BBK11: ಸಾಧ್ಯವಾದರೆ ನನ್ನನ್ನು ವಾಪಸ್‌ ಕರೆಸಿಕೊಳ್ಳಿ.. ಬಿಗ್‌ ಬಾಸ್‌ಗೆ ಜಗದೀಶ್‌ ಮನವಿ..

ವಾರದ ಪಂಚಾಯ್ತಿನಲ್ಲಿಂದು ಏನೇನಾಯಿತು..

Team Udayavani, Oct 19, 2024, 10:58 PM IST

01

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada-11) ದೊಡ್ಮನೆಯ ಮೂರನೇ ಆಟದ ವಾರದ ಪಂಚಾಯ್ತಿನಲ್ಲಿ ಕಿಚ್ಚ ಅನೇಕ ವಿಚಾರಗಳ ಮಾತನಾಡಿದ್ದಾರೆ.

ಬಿಗ್‌ ಬಾಸ್‌ ಮನೆಯಿಂದ ಹೊರಗೆ ಹೋಗಿರುವ ಜಗದೀಶ್‌ ಹಾಗೂ ರಂಜಿತ್‌ ಅವರ ವಿಚಾರ, ವೈಯಕ್ತಿಕ ನಿಂದನೆ, ಸ್ಪರ್ಧಿಗಳ ವರ್ತನೆ ಬಗ್ಗೆ ಕಿಚ್ಚ ಸುದೀಪ್‌ (Kiccha Sudeep) ಅವರು ಮಾತನಾಡಿದ್ದಾರೆ.

ಮಾನಸ ಅವರು ಮೈಕ್‌ ಹಾಕಿಸಿಕೊಳ್ಳದೆ ಪಿಸು ದನಿಯಲ್ಲಿ ಮಾತನಾಡಿದ ವಿಚಾರಕ್ಕೆ ಹಾಗೂ ಬೋರ್ಡ್‌ ನಲ್ಲಿ ಮನೆಯ ಸಾಮಾಗ್ರಿಗಳನ್ನು ಸರಿಯಾಗಿ ಬರೆಯದ ಕಾರಣಕ್ಕೆಈ ವಾರ ಲಕ್ಸುರಿ ಬಜೆಟ್‌ ನ್ನು ಕಳೆದುಕೊಂಡಿದೆ. ಇದಕ್ಕೆ ಮಾನಸ ಹಾಗೂ ಮಂಜು ಅವರ ನಡುವೆ ವಾಗ್ವಾದ ನಡೆದಿದೆ.

ಜಗದೀಶ್‌ ಹೋಗಿರುವುದಕ್ಕೆ ಖುಷಿಪಟ್ಟ ಸ್ಪರ್ಧಿಗಳು.. ಹೇಳಿದ್ದೇನು? 

ಈ ವಾರ ನಾನು ನಾಮಿನೇಟ್‌ ಆಗಿಲ್ಲ ಅದಕ್ಕೆ ಖುಷಿ ಆಗಿದ್ದೇನೆ. ನನಗೆ ಕಾಟ ಕೊಡುತ್ತಿದ್ದ ಜಗದೀಶ್‌ ಅವರು ಹೊರಗೆ ಹೋಗಿದ್ದಾರೆ ಅದಕ್ಕೆ ಖುಷಿಯಾಗಿದ್ದೇನೆ. ಅವರು ಗೊತ್ತಿದ್ದು ತಪ್ಪು ಮಾಡುತ್ತಾ, ಹೆಣ್ಮಕ್ಕಳ ಬಗ್ಗೆ ಕಟ್ಟದಾಗಿ ಮಾತನಾಡುತ್ತಿದ್ದರು. ಎಂದು ಹಂಸಾ ಹೇಳಿದ್ದಾರೆ. ಒಬ್ಬ ತಪ್ಪು ಮಾಡಿದವರು ಹೋಗಿದ್ದಾರೆ. ಇನ್ನೊಬ್ಬರು ಕನಸು ಕಟ್ಟಿಕೊಂಡು ಬಂದವರು ಪಾಪ ಮನೆಯಿಂದ ಆಚೆ ಹೋಗಿದ್ದಾರೆ. ಆ ಮನುಷ್ಯ ಕೆಲವರ ಬಗ್ಗೆ ಆಡುತ್ತಿದ್ದ ಮಾತುಗಳು ನನಗೆ ಸಿಟ್ಟು ತರುತ್ತಿತ್ತು ಅವರು ಮನೆಯಿಂದ ಆಚೆ ಹೋದದ್ದಕ್ಕೆ ನನಗೆ ಖುಷಿಯಿದೆ ಎಂದು ಮಂಜು ಹೇಳಿದ್ದಾರೆ ಎಂದು ಮಂಜು ಹೇಳಿದ್ದಾರೆ.

