![Udupi ಕ್ಷೇತ್ರದ ಯೋಜನೆಗಳಿಗೆ ವಿಶೇಷ ಅನುದಾನಕ್ಕೆ ಸಿಎಂಗೆ ಯಶ್‌ಪಾಲ್ ಸುವರ್ಣ ಮನವಿ](https://www.udayavani.com/wp-content/uploads/2025/02/mla-415x304.jpg)
![Udupi ಕ್ಷೇತ್ರದ ಯೋಜನೆಗಳಿಗೆ ವಿಶೇಷ ಅನುದಾನಕ್ಕೆ ಸಿಎಂಗೆ ಯಶ್‌ಪಾಲ್ ಸುವರ್ಣ ಮನವಿ](https://www.udayavani.com/wp-content/uploads/2025/02/mla-415x304.jpg)
Team Udayavani, Jul 27, 2024, 7:07 PM IST
ಬೆಂಗಳೂರು: ಬಿಗ್ ಬಾಸ್ (Bigg Boss) ಕಾರ್ಯಕ್ರಮ ಬಳಿಕ ಡ್ರೋನ್ ಪ್ರತಾಪ್ (Drone Pratap) ಮೇಲಿದ್ದ ಟೀಕೆಗಳು ಪ್ರೀತಿಯಾಗಿ ಬದಲಾಗಿದೆ. ಪ್ರತಾಪ್ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಯಾರ ಹಂಗಿಲ್ಲದೆ ತಮ್ಮಷ್ಟಕ್ಕೆ ತಾವು ಬದುಕುತ್ತಿದ್ದಾರೆ. ಅವರು ಮಾಡುತ್ತಿರುವ ಪುಣ್ಯದ ಕೆಲಸಗಳು ಅನೇಕರಿಗೆ ಸ್ಪೂರ್ತಿ ನೀಡಿದೆ.
ಟೀಕೆ- ಟ್ರೋಲ್ ಗಳಿಗೆ ಒಂದು ಕಾಲದಲ್ಲಿ ಆಹಾರವಾಗುತ್ತಿದ್ದ ಪ್ರತಾಪ್ ಬಿಗ್ ಬಾಸ್ ಕೊಟ್ಟ ಅವಕಾಶವನ್ನು ಒಳ್ಳೆಯ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ವೇದಿಕೆಯಲ್ಲಿ ಹೇಳಿದಂತೆ ಅವರಿಗೆ ಸಿಕ್ಕ ರನ್ನರ್ ಅಪ್ ಹಣವನ್ನು ಸಮಾಜಮುಖಿ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಇದೀಗ ತನ್ನ ಹುಟ್ಟುಹಬ್ಬಕ್ಕೆ ಬಡವರಿಗೆ ಕಣ್ಣಿನ ಆಪರೇಷನ್ ಮಾಡಿಸುತ್ತೇನೆ ಎನ್ನುವ ಮಾತನ್ನು ಹೇಳಿದಂತೆ ಮಾಡಿತೋರಿಸಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರತಾಪ್ ಅಂದು ಹೇಳಿದ್ದೇನು?: “ಸ್ನೇಹಿತರೇ ಎಲ್ಲರಿಗೂ ನಮಸ್ಕಾರ, ಡಾ.ರಾಜ್‌ಕುಮಾರ್ ಸರ್ ಹೇಳ್ತಾರೆ ನೇತ್ರದಾನ ಮಹಾದಾನ ಅಂತ. ಮುಂಬರುವ ಜೂನ್ 11ಕ್ಕೆ ನನ್ನ ಹುಟ್ಟುಹಬ್ಬವಿದೆ ಸ್ನೇಹಿತರೇ ನನಗಂತೂ ಭಾರೀ ಎಕ್ಸೈಟ್‌ಮೆಂಟ್ ಇದೆ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕು ಎಂದು ನಾನು ನಿರ್ಧರಿಸಿದ್ದೇನೆ. ಅದಕ್ಕಾಗಿ ಯಾರಾದರೂ ಬಡವರಿಗೆ 5 ಜನಕ್ಕೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ನಾನು ತೀರ್ಮಾನ ಮಾಡಿದ್ದೇನೆ. ನಿಮ್ಮಲ್ಲಿ ಯಾರಿಗಾದರೂ ಕಣ್ಣಿನ ಸಮಸ್ಯೆಯಿದ್ದರೆ ನಮಗೆ ಮೆಸೇಜ್ ಮಾಡಬಹುದು ಅಥವಾ ಕಮೆಂಟ್ ಮಾಡಿ ತಿಳಿಸಬಹುದು” ಎಂದಿದ್ದರು.
