BBK10: ಇವರೇ ಬಿಗ್ ಬಾಸ್ ವಿನ್ನರ್ – ರನ್ನರ್..? ಯಾರ ಪರ ವೋಟಿಂಗ್ ಟ್ರೆಂಡ್
ಸಮೀಕ್ಷೆ ಪ್ರಕಾರ ಇವರೇ ಟ್ರೆಂಡ್…
Team Udayavani, Jan 27, 2024, 3:31 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ -10ರ ಫಿನಾಲೆ ಇನ್ನೇನು ಕೆಲವೇ ಕ್ಷಣಗಳು ಮಾತ್ರ ಬಾಕಿ ಉಳಿದಿದೆ. ಫಿನಾಲೆಯಲ್ಲಿ ತನ್ನ ಮೆಚ್ಚಿನ ಸ್ಪರ್ಧಿ ಗೆಲ್ಲಬೇಕೆನ್ನುವ ಕಾರಣ ವೀಕ್ಷಕರು ವೋಟ್ ಮಾಡುತ್ತಿದ್ದಾರೆ.
113 ದಿನಗಳ ದೊಡ್ಮನೆ ಜರ್ನಿ ಮುಗಿಸಿ ಅಂತಿಮವಾಗಿ 6 ಜನರು ಫಿನಾಲೆ ಸ್ಥಾನಿಯಾಗಿ ವೇದಿಕೆಗೆ ಬರಲಿದ್ದಾರೆ. ಕಿಚ್ಚ ಸುದೀಪ್ ಯಾರ ಕೈ ಎತ್ತಿ ಇವರೇ ವಿನ್ನರ್ ಎಂದು ಘೋಷಿಸುವವರೆಗೂ ವೀಕ್ಷಕರಲ್ಲಿ ಕುತೂಹಲ ಹಾಗೆಯೇ ಮನೆ ಮಾಡಿರುತ್ತದೆ.
ಸಂಗೀತಾ, ಕಾರ್ತಿಕ್, ವಿನಯ್, ಪ್ರತಾಪ್, ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಅವರು ಫಿನಾಲೆಗೆ ಕಾಲಿಟ್ಟಿದ್ದಾರೆ. ಇವರಲ್ಲಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲಲಿದ್ದಾರೆ.
ಸಮೀಕ್ಷೆ ಪ್ರಕಾರ ಇವರೇ ಟ್ರೆಂಡ್…
ಬಿಗ್ ಬಾಸ್ ನೋಡುವ ವೀಕ್ಷಕರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳಲು ‘ಸ್ಟಡಿ ಬಜ್ʼ ಎನ್ನುವ ವೆಬ್ ಸೈಟ್ ವೊಂದು ಸಮೀಕ್ಷೆ ಮಾಡಿದ್ದು, ಈ ವೆಬ್ ಸೈಟ್ ನಲ್ಲಿ ಬಂದ ಟ್ರೆಂಡ್ ಪ್ರಕಾರ ಡ್ರೋನ್ ಪ್ರತಾಪ್ ಅವರು ಅತೀ ಹೆಚ್ಚು ಮತ ಪಡೆದು ಮುಂಚೂಣಿಯಲ್ಲಿದ್ದಾರೆ ಎಂದು ತೋರಿಸಿರುವುದನ್ನು ʼಒನ್ ಇಂಡಿಯಾʼ ವರದಿ ಮಾಡಿದೆ.
ಈ ವೆಬ್ ಸೈಟ್ ಸಮೀಕ್ಷೆಯಲ್ಲಿ ಬಂದ ಪ್ರಕಾರ, ಪ್ರತಾಪ್ ಅವರು ಶೇ. 40ರಷ್ಟು ಮತ (1,55,922 ಮತಗಳು) ಗಳಿಸಿದ್ದಾರೆ. ಅವರ ಹತ್ತಿರದ ಸ್ಪರ್ಧಿ ಕಾರ್ತಿಕ್ ಅವರು, ಶೇ.31ರಷ್ಟು ಮತ (1,20,847 ಮತ) ಗಳಿಸಿದ್ದಾರೆ. ಇನ್ನು ಸಂಗೀತಾ ಶೇ.12 (49,482 ಮತ) ಮತ ಪಡೆದು ಮೂರನೇ ಸ್ಥಾನದಲ್ಲಿದ್ದರೆ, ವರ್ತೂರು ಸಂತೋಷ್ ಶೇ.8 ಮತ (31,713 ಮತ) ಪಡೆದಿದ್ದಾರೆ.
