BBK10: ಬಿಗ್ ಬಾಸ್ ಫಿನಾಲೆಯಲ್ಲಿ ಘರ್ಜನೆ ನಿಲ್ಲಿಸಿದ ‘ಆನೆ’ ವಿನಯ್
Team Udayavani, Jan 28, 2024, 9:50 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್- 10 ಫಿನಾಲೆಯಲ್ಲಿ ಎರಡನೇ ಸ್ಪರ್ಧಿಯಾಗಿ ವರ್ತೂರು ಸಂತೋಷ್ ಅವರು ಹೊರಬಂದಿದ್ದಾರೆ. ಉಳಿದ ನಾಲ್ವರಲ್ಲಿ ಪೈಪೋಟಿ ಉಂಟಾಗಿದೆ.
ಬಿಗ್ ಬಾಸ್ ಟ್ರೋಫಿ ಯಾರು ಗೆಲ್ಲುತ್ತಾರೆ ಎನ್ನುವುದರ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಇದ್ದು, ಮತೊಬ್ಬ ಸ್ಪರ್ಧಿ ಮನೆಯಿಂದ ಔಟಾಗಿದ್ದಾರೆ.
ಸಂಗೀತಾ, ಕಾರ್ತಿಕ್, ವಿನಯ್ ಹಾಗೂ ಪ್ರತಾಪ್ ಅವರಿಗೆ ವೀಕ್ಷಕರ ಅಪಾರ ಬೆಂಬಲವಿದೆ. ಬಂದಿರುವ ಮತಗಳನ್ನು ಪರಿಗಣಿಸಿ ಇದೀಗ ಮೂರನೇ ಸ್ಪರ್ಧಿ ಬಿಗ್ ಬಾಸ್ ಫಿನಾಲೆ ರೇಸ್ ನಿಂದ ಹೊರಬಿದ್ದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಮೊದಲಿನಿಂದಲೂ ತನ್ನ ಏರುಧ್ವನಿಯಿಂದ ಹಾಗೂ ವ್ಯಕ್ತಿತ್ವ ದಿಂದಲೇ ‘ಆನೆ’ಯಾಗಿ ಸದ್ದು ಮಾಡಿದ ವಿನಯ್ ಅವರು ಎಲಿಮಿನೇಟ್ ಆಗಿದ್ದಾರೆ.
ಫಿನಾಲೆವೆರೆಗೂ ‘ಆನೆ’ಯ ಘರ್ಜನೆಯಂತೆಯೇ ದೊಡ್ಮನೆಯಲ್ಲಿ ಸದ್ದು ಮಾಡಿದ ವಿನಯ್ ಮನೆಯಲ್ಲಿ ನಡೆದ ಎಲಿಮಿನೇಟ್ ಪ್ರಕ್ರಿಯೆಯಲ್ಲಿ ಹೊರ ಬಂದಿದ್ದಾರೆ.
ನಾಲ್ಕು ಚಯರ್ ಗಳಲ್ಲಿ ನಾಲ್ವರನ್ನು ಕೂರಿಸಲಾಗಿದೆ. ಅದನ್ನು ರೌಂಡ್ ಆಗಿ ಸುತ್ತಿಸಲಾಗುತ್ತದೆ. ಬಜರ್ ಆಗುವ ವೇಳೆ ಯಾರ ಚಯರ್ ಖಾಲಿ ಇರುತ್ತದೆ ಅವರು ಮನೆಯಿಂದ ಹೊರ ಬರುತ್ತಾರೆ. ಈ ಪ್ರಕ್ರಿಯೆಯಲ್ಲಿ ವಿನಯ್ ಹೊರಗೆ ಬಂದಿದ್ದಾರೆ.
ವೇದಿಕೆಯಲ್ಲಿ ಮಾತಾನಾಡಿದ ವಿನಯ್,ಸ್ವಲ್ಪ ಶಾಕ್ ಆಯಿತು. ವೀಕ್ಷಕರು ತುಂಬಾ ಪ್ರೀತಿ ಕೊಟ್ಟಿದ್ದಾರೆ. ಇವರ ಪ್ರೀತಿ ಇರದಿದ್ದರೆ ನಾನು ಇಲ್ಲಿಯವರೆಗೆ ಬರುತ್ತಿರಿಲ್ಲ. ಇಷ್ಟ ಬೇಗ ನಾನು ಹೊರಗೆ ಬರುತ್ತೇನೆ ಅಂಥ ನಿರೀಕ್ಷೆ ಮಾಡಿರಲಿಲ್ಲ. ನನಗೆ ಚೂರು ಬೇಜಾರ್ ಇದೆ. ಆದರೆ ಹೊರಗಡೆ ಬಂದು ಜನರ ಪ್ರೀತಿಯನ್ನು ಸ್ವೀಕರಿಸಲು ಖುಷಿ ಆಗುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ತಾಯಿಯನ್ನು ನೆನೆದು ಬಿಗ್ ಬಾಸ್ ವೇದಿಕೆಯಲ್ಲೇ ಕಣ್ಣೀರಿಟ್ಟ ಕಿಚ್ಚ ಸುದೀಪ್
Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್
BBK11: ಮನೆಯವರ ಸಲಹೆ – ಸಂದೇಶ ಕೇಳಿ ಸ್ಪರ್ಧಿಗಳಿಗೆ ಹೊಸ ಉತ್ಸಾಹ ತುಂಬಿದ ಬಿಗ್ ಬಾಸ್
Lawyer Jagadish: ಬಿಗ್ ಬಾಸ್ ಆಯಿತು ಈಗ ಡ್ಯಾನ್ಸ್ ಶೋಗೆ ಬಂದ ಜಗದೀಶ್!!
ಕಿರುತೆರೆಯಲ್ಲಿ ಹೊಸ ಶೋ ʼಜೀ಼ ಎಂಟರ್ಟೈನರ್ಸ್ʼ
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.