ವಿವಾಹ ದಿನಾಂಕವನ್ನು ಘೋಷಿಸಿದ ʼಬಿಗ್ ಬಾಸ್ 16ʼ ಖ್ಯಾತಿಯ ಅಬ್ದು ರೋಝಿಕ್: ಹುಡುಗಿ ಯಾರು?
Team Udayavani, May 11, 2024, 3:08 PM IST
ಮುಂಬಯಿ: ಸೋಶಿಯಲ್ ಮೀಡಿಯಾ ಪ್ರಭಾವಿ, ಬಿಗ್ ಬಾಸ್ 16 ಖ್ಯಾತಿಯ ಅಬ್ದು ರೋಝಿಕ್ ವಿವಾಹದ ದಿನಾಂಕವನ್ನು ಘೋಷಿಸಿದ್ದಾರೆ.
ಶುಕ್ರವಾರ(ಮೇ.10 ರಂದು) ಅವರು, ನಿಶ್ಚಿತಾರ್ಥವಾದ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಏ.24 ರಂದು ಅವರ ನಿಶ್ಚಿತಾರ್ಥವಾಗಿದ್ದು,ಶುಕ್ರವಾರ ಅದರ ಫೋಟೋವನ್ನು ಅವರು ಹಂಚಿಕೊಂಡು, ವಿವಾಹದ ದಿನಾಂಕವನ್ನು ಘೋಷಿಸಿದ್ದಾರೆ.
ತಜಕಿಸ್ತಾನಿ ಮೂಲದ 20 ವರ್ಷದ ಅಬ್ದು ಗಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ. ಎಮಿರಾಟಿ(ದುಬೈ) ಮೂಲದ 19 ವರ್ಷದ ಅಮೀರಾ ಅವರೊಂದಿಗೆ ಶಾರ್ಜಾದಲ್ಲಿ ಏಪ್ರಿಲ್ 24 ರಂದು ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಯಾರು ಈ ಅಮೀರಾ? : ಅಬ್ದು ಇಂದು ಕೋಟ್ಯಧಿಪತಿಯಾಗಿದ್ದಾರೆ. ಅವರು ಸೋಶಿಯಲ್ ಪ್ರಭಾವಿ ಆಗಿದ್ದಾರೆ. ಅಬ್ದು ಅವರ ಪತ್ನಿಯಾಗಲಿರುವ ಅಮೀರಾ 19 ವರ್ಷದ ವಯಸ್ಸಿನವರಾಗಿದ್ದು, ಅವರು ಶಾರ್ಜಾದಲ್ಲಿ ವಾಸಿಸುತ್ತಿದ್ದಾರೆ. ಪ್ರಸ್ತುತ ವ್ಯವಹಾರ ಆಡಳಿತವನ್ನು(Business administration) ಓದುತ್ತಿದ್ದಾರೆ. ಅಬ್ದು ಮತ್ತು ಅಮೀರಾ ಮೊದಲ ಬಾರಿಗೆ ಫೆಬ್ರವರಿ 2024 ರಲ್ಲಿ ದುಬೈ ಮಾಲ್‌ನಲ್ಲಿ ಭೇಟಿಯಾಗಿದ್ದರು.
ಇಬ್ಬರು ಮಾಲ್ ವೊಂದರಲ್ಲಿ ಭೇಟಿಯಾದ ಸಂದರ್ಭದಲ್ಲಿ ನಂಬರ್ ಎಕ್ಸ್ ಚೇಂಜ್ ಮಾಡಿಕೊಂಡಿದ್ದರು ಎಂದು ಸಂದರ್ಶನವೊಂದರಲ್ಲಿ ಅಬ್ದು ಹೇಳಿದ್ದಾರೆ.
“ಜೀವನದಲ್ಲಿ ನಾನು ಕೂಡ ಪ್ರೀತಿಯನ್ನು ಪಡೆಯುವ ಅದೃಷ್ಟಶಾಲಿ ಆಗುತ್ತೇನೆ ಎಂದು ಯಾವತ್ತೂ ಊಹಿಸಿರಲಿಲ್ಲ. ಜುಲೈ 7 ರ ದಿನಾಂಕವನ್ನು ನೆನಪು ಇಟ್ಟುಕೊಳ್ಳಿ” ಎಂದು ಅಬ್ದು ಹೇಳಿದ್ದಾರೆ.
ಬಿಗ್ ಬಾಸ್ 16 ನಲ್ಲಿ ಸ್ಪರ್ಧಿಯಾದ ಬಳಿಕ ಭಾರತದಲ್ಲಿ ಅಬ್ದು ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಅವರ ಹಾಡುಗಳು ವೇಗವಾಗಿ ವೈರಲ್ ಆಗಿವೆ. ಉದ್ಯಮದಲ್ಲೂ ಅವರು ಗುರುತಿಸಿಕೊಂಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.