BBK11: ಆತ ಹೀರೋ, ಸಿಂಹವಲ್ಲ ಅವನು ಇಲಿ.. ಜಗದೀಶ್‌ ಬಗ್ಗೆ ರಂಜಿತ್‌ ಮಾತು

ಜಗದೀಶ್‌ ಮಾತು, ನಡವಳಿಕೆ, ಜಗಳದ ಬಗ್ಗೆ ರಂಜಿತ್‌ ಹೇಳಿದ್ದೇನು?

Team Udayavani, Oct 20, 2024, 3:20 PM IST

8

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ -11(Bigg Boss Kannada-11) ದಲ್ಲಿ ವಾರದ ಮಧ್ಯೆಯೇ ಇಬ್ಬರು ಸ್ಪರ್ಧಿಗಳು ಮನೆಯ ನಿಯಮವನ್ನು ಉಲ್ಲಂಘಿಸಿ ಹೊರಗೆ ಹೋಗಿದ್ದಾರೆ.

ಜಗದೀಶ್‌ – ರಂಜಿತ್‌ ಅವರ ನಡವಳಿಕೆಯಿಂದ ಬೇಸತ್ತ ಬಿಗ್‌ಬಾಸ್‌ ಅವರಿಬ್ಬರನ್ನು ಮನೆಯಿಂದ ಆಚೆ ಕಳುಹಿಸಿ ತಕ್ಕ ಶಿಕ್ಷೆ ನೀಡಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ದೈಹಿಕ ಹಲ್ಲೆ ನಡೆಸಿ ಮನೆಯಿಂದ ಆಚೆ ಬಂದಿರುವ ರಂಜಿತ್‌ ʼಟಿವಿ9 ಕನ್ನಡʼ ಜತೆ ಮಾತನಾಡಿದ್ದು ಜಗದೀಶ್‌ ಅವರ ವರ್ತನೆ ಬಗ್ಗೆ ಅನೇಕ ಸಂಗತಿಗಳನ್ನು ಬಿಚ್ಟಿಟ್ಟಿದ್ದಾರೆ.

“ಹೆಣ್ಮಕ್ಕಳ ಸ್ನಾನ ಮಾಡುವ ಬ್ರಷ್‌ ನ್ನು ತಕ್ಕೊಂಡು ಟಾಯ್ಲೆಟ್‌ ಯೂಸ್‌ ಮಾಡುವುದು. ಹಲ್ಲು ಉಜ್ಜುವ ಬ್ರಷ್‌ ತಕ್ಕೊಂಡು ಹೋಗಿ ಯೂಸ್‌ ಮಾಡುವುದನ್ನು ನಾವು ನೋಡಿದ್ದೇವೆ. ಅವರ ವರ್ತನೆಯಿಂದ ಹೆಣ್ಮಕ್ಕಳು ಎಷ್ಟು ಅಸಹ್ಯಪಡುತ್ತಿದ್ದರು ಎನ್ನುವುದನ್ನು ನಾವು ನೋಡಿದ್ದೇವೆ. ಮಾತನಾಡುವಾಗ ಸೊಂಟದ ಕೆಳಗಿನ ಭಾಷೆಯನ್ನೇ ಅವರು ಮಾತನಾಡುತ್ತಿದ್ದನ್ನು ನಾವು ನೋಡಿದ್ದೇವೆ. ಈ ಶೋಗೊಂದು ಗೌರವವಿದೆ. ಈ ಹೊಸ ಅಧ್ಯಾಯದಲ್ಲಿ ಇಂತಹ ವ್ಯಕ್ತಿ ಬಂದು ಇಡೀ ಶೋನ ಹಾಳು ಮಾಡಿದ್ದಾರೆ. ಇದನ್ನು ನೋಡಿ ನಾವು ಎಷ್ಟು ಆಗುತ್ತದೋ ಅಷ್ಟು ಕಂಟ್ರೋಲ್‌ ಮಾಡಿದ್ದೇವೆ. ಇದು ಎಲ್ಲ ಮೀರಿದ ಮೇಲೆಯೇ ಈ ರೀತಿ ಆಗಿರುವುದು” ಎಂದು ಹೇಳಿದ್ದಾರೆ.

ಜಗದೀಶ್‌ ಹೀರೋ ಅಲ್ಲ..

