BBK11: ಬೆನ್ನ ಹಿಂದೆ ನಡೆದ ಮಾತಿನ ಬಂಡವಾಳ ಬಹಿರಂಗ.. ಮೋಕ್ಷಿತಾ – ತ್ರಿವಿಕ್ರಮ್ ಟಾಕ್ ವಾರ್
Team Udayavani, Nov 4, 2024, 9:25 AM IST
ಬೆಂಗಳೂರು: ಬಿಗ್‌ಬಾಸ್ (Bigg Boss Kannada-11) ಮನೆ ಐದು ವಾರಗಳ ಆಟವನ್ನು ಕಂಡಿದೆ. ಈ ಐದು ವಾರಗಳಲ್ಲಿ ಕಣ್ಣಮುಂದೆ ಗಲಾಟೆ, ಬೆನ್ನ ಹಿಂದೆ ಚುಚ್ಚುಗಳ ಮಾತುಗಳ ಸಂಚು ನಡೆದಿದೆ.
ಆರನೇ ವಾರದತ್ತ ದೊಡ್ಮನೆ ಆಟ ಸಾಗುತ್ತಿದ್ದಂತೆ ಮನೆಮಂದಿಯ ಆಟದ ಶೈಲಿಯೂ ಬದಲಾವಣೆಯತ್ತ ಸಾಗುತ್ತಿದೆ. ಕಣ್ಣ ಮುಂದೆ ಸ್ನೇಹಿತರಂತಿದ್ದು, ಬೆನ್ನ ಹಿಂದೆ ಶತ್ರುಗಳಂತೆ ನುಡಿಯುವ ಮಾತಿನ ಬಂಡವಾಳವನ್ನು ಬಿಗ್ ಬಾಸ್ ಬಹಿರಂಗವಾಗಿಸಿದ್ದಾರೆ.
ಬೆನ್ನ ಹಿಂದೆ ಯಾರು ಯಾರ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಅವೆಲ್ಲವೂ ಮನೆಯವರ ಮುಂದೆ ವಿಡಿಯೋ ಸಮೇತ ಪ್ರಸಾರ ಕಂಡಿದೆ.
ಶಿಶಿರ್ ಜತೆ ಕೂತಿರುವ ಐಶ್ವರ್ಯಾ ಭವ್ಯ ಅವರ ಕುರಿತು ಕಾಣಿಸ್ತಾ ಇದೆ ಅವಳಿಗೆ ಹೊಟ್ಟೆ ಕಿಚ್ಚು ಅಂದಿರುವ ಮಾತು ಭವ್ಯ ಅವರ ಮುಂದೆಯೇ ಪ್ಲೇ ಆಗಿದೆ. ಇದನ್ನು ಪ್ರಶ್ನೆ ಮಾಡಿರುವ ಭವ್ಯಳಿಗೆ ಐಶ್ವರ್ಯಾ ಸ್ಪಷ್ಟೀಕರಣ ನೀಡುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಸದಾ ಮಂಜು ಅವರ ಜತೆಗಿರುವ ಗೌತಮಿ, ಮೋಕ್ಷಿತ ಕುರಿತು ತ್ರಿವಿಕ್ರಮ್ ಒಂದು ಹಕ್ಕಿ ಹೊಡೆದರೆ ಎರಡು ಹಕ್ಕಿ ಫ್ರೀ. ಇನ್ನೊಂದು ಹಕ್ಕಿ ಆಟಕ್ಕುಂಟು ಲೆಕ್ಕಕಿಲ್ಲ ಎಂದಿರುವುದನ್ನು ತೋರಿಸಲಾಗಿದೆ.
ಇದನ್ನು ನೋಡಿದ ಮೋಕ್ಷಿತಾ ಅಕ್ಕ- ತಂಗಿಯರ ಜತೆ ಬೆಳೆದವರ ಹಕ್ಕಿ ಅಂಥ ಮಾತನಾಡುತ್ತಾರಾ ಯಾರಾದ್ರೂ ಅವರ ತನ ಏನೆಂದು ಇದು ತೋರಿಸುತ್ತದೆ. ಅತಿ ವಿನಯ ದೂರ್ತ ಲಕ್ಷಣಂ ಅಂಥರಲ್ಲ ಅದೇ ಇದು. ಗೋಮುಖ ವ್ಯಾಘ್ರ ಅಂಥ ಕೊಟ್ಟೆ ಅದಕ್ಕೆ ನಾನು ಖಂಡಿತ ಪಶ್ಚಾತ್ತಾಪ ಪಡಲ್ಲ ಎಂದು ಮೋಕ್ಷಿತಾ ತ್ರಿವಿಕ್ರಮ್ ಮೇಲೆ ಗರಂ ಆಗಿದ್ದಾರೆ.
ಹಿಂದೆ ನಡೆದದ್ದೆಲ್ಲಾ ಮುಂದೆ ನಡೆಯೋದಕ್ಕೆ ಕಾರಣವಾಗುತ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/l8EU72t225
— Colors Kannada (@ColorsKannada) November 4, 2024
ಇಷ್ಟು ಹಾಗೇ ಇರಲಿಲ್ಲ ಇನ್ಮೇಲೆ ಹಾಗೆಯೇ ಇರುತ್ತೀನಿ ಎಂದು ಮೋಕ್ಷಿತಾ ಮಾತಿಗೆ ತ್ರಿವಿಕ್ರಮ್ ತಿರುಗೇಟು ನೀಡಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಸೋಮವಾರ ರಾತ್ರಿ (ನ.4 ರಂದು) ಈ ಸಂಚಿಕೆ ಪ್ರಸಾರ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.