BBK11:ಬಿಗ್‌ಬಾಸ್ ಸ್ಪರ್ಧಿ ಜಗದೀಶ್ ಬಗ್ಗೆ ಸ್ಫೋಟಕ ವಿಚಾರ ಬಯಲು ಮಾಡಿದ ಪ್ರಶಾಂತ್ ಸಂಬರಗಿ
ಜಗದೀಶ್ ಮೇಲೆ ಗರಂ ಆದ ಬಿಗ್ ಬಾಸ್ ಮಾಜಿ ಸ್ಪರ್ಧಿ..
Team Udayavani, Oct 3, 2024, 5:00 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ -11 (Bigg Boss Kannada-11) ರಲ್ಲಿ ಏರು ಧ್ವನಿಯಲ್ಲೇ ಮನೆಮಂದಿಯನ್ನು ಸೈಲೆಂಟ್ ಆಗಿಸಿರುವ ಜಗದೀಶ್ ವಿರುದ್ಧ ಮಾಜಿ ಬಿಗ್ ಬಾಸ್ ಸ್ಪರ್ಧಿಯೊಬ್ಬರು ಗರಂ ಆಗಿದ್ದಾರೆ.
ಮಾಜಿ ಸಚಿವರೊಬ್ಬರ ಸಿಡಿ ಕೇಸ್ ಬಯಲಿಗೆಳೆದ ಬಳಿಕ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಜಗದೀಶ್ (Jagadish) ಅವರನ್ನು ಜನ ʼವಕೀಲ್ ಸಾಬ್ʼ ಎಂದು ಕರೆಯುತ್ತಾರೆ. ಆದರೆ ಅವರ ವಕೀಲ ವೃತ್ತಿಯ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ (Prashanth Sambargi) ಪ್ರಶ್ನೆ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಅಬ್ಬರಿಸುತ್ತಿರುವ ಜಗದೀಶ್ ಅವರನ್ನು ನೋಡಿ ಆರಂಭದಲ್ಲಿ ಇವರು ಪ್ರಶಾಂತ್ ಸಂಬರಗಿ ಅಂತೆಯೇ ಇದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ದಿನ ಕಳೆಯುತ್ತದ್ದಂತೆ ಜಗದೀಶ್ ಅವರ ಅಸಲಿ ಆಟ ದೊಡ್ಮನೆಯೊಳಗೆ ಶುರುವಾಗಿದೆ.
ಸಹ ಸ್ಪರ್ಧಿಗಳ ಜತೆ ಜಗಳ ಮಾಡಿಕೊಂಡು, ಬಿಗ್ ಬಾಸ್ ರೂಲ್ಸ್‌ಗೂ ಕೇರ್ ಎನ್ನದೇ ಜಗದೀಶ್ ಅವರು ಪರಾಕ್ರಮ ತೋರಿಸಿದ್ದಾರೆ.
“ನಾನಿಲ್ಲಿ ಇರೋಕೆ ಇಷ್ಟವಿಲ್ಲ. ನಾನು ಕಾರ್ಯಕ್ರಮದಿಂದ ಹೊರ ನಡೆಯುವುದಕ್ಕೆ ಇಷ್ಟಪಡುತ್ತೇನೆ. ನಾನು ಮನಸ್ಸು ಮಾಡಿದರೆ ಈಗ ಹೆಲಿಕಾಪ್ಟರ್ ಕೂಡ ತರಿಸುತ್ತೇನೆ. ಆ ಸಾಮರ್ಥ್ಯ ನನ್ನಲ್ಲಿದೆ. ಹೊರಗಡೆ ನೀವೆಲ್ಲಾ ಏನೆಲ್ಲಾ ಮಾಫಿಯಾ ನಡೆಸುತ್ತಿದ್ದೀರೋ ಅದೆಲ್ಲವನ್ನು ಬಯಲು ಮಾಡುತ್ತೇನೆ. ನಾನು ಸರ್ಕಾರವನ್ನೇ ನಿಲ್ಲಿಸಿದವನು. ಈ ಡೋರ್ ಅನ್ನೇ ಉಡಾಯಿಸಿ ಬಿಡ್ತೇನೆ. ಪ್ರೋಗ್ರಾಂ ಹಾಳು ಮಾಡಿಲ್ಲ ಅಂದ್ರೆ ನೋಡು. ಯಾವನೂ ಕೂಡ ಇಲ್ಲಿಗೆ ಕಾಲಿಡಲ್ಲ ಹಾಗೆ ಮಾಡ್ತೇನೆ. ನನ್ನ ಹೆಸರು ಬರೆದಿಡು. ನಮ್ಮನ್ನು ಎದುರಿಸಿ ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸುತ್ತೀರಾ, ಓಡಿಸಿ..” ಎಂದು ಜಗದೀಶ್ ಅವರು ಓಪನ್ ಚಾಲೆಂಜ್ ಹಾಕಿದ್ದಾರೆ.