ಜಗದೀಶ್‌ ಹೋಗಿರುವುದಕ್ಕೆ ಯಾರಿಗೆ ಬೇಜಾರ್‌ ಇದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುರೇಶ್‌ ಅವರು, ಅವರು ಪದೇ ಪದೇ ತಪ್ಪು ಮಾಡುತ್ತಿದ್ದರು ಎಂದರು.

ಅವರು ಏನೇ ಮಾಡಿದ್ರು ನಾನೇ ವಾಯ್ಸ್‌ ರೈಸ್‌ ಮಾಡುತ್ತಾ ಇದ್ದರು. ಅವರು ಬೇಕಂತಲೇ ಜಗಳ ಮಾಡುತ್ತಿದ್ದರು ಅಂಥ ಆ ಬಳಿಕ ಗೊತ್ತಾಯಿತು. ನನ್ನನ್ನು ಮಗಳು ಅಂಥ ಕರೆಯುತ್ತಿದ್ದರು. ಹೆಚ್ಚು ಕೇರ್ ಮಾಡುತ್ತಿದ್ದರು. ಆದರೆ ಹುಡುಗಿಯರ ವಿಚಾರದಲ್ಲಿ ಅವರ ವರ್ತನೆ ಸರಿಯಿರಲಿಲ್ಲ ಎಂದು ಐಶ್ವರ್ಯಾ  ಹೇಳಿದ್ದಾರೆ.

ಮಾನಸ ಪದೇ ಪದೇ ಹೆಣ್ಮಕ್ಕಳ ಮಾತನಾಡುತ್ತಿದ್ದರು ಅದು ನನಗೆ ಇಷ್ಟ ಆಗಿಲ್ಲ. ಇದೇ ಕಾರಣಕ್ಕೆ ಅವರ ಬಳಿ ಜಗಳ ಆಡಿದ್ದೆ ಎಂದು ಮಾನಸ ಹೇಳಿದ್ದಾರೆ.

ಎಷ್ಟು ಒಳ್ಳೆಯ ಬುದ್ದಿ ಇತ್ತೋ, ಅಷ್ಟೇ ಕೆಟ್ಟ ಬುದ್ದಿ ಇತ್ತು. ಮನೆಯವರು ಜಗಳ ಆಡಿದರೆ ಅವರಿಗೆ ಖುಷಿ ಆಗುತ್ತಿತ್ತು. ಆದರೆ ಹೆಣ್ಮಕ್ಕಳಿಗೆ ಗೌರವ ಕೊಡುತ್ತಿರಲಿಲ್ಲ. ಹೆಂಗೂ ಬೇಕೋ ಹಾಗೆ ಮಾತನಾಡುತ್ತಿದ್ದರು ಎಂದು ಮೋಕ್ಷಿತಾ ಹೇಳಿದ್ದಾರೆ.

