BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Team Udayavani, Nov 23, 2024, 10:53 PM IST

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

ಬೆಂಗಳೂರು: ವಾರದ ಕಥೆಯಲ್ಲಿ ಕಿಚ್ಚ ಸುದೀಪ್‌ ಅವರು ಇಡೀ ವಾರ ನಡೆದ ಹಲವು ವಿಚಾರಗಳ ಮಾತನಾಡಿದ್ದಾರೆ. ಇದರೊಂದಿಗೆ ಕೆಲ ಸ್ಪರ್ಧಿಗಳಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ರಜತ್‌ ಅವರು ಸುರೇಶ್‌ ಅವರಿಗೆ ಹೇಳಿದ ಕೆಲವೊಂದು ಮಾತುಗಳು ಇಡೀ ವಾರದ ಹೈಲೈಟ್‌ ಆಗಿದೆ. ಇದನ್ನೇ ಇಟ್ಟುಕೊಂಡು ಕಿಚ್ಚ ಅವರು ಮಾತು ಆರಂಭಿಸಿದ್ದಾರೆ.

ರಜತ್‌ ಅವರು ಕಳಪೆಯಾಗಿ ಜೈಲು ಸೇರಿದ್ದು, ತಾನು ನನಗೆ ಬೇಕಾದ ಸಮಯವನ್ನು ತೆಗೆದುಕೊಂಡು ಕೆಲಸ ಮಾಡುತ್ತೇನೆ. ಎರಡೂವರೆ ಗಂಟೆ ತೆಗೆದುಕೊಂಡು ನಿಧಾನಕ್ಕೆ ಕೆಲಸ ಮಾಡುತ್ತೇನೆ. ಕ್ಯಾಪ್ಟನ್‌ ಹೇಳಿದ್ರೂ ಅಷ್ಟೇ. ಯಾರು ಹೇಳಿದ್ರೂ ಅಷ್ಟೇ. ಬೇಗ ಮಾಡಿದರೆ ನನಗೆ ಉತ್ತಮ ಕೊಡುತ್ತಾರಾ? ಗೇಮ್‌ ನ್ನು ಟೀಮ್‌ ಆಗಿ ಆಡುತ್ತಿದ್ದೀರಾ? ನಾನು ಆ ಮಾತಿಗೆ ಸ್ಸಾರಿ ಕೇಳಿದ್ದೆ ಸ್ಷಷ್ಟನೆ ಕೂಡ ಕೊಟ್ಟಿದ್ದೆ  ಎಂದು ರಜತ್‌ ಹೇಳಿದ್ದಾರೆ.

ನಾನು ಸುರೇಶ್‌ ಅವರ ಜತೆ ಮಾತನಾಡಿದ ವಿಚಾರಕ್ಕೆ ಕ್ಷಮೆ ಕೇಳಿದ ಬಳಿಕ ಅದೇ ವಿಚಾರಕ್ಕೆ ನೀವೆಲ್ಲ ನನ್ನನ್ನು ನಾಮಿನೇಟ್‌ ಮಾಡಿದ್ದೀರಿ. ಅದು ನನಗೆ ಆಗಿಲ್ಲವೆಂದು ಐಶ್ವರ್ಯಾ ಅವರಿಗೆ ರಜತ್‌ ಹೇಳಿದ್ದಾರೆ.

ಜತೆಯಾಗಿ ಸ್ನಾನ ಮಾಡಿದ ಹನುಮಂತು ಹಾಗೂ ಧನರಾಜ್‌ ಅವರಿಗೆ ಕಿಚ್ಚ ಅವರು ಒಬ್ಬೊಬ್ಬರೇ ಸ್ನಾನಕ್ಕೆ ಹೋಗಬೇಕೆನ್ನುವ ರೂಲ್ಸ್‌ ಇದೆ ಎಂದು ತಮಾಷೆಯಾಗಿಯೇ ಹೇಳಿದ್ದಾರೆ.