“ಜನಗಳು ಅವರಿಗೆ ರೆಸ್ಪಾನ್ಸ್‌ ಮಾಡುತ್ತಿದ್ದಾರೆ. ಜಗದೀಶ್‌ ಬೇಕು, ಅವರು ಹೀರೋ ಅಂಥ ಹೇಳುತ್ತಿದ್ದಾರೆ. ಅವರು ಹೀರೋ ಅಲ್ಲ ಒಳಗಡೆ ಇದ್ದಿದ್ರೆ ಪ್ರತಿಯೊಬ್ಬರು ವಿಲನ್‌ ಆಗ್ತಾ ಇದ್ರು. ಇದೇ ಪಬ್ಲಿಕ್‌ಗೆ ಅಷ್ಟು ಜನಕ್ಕೂ ಆ ವ್ಯಕ್ತಿ ವಿಲನ್‌ ಆಗ್ತಾ ಇದ್ದ. ಯಾಕೆಂದರೆ ನಾವು ಅದನ್ನು ನೋಡಿದ್ದೇವೆ. ಅನುಭವಿಸಿದ್ದೇವೆ. ಯಾರಿಗೂ ನಿದ್ದೆ ಮಾಡೋಕ್ಕೂ ಬಿಡ್ತಾ ಇರಲಿಲ್ಲ. ನನಗೆ ಸಿಗದೆ ಇರುವುದು ನಿಮಗ್ಯಾರಿಗೂ ಸಿಗಬಾರದಂಥ ಓಪನ್‌ ಆಗಿ ಹೇಳುತ್ತಿದ್ದರು. ಇಂತಹ ಮಾತುಗಳನೆಲ್ಲ ಕೇಳಿ ಸುಮ್ಮನೆ ಇರೋಕೆ ಆಗುತ್ತಾ. ಆ ವ್ಯಕ್ತಿಯ ಮೈಂಡ್‌ ಸೆಟ್‌ ನಮಗ್ಯಾರಿಗೂ ಅರ್ಥ ಆಗ್ತಾ ಇರಲಿಲ್ಲ. ಈ ವ್ಯಕ್ತಿ ಮನೆಯಲ್ಲಿ ಏನೆಲ್ಲ ಮಾಡಿದ್ದಾರೆ ಅದನ್ನು ಟೆಲಿಕಾಸ್ಟ್‌ ಮಾಡಿ ಅಂಥ ತುಂಬಾ ಸಲಿ ಹೇಳಿದ್ದಿವಿ. ತೋರಿಸೋಕೆ ಆಗದೆ ಇರುವಂಥದ್ದು ಮಾತನಾಡಿದ್ದಾರೆ.  ಜನಗಳು ನೀವು ಬರೀ ಒಂದೂವರೆ ಗಂಟೆ ಅಷ್ಟೇ ನೋಡುತ್ತೀರಿ. ನಾವು ಅವರನ್ನು ಮೂರು ವಾರ ನೋಡಿದ್ದೇವೆ. ಮೂರು ವಾರ ವ್ಯಕ್ತಿ ಯಾವ ರೀತಿ ಇದ್ದ ಎನ್ನುವುದೆಲ್ಲವೂ ತೋರಿಸೋಕೆ ಆಗದೇ ಇರುವಂಥದ್ದು”ಎಂದು ಹೇಳಿದ್ದಾರೆ.

ನನ್ನ ವಿರುದ್ದ ಕುರುಡು ಕಾಂಚಾನ ಕೆಲಸ ಮಾಡುತ್ತಿದೆ..

