BBK11: ಕೋಪದಿಂದ ಅರ್ಧದಲ್ಲೇ ಬಿಗ್ ಬಾಸ್ ವೇದಿಕೆ ಬಿಟ್ಟು ಹೋದ ಕಿಚ್ಚ; ಸ್ಪರ್ಧಿಗಳು ಶಾಕ್
Team Udayavani, Jan 4, 2025, 6:04 PM IST
ಬೆಂಗಳೂರು: ಬಿಗ್ ಬಾಸ್ ಮನೆಯ ವೀಕೆಂಡ್ ಪಂಚಾಯ್ತಿನಲ್ಲಿ ಕಿಚ್ಚ ಸುದೀಪ್ (Kiccha Sudeep) ಅವರು ಸ್ಪರ್ಧಿಗಳಿಂದ ಗರಂ ಆಗಿದ್ದಾರೆ.
ಪ್ರತಿ ವಾರದಂತೆ ಈ ವಾರ ಬಿಗ್ ಬಾಸ್ ಮನೆ ಇರಲಿಲ್ಲ. ವಾದ – ವಾಗ್ವಾದ ನಡೆಯುತ್ತಿದ್ದ ದೊಡ್ಮನೆಯಲ್ಲಿ ಶಾಂತಿ – ಸಂಭ್ರಮ ಮನೆ ಮಾಡಿತ್ತು. ಮೂರು ತಿಂಗಳ ಬಳಿಕ ಸ್ಪರ್ಧಿಗಳು ತಮ್ಮ – ತಮ್ಮ ಮನೆಯವರನ್ನು ಭೇಟಿಯಾಗಿ ಅವರೊಂದಿಗೆ ಆಪ್ತ ಕ್ಷಣಗಳನ್ನು ಕಳೆದಿದ್ದಾರೆ.
ಕೆಲವರು ಮನೆಮಂದಿ ಬಂದ ಬಳಿಕ ಜೋಶ್‌ನಲ್ಲಿ ಆಡುತ್ತಿದ್ದು, ಇನ್ನು ಕೆಲವರು ಮನೆಯವರ ಕಿವಿ ಮಾತನ್ನೂ ಕೇಳದೆ ಹಳೆಯ ರೀತಿಯಲ್ಲೇ ಆಟವನ್ನು ಮುಂದುವರೆಸಿದ್ದಾರೆ. ಈ ಎಲ್ಲದರ ಬಗ್ಗೆ ಕಿಚ್ಚ ಅವರು ಮಾತನಾಡಿದ್ದಾರೆ.
“ಈ ವಾರ ಸ್ಪರ್ಧಿಗಳು ರಕ್ತ ಸಂಬಂಧಗಳನ್ನು ಭೇಟಿ ಮಾಡಿದ್ರು. ಮನೆಯೂಟ ತಿಂದು ಮೈ ಮರೆತವರು ಯಾರು?, ಮನೆಯವರ ಮಾತು ಕೇಳಿ ಎಚ್ಚರ ಆದವರು ಯಾರು?” ಎಂದು ಕಿಚ್ಚ ಹೇಳಿದ್ದಾರೆ.
ಗ್ರೋಸರಿ ಟಾಸ್ಕ್ ಸಮಯದಲ್ಲಿ ಸ್ಪರ್ಧಿಗಳ ನಡುವೆ ಉಂಟಾದ ಗೊಂದಲ ಹಾಗೂ ವಾಗ್ವಾದದ ಬಗ್ಗೆ ಕಿಚ್ಚ ಮಾತನಾಡಿದ್ದಾರೆ. ಹನುಮಂತು ಅವರೇ ಈ ವಿಚಾರದಲ್ಲಿ ಬೆಸ್ಟ್ ಎನ್ನುವ ಮಾತಿನ ಬಗ್ಗೆ ಭವ್ಯ ಅವರು ನನಗಿಂತ ಬೆಸ್ಟ್ ಅವರು (ಹನುಮಂತು) ಇದ್ದಾರೆ ಸರ್ ಎಂದು ಕಿಚ್ಚನ ಮುಂದೆ ಹೇಳಿದ್ದಾರೆ. ಇದಕ್ಕೆ ಕಿಚ್ಚ ಎಲ್ಲದರಲ್ಲೂ ಸಾಮರ್ಥ್ಯ ಇದ್ದವರು ಈ ಕಪ್ ಗೆಲ್ಲಬೇಕು ಭವ್ಯ. ನೀವು ನಿಮ್ಮನ್ನು ಡಿಕ್ಲೇರ್ ಮಾಡಿಬಿಟ್ರಿ ನೀವು ಫಿಟ್ ಆಗಲ್ಲವೆಂದು ಕಿಚ್ಚ ಖಡಕ್ ಆಗಿಯೇ ಭವ್ಯ ಅವರಿಗೆ ಹೇಳಿದ್ದಾರೆ.