ಈ ವಿಡಿಯೋ ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ ಜಗದೀಶ್ ಅವರು ವಕೀಲರೇ ಅಲ್ಲವೆಂದು ಪ್ರಶಾಂತ್ ಸಾಕ್ಷಿಯೊಂದನ್ನು ಫೇಸ್ ಬುಕ್‌ನಲ್ಲಿ ಹಂಚಿಕೊಂಡು ಹೇಳಿದ್ದಾರೆ.
ಪ್ರಶಾಂತ್ ಸಂಬರಗಿ ಪೋಸ್ಟ್ ನಲ್ಲಿ ಏನಿದೆ?:
Bigg boss ಜಗದೀಶನ ಲಾ ಡಿಗ್ರಿ ಕ್ಯಾನ್ಸಲ್ ಆಗಿದೆ. ಆತನ 2nd PUC ಮಾರ್ಕ್ಸ್ ಕಾರ್ಡ್ ನಕಲಿ ಆಗಿರುವುದರಿಂದ, ನಂತರದ ಡಿಗ್ರಿಗಳು (ಕಾನೂನು ಡಿಗ್ರಿ ಸೇರಿ) ಮಾನ್ಯವಲ್ಲದಿದ್ದುದರಿಂದ ಆತನ ಸನ್ನದ್ದು ವಾಪಸ್ ಕೊಡುವಂತೆ ಬಾರ್ ಕೌನ್ಸಿಲ್ ಆದೇಶ ನೀಡಿದೆ.
ಅವರನ್ನು ಲಾಯರ್ ಸಾಹೇಬ್ ಎಂದು ಕರೆಯಬೇಡಿ. ಹಾಗೇ ಕರೆದರೆ ಅದು ವಕೀಲರಿಗೆ ಅವಮಾನ ಮಾಡಿದಂತೆ (Don’t call him lawyer shaeeb. It’s an insult to advocates) ಎಂದು ಬರೆದುಕೊಂಡಿದ್ದಾರೆ.
ಬಾರ್ ಕೌನ್ಸಿಲ್ ನೀಡಿರುವ ಸುತ್ತೊಲೆಯನ್ನು ಸಂಬರಗಿ ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
10-12 ವರ್ಷದಿಂದ ವಕೀಲ ವೃತ್ತಿ ಮಾಡುತ್ತಿದ್ದೇನೆ..
ಎಲ್ಲೆಲ್ಲಿ ನ್ಯಾಯ ಮರೆಯಾಗುತ್ತದೆ ಅಲ್ಲಿ ನ್ಯಾಯವನ್ನು ಉಳಿಸೋಕೆ ನಾನು ಬಂದೇ ಬರುತ್ತೇನೆ. ನಾನು ಈ ವಕೀಲ ವೃತ್ತಿಯನ್ನು 10-12 ವರ್ಷದಿಂದ ಮಾಡುತ್ತಿದ್ದೇನೆ. ಆ ನ್ಯಾಯವನ್ನು ಯಾರಿಗೆ ಧ್ವನಿ ಇರಲ್ವೋ ಅವರಿಗೆ ಹುಡುಕಿಕೊಡುವುದೇ ನನ್ನ ಕೆಲಸ. ಆ ನ್ಯಾಯವನ್ನು ಉಳಿಸೋಕೆ ನಾನು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತೇನೆ. ಒಂದು ಸಲಿ ನಾನು ಏನಾದರೂ ಡಿಸೈಡ್ ಮಾಡಿದರೆ ನನ್ನ ಮಾತನ್ನು ನಾನೇ ಕೇಳಲ್ಲ. ಕರ್ನಾಟಕದಲ್ಲಿ ನಾನೇ ಎಂದ ರಾಜಕಾರಣಿಗಳಿಗಿರಬಹದು. ನಾನೇ ಅಂದ ಪೊಲೀಸ್ ಅಧಿಕಾರಿಗಳು ಆಗಿರಬಹುದು ಗೊಂಡಾಗಳು ಆಗಿರಬಹುದು ಅವರನ್ನು ಅವರ ಯೋಗ್ಯತೆಯನ್ನು ತೋರಿಸಿಕೊಟ್ಟಿದ್ದೀನಿ ಎಂದು ಬಿಗ್ ಬಾಸ್ ಪರಿಚಯ ಮಾಡುವ ಪ್ರೋಮೊದಲ್ಲಿ ಜಗದೀಶ್ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಗ್ರೂಪ್ ಕಟ್ಕೊಂಡು ಆಡುವವರಿಗೆ ನಾನು ಸಿಂಗಲ್ ಸಿಂಹವೆಂದು ಎಚ್ಚರಿಕೆ ಕೊಟ್ಟ ಚೈತ್ರಾ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
BBK11: ಬಿಗ್ ಬಾಸ್ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್ ಚುಪ್ ಆದ ಮಂಜು.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.