ಮುಂದುವರೆದು ಮಾತನಾಡಿದ ಅವರು, “ನನ್ನ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ನೆಗೆಟಿವ್‌ ಕಾಮೆಂಟ್‌ ಹರಿದಾಡುತ್ತಿದೆ. ನನ್ನ ಪ್ರಕಾರ ಇದೆಲ್ಲ ಕುರುಡು ಕಾಂಚಾನ. ಕೆಲವರಿಗೆ ದುಡ್ಡು ಕೊಟ್ಟು ಮಾಡಿಸಿರಬಹುದು. ಇದು ತೋಳ, ಸಿಂಹಗಳ ಮಾತಲ್ಲ. ಇದು ಸ್ಪರ್ಧಿಗಳ ವ್ಯಕ್ತಿತ್ವ ಹಾಗೂ ಮಾನ ಮಾರ್ಯದೆಯ ಪ್ರಶ್ನೆ. ಹೆಣ್ಮಕ್ಕಳ ಬಗ್ಗೆ ವಿಚಾರ ಬಂದಾಗ ನಾನು ನಿಂತಿದ್ದೇನೆ. ಶೋ ಬಗ್ಗೆ ಮಾತು ಬಂದಾಗ ನಾನು ನಿಂತಿದ್ದೇನೆ. ಅದನ್ನು ನೀವ್ಯಾರು ನೋಡಿಲ್ಲ. ನೀವು ಹೇಳುವ ಹಾಗೆ ಆ ವ್ಯಕ್ತಿ ಸಿಂಹ ಅಲ್ಲ, ಆತ ಇಲಿ. ನೂರು ದಿನ ಇಲಿಯಾಗಿ ಬದುಕುವುದಕ್ಕಿಂತ, ಒಂದು ದಿನ ಸಿಂಹ ಘರ್ಜಿಸುವುದೇ ಮುಖ್ಯ. ಅದು ಗಂಡಸ್ತನ. ಈ ವಿಚಾರದಲ್ಲಿ ಪ್ರತಿಯೊಬ್ಬ ಗಂಡಸರು ನಿಂತಿದ್ದಾರೆ. ಯಾವಾಗ ಅಗತ್ಯವಿತ್ತೋ ಆವಾಗ ರಂಜಿತ್‌ ನಿಂತಿದ್ದಾರೆ.  ” ಎಂದು ಹೇಳಿದ್ದಾರೆ.

ಕಣ್ಮುಂದೆ ನಿಂತು ಆ ಪದಗಳನ್ನು ಬಳಕೆ ಮಾಡಲಿ..

ಜಗದೀಶ್‌ ಅವರ ಆಚೆ ಆ ನೋಡ್ಕೊಳ್ತೇನೆ ಎನ್ನುವ ಮಾತಿಗೆ ಉತ್ತರಿಸಿರುವ ರಂಜಿತ್‌, “ಹೋಗಲೋ, ಬಾರಲೋ ಅಂಥ ಮೊದಲು ಯಾರಿಂದ ಶುರುವಾದದ್ದು ಅಂಥ ಗೊತ್ತಿದೆ. ಜಗದೀಶ್‌ ಬಿಟ್ಟರೆ ಮೊದಲು ಆ ರೀತಿ ಯಾರು ಸಹ ಮಾತನಾಡಿಲ್ಲ. ಆಚೆ ಬಾ ಅಂಥ ಹೇಳಿದ್ರು, ಈಗ ಬರಲಿ ಅವರು. ಒಬ್ಬ ಮನುಷ್ಯನ ವೃತ್ತಿ ಜೀವನದ ಬಗ್ಗೆ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು. ಅವರಿಗೂ ಒಂದು ಫ್ಯಾಮಿಲಿ ಇದೆ. ನಮಗೂ ಒಂದು ಫ್ಯಾಮಿಲಿ ಇದೆ. ಆಚೆ ಬಂದು ಒಳಗೆ ಹೇಳಿದ ಪದಗಳು ಬಳಕೆ ಆಗಲಿ, ಬರುವ ರಿಯಾಕ್ಷನ್‌ ಬೇರೆಯದೇ ಆಗಿರುತ್ತದೆ. ಹೊರಗಡೆ ಬಂದ್ಮೇಲೆ ಎಲ್ಲರೂ ಸಿಂಹಗಳೇ, ಇಲ್ಲಿ ಯಾರು ಬೈಯಿಸಿಕೊಳ್ಳೋಕೆ ಸಿದ್ದರಿಲ್ಲ. ನಮ್ಮ ಕಣ್ಮುಂದೆ ನಿಂತು ಆ ಪದಗಳನ್ನು ಬಳಕೆ ಮಾಡಲಿ ” ಎಂದಿದ್ದಾರೆ.

ಜಗದೀಶ್‌ ಸ್ಸಾರಿಗೆ ರಂಜಿತ್‌ ಹೇಳಿದ್ದೇನು? :

