![BR-patil1](https://www.udayavani.com/wp-content/uploads/2025/02/BR-patil1-415x249.jpg)
![BR-patil1](https://www.udayavani.com/wp-content/uploads/2025/02/BR-patil1-415x249.jpg)
Team Udayavani, Jan 29, 2025, 6:28 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ -11ರ ಟ್ರೋಫಿ ಗೆದ್ದ ಹನುಮಂತು (Hanumantha Lamani) ಊರಿನಲ್ಲಿ ಸಂಭ್ರಮ ಮನೆಮಾಡಿದೆ. ಹನುಮಂತು ಅವರನ್ನು ಸ್ವಾಗತ ಮಾಡಲು ಅವರ ಅಭಿಮಾನಿಗಳು ಊರಿನಲ್ಲಿ ಕಾಯುತ್ತಿದ್ದಾರೆ.
ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಹನುಮಂತು ತನ್ನ ಚತುರ ಆಟ, ವ್ಯಕ್ತಿತ್ವದಿಂದ ಕರುನಾಡ ವೀಕ್ಷಕರ ಮನಗೆದ್ದು 5ಕೋಟಿಗೂ ಹೆಚ್ಚಿನ ವೋಟ್ಸ್ ಪಡೆದು ಟ್ರೋಫಿ ಗೆದ್ದುಕೊಂಡಿದ್ದಾರೆ.
ಬಿಗ್ ಬಾಸ್‌ನಿಂದ ಗೆದ್ದುಕೊಂಡಿರುವ 50 ಲಕ್ಷ ರೂಪಾಯಿಂದ ಹನುಮಂತು ಒಂದು ಮನೆ ಕಟ್ಟಲಿದ್ದಾರೆ ಹಾಗೂ ಮದುವೆ ಆಗಲಿದ್ದಾರೆ ಎಂದು ಹೇಳಿದ್ದಾರೆ. ಹನುಮಂತು ಮದುವೆ ಬಗ್ಗೆ ಅವರ ಸಹೋದರ ಮಾರುತಿ ಅವರು ಮಾತನಾಡಿದ್ದಾರೆ.
ಹನುಮಂತು ಒಬ್ಬರನ್ನು ಪ್ರೀತಿಸುತ್ತಿದ್ದಾರೆ. ಅವರನ್ನೇ ಮದುವೆ ಆಗಲಿದ್ದಾರೆ ಎನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಅವರ ಸಹೋದರ ಮಾರುತಿ ಮಾತನಾಡಿದ್ದಾರೆ.
“ಸೋಶಿಯಲ್ ಮೀಡಿಯಾದಲ್ಲಿ ಹನುಮಂತು ಒಂದು ಹುಡುಗಿಯನ್ನು ಲವ್ ಮಾಡ್ತಾನೆ ಅಂಥ ಮಾತುಗಳು ಹರಿದಾಡುತ್ತಿದೆ” ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ಯಾರು ಹೇಳಿದ್ರು ಸೋಶಿಯಲ್ ಮೀಡಿಯಾದಲ್ಲಿ. ಯಾವ ಸೋಶಿಯಲ್ ಮೀಡಿಯಾದಲ್ಲಿ. ನಮ್ಮ ಮುಂದೆ ಯಾವ ಸೋಶಿಯಲ್ ಮೀಡಿಯಾದವರು ಈ ರೀತಿ ಹೇಳಿಲ್ಲ. ನಮ್ಮ ಎದುರಿಗೆ ಹೇಳಿ ಇದ್ದಿದ್ರೆ ನಾವೇ ಕೇಳ್ತಾ ಇದ್ದೀವಿ” ಎಂದಿದ್ದಾರೆ.
“ನಮ್ಮ ಸಂಪ್ರದಾಯ ಪ್ರಕಾರ ನಾವೇ ಮುಂದೆ ನಿಂತು ಮದುವೆ ಮಾಡಿಸುತ್ತೇವೆ. ನಾವೇ ಹೆಣ್ಣು ಹುಡುಕಿ ಮದುವೆ” ಮಾಡಿಸುತ್ತೇವೆ ಎಂದಿದ್ದಾರೆ.