ಮೊದಲ ದಿನದಿಂದಲೇ ಕೂಡ ಅವರಿಗೆ ನನಗೆ ಟಾರ್ಗೆಟ್ ಅಗಿದ್ದೇ ಅನ್ಕೊಂಡಿದ್ದೆ. ಅವರಿಗೆ ಒಂದು ಟ್ರಿಕ್‌ ಇತ್ತು. ಏನಾದರೂ ಆದರೆ ಅವರು ವೈಯಕ್ತಿಕವಾಗಿ ಟಾರ್ಗೆಟ್‌ ಮಾಡುತ್ತಿದ್ದರು. ಅವರ ಮಾತಿನಲ್ಲೇ ಜಗಳದ ಉದ್ದೇಶ ಇರುತ್ತಿತ್ತು. ಯಾರಾದರೂ ಅವರಿಗೆ ಹೊಡಿಬೇಕು ಎನ್ನುವ ಉದ್ದೇಶದಿಂದಲೇ ಅವರು ಆ ರೀತಿ ಮಾಡುತ್ತಿದ್ದರು ಅಂಥ ಅನ್ನಿಸುತ್ತಿತ್ತು ಎಂದು ಚೈತ್ರಾ ಹೇಳಿದ್ದಾರೆ.

ಹಂಸಾಗೆ ಪಾಠ ಮಾಡಿದ ಕಿಚ್ಚ:

ಹಂಸಾ ಅವರ ಬಗ್ಗೆ ಮಾತನಾಡಿದ ಕಿಚ್ಚ, ಜಗದೀಶ್‌ ಅವರು ನಿಮ್ಮನ್ನು ಹಂಸ್‌, ಹಂಸಾ ಎಂದು ಕರೆಯುತ್ತಿದ್ದರು. ಕೆಲಸ ಆಗುವವರೆಗೆ ರೊಮ್ಯಾನ್ಸ್‌ ಅಂಥ ಹೇಳ್ತಾ ಇದ್ದೀರಿ. ಇಲ್ಲಿ ನಾವು ರೊಮ್ಯಾನ್ಸ್‌ ಪ್ರಮೋಟ್‌ ಮಾಡುತ್ತಿಲ್ಲ. ನೀವು ಕೆಲಸ ಆಗುವವರೆಗೆ ಮಾತ್ರ ಹಾಗೆ ಇದ್ರಿ. ಮುಂದಿನ ವಾರ ಬದಲಾದ್ರಿ. ಯಾಕೆಂದರೆ ಅಲ್ಲಿ ಶಿಶಿರ್‌ ಕ್ಯಾಪ್ಟನ್‌ ಇದ್ದರು. ಇಲ್ಲಿ ಎಲ್ಲರೂ ಬಾರೋ, ಹೋಗೋ ಅಂಥನೇ ಕರೆಯುತ್ತಾರೆ.  ನೀವು ಎಲ್ಲರಿಗೆ ಹೋಗೇ, ಬಾರೇ ಅಂಥ ಕರೆಯುತ್ತಿದ್ರೆ ಅದು ಸರಿ ಆದರೆ ಅವರು ಹೋಗೇ ಬಾ ಅಂತ ಕರೆದ್ರೆ ತಪ್ಪಾ? ಎಂದು ಪ್ರಶ್ನಿಸಿದ್ದಾರೆ.

ಮೂರನೇ ವಾರ ಸಮಸ್ಯೆ ಶುರುವಾಗುತ್ತದೆ.  ʼಕ್ರಷ್‌ ಆಫ್‌ ಕರ್ನಾಟಕʼ ಎಂದಾಗ ಅಲ್ಲಿಂದ ಸಮಸ್ಯೆ ಶುರುವಾಗುತ್ತದೆ.  ಹಂಸಾ ಅವರೇ ನೀವು ಮಾಡಿದ್ದು ಸರಿ ಅನ್ನಿಸುತ್ತಾ? ಎಂದು ಪ್ರಶ್ನಿಸಿದ್ದಾರೆ.

