BBK11: ರಜತ್ – ಧನರಾಜ್ ಫೈಟ್.. ರಜತ್‌ರನ್ನು ಪಂಜರದೊಳಗೆ ಹಾಕಿ ಶಿಕ್ಷೆ ನೀಡಿದ ಕಿಚ್ಚ
Team Udayavani, Dec 14, 2024, 5:44 PM IST
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ (Bigg Boss Kannada-11) 11ನೇ ವಾರದ ಕಿಚ್ಚನ ಪಂಚಾಯ್ತಿ ನಡೆದಿದೆ. ಈ ವಾರ ದೊಡ್ಮನೆಯಲ್ಲಿ ನಡೆದ ವಿಚಾರದ ಸುದೀಪ್ (Kiccha Sudeep) ಮಾತನಾಡಿದ್ದಾರೆ.
ಈ ವಾರ ದೊಡ್ಮನೆಯಲ್ಲಿ ಮುಖ್ಯವಾಗಿ ಧನರಾಜ್ – ರಜತ್ ನಡುವೆ ಕೈಕೈ ಮಿಲಾಯಿಸುವ ಹಂತದವರೆಗೂ ಪರಿಸ್ಥಿತಿ ಹೋಗಿದೆ. ಹೀಗಾಗಿ ಈ ವಿಚಾರದ ಬಗ್ಗೆ ಕಿಚ್ಚ ಖಡಕ್ ಆಗಿಯೇ ಮಾತನಾಡಿದ್ದಾರೆ.
ಕಾನ್ಫಿಡೆಸ್‌ನಿಂದ ಆಡುತ್ತಿರುವ ಆಟಗಾರರನ್ನು ಬೆನ್ನು ತಟ್ಟಿ ಬೆಳೆಸುತ್ತೇವೆ ನಾವು. ಅದೇ ಕಾನ್ಫಿಡೆಸ್ ಅತಿಯಾಗಿ ದಿಕ್ಕು ತಪ್ಪಿದರೆ ಸ್ವಲ್ಪ ತಲೆ ಮೇಲೆ ತಟ್ಟಿ ಸೈಡಿಗೆ ಕೂರಿಸುತ್ತೇವೆ ನಾವು. ಗುರಿ ಕಳೆದುಕೊಂಡಿರುವವರು ಯಾರು. ಆಟ ಮರೆತು ಇರುವವರು ಯಾರ್ಯಾರು? ಎಂದು ಕಿಚ್ಚ ಹೇಳಿದ್ದಾರೆ.
ನಾಮಿನೇಷನ್ ವಿಚಾರದಲ್ಲಿ ತಮ್ಮ ಹೆಸರನ್ನು ತೆಗೆದುಕೊಂಡ ಧನರಾಜ್ ಅವರನ್ನು ಮಗುವೆಂದ ರಜತ್‌ಗೆ ಕೆನ್ನೆ ಮುಟ್ಟಿ ಅಂಕಲ್ ಅಂಕಲ್ ಎಂದು ಧನರಾಜ್ ಹೇಳಿದ್ದರು. ಇದಕ್ಕೆ ಗರಂ ಆದ ರಜತ್ ಧನರಾಜ್ ಅವರನ್ನು ದೂಡಿದ್ದರು. ಕಳಪೆ ಕಾರಣವನ್ನು ನೀಡುವಾಗಲೂ ರಜತ್ ತಾಳ್ಮೆ ಕಳೆದುಕೊಂಡಿದ್ದರು.
View this post on Instagram
ಈ ವಿಚಾರದ ಬಗ್ಗೆ ಮಾತನಾಡಿದ ಕಿಚ್ಚ “ಧನರಾಜ್ , ರಜತ್ ಹುಲಿ – ಸಿಂಹ ಆಗೋಕೆ ಹೋಗಿದ್ರಾ ಅಥವಾ ಮನುಷ್ಯ ಆಗಿರೋಕೆ ಹೋಗಿದ್ದೀರಾ. ಧನರಾಜ್ ನಿಮಗೆ ರಜತ್ ಅವರ ಕೆನ್ನೆ ಮುಟ್ಟಿ ಪ್ರೂವಕ್ ಮಾಡೋಕೆ ಏನು ಅವಶ್ಯಕತೆ ಇತ್ತಾ? ರಜತ್ ಅವರೇ ನಾಲಗೆ ಮೇಲೆ ನಿಗಾ ಇರಲಿ ಎಂದಿದ್ದಾರೆ. ಇದಕ್ಕೆ ರಜತ್ ಅವರು ಸರ್ ನಾನೇನು ಕೆಟ್ಟ ಮಾತನಾಡಿಲ್ಲ ಎಂದಿದ್ದಾರೆ. ಇದಕ್ಕೆ ಕಿಚ್ಚ ನಿಮ್ಮ ಪ್ರಕಾರ ಕೆಟ್ಟ ಮಾತು ಅಂದ್ರೇನು? ಅದನ್ನು ಹೇಳಿ ನಾವು ಪಟ್ಟಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ನಿಮಗೆ 5 ನಿಮಿಷ ಟೈಮ್ ಕೊಡುತ್ತೇನೆ ಫೈಟ್ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಶಿಕ್ಷೆ ಇದ್ದೇ ಇರುತ್ತದೆ ಎಂದಿದ್ದಾರೆ.
ಪಂಜರದೊಳಗೆ ರಜತ್ ಅವರನ್ನು ಹಾಕಲಾಗಿದೆ, ಅವರು ಎಲ್ಲೇ ಹೋದರು ಧನರಾಜ್ ಅವರೇ ಎಳೆದುಕೊಂಡು ಹೋಗಬೇಕು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಿಡ್ ವೀಕ್ ಎಲಿಮಿನೇಷನ್ ವಿಚಾರಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್; ಏನದು?
BBK11: ಇಂದು ರಾತ್ರಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗೋ ಸ್ಪರ್ಧಿ ಇವರೇ..? ಶಾಕಿಂಗ್!
BBK11: ದೈತ್ಯರನ್ನೇ ಮಣ್ಣು ಮುಕ್ಕಿಸಿ ಮಹತ್ವದ ಟಾಸ್ಕ್ ನಲ್ಲಿ ಮಿಂಚಿದ ಧನರಾಜ್
BBK11: ಫಿನಾಲೆಗೂ ಮುನ್ನ ವಿನ್ನರ್ ಹೆಸರು ಲೀಕ್!- ಇವರೇನಾ ಟ್ರೋಫಿ ಗೆಲ್ಲೋರು?
BBK11: ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಔಟ್; ರಜತ್ ಮೇಲೆ ಭವ್ಯಾ, ಮೋಕ್ಷಿತಾ ಟಾರ್ಗೆಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.