Bigg Boss ಸ್ಪರ್ಧಿಗಳಿಗೆ ಸಿಕ್ತು ಮನೆಯವರ ಅಪ್ಪುಗೆ; ಭಾವುಕ ಕ್ಷಣಕ್ಕೆ ಸಾಕ್ಷಿಯಾದ ದೊಡ್ಮನೆ
Team Udayavani, Dec 26, 2023, 12:42 PM IST
ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 10 ಫಿನಾಲೆ ವಾರಕ್ಕೆ ಹತ್ತಿರವಾಗುತ್ತಿದೆ. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದೆ. ಆ ನಿಟ್ಟಿನಲ್ಲಿ ಮನೆಯೊಳಗಿನ ಸ್ಪರ್ಧಿಗಳು ಕೂಡ ತನ್ನ ಗೇಮಿಂಗ್ ಸ್ಟ್ರಾಟಜಿಯನ್ನು ಚೇಂಜ್ ಮಾಡಿಕೊಳ್ಳುತ್ತಿದ್ದಾರೆ.
ಇಷ್ಟು ದಿನ ದೊಡ್ಮನೆಯಲ್ಲಿ ತನ್ನ ದೊಡ್ಡ ಧ್ವನಿಯಿಂದಲೇ ಸದ್ದು ಮಾಡಿದ ವಿನಯ್ ಹಾಗೂ ಸಂಗೀತಾ ಮತ್ತೆ ಸ್ನೇಹಿತರಾಗಿದ್ದಾರೆ. ಇನ್ಮುಂದೆ ಸಾಫ್ಟ್ ಆಗಿ ಗೇಮ್ ಆಡೋದಾಗಿ ವಿನಯ್ ಹೇಳಿರುವುದನ್ನು ಕಳೆದ ಎಪಿಸೋಡ್ ನಲ್ಲಿ ತೋರಿಸಲಾಗಿದೆ. ಈ ನಡುವೆ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ.
ಅಂತಿಮ ಕೆಲ ವಾರಗಳಲ್ಲಿ ದೊಡ್ಮನೆಯಲ್ಲಿ ಉಳಿದು, ವೀಕ್ಷಕರ ಮನ ಗೆಲ್ಲುವತ್ತ ಸ್ಪರ್ಧಿಗಳು ಗಮನ ಹರಿಸುತ್ತಿರುವುದು ಬಿಗ್ ಬಾಸ್ ಆಟದಲ್ಲಿ ಗೊತ್ತಾಗುತ್ತಿದೆ. ಮನೆ ಬಿಟ್ಟು, ಮೊಬೈಲ್, ಬಂಧು – ಬಳಗದಿಂದ ದೂರವಿದ್ದು ʼಬಿಗ್ ಬಾಸ್ʼ ಮನೆಯಲ್ಲಿರುವ ಸ್ಪರ್ಧಿಗಳಿಗೆ ʼಬಿಗ್ ಬಾಸ್ʼ ಸ್ವೀಟ್ ಸರ್ಪ್ರೈಸ್ ನೀಡಿದ್ದಾರೆ. ಸ್ಪರ್ಧಿಗಳ ಮನೆಯವರು ಬಿಗ್ ಬಾಸ್ ಮನೆಗೆ ಬಂದು ತನ್ನವರಿಗೆ ಪಾಠ ಹೇಳಿದ್ದಾರೆ.
ಎಲ್ಲರೂ ನಿಂತ ಜಾಗದಲ್ಲೇ ನಿಲ್ಲುವಂತೆ ಹೇಳಿ ಮನೆಯವರನ್ನು ಕರೆಸಲಾಗಿದೆ. ವರ್ತೂರು ಸಂತೋಷ್ ಹಾಗೂ ನಮೃತಾ ಅವರ ತಾಯಿ ಬರುವುದನ್ನು ತೋರಿಸಲಾಗಿದೆ. ಮಕ್ಕಳನ್ನು ಅಪ್ಪಿಕೊಂಡು ಭಾವುಕರಾಗುವ ಕ್ಷಣವನ್ನು ಪ್ರೋಮೋದಲ್ಲಿ ತೋರಿಸಲಾಗಿದೆ.
ವರ್ತೂರು ಸಂತೋಷ್ ಹಾಗೂ ನಮೃತಾ ಅವರ ತಾಯಿ ಮನೆಯ ಇತರೆ ಸದಸ್ಯರಿಗೆ ಸ್ಪೂರ್ತಿಯ ಮಾತುಗಳನ್ನು ಹೇಳಿ ಧೈರ್ಯ ತುಂಬಲಿದ್ದಾರೆ.
ಇತರೆ ಸ್ಪರ್ಧಿಗಳ ಮನೆಯವರು ಯಾರೆಲ್ಲಾ ಬರುತ್ತಾರೆ ಎನ್ನುವುದರ ಬಗ್ಗೆ ಕುತೂಹಲವನ್ನು ರಿವೀಲ್ ಮಾಡಿಲ್ಲ. ಮನೆಯವರಿಂದ ಮೂರು ವರ್ಷದಿಂದ ದೂರವಿರುವ ಪ್ರತಾಪ್ ಅವರಿಗೆ ಬಿಗ್ ಬಾಸ್ ಯಾವ ಸರ್ಪ್ರೈಸ್ ನೀಡಲಿದ್ದಾರೆ ಎನ್ನುವುದರ ಬಗ್ಗೆಯೂ ಕುತೂಹಲವನ್ನು ಹಾಗೆಯೇ ಇಡಲಾಗಿದೆ.
ಇಂದು ರಾತ್ರಿ(ಡಿ.26 ರಂದು) ಈ ಎಪಿಸೋಡ್ ಪ್ರಸಾರವಾಗಲಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಗ್ರೂಪ್ ಕಟ್ಕೊಂಡು ಆಡುವವರಿಗೆ ನಾನು ಸಿಂಗಲ್ ಸಿಂಹವೆಂದು ಎಚ್ಚರಿಕೆ ಕೊಟ್ಟ ಚೈತ್ರಾ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
BBK11: ಬಿಗ್ ಬಾಸ್ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್ ಚುಪ್ ಆದ ಮಂಜು.!
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.