ಇದೀಗ ಅಜ್ಜಿಯೊಬ್ಬರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿದ್ದು, ಸಾರ್ಥಕತೆ ಕಂಡ ಭಾವದ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಳೆ ಬಂದರೆ ಮನೆ ಸೋರುತ್ತದೆ ಎಂದಾಗ ಅಜ್ಜಿ, ಹೌದು ಮಳೆಯಲ್ಲಿ ನೆನೆಯುತ್ತೇನೆ ಎಂದಿದ್ದಾರೆ. “ನನಗೆ ಎರಡು ಮಕ್ಕಳಿದ್ದಾರೆ. ಒಂದು ಗಂಡು, ಒಂದು ಹೆಣ್ಣು, ಹೆಣ್ಣು ಸರಿಯಾಗಿ ನೋಡಿಕೊಳ್ಳಲ್ಲ.ಇಷ್ಟು ದಿನ ನನಗೆ ಒಬ್ಬ ಮೊಮ್ಮಗ ಇದ್ದ, ಈಗ ಇನ್ನೊಬ್ಬ ಮೊಮ್ಮಗನಾಗಿ ನೀನು ಇದ್ದೀಯಾ. ನನಗೆ ನಿಜವಾಗಿಯೂ ಖುಷಿಯಾಗಿದೆ, ನಿನಗೆ ದೇವರು ಆಯುಷ್ಯ, ಆರೋಗ್ಯ ಕೊಟ್ಟು ಒಳ್ಳೆಯದನ್ನು ಮಾಡಲಿ” ಎಂದು ಅಜ್ಜಿ ಪ್ರತಾಪ್ ಅವರಿಗೆ ಹರಿಸಿದ್ದಾರೆ.
View this post on Instagram
ಹುಟ್ಟುಹಬ್ಬಕ್ಕೆ ದಿವಸ ದುಡ್ಡನ್ನು ಸುಮ್ಮನೆ ಎಲ್ಲೆಲ್ಲೋ ಖರ್ಚು ಮಾಡುವುದಕ್ಕಿಂತ ಬಡವರಿಗೆ ಕಣ್ಣಿನ ಆಪರೇಷನ್ ಗೆ ಬಳಸುತ್ತೇನೆ ಎಂದಿದ್ದೆ. ಅದರಂತೆ ಮೊದಲಿಗೆ ಈ ಅಜ್ಜಿಗೆ ಕಣ್ಣಿಗೆ ಆಪರೇಷನ್ ಮಾಡಿಸಿದ್ದೇನೆ. ಮುಂದೆ ಸಾಧ್ಯವಾದರೆ ಅಜ್ಜಿಯ ಬಳಿ ಮನೆ ಕಟ್ಟಿಸಿ ಕೊಡುತ್ತೇನೆ ಎಂದು ಪ್ರತಾಪ್ ಹೇಳಿದ್ದಾರೆ.
ಸದ್ಯ ಪ್ರತಾಪ್ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿಜವಾಗಿಯೂ ನೀವು ಮಾದರಿ ಎಂದು ಅನೇಕರು ಇವರ ಕೆಲಸಕ್ಕೆ ಶ್ಲಾಫಿಸಿದ್ದಾರೆ.
Bharjari Bachelors: ಜೀಕನ್ನಡ ವಾಹಿನಿಯಲ್ಲಿ ಶುರುವಾಗ್ತಿದೆ ಭರ್ಜರಿ ಬ್ಯಾಚುಲರ್ಸ್ ಸೀಸನ್ 2
Television actor: ಕಿರುತೆರೆ ನಟ ಬಾಳಪ್ಪ ವಿರುದ್ಧ ಮತ್ತೊಂದು ಕೇಸ್
Bro Gowda: ನಿಶ್ಚಿತಾರ್ಥ ಮಾಡಿಕೊಂಡ ʼಲಕ್ಷ್ಮೀ ಬಾರಮ್ಮʼ ಖ್ಯಾತಿಯ ಬ್ರೋ ಗೌಡ: ಹುಡುಗಿ ಯಾರು?
Controversy: ಅಶ್ಲೀಲ ಹೇಳಿಕೆ: 2ನೇ ಬಾರಿಗೆ ರಣವೀರ್ ಅಲಹಾಬಾದಿಯಾಗೆ ಪೊಲೀಸರ ಸಮನ್ಸ್
Zee Entertainers Comedy Awards 2025: ಜೀ ಕನ್ನಡದಲ್ಲಿ ‘ಕಾಮಿಡಿ’ ಸಮಾಗಮ!
Malpe: ಮಕ್ಕಳಿಗೆ ಪರೀಕ್ಷೆ: ಪ್ರವಾಸಿಗರ ಇಳಿಕೆ
Kundapura: ಸರ್ವಿಸ್ ರಸ್ತೆಗೂ ಸಿಗಲಿ ಡಾಮರು ಭಾಗ್ಯ!
Railway track case: ಮಕ್ಕಳೆಂದು ಸುಮ್ಮನಿರದೆ ಹುನ್ನಾರ ಬಯಲಿಗೆಳೆಯಬೇಕು: ಸಂಸದ ಕೋಟ
Udupi ಕ್ಷೇತ್ರದ ಯೋಜನೆಗಳಿಗೆ ವಿಶೇಷ ಅನುದಾನಕ್ಕೆ ಸಿಎಂಗೆ ಶಾಸಕ ಯಶ್‌ಪಾಲ್ ಮನವಿ
ಪರಶುರಾಮ ಮೂರ್ತಿ ವಿವಾದ; ಅಷ್ಟಮಂಗಲ ಪ್ರಶ್ನೆ ನಡೆಸಲು ಸಲಹೆ: ಮುನಿಯಾಲು ಉದಯ ಕುಮಾರ್ ಶೆಟ್ಟಿ
You seem to have an Ad Blocker on.
To continue reading, please turn it off or whitelist Udayavani.