BBK11: ಜಗದೀಶ್ ಗೆ ನ್ಯಾಯ ಸಿಗಬೇಕು.. ವಕೀಲ್ ಸಾಬ್ ಪರ ನಿಂತ ಜನ
ಈ ವಾರ ಇವರು ಹೊರಗೆ ಹೋಗಬೇಕೆಂದ ಜನ
Team Udayavani, Oct 19, 2024, 1:19 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11) ಕಾರ್ಯಕ್ರಮದ ಮೂರನೇ ವಾರ ದೊಡ್ಮನೆಯಲ್ಲಿ ಜಗಳವೇ ಸದ್ದು ಮಾಡಿದೆ.
ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ವಾಗ್ವಾದವೊಂದು ವಿಕೋಪಕ್ಕೆ ತಿರುಗಿ ಒಬ್ಬರಲ್ಲ, ಇಬ್ಬರು ಸ್ಪರ್ಧಿಗಳು ಒಂದೇ ದಿನ ಮನೆಯಿಂದ ಆಚೆ ಹೋಗಿದ್ದಾರೆ.
ಹೆಣ್ಮಕ್ಕಳ ಬಗ್ಗೆ ಅವಹೇಳನಕಾರಿ ಹಾಗೂ ನಿಂದನೆಯ ಪದಗಳನ್ನು ಬಳಸಿದ್ದರು ಎನ್ನುವ ಕಾರಣಕ್ಕೆ ಲಾಯರ್ ಜಗದೀಶ್ ಅವರ ಮೇಲೆ ಮನೆಯ ಮಹಿಳಾ ಸ್ಪರ್ಧಿಗಳು ಮುಗಿಬಿದ್ದಿದ್ದು, ತರಾಟೆಗೆ ತೆಗೆದುಕೊಂಡಿದ್ದರು.
ಇದಾದ ನಂತರ ರಂಜಿತ್ ಅವರು ಮಾತಿನ ನಡುವೆ ಜಗದೀಶ್ ಅವರನ್ನು ತಳ್ಳಿದ್ದಾರೆ. ದೈಹಿಕ ಹಲ್ಲೆ ನಡೆಸಿದ ಕಾರಣಕ್ಕೆ ಅವರನ್ನು ಸಹ ಹೊರಗೆ ಕಳುಹಿಸಲಾಗಿದೆ.
ಇಬ್ಬರು ಒಂದೇ ದಿನ ಮನೆಯಿಂದ ಆಚೆ ಹೋಗಿದ್ದಾರೆ. ಇಂದು(ಅ.19ರ ಶನಿವಾರ) ಕಿಚ್ಚನ ಪಂಚಾಯ್ತಿ ನಡೆಯಲಿದೆ. ಇದರಲ್ಲಿ ಇಡೀ ವಾರ ಮನೆಯಲ್ಲಿ ನಡೆದ ರಾದ್ಧಾಂತದ ಚರ್ಚೆ ನಡೆದು, ಕಿಚ್ಚ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಈ ಎಲ್ಲತ ಬೆಳವಣಿಗೆಗಳ ನಡುವೆ ಈ ವಾರ ಮನೆಯಲ್ಲಿ ಮತ್ತೊಂದು ಎಲಿಮಿನೇಟ್ ಇರುತ್ತದೆಯೇ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಪ್ರಶ್ನೆ ಮೂಡಿದೆ.
ವೀಕ್ಷಕರ ಮನದಲ್ಲಿ ಏನಿದೆ?
ಮೂರು ವಾರ ದೊಡ್ಮನೆ ಆಟ ಹಾಗೂ ಅಲ್ಲಿರುವ ಸ್ಪರ್ಧಿಗಳ ನಡವಳಿಕೆಯನ್ನು ಗಮನಿಸಿರುವ ವೀಕ್ಷಕರು ತಮ್ಮ ಬೆಂಬಲ ಯಾರಿಗೆ ಮತ್ತು ತಾವು ಯಾರನ್ನು ಮನೆಯಲ್ಲಿ ನೋಡಲು ಇಷ್ಟಪಡಲ್ಲ ಎನ್ನುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಚರ್ಚಿಸಿದ್ದಾರೆ.
