BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Team Udayavani, Nov 18, 2024, 9:49 AM IST
ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಗೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಆಗಿದ್ದಾರೆ. ಇಬ್ಬರ ಎಂಟ್ರಿಯಿಂದ ಆಟದಲ್ಲಿ ಅಸಲಿ ರೋಚಕತೆ ಮೂಡಿದೆ.
ಬೆಳ್ಳಂಬೆಳ್ಳಗ್ಗೆ ರಜತ್ ಕಿಶನ್, ಶೋಭಾ ಶೆಟ್ಟಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರನ್ನು ನೋಡಿ ಬಿಗ್ ಬಾಸ್ ಮಂದಿ ಸರ್ಪೈಸ್ ಹಾಗೂ ಶಾಕ್ ಆಗಿದ್ದಾರೆ.
ಮನೆಗೆ ಬಂದ ಕೂಡಲೇ ಸ್ಪರ್ಧಿಗಳೊಂದಿಗೆ ರಜತ್ ಹಾಗೂ ಶೋಭಾ ಕುಣಿದು ಕುಪ್ಪಳಿಸಿದ್ದಾರೆ. ಆ ಬಳಿಕ ತೆಂಗಿನ ಕಾಯಿಯನ್ನು ಒಡೆದು ಯಾರು ಯಾರು ಹೇಗೆ ಹೇಗೆ ಇದ್ದಾರೆ ಎನ್ನುವುದನ್ನು ಹೇಳಿದ್ದಾರೆ.
“ತ್ರಿವಿಕ್ರಮ್ ನೀವು ಸ್ಟಾರ್ಟಿಂಗ್ ನಿಂದ ಏನು ಕಿತ್ತು ದಬ್ಬಕ್ಕಿಲ್ಲ. ಅದನ್ನು ನಾನು ವೈಲ್ಡ್ ಕಾರ್ಡ್ ಮೂಲಕ ಮಾಡಿ ತೋರಿಸುತ್ತೇನೆ” ಎಂದು ರಜತ್ ತೆಂಗಿನ ಕಾಯಿ ಒಡೆದು ಸವಾಲು ಹಾಕಿದ್ದಾರೆ.
“ಮಂಜು ಅವರು ನೀವು ಸ್ನೇಹಕ್ಕೆ ನಂಬಿಕೆಯ ವ್ಯಕ್ತಿಯಲ್ಲ. ಅವರು ನನ್ನ ಫ್ರೆಂಡ್ ಅಂತಾರೆ. ಅವರು ಬಗ್ಗೆ ಇವರು ಮಾತನಾಡುತ್ತಾರೆ. ಇವರು ಬಗ್ಗೆ ಅವರು ಮಾತನಾಡ್ತಾರೆ” ಎಂದು ಶೋಭಾ ಹೇಳಿದ್ದಾರೆ.
ಡಬಲ್ ವೈಲ್ಡ್ ಕಾರ್ಡ್ ಎಂಟ್ರಿಗೆ ಯಾರೆಲ್ಲಾ ಶೇಕ್ ಆದ್ರು?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/fCCMGDVdxj
— Colors Kannada (@ColorsKannada) November 18, 2024
“ಗೌತಮಿ ಅವರು ಇನ್ನು ಮುಖವಾಡವನ್ನು ಹಾಕಿಕೊಂಡಿದ್ದಾರೆ. ಆ ಮುಖವಾಡವನ್ನು ನಾನು ಬಯಲು ಮಾಡಬಹುದು” ಎಂದು ಶೋಭಾ ಹೇಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಸೋಮವಾರ (ನ.18ರಂದು) ಈ ಸಂಚಿಕೆ ಪ್ರಸಾರವಾಗಲಿದೆ.
ಡಬಲ್ ವೈಲ್ಡ್ ಕಾರ್ಡ್ ಎಂಟ್ರಿಗೆ ಯಾರೆಲ್ಲಾ ಶೇಕ್ ಆದ್ರು?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/fCCMGDVdxj
— Colors Kannada (@ColorsKannada) November 18, 2024
ಕಳೆದ ವಾರ ಅನುಷಾ ಅವರು ಬಿಗ್ ಬಾಸ್ ಪಯಣವನ್ನು ಮುಗಿಸಿದ್ದಾರೆ. ಅವರು ಹೋದ ಬಳಿಕ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಹನುಮಂತು ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಹೋಗಿದ್ದು, ಬಂದ ಕೆಲ ವಾರಗಳಲ್ಲೇ ಕಮಾಲ್ ಮಾಡಿದ್ದಾರೆ. ಇದೀಗ ಬಂದಿರುವ ರಜತ್, ಶೋಭಾ ಯಾವ ರೀತಿ ಆಟವನ್ನು ಆಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
BBK11: ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.