ರಜತ್‌ ಮಾತಿಗೆ ಕಿಚ್ಚ ಹೇಳಿದ್ದೇನು? : 

ನಾನು ಆಡಿದ ಕೆಲ ಮಾತುಗಳ ಬಗ್ಗೆ ಪಶ್ಚಾತ್ತಾಪಯಿದೆ. ಇದರಿಂದ ನನಗೆ ಕಳಪೆ ಸಿಕ್ಕಿದೆ. ಮೊದಲ ವಾರವೇ ನನಗೆ ಕಳಪೆ ಸಿಕ್ಕಿದೆ ಎಂದು ರಜತ್‌ ಹೇಳಿದ್ದಾರೆ. ಇದಕ್ಕೆ ಕಿಚ್ಚ ಅವರು ರಜತ್ ನೀವು ಹೇಳಿದ್ದನ್ನು ವಾಪಾಸ್‌ ಹೇಳೋಕೆ ಆಗುತ್ತಾ? ಯಾಕೆ ಈಗ ಅದನ್ನು ಹೇಳೋಕೆ ಆಗಲ್ಲ. ನಿಮ್ಮೆಲ್ಲರಿಗೆ ಒಂದು ತೂಕವಿದೆ. ನೀವು ಆ ಮಾತು ಆಡದೇ ಇದ್ದಿದ್ರೆ ಕಳಪೆ ಸಿಕ್ಕೋಕೆ ನಿಮಗೆ ಎಷ್ಟು ಕಾರಣ ಇರುತ್ತಿತ್ತು. ನಿಮ್ಮಗೆಲ್ಲರಿಗೂ ಫ್ಯಾಮಿಲಿ ಇರುತ್ತದೆ. ನೀವು ಈ ರೀತಿ ಪದ ಬಳಸಿದರೆ ನಿಮ್ಮ ಫ್ಯಾಮಿಲಿಗೂ ಇಷ್ಟ ಆಗಲ್ಲ ಎಂದು ಕಿಚ್ಚ ಹೇಳಿದ್ದಾರೆ.

ನೆಕ್ಸ್ಟ್‌ ಟೈಮ್‌ ತಪ್ಪು ಮಾಡಲ್ಲವೆಂದ ರಜತ್‌ಗೆ ಮುಂದಿನ ಸಲಿ ಹಾಗೇ ಮಾಡಿದರೆ ಹೊರಗೆ ಹೋಗೋದಕ್ಕೆ ಅಲ್ಲೊಂದು ಬಾಗಿಲಿದೆ ಎಂದು ಕಿಚ್ಚ ನಗುತ್ತಲೇ ಎಚ್ಚರಿಕೆ ಕೊಟ್ಟಿದ್ದಾರೆ.

ಸುರೇಶ್‌ ಅವರು ಗಲಾಟೆ ಆದಾಗ ಒಂದೇ ವಿಚಾರವನ್ನು ಪದೇ ಪದೇ ಹೇಳಿದ್ದಕ್ಕೆ ಕಿಚ್ಚ ಕಳ್ಳನ ಕಥೆಯೊಂದನ್ನು ಹೇಳಿ ಸುರೇಶ್‌ ಅವರ ತಪ್ಪನ್ನು ಹೇಳಿದ್ದಾರೆ. ಇನ್ನೊಂದೆಡೆ ಶೋಭಾ ಅವರ ಬಗ್ಗೆ ಟಾಸ್ಕ್‌ ವಿಚಾರದಲ್ಲಿ ಮಧ್ಯ ಹೋಗಿ ಮಾತನಾಡುವುದು ಸರಿಯಲ್ಲವೆಂದಿದ್ದಾರೆ.

ಮಂಜು ಕ್ಯಾಪ್ಟನ್‌ ಆಗಿದ್ದಕ್ಕೆ ನನಗೆ ಖುಷಿಯಿಲ್ಲ. ಎಲ್ಲರಿಗೂ ಕೆಲಸ ಕೊಟ್ಟಿದ್ದಾರೆ ನನಗೆ ಕೊಟ್ಟಿಲ್ಲ. ಬಹುಶಃ ನಾನು ಎಲಿಮಿನೇಟ್‌ ಆಗುತ್ತೇನೆ ಅನ್ನಿಸುತ್ತದೆ ಎಂದು ಮೋಕ್ಷಿತಾ ಹೇಳಿದ್ದಾರೆ.

