BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ
Team Udayavani, Nov 28, 2024, 3:29 PM IST
ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಲ್ಲಿ ಮಹಾರಾಜ – ಯುವರಾಣಿ ಆಟ ಮುಂದುವರೆದಿದೆ. ಎರಡು ಬಣಗಳಾಗಿ ಸ್ಪರ್ಧಿಗಳು ವಿಭಜನೆಗೊಂಡಿದ್ದಾರೆ. ವಾರದ ಟಾಸ್ಕ್ ಗಾಗಿ ಎರಡು ಬಣದ ನಡುವೆ ಕಿತ್ತಾಟ ನಡೆದಿದೆ.
ಮಂಜು – ಮೋಕ್ಷಿತಾ ಅವರ ಬಣಕ್ಕೆ ʼಮಣ್ಣಿನ ಅಸ್ತ್ರʼ ಎನ್ನುವ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್‌ನಲ್ಲಿ ಮಂಜು – ರಜತ್ ನಡುವೆ ವಾಗ್ವಾದ ನಡೆದಿದೆ. ಯಾರಾದ್ರು ತಳ್ಳಿದರೆ ಸರಿಯಾಗಿ ತಳ್ಳುತ್ತೇನೆ. ಬುರುಡೆ ಹೊಡೆಯುತ್ತೇನೆ ಎಂದು ರಜತ್ ಹೇಳಿದ್ದಾರೆ. ಇದಕ್ಕ ಮಂಜು ನೀನ್ ದೊಡ್ಡ ರೌಡಿನಾ ಬುರುಡೆ ಹೊಡಿಯೋಕೆ ಎಂದು ಮಾತಿಗೆ ಮಾತು ಬೆಳೆಸಿ ಹಲ್ಲೆಗೆ ಬರುವಂತೆ ವಾಗ್ವಾದ ನಡೆಸಿದ್ದಾರೆ.
ಇನ್ನೊಂದು ಕಡೆ ಮಂಜು – ಮೋಕ್ಷಿತಾ ಅವರು ಈ ವಾರದ ಕ್ಯಾಪ್ಟನ್ಸಿ ಓಟದಿಂದ ಒಬ್ಬೊಬ್ಬ ಸ್ಪರ್ಧಿಯನ್ನು ಹೊರಗಿಡಬೇಕೆಂದು ಬಿಗ್ ಬಾಸ್ ಹೇಳಿದ್ದಾರೆ.
ಇದಕ್ಕೆ ಮೋಕ್ಷಿತಾ ಅವರು ತ್ರಿವಿಕ್ರಮ್ ಅವರಿಗೆ ಇಲ್ಲಿಂದ ಅಲ್ಲಿ, ಅಲ್ಲಿಂದ ಇಲ್ಲಿ ಹೇಳುವ ಬುದ್ದಿಯಿದೆ ಎಂದಿದ್ದಾರೆ. ಇದನ್ನು ಕೇಳಿ ಗರಂ ಆಗಿರುವ ತ್ರಿವಿಕ್ರಮ್ ಅವರು ಈ ತರ ಗೋಸುಂಬೆ ಆಟ ಆಡೋದಾಗಿದ್ರೆ ನಾವು ಇನ್ನೊಂದು ಆಟ ಆಡುತ್ತಾ ಇದ್ದೀವಿ ಎಂದಿದ್ದಾರೆ.
ಮಂಜನು ಅವರು ರಜತ್ ಅವರ ಹೆಸರನ್ನು ಹೇಳಿದ್ದಾರೆ. ಅವರಿಗೆ ಸರಿಸಮಾನವಾದವರು ಯಾರು ಇಲ್ಲ ಎಲ್ಲರೂ ಚಿಕ್ಕವರೇ ಎಂದು ಕಾಣುವ ಮನೋಭಾವನೆ ಅವರಲ್ಲಿದೆ ಎಂದು ಹೇಳಿದ್ದಾರೆ.
ಮೊಳಗಿದೆ ಬಂಡಾಯದ ಕೂಗು; ಯಾರಿಗೆ ಜಯ? ಯಾರಿಗೆ ಸೋಲು?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/sd3fE9sLw1
— Colors Kannada (@ColorsKannada) November 28, 2024
ರಜತ್ ತನಗೆ ಮಂಜು ಕೊಟ್ಟ ಕಾರಣವನ್ನು ಕೇಳಿ ಮಂಜು ಮೇಲೆಯೇ ರೇಗಾಡಿದ್ದಾರೆ. ಇವನು ಆಗಲೇ ಫಿಕ್ಸ್ ಆಗಿ ಬಿಟ್ಟಿದ್ದಾನೆ. ವಿನ್ನರ್ ಇವನು. ರನ್ನರ್ ಫಿಕ್ಸ್ ಮಾಡಿ ಬಿಟ್ಟಿದ್ದಾನೆ ಇವನು. ಆಚೆ ಬರೋಕೆ ಎಲ್ಲಿಂಟು ಮುಖ. ಅಲ್ಲೇ ಕೂತಿರುತ್ತಾನೆ ಬೆಡ್ ಶೀಟ್ ಹಾಕ್ಕೊಂಡು ಒಳ್ಳೆ ರೋಗಿಷ್ಠನ ತರ. ರೋಗಿಷ್ಠ ರಾಜ ಎಂದು ಆಕ್ರೋಶದ ಮಾತುಗಳನ್ನು ಆಡಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಇದನ್ನು ಕೇಳಿ ಐಶ್ವರ್ಯಾ, ಶಿಶಿರ್ ನಕ್ಕಿದ್ದಾರೆ. ಗುರುವಾರ (ನ.28ರಂದು) ರಾತ್ರಿ ಈ ಸಂಚಿಕೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನನ್ನ ನಾಯಿಗಳಿಗೆ ಕ್ರಾಸಿಂಗ್ ಮಾಡಿಸಬೇಕು.. ಸೋನು ನ್ಯೂ ಇಯರ್ ರೆಸಲ್ಯೂಷನ್ ಏನೇನು ಗೊತ್ತಾ?
BBK11: ನೀವೆಷ್ಟು ಕಳಪೆ ಕೊಟ್ರು ನನ್ನ ಮಗಳು ನಮಗೆ ಉತ್ತಮನೇ- ಚೈತ್ರಾ ತಾಯಿ ಭಾವುಕ ನುಡಿ
BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಬಿರುಗಾಳಿ ಎಂದ ಉಗ್ರಂ ಮಂಜು ತಂದೆ
BBK11: ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಪೋಷಕರು ಎಂಟ್ರಿ; ತಾಯಿ ನೋಡಿ ತ್ರಿವಿಕ್ರಮ್ ಕಣ್ಣೀರು
BBK11: ಮಂಜುಗೆ ದುರಹಂಕಾರ ನಿರ್ವಹಣೆಯ ಕಷಾಯ ಕುಡಿಸಿದ ಭವ್ಯ.! ಇಬ್ಬರ ನಡುವೆ ಟಾಕ್ ವಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.