ಇಲ್ಲಿ ನಾನು ಜಗದೀಶ್‌ ಅವರ ಬಗ್ಗೆ ಮಾತನಾಡುತ್ತಿಲ್ಲ. ಬಿಗ್‌ ಬಾಸ್‌ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ಒಳಗೆ ಇರುವವರು ಎಲ್ಲರೂ ಸರಿಯಾಗಿ ಇದ್ದಾರೆ ಎಂದರೆ ನಾನು ಖಂಡಿತವಾಗಿಯೂ ಒಪ್ಪಲ್ಲ ಎಂದು ಕಿಚ್ಚ ಹೇಳಿದ್ದಾರೆ.

ಗಂಡು ಮಕ್ಕಳಿಗೆ ಅವಮಾನಾವಾದರೆ ನಿಮಗೆ ಮನರಂಜನೆಯೇ?: 

ಅನುಷಾ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು,  ನಿಮ್ಮ ಕೋಪವನ್ನು ಕಂಟ್ರೋಲ್‌ ಮಾಡಿಕೊಳ್ಳಬೇಕೆಂದು ಹೇಳುತ್ತಿದ್ದರೋ ಇಲ್ವೋ? ನಿಮ್ಮ ಕೋಪವನ್ನು ಕಂಟ್ರೋಲ್‌ ಮಾಡಲು ಅವರು ಯತ್ನಿಸಿದ್ದಾರೆ, ಅವರಿಗೆ ಕೋಪ ಬಂದಾಗ ನೀವು ಮಾಡೋದೇನು? ಎಂದು ಕಿಚ್ಚ ಹೇಳಿದ್ದಾರೆ. ಗಂಡು ಮಕ್ಕಳ ಬಗ್ಗೆ ಮಾತನಾಡುವಾಗ ನೀವು ಚಪ್ಪಾಳೆ ತಟ್ಟುತ್ತೀರಿ, ಹೆಣ್ಮಕ್ಕಳ ಬಗ್ಗೆ ಮಾತನಾಡುವಾಗ ಎದ್ದು ನಿಲ್ತೀರಿ. ಹಾಡು ಹಾಡಿ ಒಬ್ಬ ಮನುಷ್ಯನಿಗೆ ಅವಮಾನ ರೀತಿ ಮಾತನಾಡಿದ್ರೆ ಅದು ನಿಮಗೆ ಮನರಂಜನೆ ಆಗುತ್ತದಾ? ಎಂದು ಅಂದು ಮಂಜು ಮತ್ತು ಇತರರು ಜಗದೀಶ್‌ ಅವರನ್ನು ನೋಡಿ  ಹಾಡುತ್ತಿದ್ದ ಬಗ್ಗೆ ಹೇಳಿದ್ದಾರೆ.

ಈ ಮನೆಯಲ್ಲಿ ಯಾರಿಗೆ ಜಗಳ ಬೇಕಾದರೆ ಆಗಲಿ ಎಲ್ಲರೂ ಬರುತ್ತಾರೆ. ಆದರೆ ಈ ತರ ವಿಚಾರದಲ್ಲಿ ಯಾಕೆ ಯಾರೂ ಬರಲ್ಲ. ಐಶ್ವರ್ಯಾ, ಹಂಸಾ, ಅನುಷಾ ನೀವೆಷ್ಟು ಸರಿ ಇದ್ದೀರಿ? ಕಿಚ್ಚ ಹೇಳಿದ್ದಾರೆ.

ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ಜಗದೀಶ್..‌ 

ಕಿಚ್ಚನ ಮುಂದೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿರುವ ಜಗದೀಶ್ ಹಂಸಾ ಅವರ ಬಳಿ ಕ್ಷಮೆ ಕೇಳಿದ್ದಾರೆ.  ಕೆಲವೊಂದು ಘಟನೆಗಳು ಆಗಬಾರದಿತ್ತು. ನನ್ನಿಂದ ತಪ್ಪಾಗಿದೆ.  ನನ್ನದೊಂದು ಮನವಿ ಇದೆ ಸಾಧ್ಯವಾದರೆ ನನ್ನನ್ನು ವಾಪಸ್‌ ಒಳಗೆ ಕರೆಸಿಕೊಳ್ಳಿ ಎಂದು ಜಗದೀಶ್‌ ವಿಡಿಯೋದಲ್ಲಿ ಜಗದೀಶ್‌ ಹೇಳಿದ್ದಾರೆ.

