶ್ ಅವರನ್ನು ಹೊರಹಾಕಿದ್ದೀರಿ, ಇವರನ್ನು ಸಹ ಮನೆಯಿಂದ ಹೊರಗೆ ಹಾಕಿ ಎಂದು ಒತ್ತಾಯಿಸಿದ್ದಾರೆ. ಮಂಜು ಅವರ ಈ ವರ್ತನೆಗೆ ಕ್ರಮ ಆಗಬೇಕೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಕೆಲವರು ಮಾನಸರಿಗೆ ಹೊಟ್ಟೆಗೆ ತಾಗಿಲ್ಲ ಅವರು ನಾಟಕ ಮಾಡುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನು ರಾಧಾ ಹಿರೇಗೌಡರು ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಆಗಮಿಸಿದ್ದು, ಬಿಗ್ ಬಾಸ್ ರಾಜಕೀಯದಲ್ಲಿ ಕಿಂಗ್ ಮೇಕರ್ ಆಗಿ ಸ್ಪರ್ಧಿಗಳಿಗೆ ಖಡಕ್ ಆಗಿಯೇ ಪ್ರಶ್ನೆ ಮಾಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BiggBoss: ಟಿವಿ ಆಯಿತು ಈಗ ಓಟಿಟಿಯಲ್ಲಿ ಬಿಗ್ ಬಾಸ್: ಹೊಸ ಸೀಸನ್‌ಗೆ ಹೋಸ್ಟ್ ಯಾರು?
Mokshita Pai: ʼಮಕ್ಕಳ ಕಳ್ಳಿʼ ಆರೋಪ.. ನಾನು ನಿರಾಪರಾಧಿ ಅಂತ ಸಾಬೀತಾಗಿದೆ ಎಂದ ಮೋಕ್ಷಿತಾ
Pushpa 2: ಒಟಿಟಿಗೆ ಬಂತು ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ ಪುಷ್ಪ 2
Bigg Boss Kannada: ಹನುಮಂತು ಇಷ್ಟಪಡುವ ಹುಡುಗಿ ಬಗ್ಗೆ ನಮ್ಗೇನೂ ಗೊತ್ತಿಲ್ಲ – ಸಹೋದರ
BBK11: ಹನುಮಂತುಗೆ 5 ಕೋಟಿ ವೋಟ್ಸ್ ಕೂಡ ಕಡಿಮೆನೇ.. ತ್ರಿವಿಕ್ರಮ್
MUST WATCH
ಹೊಸ ಸೇರ್ಪಡೆ
Trump Tariffs: ಕೆನಡಾ, ಮೆಕ್ಸಿಕೊ ಮತ್ತು ಚೀನಾ ಮೇಲೆ ಸುಂಕ ವಿಧಿಸಿದ ಡೊನಾಲ್ಡ್ ಟ್ರಂಪ್
Encounter: ಛತ್ತೀಸ್ಗಢದಲ್ಲಿ ಭಧ್ರತಾ ಪಡೆ ಗುಂಡೇಟಿಗೆ ಎಂಟು ನಕ್ಸಲರು ಹತ
Champions Trophy: ವಿರಾಟ್, ರೋಹಿತ್ ಕುರಿತು ಮಹತ್ವದ ಹೇಳಿಕೆ ನೀಡಿದ ಕೋಚ್ ಗಂಭೀರ್
OPL vs CM: ನ.15, 16ಕ್ಕೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್ ಭವಿಷ್ಯ
U-19 T20 World Cup Final: ಚಾಂಪಿಯನ್ ಭಾರತವೇ ಫೇವರಿಟ್