ಸಹ ಸ್ಪರ್ಧಿಗಳಿಗೆ ಸ್ಸಾರಿ ಕೇಳಿರುವ ಜಗದೀಶ್‌ ಬಗ್ಗೆ ಮಾತನಾಡಿದ ರಂಜಿತ್‌ “ಸ್ಸಾರಿಯನ್ನು ಒಪ್ತೀನಿ. ಆದರೆ ಒಬ್ಬರ ವೃತ್ತಿ ಬದುಕನ್ನು,ಒಬ್ಬರ ಲೈಫ್‌ ನ್ನು, ಒಬ್ಬರ ಜರ್ನಿಯನ್ನು ಹಾಳು ಮಾಡಿ ನೀವು ಸ್ಸಾರಿ ಕೇಳುವಂಥದ್ದು ಅದು ಜನಗಳು ತೀರ್ಮಾನ ಮಾಡಬೇಕು. ಒಬ್ಬರ ಲೈಫ್‌, ಕನಸನ್ನು ಹಾಳು ಮಾಡಿ ನೀವು ಸ್ಸಾರಿ ಕೇಳೋದು ಇದು ಎಷ್ಟರ ಮಟ್ಟಿಗೆ ಸರಿಯಾಗಿ ಕಾಣುತ್ತದೆ ಎನ್ನುವುದನ್ನು ನೀವೇ ಯೋಚನೆ ಮಾಡಬೇಕು” ಎಂದಿದ್ದಾರೆ.

ತಪ್ಪು ಮಾಡಿಲ್ಲ ಅಂದ್ರೆ ಸ್ಸಾರಿ ಯಾಕೆ ಕೇಳಬೇಕು..

ಜನಗಳಿಗೆ ತಪ್ಪಾಗಿ ಕಾಣಿಸೋದೆಲ್ಲ ಬಾಹುಬಲಿ. ಅವರೇ(ಜಗದೀಶ್) ಹೀರೋ ಆಗಿ ಕಾಣುತ್ತಿದ್ದಾರೆ.‌ ನನ್ನನ್ನು ಒಳಗಡೆ ಕಳುಹಿಸಿ ಬಾಹುಬಲಿ ಯಾರು ಅಂಥ ತೋರಿಸ್ತೀನಿ. ಮತ್ತೆ ಒಳಗಡೆ ಕಳುಹಿಸಿ ನಾನು ತಪ್ಪು ಹೇಗೆ ಮಾಡುವುದ ಅಂಥ ತೋರಿಸುತ್ತೇನೆ. ನಾನು ತಪ್ಪು ಮಾಡಿಲ್ಲ. ಹಾಗಾಗಿ ನಾನು ಸ್ಸಾರಿ ಕೇಳಿಲ್ಲ. ಅವರು ತಪ್ಪು ಮಾಡಿ ಹೊರಗಡೆ ಬಂದಿದ್ದಾರೆ ಅದಕ್ಕೆ ಎಲ್ಲರ ಹತ್ತಿರ ಸ್ಸಾರಿ ಕೇಳ್ತಾ ಇದ್ದಾರೆ. ಜಗದೀಶ್‌ ಅವರು ಸ್ಸಾರಿ ಕೇಳ್ತಾ ಇದ್ದಾರೆ ಅಂಥ ಅವರಿಗೆ ಬೆಂಬಲಿಸುತ್ತಿರುವ ಜನಗಳೇ ಹೇಳಬೇಕು ಎಂದು ರಂಜಿತ್‌ ಹೇಳಿದ್ದಾರೆ.

ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟರೆ ಖಂಡಿತವಾಗಿ ಹೋಗುತ್ತೇನೆ. ಅದೊಂದು ದೊಡ್ಡ ವೇದಿಕೆ. ಈ ಸಲಿ ಹೋದರೆ ನಾನು ಖಂಡಿತವಾಗಿ ಇತಿಹಾಸನ್ನೇ ಬರೆಯಬಹದೇನೋ ಎಂದು ರಂಜಿತ್‌ ಹೇಳಿದ್ದಾರೆ.

ಜಗದೀಶ್‌ ತನ್ನ ಕೋಪವೊಂದನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಅವರೊಬ್ಬ ಅದ್ಭುತ ವ್ಯಕ್ತಿಯೆಂದು ಇದೇ ಸಂದರ್ಭದಲ್ಲಿ ರಂಜಿತ್‌ ಹೇಳಿದ್ದಾರೆ.

ಟಾಪ್ ನ್ಯೂಸ್

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-biggboss

BBK11: ಗ್ರೂಪ್ ಕಟ್ಕೊಂಡು ಆಡುವವರಿಗೆ ನಾನು ಸಿಂಗಲ್ ಸಿಂಹವೆಂದು ಎಚ್ಚರಿಕೆ ಕೊಟ್ಟ ಚೈತ್ರಾ

BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್

BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್

1-wqewqe

BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

BBK11: ಬಿಗ್‌ ಬಾಸ್‌ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್‌ ಚುಪ್‌ ಆದ ಮಂಜು.!

BBK11: ಬಿಗ್‌ ಬಾಸ್‌ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್‌ ಚುಪ್‌ ಆದ ಮಂಜು.!

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.