ವಿನಯ್ ಕೇವಲ ಶೇ.6ರಷ್ಟು (22,953 ಮತ) ಗಳಿಸಿದ್ದಾರೆ. ಇದರರ್ಥ ಅವರು ಐದನೇ ಸ್ಥಾನಕ್ಕೆ ಬರುತ್ತಾರೆ ಮತ್ತು ಅಂತಿಮ ಸ್ಪರ್ಧಿಗಳಲ್ಲಿ ತುಕಾಲಿ ಸಂತೋಷ್ ಅವರು ಕನಿಷ್ಠ ಮತಗಳನ್ನು ಪಡೆದಿದ್ದಾರೆ.
ಇದು ಅಧಿಕೃತ ಸಮೀಕ್ಷೆಯಲ್ಲ ಮತ್ತು ಮತದಾನವು ಇನ್ನೂ ಪ್ರಗತಿಯಲ್ಲಿರುವ ಕಾರಣ ಫಲಿತಾಂಶದ ಲೆಕ್ಕಚಾರ ಬದಲಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಇವರೇ ವಿನ್ನರ್, ರನ್ನರ್ ಅಪ್..?: ಫಿನಾಲೆಯಲ್ಲಿರುವ ಆರು ಜನರ ಪೈಕಿ ಇಂದಿನ ಸಂಚಿಕೆಯಲ್ಲಿ ಮೂವರು ಎಲಿಮಿನೇಟ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವಿನ್ನರ್ , ರನ್ನರ್ ಅಪ್ ಗಳ ನಾನಾ ಊಹಾಪೋಹಾಗಳು ಹರಿದಾಡುತ್ತಿದೆ.
ಸಂಗೀತಾ ಶೃಂಗೇರಿ ಬಿಗ್ ಬಾಸ್ ಟ್ರೋಫಿ ಗೆಲ್ಲುವ ಪ್ರಬಲ ಸ್ಪರ್ಧಿಗಳಲ್ಲಿ ಕೇಳಿ ಬರುತ್ತಿರುವ ಮೊದಲ ಹೆಸರು. ಸದ್ಯದ ಸೋಶಿಯಲ್ ಮೀಡಿಯಾ ಟ್ರೆಂಡ್ ಗಳ ಪ್ರಕಾರ ಸಂಗೀತಾ ಬಿಗ್ ಬಾಸ್ ವಿಜೇತರಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕಾರ್ತಿಕ್ ಮಹೇಶ್ ರನ್ನರ್ ಅಪ್ ಆಗಲಿದ್ದಾರೆ. ಡ್ರೋನ್ ಪ್ರತಾಪ್ ಫಸ್ಟ್ ರನ್ನರ್ ಅಪ್ ಆಗಲಿದ್ದಾರೆ ಎನ್ನಲಾಗುತ್ತಿದೆ.
ಆದರೆ ಯಾವುದಕ್ಕೂ ಫಿನಾಲೆ ಎಪಿಸೋಡ್ ಮುಕ್ತಾಯದವರೆಗೂ ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Martin: ಕಿರುತೆರೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಧ್ರುವ ಸರ್ಜಾ ನಟನೆಯ ʼಮಾರ್ಟಿನ್ʼ
BBK11: ದಯವಿಟ್ಟು ಬಿಗ್ ಬಾಸ್ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್
BBK11: ಮೋಕ್ಷಿತಾ ತೊಡೆ ಮೇಲೆ ಕೂತ ರಜತ್.. ಅತಿಥಿಗಳ ವರ್ತನೆಗೆ ಸಿಬ್ಬಂದಿಗಳು ಸುಸ್ತು.!
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.