ಈ ವಾರ ಗೋಲ್ಡ್ ಸುರೇಶ್, ಉಗ್ರಂ ಮಂಜು , ಐಶ್ವರ್ಯಾ, ಧನರಾಜ್, ಮಾನಸ, ಮೋಕ್ಷಿತಾ, ಅನುಷಾ ಅವರು ಅಂತಿಮ ನಾಮಿನೇಟ್ ನಲ್ಲಿದ್ದಾರೆ.
ಇದರಲ್ಲಿ ಆ ಒಬ್ಬ ಸ್ಪರ್ಧಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇದ್ದಾರೆ ಅವರು ಆಚೆ ಹೋಗಬೇಕೆಂದು ವೀಕ್ಷಕರು ಹೇಳಿದ್ದಾರೆ.
ಜಗದೀಶ್ ಹೆಣ್ಮಕ್ಕಳಿಗೆ ಗೌರವ ಕೊಡಲಿಲ್ಲ ಎಂದು ಅವರನ್ನು ಹೊರಗೆ ಕಳುಹಿಸಿದ್ದಾರೆ. ಇದನ್ನೇ ಮುಖ್ಯವಾಗಿ ಇಟ್ಟುಕೊಂಡರೆ ಪದೇ ಪದೇ ಜಗದೀಶ್ ಅವರಿಗೆ ಅಪ್ಪನಿಗೆ ಹುಟ್ಟಿದರೆ ಬಾ ಅಂಥ ಹೇಳಿದ ಚೈತ್ರಾ ವಿರುದ್ದವೂ ಕ್ರಮ ಆಗಬೇಕೆಂದು ವೀಕ್ಷಕರು ಹೇಳಿದ್ದಾರೆ.
ಮಾನಸ ಅವರು ಬಿಗ್ ಬಾಸ್ ಯಾವ ಸೀಮೆಯ ಗಂಡು ಎಂದು ಜಗದೀಶ್ ಅವರಿಗೆ ಹೇಳಿದ್ದಾರೆ. ಅವರು ದೊಡ್ಮನೆಯಲ್ಲಿ ಇರಬಾರದು. ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಮನೆಯಲ್ಲಿದ್ದಾರೆ ಎಂದು ಅವರು ವೀಕ್ಷಕರು ಕಮೆಂಟ್ ಮಾಡಿದ್ದಾರೆ.
ಇನ್ನು ಹೆಣ್ಮಕ್ಕಳೇ ಸೀರೆ ಬಗ್ಗೆ ಮಾತನಾಡಿ ಗೌರವವನ್ನು ಕಡಿಮೆ ಮಾಡಿದ್ದಾರೆ ಎಂದು ಹಂಸಾ ಅವರ ಮಾತನ್ನು ವೀಕ್ಷಕರೊಬ್ಬರು ಉಲ್ಲೇಖಿಸಿದ್ದಾರೆ.
ಭವ್ಯಾ ಗೌಡ ಜಗದೀಶ್ ಬಗ್ಗೆ ಮಾತಾಡಿರುವುದು ತಪ್ಪು ಎಂದು ವೀಕ್ಷಕರು ಹೇಳಿದ್ದಾರೆ.