ಕ್ಯಾಪ್ಟನ್‌ ಆಗಿ ನೀವು ಮಾಡುವುದನ್ನು ಮಾಡಬೇಕಿತ್ತು. ಆದರೆ ಅದನ್ನು ನೀವು ಮಾಡದಿದ್ದಾಗ ಅದನ್ನು ಬಿಗ್‌ ಬಾಸ್‌ ಮೇಲೆ ದೂರುವುದು ಸರಿಯಲ್ಲವೆಂದು ಭವ್ಯ ಅವರಿಗೆ ಸುದೀಪ್‌ ಹೇಳಿದ್ದಾರೆ.

ಸುರೇಶ್‌ ಗೆದ್ರೆ ಟ್ರೋಫಿ ನಿಮಗೆ ಕೊಡ್ತಾರಾ?:

ಹುಡುಗಿಯರ ಕೈ ಹಿಡಿದುಕೊಂಡು ಹೋದಷ್ಟು ಸುಲಭವಲ್ಲ, ಬಿಗ್‌ ಬಾಸ್‌ ಟ್ರೋಫಿ ಗೆಲ್ಲೋದು ಎನ್ನುವ ರಜತ್‌ ಮಾತಿಗೆ ಚರ್ಚೆ ನಡೆದಿದೆ. ಇವರೆಲ್ಲ ಆಡೋಕೆ ಬಂದಿರುವುದು ವೈಯಕ್ತಿಕವಾಗಿ ಆಡೋಕೆ. ಇದು ನನ್ನದು ಸುರೇಶ್‌ ಅವರ ನಡುವೆ ನಡೆದ ಮಾತು. ಅದಕ್ಕೆ ನಾನು ಕ್ಷಮೆ ಕೂಡ ಕೇಳಬೇಕೆಂದಿದ್ದೆ.ಇದು ಅವರಿಗೆ ಸಂಬಂಧಪಟ್ಟ ವಿಚಾರವೇ ಅಲ್ಲ ಆದ್ರೂ ಅವರು ನನಗೆ ಕಳಪೆ ಕೊಟ್ಟಿದ್ದಾರೆ ಎಂದು ಐಶ್ವರ್ಯಾ ಅವರಿಗೆ ರಜತ್‌ ಹೇಳಿದ್ದಾರೆ. ಇಲ್ಲಿ ಎಲ್ಲರೂ ವೈಯಕ್ತಿಕವಾಗಿ ಆಡೋಕೆ ಬಂದಿರುವುದು ಸುರೇಶ್‌ ಅವರು ಟ್ರೋಫಿ ಗೆದ್ರೆ ನಿಮಗೆ ತಂದು ಕೊಡ್ತಾರಾ ಎಂದು ಪ್ರಶ್ನಿಸಿದ್ದಾರೆ.

ಇಬ್ಬರ ನಡುವೆ ಜಗಳ ನಡೆದಾಗ ಮೂರನೇ ಅವರು ಬಂದು ನಾಮಿನೇಟ್‌ ಮಾಡೋಕೆ ಅದನ್ನು ಬಳಸುತ್ತೀರಾ ಅಲ್ವಾ ಹೀಗೆ ಮಾಡಿದಾಗ ಹೊರಗಡೆ ಜೋಕರ್‌ ತರಾ ಕಾಣಿಸುತ್ತೀರಿ ಎಂದು ಕಿಚ್ಚ ಹೇಳಿದ್ದಾರೆ. ಹೊರಗಡೆ ಕೂತು ನಿಮಗೆ ವೋಟ್‌ ಮಾಡುವವರು ಬಹಳ ಬುದ್ಧಿವಂತರು ಪಿನ್‌ ಟು ಪಿನ್‌ ನಿಮ್ಮನ್ನು ನೋಡುತ್ತಿರುತ್ತಾರೆ.  ನಾಮಿನೇಷನ್‌ಗೆ ನೀವೆಲ್ಲ ಕೊಡುವ ಕೆಲ ಕಾರಣಗಳು ಸಿಲ್ಲಿ ಸಿಲ್ಲಿ ಆಗಿರುತ್ತದೆ. ಎಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡದೆ ಎಡವುತ್ತಿದ್ದೀರಿ ಎಂದು ಸುದೀಪ್‌ ಹೇಳಿದ್ದಾರೆ.

