BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
ಇವರೇ ನೋಡಿ ಅವರು..
Team Udayavani, Nov 17, 2024, 12:59 PM IST
ಬೆಂಗಳೂರು: ಬಿಗ್ ಬಾಸ್ (Bigg Boss Kannada -11) ಆಟ ರೋಚಕ ಘಟ್ಟದತ್ತ ಸಾಗುತ್ತಿದೆ. 49 ದಿನಗಳ ಆಟ ಮುಕ್ತಾಯ ಕಂಡಿದ್ದು, ದೊಡ್ಮನೆಗೆ ಹೊಸ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಹನುಮಂತು ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಆಗಿದ್ದಾರೆ. ಹನುಮಂತು ಅವರು ದೊಡ್ಮನೆಗೆ ಬಂದ ಬಳಿಕ ಆಟದ ರೋಚಕವಾಗಿ ಸಾಗುತ್ತಿದೆ. ಕೆಲವೇ ದಿನಗಳಲ್ಲಿ ಹನುಮಂತು ಅವರು ತಮ್ಮ ಅಸಲಿ ಗೇಮ್ ಶುರು ಮಾಡಿದ್ದಾರೆ.
ಇದೀಗ ದೊಡ್ಮನೆಗೆ ಮತ್ತಿಬ್ಬರು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಮಾಡಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
ಇಬ್ಬರು ಜನಪ್ರಿಯ ಕಲಾವಿದರು ಬಿಗ್ ಬಾಸ್ ಮನೆಗೆ ಎಂಟ್ರಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ಸೀಸನ್‌ನಲ್ಲಿ 50 ದಿನದ ಬಳಿಕ ಅವಿನಾಶ್ ಶೆಟ್ಟಿ, ಹಾಗೂ ಪವಿ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಈ ಬಾರಿ ರಜತ್ ಕಿಶನ್, ಶೋಭಾ ಶೆಟ್ಟಿ ದೊಡ್ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ.
ಯಾರು ಈ ರಜತ್, ಶೋಭಾ ಶೆಟ್ಟಿ?: ‘ರಾಜಾ ರಾಣಿ’ ರಿಯಾಲಿಟಿ ಶೋ ಗಮನ ಸೆಳೆದ ರಜತ್ ಕಿಶನ್ ಕಿರುತೆರೆಯಲ್ಲಿ ‘ಸೂಪರ್ ಜೋಡಿ’, ಸೂಪರ್ ಕಬ್ಬಡಿ’, ‘ಸಿಕ್ಸ್ತ್ ಸೆನ್ಸ್’ ರಿಯಾಲಿಟಿ ಮುಂತಾದ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
‘ರಾಜಾ ರಾಣಿʼಯಲ್ಲಿ ಅವರ ಜೋಡಿ ರನ್ನರ್ ಅಪ್ ಪ್ರಶಸ್ತಿ ಗೆದ್ದಿತ್ತು.
ಇನ್ನು ಶೋಭಾ ಶೆಟ್ಟಿ ಈ ಹಿಂದೆ ತೆಲುಗು ಬಿಗ್ ಬಾಸ್ ಸೀಸನ -7 ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಅಲ್ಲಿ ತಮ್ಮ ಜಗಳ, ಕಿರಿಕಿರಿಗಳಿಂದಾಗಿಯೇ ಹೆಚ್ಚು ಸದ್ದು ಮಾಡಿದ್ದರು. ನಟಿ ಆಗಿರುವ ಅವರು ಕಿರುತೆರೆಯಲ್ಲಿ ಮಿಂಚಿದ್ದು, ವ್ಲಾಗರ್ ಕೂಡ ಆಗಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವ್ಲಾಗ್ ವಿಡಿಯೋಗಳನ್ನು ಅವರು ಅಪ್ಲೋಡ್ ಮಾಡುತ್ತಿರುತ್ತಾರೆ.
ಇವರಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
BBK11: ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
BBK11: ಅತಿರೇಕಕ್ಕೆ ತಿರುಗಿದ ಬಿಗ್ ಬಾಸ್ ಟಾಸ್ಕ್.. ರಜತ್ – ಮಂಜು ನಡುವೆ ಹೈಡ್ರಾಮಾ
Kiccha Sudeep: ಬಿಗ್ ಬಾಸ್‌ಗೆ ಗುಡ್ ಬೈ.. ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕಿಚ್ಚ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.