BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Team Udayavani, Nov 17, 2024, 12:05 PM IST
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ (Bigg Boss Kannada-11) ಕಳೆದ ವಾರ ಯಾವುದೇ ಎಲಿಮಿನೇಷನ್ ಇರಲಿಲ್ಲ. ಈ ವಾರ ಮನೆಯಲ್ಲಿ ಎಲಿಮಿನೇಷನ್ ನಡೆಯುವುದು ಪಕ್ಕಾ ಆಗಿದೆ. ಇದನ್ನು ಸ್ವತಃ ಕಿಚ್ಚ ಸುದೀಪ್ (Kiccha Sudeep) ಅವರೇ ಹೇಳಿದ್ದಾರೆ.
ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ಚೈತ್ರಾ ಕುಂದಾಪುರ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಏರು ಧ್ವನಿಯಲ್ಲೇ ಚೈತ್ರಾ ಅವರ ತಪ್ಪು ಮಾಡಿದ ವಿಚಾರಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಭಾನುವಾರ ರಾತ್ರಿ (ನ.17ರಂದು) ಒಬ್ಬರು ದೊಡ್ಮನೆಯಿಂದ ಆಚೆ ಬರಲಿದ್ದಾರೆ. ಯಮುನಾ, ರಂಜಿತ್, ಜಗದೀಶ್, ಹಂಸಾ, ಮಾನಸ ಇದುವರೆಗೆ ಎಲಿಮಿನೇಟ್ ಆಗಿದ್ದಾರೆ. ಈ ಅನುಷಾ, ಭವ್ಯ, ಮಂಜು, ಧನರಾಜ್, ಧರ್ಮ,ಗೌತಮಿ, ಹನುಮಂತ, ಸುರೇಶ್ ಮೋಕ್ಷಿತಾ ಹಾಗೂ ಶಿಶಿರ್ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಧನರಾಜ್, ಮೋಕ್ಷಿತಾ ಅವರು ಕಳೆದ ಸಂಚಿಕೆಯಲ್ಲಿ ಸೇಫ್ ಆಗಿದ್ದಾರೆ.
ಇನ್ನುಳಿದವರಲ್ಲಿ ಒಬ್ಬರು ದೊಡ್ಮನೆಯಿಂದ ಆಚೆ ಬರಲಿದ್ದಾರೆ. ಮಾಹಿತಿ ಪ್ರಕಾರ ಈ ವಾರ ಅನುಷಾ ರೈ ಅವರಿಗೆ ಅತೀ ಕಡಿಮೆ ಮತಗಳ ಬಂದಿದ್ದು, ಅವರು ಆಚೆ ಬರಲಿದ್ದಾರೆ ಎನ್ನಲಾಗುತ್ತಿದೆ.
ಅನುಷಾ ಅವರು ತಮ್ಮ ನೇರ ನುಡಿಗಳಿಂದ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದರು. ಟಾಸ್ಕ್ ವಿಚಾರದಲ್ಲಿ ಅವರು ಹಲವು ಬಾರಿ ಸಹ ಸ್ಪರ್ಧಿಗಳಿಂದ ಟಾರ್ಗೆಟ್ ಆಗಿದ್ದರು. ಧರ್ಮ ಅವರೊಂದಿಗೆ ಆಪ್ತ ಒಡನಾಟವನ್ನು ಹೊಂದಿದ್ದರು.
ಈ ಬಗ್ಗೆ ಇಂದು ರಾತ್ರಿ (ನ.17ರಂದು) ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
BBK11: ಅತಿರೇಕಕ್ಕೆ ತಿರುಗಿದ ಬಿಗ್ ಬಾಸ್ ಟಾಸ್ಕ್.. ರಜತ್ – ಮಂಜು ನಡುವೆ ಹೈಡ್ರಾಮಾ
Kiccha Sudeep: ಬಿಗ್ ಬಾಸ್‌ಗೆ ಗುಡ್ ಬೈ.. ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕಿಚ್ಚ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.