BBK11: ಇಡೀ ಬಿಗ್ ಬಾಸ್ ಮನೆಗೆ ಆತಂಕ ತಂದ ಆ ಒಂದು ಕರೆ… ಮಾಡಿದ್ಯಾರು…?
ಸ್ಪರ್ಧಿಗಳ ಉಡಾಫೆತನದಿಂದ ಬೇಸರ: ದೊಡ್ಮನೆಯಿಂದ ಹೊರಬಂದ ಬಿಗ್ ಬಾಸ್!
Team Udayavani, Oct 14, 2024, 8:34 AM IST
ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11) ಮೂರನೇ ವಾರಕ್ಕೆ ಕಾಲಿಟ್ಟಿದೆ. ದಿನ ಮುಂದೆ ಸಾಗುತ್ತಿದ್ದಂತೆ 11ರ ಬಿಗ್ ಬಾಸ್‌ನಲ್ಲಿ ಹೊಸ ಅಧ್ಯಾಯದಲ್ಲಿ ಹೊಸ ಟ್ವಿಸ್ಟ್ ಗಳು ಶುರುವಾಗುತ್ತಿದೆ.
ಆರಂಭದಲ್ಲಿ ಸ್ವರ್ಗ ಹಾಗೂ ನರಕ ಎಂಬ ಕಾನ್ಸೆಪ್ಟ್ ನಲ್ಲಿ ಬಿಗ್ ಬಾಸ್ ಮನೆ ಎರಡಾಗಿತ್ತು. ಈಗ ಒಂದು ಮನೆಯಲ್ಲೇ ಸ್ಪರ್ಧಿಗಳಿದ್ದು,ಒಂದೇ ಮನೆಯಲ್ಲಿ ಸ್ಪರ್ಧಿಗಳು ಒಗ್ಗಟ್ಟಿನಲ್ಲಿರುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇಲ್ಲೂ ಕೂಡ ಸ್ಪರ್ಧಿಗಳ ನಡುವೆ ಮಾತು ಮಾತಿಗೆ ಜಗಳ ಉಂಟಾಗುತ್ತಿದೆ.
ಕಳೆದ ಬಿಗ್ ಬಾಸ್ ಮನೆಯಿಂದ ಯಾರೂ ಕೂಡ ಎಲಿಮಿನೇಷನ್ ಆಗಿಲ್ಲ. ಆದರೆ ಈ ವಾರ ಎಲಿಮಿನೇಷನ್ ಇರಲಿದೆ. ಬಿಗ್ ಬಾಸ್ ಆರಂಭದಿಂದಲೂ ಸ್ಪರ್ಧಿಗಳ ನಡುವೆ ನಾನಾ ವಿಚಾರಕ್ಕೆ ಕಿತ್ತಾಟ ಶುರುವಾಗಿದೆ.
ದೊಡ್ಮನೆಗೆ ಮನೆಗೆ ಬೆಳ್ಳಂಬೆಳಗ್ಗೆ ಬಿಗ್ ಬಾಸ್ ಕರೆ ಮಾಡಿದ್ದಾರೆ. “ಇದು ಬಿಗ್ ಬಾಸ್ ನಿಮ್ಮೆಲ್ಲರ ವರ್ತನೆಯಿಂದ ನನಗೆ ತುಂಬಾ ನೋವಾಗಿದೆ. ಥ್ಯಾಂಕ್ಯೂ ವೆರಿಮಚ್. ಉಡಾಫೆತನ, ಅಪ್ರಾಮಾಣಿಕತನ ನಡವಳಿಕೆಯಿಂದ ಬೇಸತ್ತು ಈ ಕ್ಷಣದಿಂದ ಬಿಗ್ ಬಾಸ್ ಈ ಮನೆಯಲ್ಲಿ ಇರಲ್ಲ. ನಾನು ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ” ಎಂದು ಬಿಗ್ ಬಾಸ್ ಕಾಲ್ ಮಾಡಿ ಹೇಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಬಿಗ್ ಬಾಸ್ ಕರೆ ರಿಸೀವ್ ಮಾಡಿದ ಕ್ಯಾಪ್ಟನ್ ಶಿಶಿರ್ ಈ ವಿಚಾರ ಕೇಳಿ ಶಾಕ್ ಆಗಿದ್ದು, ಇತರೆ ಸ್ಪರ್ಧಿಗಳು ಏನಾಗಿದೆ ಎನ್ನುವುದರ ಬಗ್ಗೆ ಯೋಚನೆ ಮಾಡತೊಡಗಿದ್ದಾರೆ.
ಬಿಗ್ ಬಾಸೇ ಮನೆಯಿಂದ ಹೊರಬಂದ್ರೆ, ಮುಂದೇನು?
“ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa” pic.twitter.com/6z5wUH0y5m
— Colors Kannada (@ColorsKannada) October 14, 2024
ಇಂದು (ಅ.14) ರಾತ್ರಿ ಈ ಸಂಚಿಕೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mukesh Khanna; ‘ಶಕ್ತಿಮಾನ್’ ಹಕ್ಕು ಮಾರಿದ್ರೆ ಅದು ಡಿಸ್ಕೋ ಡ್ರಾಮಾ ಆಗ್ತಿತ್ತು…
BBK11:ಒಬ್ಬರಲ್ಲ ಇಬ್ಬರು ಟಾಪ್ ಸ್ಪರ್ಧಿಗಳು ಎಲಿಮಿನೇಟ್;ವೀಕ್ಷಕರಿಗೆ ಶಾಕ್ ಕೊಟ್ಟ ಬಿಗ್ ಬಾಸ್
BBK11: ರಜತ್ – ಧನರಾಜ್ ಫೈಟ್.. ರಜತ್‌ರನ್ನು ಪಂಜರದೊಳಗೆ ಹಾಕಿ ಶಿಕ್ಷೆ ನೀಡಿದ ಕಿಚ್ಚ
ಮತ್ತೆ ಬರುತ್ತಿದೆ ಸರಿಗಮಪ; ಮತ್ತೆ ತೀರ್ಪುಗಾರರಾಗಿ ಬಂದ ರಾಜೇಶ್ ಕೃಷ್ಣನ್
BBK11: ರಂಜಿತ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಮೇಲೆ ಹಲ್ಲೆ ಮಾಡಿದ ರಜತ್
MUST WATCH
ಹೊಸ ಸೇರ್ಪಡೆ
Chido Cyclone: ಫ್ರಾನ್ಸ್ ನಲ್ಲಿ ಭೀಕರ ಚಂಡಮಾರುತದ… ಸಾವಿರ ಗಡಿ ದಾಟಿದ ಮೃತರ ಸಂಖ್ಯೆ?
INDvsAUS: ಮಳೆಯಾಟದಲ್ಲಿ ಜಾರಿದ ಭಾರತದ ಬ್ಯಾಟಿಂಗ್; ಆಸೀಸ್ ಬಿಗಿ ಹಿಡಿತ
Loophole: ನಿಮ್ಮ ಪಡಿತರ ಅಪಾಯದಲ್ಲಿ? ಸೇವಿಸುವ ಆಹಾರ ಎಷ್ಟು ಸುರಕ್ಷಿತ?
Big Claim: ನನ್ನ ರಾಜಕೀಯ ಜೀವನ ರೂಪಿಸಿದ್ದು, ಕೆಡವಿದ್ದು ಗಾಂಧಿಗಳು: ಮಣಿಶಂಕರ್ ಅಯ್ಯರ್
WPL Auction: ಮಹಿಳಾ ಐಪಿಎಲ್ ಮಿನಿ ಹರಾಜು: ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.