BBK11: ಯಾರದೋ ಮನೆಯಲ್ಲಿ ಪಾತ್ರೆ ತಿಕ್ಕುತ್ತಿದ್ದೆ.. ದೊಡ್ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ
Team Udayavani, Oct 28, 2024, 3:42 PM IST
ಬೆಂಗಳೂರು: ಬಿಗ್ ಬಾಸ್ ಮನೆಯಿಂದ (Bigg Boss Kannada) ನಾಲ್ಕನೇ ವಾರ ಆಚೆ ಹೋಗುವುದು ಯಾರೆಂದು ಇಂದು ರಾತ್ರಿ (ಅ.28ರಂದು) ಗೊತ್ತಾಗಲಿದೆ. ಮೂಲಗಳ ಹಂಸ ಅವರು ದೊಡ್ಮನೆಯಿಂದ ಆಚೆ ಹೋಗಲಿದ್ದಾರೆ.
ವಾರಗಳು ಸಾಗುತ್ತಿದ್ದಂತೆ ಬಿಗ್ ಬಾಸ್ ಆಟಕ್ಕೆ ಸ್ಪರ್ಧಿಗಳು ಹೊಂದಿಕೊಳ್ಳುತ್ತಿದ್ದಾರೆ. ಕೆಲ ಸ್ಪರ್ಧಿಗಳು ವೈಲೆಂಟ್ ಆಗಿಯೇ ಬಿಗ್ ಬಾಸ್ ಆಟವನ್ನು ಆಡುತ್ತಿದ್ದರೆ, ಇನ್ನು ಕೆಲವರು ನಿಧಾನವಾದರೂ ಈಗೀಗ ದೊಡ್ಮನೆ ಆಟಕ್ಕೆ ತೆರೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್ ಅರ್ಜುನ್ʼ
ಬಿಗ್ ಬಾಸ್ ಆಟ 5ನೇ ವಾರಕ್ಕೆ ಕಾಲಿಟ್ಟಿದೆ. ಬಿಗ್ ಬಾಸ್ ಒಬ್ಬೊಬ್ಬ ಸ್ಪರ್ಧಿಗಳನ್ನು ಕನ್ಫೆಷನ್ ರೂಮ್ ಗೆ ಕರೆದು ಇದುವರೆಗೆ ಯಾರೊಂದಿಗೂ ಹೇಳಿಕೊಳ್ಳದ ಒಂದು ಘಟನೆಯನ್ನು ಹಂಚಿಕೊಳ್ಳಬಹುದೆಂದು ಹೇಳಿದ್ದಾರೆ.
ಒಬ್ಬೊಬ್ಬ ಸ್ಪರ್ಧಿಗಳ ತಮ್ಮ ಜೀವನದಲ್ಲಿನ ಕರಾಳ ಘಟನೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ. “ಒಂದು ವರ್ಷ ನಾನು ಯಾರದೋ ಮನೆಯಲ್ಲಿ ಮುಸುರೆ (ಪಾತ್ರೆ) ತಿಕ್ಕುತ್ತಿದ್ದೆ..” ಎಂದು ಚೈತ್ರಾ ಅವರು ಕಣ್ಣೀರಿಟ್ಟಿದ್ದಾರೆ.
“ಊಟ ಮಾಡಿದ್ದೀಯ ಅಂಥ ಕೇಳುವವರು ಇರಲಿಲ್ಲ, ಮೈಗೆ ಹುಷಾರಿಲ್ಲ ಅಂದ್ರು ಕೇಳುವರು ಇರಲಿಲ್ಲ. ಕೆಲವೊಂದು ಚಟಕ್ಕೆ ಬಿದ್ದಿದೆ..” ಎಂದು ಮಂಜು ಹೇಳಿಕೊಂಡಿದ್ದಾರೆ.
ಕಣ್ಣೀರ ಕಡಲಲ್ಲಿ ಸದಸ್ಯರು; ಪರಸ್ಪರ ನೋವಿನ ಭಾರಕ್ಕೆ ಹೆಗಲಾಗ್ತಾರಾ ಸ್ಪರ್ಧಿಗಳು?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30
#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/HiJRfSU1Ix— Colors Kannada (@ColorsKannada) October 28, 2024
“ನನ್ನ ತಾಯಿ ಅನಾರೋಗ್ಯದಿಂದ ಹಾಸಿಗೆಯಲ್ಲಿದ್ದರು ನಮ್ಮ ಸಂಬಂಧಿಕರು ಅಮ್ಮನ ತಲೆ ತುಂಬುತ್ತಿದ್ದರು. ಆ ವೇಳೆ ನಾನು ತುಂಬಾ ಅಮ್ಮನ ಮೇಲೆ ಕಿರುಚಾಡಿದ್ದೆ. ಅವರನ್ನು ಮಾತನಾಡಿಸಿ ಕೆಲವು ದಿನಗಳ ಆದ್ಮೇಲೆ ಇನ್ನು ಅವರು ನನ್ನ ಜತೆ ಇರಲ್ಲ. ಇದೊಂದು ತಪ್ಪು ಮಾಡಬಾರದಿತ್ತು” ಎಂದು ಐಶ್ವರ್ಯಾ ಕಣ್ಣೀರಿಟ್ಟಿದ್ದಾರೆ.
ಸೋಮವಾರ (ಅ.28ರಂದು) ರಾತ್ರಿ ಈ ಸಂಚಿಕೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಗ್ರೂಪ್ ಕಟ್ಕೊಂಡು ಆಡುವವರಿಗೆ ನಾನು ಸಿಂಗಲ್ ಸಿಂಹವೆಂದು ಎಚ್ಚರಿಕೆ ಕೊಟ್ಟ ಚೈತ್ರಾ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
BBK11: ಬಿಗ್ ಬಾಸ್ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್ ಚುಪ್ ಆದ ಮಂಜು.!
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.