“ಮದುವೆ ಸಿದ್ಧತೆ ಇನ್ನು ಆಗಿಲ್ಲ. ಹನುಮಂತು ಯಾವ ಹುಡುಗಿಯನ್ನು ಇಷ್ಟಪಟ್ಟಿದ್ದಾನೆ ಎನ್ನುವುದು ಗೊತ್ತಿಲ್ಲ. ಹುಡುಗಿ ನೋಡುವ ಅಂಥ ಹಿರಿಯರು ಹೇಳಿದ್ರೆ ಹುಡುಗಿ ನೋಡಿ ಮದುವೆ ಮಾಡಿಸುತ್ತೇವೆ” ಎಂದು ಮಾರುತಿ ಹೇಳಿದ್ದಾರೆ.
ಅವನು ಇನ್ನು ಬೆಂಗಳೂರಿನಲ್ಲೇ ಇದ್ದಾನೆ. ಅವನು ಬಂದ್ಮೇಲೆ ಯಾವ ರೀತಿ ಸಂಭ್ರಮ ಅನ್ನೋದನ್ನು ನಿರ್ಧರಿಸಬೇಕು ಎಂದಿದ್ದಾರೆ.
“ಚಿಕ್ಕವನು ಇದ್ದಾಗಲೇ ಅವನು ಕುರಿ ಮೇಯಿಸುವ ಟೈಮ್ ಅಲ್ಲಿ ಸ್ವಲ್ಪ ಸ್ವಲ್ಪ ಹಾಡುತ್ತಿದ್ದ. ಹನುಮಂತ ಗುಡಿ ಸೇವೆ ಇದ್ದಾಗ ಅಲ್ಲೂ ಹಾಡುತ್ತಿದ್ದ. ಆಂಜನೇಯನ ಕೃಪೆಯಿಂದ ಅವನು ಗೆದ್ದಿದ್ದಾನೆ. ಆಂಜನೇಯನೇ ಅವನ ಮೈಯೊಳಗೆ ಇದ್ದಾನೆ ಅಂಥ ಅನ್ನಿಸುತ್ತದೆ”ಎಂದು ಅವರ ಸಹೋದರ ಹೇಳಿದ್ದಾರೆ.
Television actor: ಕಿರುತೆರೆ ನಟ ಬಾಳಪ್ಪ ವಿರುದ್ಧ ಮತ್ತೊಂದು ಕೇಸ್
Bro Gowda: ನಿಶ್ಚಿತಾರ್ಥ ಮಾಡಿಕೊಂಡ ʼಲಕ್ಷ್ಮೀ ಬಾರಮ್ಮʼ ಖ್ಯಾತಿಯ ಬ್ರೋ ಗೌಡ: ಹುಡುಗಿ ಯಾರು?
Controversy: ಅಶ್ಲೀಲ ಹೇಳಿಕೆ: 2ನೇ ಬಾರಿಗೆ ರಣವೀರ್ ಅಲಹಾಬಾದಿಯಾಗೆ ಪೊಲೀಸರ ಸಮನ್ಸ್
Zee Entertainers Comedy Awards 2025: ಜೀ ಕನ್ನಡದಲ್ಲಿ ‘ಕಾಮಿಡಿ’ ಸಮಾಗಮ!
TRP: ಟಿಆರ್ಪಿಯಲ್ಲಿ ದಾಖಲೆ ಬರೆದ ʼಬಿಗ್ ಬಾಸ್ʼ ಫಿನಾಲೆ ಸಂಚಿಕೆ; ಪಡೆದ ಟಿವಿಆರ್ ಎಷ್ಟು?
ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ.ಆರ್.ಪಾಟೀಲ್‌ಗೆ ಹೊಸ ಹುದ್ದೆ!
IPL 2025: ಐಪಿಎಲ್‌ನ ಸಹ ಪ್ರಾಯೋಜಕತ್ವ: ಜಿಯೋಸ್ಟಾರ್ ಜೊತೆ ಕೈಜೋಡಿಸಿದ ಕ್ಯಾಂಪಾ
Rabkavi Banhatti: ಸಾಲಬಾಧೆಯಿಂದ ಬೇಸತ್ತು ಮಗ್ಗದ ಬಳಿಯೇ ನೇಕಾರ ಆತ್ಮಹ*ತ್ಯೆ
Maha Kumbh; ಮೋದಿ ನೇತೃತ್ವದಲ್ಲಿ ಮೊದಲ ಬಾರಿಗೆ ದೇಶದ ನಂಬಿಕೆಗೆ ಗೌರವ ಸಿಕ್ಕಿದೆ: ಯೋಗಿ
Sandalwood: ಮಾ.28ಕ್ಕೆ ಮನದ ಕಡಲು ತೆರೆಗೆ
You seem to have an Ad Blocker on.
To continue reading, please turn it off or whitelist Udayavani.