ನಾನು ಏನು ಅಂಥ ಪ್ರೂವ್ ಮಾಡಿ ಬಿಟ್ಟಿದ್ದೀನಿ ಅಪರ್ ಹ್ಯಾಂಡ್ ನೀವು ಆಡಿ ಎಂದು ತ್ರಿವಿಕ್ರಮ್ ಹೇಳಿದ ಮಾತನ್ನು ಮಂಜು ಅವರು ಕಿಚ್ಚನ ಮುಂದೆ ಹೇಳಿದ್ದಾರೆ.
ಇದಕ್ಕೆ ಹನುಮಂತು ಅವರು, ಇಷ್ಟು ವಾರ ನಾವು ನಿಮಗೆ ಊಟ ಹಾಕಿದ್ದೀವಿ. ನೀವು ಗೆದ್ದು ಊಟ ಹಾಕ್ರಿ ಅನ್ನುವ ಮಾತನ್ನು ತ್ರಿವಿಕ್ರಮ್ ಅವರು ಹೇಳಿದ್ರು ಎಂದು ಹನುಮಂತು ಹೇಳಿದ್ದಾರೆ. ಇದಕ್ಕೆ ತ್ರಿವಿಕ್ರಮ್ ಮಧ್ಯ ಬಂದು ಏನಂಥ, ಆ ಸ್ಟೇಟ್ಮೆಂಟ್ ಹೇಳಿಲ್ಲ ನಾನು ನಿಮಗೆ ಎಂದಿದ್ದಾರೆ.
ಸ್ಪರ್ಧಿಗಳ ಕೊಸರಾಟಕ್ಕೆ ಕಿಚ್ಚ ಗರಂ !
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/UiVg2o4ldU
— Colors Kannada (@ColorsKannada) January 4, 2025
ತ್ರಿವಿಕ್ರಮ್ ಮಧ್ಯವಹಿಸಿ ಮಾತನಾಡಿದಾಗ ಸುದೀಪ್ ಗರಂ ಆಗಿದ್ದಾರೆ. ʼಹೆಲೋ ಒಂದು ಕೆಲಸ ಮಾಡಿ, ನೀವು ನೀವು ಮಾತನಾಡಿಕೊಳ್ಳಿ ಎಂದು ಸೀದಾ ಸ್ಟೇಜ್ ನಿಂದ ಆಚೆ ಬಂದಿದ್ದಾರೆ. ಇದಕ್ಕೆ ಸ್ಸಾರಿ ಅಣ್ಣಾ ಎಂದಿದ್ದಾರೆ. ಆದರೆ ಕಿಚ್ಚ ಅವರ ಮಾತನ್ನು ಕೇಳದೆ ಸೀದಾ ಹೋಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನನ್ನ ಮಗಳ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡಿದರೆ 21 ಲಕ್ಷ ಬಹುಮಾನ: ಬಿಗ್ ಬಾಸ್‌ಗೆ ಸವಾಲು
BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್; ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ
Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್ ಬಾಸ್ ಮನೆಯ ಪ್ರಬಲ ಸ್ಪರ್ಧಿ
Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!
ನನ್ನ ನಾಯಿಗಳಿಗೆ ಕ್ರಾಸಿಂಗ್ ಮಾಡಿಸಬೇಕು.. ಸೋನು ನ್ಯೂ ಇಯರ್ ರೆಸಲ್ಯೂಷನ್ ಏನೇನು ಗೊತ್ತಾ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Delhi Polls: ದಿಲ್ಲಿಯ ಮಹಿಳಾ ಮತದಾರರ ಸೆಳೆಯಲು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್
ನನ್ನ ಮಗಳ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡಿದರೆ 21 ಲಕ್ಷ ಬಹುಮಾನ: ಬಿಗ್ ಬಾಸ್‌ಗೆ ಸವಾಲು
Manipal KMC; ಮಧುಮೇಹಿ ಮಕ್ಕಳಿಗಾಗಿ ಶೈಕ್ಷಣಿಕ ಕಾರ್ಯಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.