ಕಿಚ್ಚನಿಂದ ಸ್ಪರ್ಧಿಗಳಿಗೆ ಖಡಕ್‌ ಮಾತು.. 

ಸ್ಪರ್ಧಿಗಳ ಮಾತು ಕೇಳಿದ ಕಿಚ್ಚ ರೂಲ್ಸ್‌ ಬ್ರೇಕ್‌ ಮಾಡಿ ಅವರು ಆಚೆ ಹೋಗಿಲ್ಲ. ನೀವಿದನ್ನು ಗೊಂದಲ ಮಾಡಿಕೊಳ್ಳಬೇಡಿ. ನಡವಳಿಕೆ, ಬಳಸಿರುವ ಮಾತುಗಳಿಂದ ಅವರು ಹೊರಗಡೆ ಹೋಗಿದ್ದಾರೆ ವಿನಃ ರೂಲ್ಸ್‌ ಬ್ರೇಕ್‌ ಮಾಡಿಹೋಗಿಲ್ಲ. ತಪ್ಪು ಮಾಡಿರುವವರು ಹೊರಗಡೆ ಹೋದರು. ನಿಮ್‌ ಗಳಲ್ಲಿಎಷ್ಟು ಜನ ಸರಿಯಿದ್ದೀರಿ. ಒಬ್ಬ ಚಪ್ಪಲಿ ಎತ್ತಿ ಬಿಸಾಡುತ್ತಿದ್ದಾರೆ ಅಂದ್ರೆ ಅದು ಓಕೆನಾ? ಎಂದಾಗ ಹಂಸಾ ಅವರು ಪ್ರಾಮಾಣಿಕವಾಗಿ ಎಂದು ಮಾತು ಆರಂಭಿಸುವಾಗಲೇ ಅವರ ಮಾತನ್ನು ಅರ್ಧಕ್ಕೇ ತಡೆದ ಕಿಚ್ಚ ಪ್ರಾಮಾಣಿಕ ಎನ್ನುವ ಪದವೇ ಈ ಮನೆಗೆ ಸೂಕ್ತವಾಗಲ್ಲ. ಮಾನಸ ಮೇಡಂ ಮಾತುಗಳಿಂದಲೇ ಈ ಮನೆಯಿಂದ ಒಬ್ಬ ವ್ಯಕ್ತಿ ಹೊರಗಡೆ ಹೋದರು ಅಂದರೆ ನೀವು ಮಾತನಾಡಿದ ಕೆಲ ತಪ್ಪು ಮಾತುಗಳಿಂದ ನಿಮ್ಮನ್ನು ಯಾಕೆ ಒಳಗಡೆ ಇಟ್ಟುಕೊಳ್ಳಬೇಕು. ಚೈತ್ರಾ ಅವರೇ ಹೆಣ್ಮಕ್ಕಳ ಬಗ್ಗೆ ಮಾತನಾಬೇಡಿ ಅಂತೀರಿ ಒಬ್ಬ ಅಪ್ಪನಿಗೆ ಹುಟ್ಟಿದರೆ ಅಂದರೆ ಯಾವ ನನ್ಮಗ ಕೂಡ ಅಪ್ಪನಿಗೆ ಬೈಯ್ತಾ ಇಲ್ಲ ಮೇಡಮ್‌ ತಾಯಿಗೆ ಬೈಯುತ್ತಿರುವುದು ಎಂದು ಕಿಚ್ಚ ಗರಂ ಆಗಿದ್ದಾರೆ.

ಟಾಪ್ ನ್ಯೂಸ್

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Why is there a hesitation to name the M. Chinnaswamy stand after Shantha Rangaswamy? What is the controversy?

M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬಂದಿ

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.