ಜಗದೀಶ್ ನ್ಯಾಯಕ್ಕೆ ಕೇಳಿ ಬಂದ ಕೂಗು:
ಜಗದೀಶ್ ಅವರನ್ನು ಹೆಣ್ಣುಮಕ್ಕಳ ಬಗ್ಗೆ ಗೌರವ ಕೊಡದ ವಿಚಾರಕ್ಕೆ ಮನೆಯಿಂದ ಆಚೆ ಕಳುಹಿಸಲಾಗಿದೆ. ಇದೇ ಮಾತನ್ನು ಇಟ್ಟುಕೊಂಡಿರುವ ವೀಕ್ಷಕರು ಗಂಡಿಗೆ ಗೌರವ ಕೊಡದ ಮಹಿಳಾ ಸ್ಪರ್ಧಿಗಳ ವಿರುದ್ಧವೂ ಕ್ರಮ ಆಗಬೇಕೆಂದು ಆಗ್ರಹಿಸಿದ್ದಾರೆ.
ಜಸ್ಟೀಸ್ ಫಾರ್ ಜಗದೀಶ್ ಎಂದು ಕಮೆಂಟ್ ಮಾಡಿದ್ದಾರೆ. ಜಗದೀಶ್ ಅವರಿಗೆ ನ್ಯಾಯ ಸಿಗಬೇಕು. ಕಿಚ್ಚ ಪಂಚಾಯ್ತಿನಲ್ಲಿ ಈ ಬಗ್ಗೆ ಚರ್ಚೆ ಆಗಬೇಕೆಂದು ಅನೇಕರು ಆಗ್ರಹಿಸಿದ್ದಾರೆ.
ಹೊಸ ಪ್ರೋಮೋ ಔಟ್:
ಬಿಗ್ ಬಾಸ್ ಮನೆಯಿಂದ ಇಬ್ಬರು ಆಚೆ ಹೋಗಿದ್ದಾರೆ ಎನ್ನುವ ವಿಚಾರ ಸುದ್ದಿಯಾದ ಬಳಿಕ ಬಿಗ್ ಬಾಸ್ ಪ್ರತಿನಿತ್ಯದ ಪ್ರೋಮೊಗಳು ಕೂಡ ಅಷ್ಟಾಗಿ ಬಂದಿರಲಿಲ್ಲ. ಇದೀಗ ಕಿಚ್ಚನ ಪಂಚಾತ್ತಿ ಕುರಿತ ಪ್ರೋಮೊ ರಿಲೀಸ್ ಮಾಡಲಾಗಿದೆ.
ಕಿಚ್ಚನ ಪಂಚಾಯ್ತಿಯಲ್ಲಿ ಬಿಗ್ ಬಾಸ್ ನಿರ್ಧಾರದ ಬಗ್ಗೆ ಚರ್ಚೆ!
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9
#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/SWpH5PX0pJ— Colors Kannada (@ColorsKannada) October 19, 2024
ಇಷ್ಟು ವರ್ಷ ಮನೆಯವರು ಮಾಡುವ ತಪ್ಪುಗಳನ್ನು ಚರ್ಚೆ ಮಾಡುತ್ತಿದ್ದ ಈ ವೇದಿಕೆಯಲ್ಲಿ ಈ ಸಲ ಕಂಪ್ಲೇಟ್ ಇರುವುದು ಬಿಗ್ ಬಾಸ್ ಮೇಲೆ. ಬಿಗ್ ಬಾಸ್ ಅವಸರದ ನಿರ್ಧಾರ ತಗೊಂಡ್ರಾ? ಅಥವಾ ತಗೊಂಡಿರುವ ನಿರ್ಧಾರ ತಪ್ಪಾಗಿತ್ತಾ? ಎನ್ನುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಜಗದೀಶ್ ಹಾಗೂ ರಂಜಿತ್ ಅವರನ್ನು ಮತ್ತೆ ಬಿಗ್ ಬಾಸ್ ವೇದಿಕೆಗೆ ಕರೆದು ಮನೆಯೊಳಗೆ ಕಳುಹಿಸುತ್ತಾರಾ? ಅಥವಾ ಈ ಬಗ್ಗೆ ಕಿಚ್ಚ ಸ್ಪಷ್ಟನೆ ಕೊಡುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.