ನಾನು ಸುರೇಶ್‌ ಅವರ ಅಪ್ಪ – ಅಮ್ಮನ ಬಗ್ಗೆ ಮಾತನಾಡಿಲ್ಲ . ಅವರ ಬಗ್ಗೆ ಮಾತ್ರ ಮಾತನಾಡಿದ್ದು ಎಂದಿದ್ದಾರೆ. ಕಳಪೆ ನೀವೆಲ್ಲ ರಜತ್‌ ಗೆ ಕೊಟ್ಟಿದ್ದೀರಾ? ರಜತ್‌ ಸೇರಿ ನಿಮ್ಮಗೆಲ್ಲ ಕೊಟ್ರಾವೆಂದು ಕಿಚ್ಚ ಪ್ರಶ್ನಿಸಿದ್ದಾರೆ.

ಈ ವಾರ ನಿಮ್ಮ ಪ್ರಸೆಂಟ್‌ ಕಾಣಿಸಿಲ್ಲ ಶಿಶಿರ್. ಸಂಬಂಧಗಳು ಬೇಕು ಶಿಶರ್‌ ಆದರೆ ಅದರಲ್ಲೇ ಮುಳುಗಿರಬಾರದು ಎಂದು ಶಿಶರ್‌ – ಐಶ್ವರ್ಯಾ ಅವರಿಗೆ ಸುದೀಪ್‌ ಹೇಳಿದ್ದಾರೆ.

ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್..:‌ ಬುದ್ದಿವಂತಿಕೆಯಿಂದ ಬಿಬಿ ಪಾಯಿಂಟ್ಸ್‌ ಕದ್ದ ಚೈತ್ರಾ ಅವರು ತಮ್ಮ ಆಟವನ್ನು ತೋರಿಸಿದ್ದಾರೆ. ವೆಲ್‌ ಡನ್‌ ಚೈತ್ರಾ ಎಂದು ಪ್ರಶಂಸಿದ್ದಾರೆ.

ವೈಲ್ಡ್‌ ಕಾರ್ಡ್‌ ಆಗಿ ಬಂದ ಸ್ಪರ್ಧಿಗಳಿಗೆ ಉಳಿದ ಸ್ಪರ್ಧಿಗಳು ಟಾಪ್‌ -5, ವಿನ್ನರ್‌, ಗೆಸ್ಟ್‌, ನೆಕ್ಟ್ಸ್‌, ಬೋರ್ಡ್‌, ಕೊಟ್ಟು ಅವರು ಇಂತಿಷ್ಟು ದಿನ ಇರಬಹುದು ಎಂದು ಅಭಿಪ್ರಾಯವನ್ನು ನೀಡಿದ್ದಾರೆ.

ಕಿಚ್ಚನ ಚಪ್ಪಾಳೆ: ಈ ವಾರ ಕ್ಯಾಪ್ಟನ್‌ ಮಂಜು ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ನೀವು ಟಾಸ್ಕ್‌ ಅಲ್ಲಿ ಆಡಿದ ರೀತಿಗೆ ಕಿಚ್ಚನ ಚಪ್ಪಾಳೆ ನಿಮಗೆವೆಂದು ಕಿಚ್ಚ ಅವರು ಹೇಳಿದ್ದಾರೆ.

ನಾಮಿನೇಷನ್‌ನಿಂದ ಪಾರಾದವರು ಯಾರು?: ಮೋಕ್ಷಿತಾ ಅವರು ಮೊದಲ ಸ್ಪರ್ಧಿಯಾಗಿ ಎಲಿಮಿನೇಷನ್‌ನಿಂದ ಸೇಫ್‌ ಆಗಿದ್ದಾರೆ. ಆ ಬಳಿಕ ಹನುಮಂತು ಅವರು ಸೇಫ್‌ ಆಗಿದ್ದಾರೆ.

ಟಾಪ್ ನ್ಯೂಸ್

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.