BBK11: ಬಿಗ್ ಬಾಸ್ ಮನೆಗೆ ಬಂದು ಧಿಕ್ಕಾರ ಹಾಕಿದ ಜನಸಾಮಾನ್ಯರು..! ಅಂಥದ್ದೇನಾಯಿತು?
Team Udayavani, Oct 25, 2024, 9:29 AM IST
ಬೆಂಗಳೂರು: ಬಿಗ್ ಬಾಸ್(Bigg Boss Kannada-11) ಕಾರ್ಯಕ್ರಮದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಜನ ಸಾಮಾನ್ಯರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಈ ವಾರ ದೊಡ್ಮನೆಯಲ್ಲಿ ಸ್ಪರ್ಧಿಗಳು ರಾಜಕೀಯ ಪಕ್ಷಗಳಾಗಿ ರೂಪುಗೊಂಡಿದ್ದಾರೆ. ಪ್ರಾಮಾಣಿಕ, ಸಮರ್ಥರ ನ್ಯಾಯವಾದಿ ಪಕ್ಷ ಹಾಗೂ ಧರ್ಮಪರ ಸೇನಾ ಪಕ್ಷ ಎಂದು ಎರಡು ಪಕ್ಷಗಳನ್ನು ರಚನೆ ಮಾಡಲಾಗಿದೆ.
ಒಂದು ಪಕ್ಷದ ಅಧ್ಯಕ್ಷರಾಗಿ ಐಶ್ವರ್ಯಾ ಹಾಗೂ ಇನ್ನೊಂದು ಪಕ್ಷದ ಅಧ್ಯಕ್ಷರಾಗಿ ತಿವಿಕ್ರಮ್ ಅವರು ಆಯ್ಕೆ ಆಗಿದ್ದಾರೆ. ಉಳಿದವರು ಆಯಾ ಪಕ್ಷದ ಮುಖಂಡರಾಗಿ ಕಾಣಿಸಿಕೊಂಡಿದ್ದಾರೆ.
ವಿವಿಧ ಹಂತದಲ್ಲಿ ಪೋಸ್ಟರ್ ಅಂಟಿಸುವ ಟಾಸ್ಕ್ ಗಳನ್ನು ನೀಡಲಾಗಿದೆ. ಆದರೆ ಎರಡು ಪಕ್ಷಗಳ ನಡುವಿನ ಕಿತ್ತಾಟ ತಾರಕಕ್ಕೇರಿದ ಬೆನ್ನಲ್ಲೇ ಎರಡು ಹಂತದಲ್ಲಿ ಟಾಸ್ಕ್ ನಡೆದು ಫಲಿತಾಂಶ ಹೊರಬಿದ್ದಿಲ್ಲ.
ರಾಜಕೀಯ ಅಂದ್ಮೇಲೆ ಸಮಾವೇಶಕ್ಕೆ ಜನ ಸಾಮಾನ್ಯರು ಬರಲೇಬೇಕಲ್ವಾ? ಹಾಗಾಗಿ ಬಿಗ್ ಬಾಸ್ ಮನೆಯ ರಾಜಕೀಯ ಸಮಾವೇಶಕ್ಕೆ ಜನ ಸಾಮಾನ್ಯರ ದಂಡೇ ಹರಿದು ಬಂದಿದೆ.
ಜನ ಸಾಮಾನ್ಯರ ದಂಡು ಬಿಗ್ ಬಾಸ್ ಮನೆಗೆ ಲಗ್ಗೆ ಇಟ್ಟಿದ್ದು ಆಯಾ ರಾಜಕೀಯ ಪಕ್ಷಗಳ ಸ್ಪರ್ಧಿಗಳಿಗೆ ಜೈಕಾರ ಹಾಕಿ ಪ್ರಶ್ನೆಗಳನ್ನು ಕೇಳಿದ್ದಾರೆ.
ತಿವಿಕ್ರಮ್ ಅವರು ಜನ ಸಾಮಾನ್ಯರನ್ನು ನೋಡಿ ತುಂಬಾ ದಿನಗಳ ಬಳಿಕ ನನ್ನ ಅಕ್ಕ, ತಾಯಿ ನೆನಪು ಆಗ್ತಾ ಇದ್ದಾರೆ ಎಂದಿದ್ದಾರೆ.
ಇನ್ನೊಂದೆಡೆ ಹನುಮಂತು ಅವರಿಗೆ ಜನ ಸಾಮಾನ್ಯರೊಬ್ಬರು ಪಂಚೆ ಎಲ್ಲಿಟ್ಟಿದ್ದೀಯಾ ಅಣ್ಣಾ ಎಂದಿದ್ದಾರೆ.
ರಾಜಕೀಯ ಅಂದ್ಮೇಲೆ ಜನರು ಬೇಡ್ವಾ? ಬಂದ್ರು ನೋಡಿ!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30 #BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/3GQyWpJHke
— Colors Kannada (@ColorsKannada) October 25, 2024
ನಿಮ್ಮ ಕಣ್ಣಿನಿಂದ ಇಡೀ ಕರ್ನಾಟಕವೇ ಭಯ ಬೀಳ್ತಿದೆ ಅಂಥ ಮಾನಸ ಅವರಿಗೆ ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.
ಇದಲ್ಲದೆ ಜನರೆಲ್ಲರೂ ಮನೆಯೊಳಗೆ ಧಿಕ್ಕಾರ ಧಿಕ್ಕಾರ ಎಂದು ಕೂಗಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಇಂದು ರಾತ್ರಿ(ಅ.25ರಂದು) ಈ ಸಂಚಿಕೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಗ್ರೂಪ್ ಕಟ್ಕೊಂಡು ಆಡುವವರಿಗೆ ನಾನು ಸಿಂಗಲ್ ಸಿಂಹವೆಂದು ಎಚ್ಚರಿಕೆ ಕೊಟ್ಟ ಚೈತ್ರಾ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
BBK11: ಬಿಗ್ ಬಾಸ್ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್ ಚುಪ್ ಆದ ಮಂಜು.!
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.