BBK11: ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ.. ನಾನು ಬಿಗ್‌ಬಾಸ್‌ನಿಂದ ಹೊರ ಹೋಗ್ತೇನೆ – ಜಗದೀಶ್
ನಾನು ಮನಸ್ಸು ಮಾಡಿದ್ರೆ ಬಿಗ್ ಬಾಸ್ ಬಾಗಿಲನ್ನೇ ಉಡಾಯಿಸಿ ಬಿಡ್ತೇನೆ..
Team Udayavani, Oct 3, 2024, 1:13 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ-11 (Bigg Boss Kannada)ದ ಆರಂಭಿಕ ವಾರದಲ್ಲೇ ಸ್ಪರ್ಧಿಗಳ ನಡುವಿನ ಕಿತ್ತಾಟ ತಾರಕಕ್ಕೇರಿದೆ.
ಶೋ ಶುರುವಾದ ಎರಡು – ಮೂರುದಿನದಲ್ಲೇ ʼಸ್ವರ್ಗ – ನರಕʼವಾಗಿದ್ದ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ. ಟಾಸ್ಕ್ , ನಿಯಮ ಎಲ್ಲವನ್ನೂ ಕೆಲ ಸ್ಪರ್ಧಿಗಳ ಉಲ್ಲಂಘಿಸುವ ಮೂಲಕ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಜಗಳವೇ ಹೈಲೈಟ್ ಆಗುವಂತೆ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗದು.
ಚೈತ್ರಾ ಕುಂದಾಪುರ, ಯುಮುನಾ ಅವರ ನಡುವೆ ಆರಂಭದಲ್ಲಿ ಮಾತಿನ ಚಕಮಕಿ ನಡೆದಿತ್ತು. ಇದಾದ ಬಳಿಕ ಕಳೆದ ಎರಡು ದಿನಗಳಿಂದ ಬಿಗ್ ಬಾಸ್ ಮನೆಯಲ್ಲಿ ʼವಕೀಲ್ ಸಾಬ್ʼ ಜಗದೀಶ್(Lawyer Jagadish) ಅವರ ಡಾಮಿನೇಟ್ ಗೇಮ್ ಬಿಗ್ ಬಾಸ್ ಸಹ ಸ್ಪರ್ಧಿಗಳು ಗರಂ ಆಗುವಂತೆ ಮಾಡಿದೆ.
ಟಾಸ್ಕ್ ವಿಚಾರಕ್ಕೆ ಸಂಬಂಧಪಟ್ಟಂತೆ ಧನರಾಜ್ ಅವರನ್ನು ಒಂದು ರೀತಿ ವ್ಯಂಗ್ಯವಾಗಿಸಿಕೊಂಡು ಮಾತನಾಡಿದ ಜಗದೀಶ್ ಆ ಬಳಿಕ ಮಾನಸ ಅವರಿಗೆ ಯಾವ ಸೀಮೆ ಹೆಣ್ಣು ಎಂದು ಹೇಳಿದ್ದರು. ಇದಾದ ನಂತರ ಉಗ್ರಂ ಮಂಜು, ಧರ್ಮ ಕೀರ್ತಿರಾಜ್, ತ್ರಿವಿಕ್ರಮ್, ಶಿಶಿರ್ ಶಾಸ್ತ್ರಿ ಅವರ ಜತೆಯೂ ಜಗದೀಶ್ ಮಾತಿನ ಮಲ್ಲಯುದ್ಧವನ್ನು ನಡೆಸಿದ್ದಾರೆ.
ನಾನು ಆಚೆ ಹೋಗಿ ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡುತ್ತೇನೆ ಎಂದು ಜಗದೀಶ್ ಕ್ಯಾಮೆರಾ ಮುಂದೆ ಹೇಳಿದ್ದಾರೆ.
ಯಾರು ತಿಳಿಯರು ಲಾಯರ್ ಜಗದೀಶ್ ಪರಾಕ್ರಮ!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/84xuWaEJVq
— Colors Kannada (@ColorsKannada) October 3, 2024
“ನಾನಿಲ್ಲಿ ಇರೋಕೆ ಇಷ್ಟವಿಲ್ಲ. ನಾನು ಕಾರ್ಯಕ್ರಮದಿಂದ ಹೊರ ನಡೆಯುವುದಕ್ಕೆ ಇಷ್ಟಪಡುತ್ತೇನೆ. ನಾನು ಮನಸ್ಸು ಮಾಡಿದರೆ ಈಗ ಹೆಲಿಕಾಪ್ಟರ್ ಕೂಡ ತರಿಸುತ್ತೇನೆ. ಆ ಸಾಮರ್ಥ್ಯ ನನ್ನಲ್ಲಿದೆ. ಹೊರಗಡೆ ನೀವೆಲ್ಲಾ ಏನೆಲ್ಲಾ ಮಾಫಿಯಾ ನಡೆಸುತ್ತಿದ್ದೀರೋ ಅದೆಲ್ಲವನ್ನು ಬಯಲು ಮಾಡುತ್ತೇನೆ. ನಾನು ಸರ್ಕಾರವನ್ನೇ ನಿಲ್ಲಿಸಿದವನು. ಈ ಡೋರ್ ಅನ್ನೇ ಉಡಾಯಿಸಿ ಬಿಡ್ತೇನೆ. ಪ್ರೋಗ್ರಾಂ ಹಾಳು ಮಾಡಿಲ್ಲ ಅಂದ್ರೆ ನೋಡು. ಯಾವನೂ ಕೂಡ ಇಲ್ಲಿಗೆ ಕಾಲಿಡಲ್ಲ ಹಾಗೆ ಮಾಡ್ತೇನೆ. ನನ್ನ ಹೆಸರು ಬರೆದಿಡು. ನಮ್ಮನ್ನು ಎದುರಿಸಿ ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸುತ್ತೀರಾ, ಓಡಿಸಿ..” ಎಂದು ಜಗದೀಶ್ ಅವರು ಓಪನ್ ಚಾಲೇಂಜ್ ಹಾಕಿರುವ ಪ್ರೋಮೊವನ್ನು ತೋರಿಸಲಾಗಿದೆ.
ಇಂದು ರಾತ್ರಿ(ಅ.3ರಂದು) ಈ ಸಂಚಿಕೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Zee Entertainers Comedy Awards 2025: ಜೀ ಕನ್ನಡದಲ್ಲಿ ‘ಕಾಮಿಡಿ’ ಸಮಾಗಮ!
TRP: ಟಿಆರ್ಪಿಯಲ್ಲಿ ದಾಖಲೆ ಬರೆದ ʼಬಿಗ್ ಬಾಸ್ʼ ಫಿನಾಲೆ ಸಂಚಿಕೆ; ಪಡೆದ ಟಿವಿಆರ್ ಎಷ್ಟು?
Bharjari Bachelors Show: ʼಬ್ಯಾಚುಲರ್ಸ್’ ಬದುಕಿಗೆ ಬಣ್ಣ ತುಂಬಲು ಬಂದ ಕ್ರೇಜಿ ಸ್ಟಾರ್
Game Changer : ಈ ದಿನ ಒಟಿಟಿಗೆ ಬರಲಿದೆ ಶಂಕರ್ – ರಾಮ್‌ಚರಣ್‌ರ ʼಗೇಮ್ ಚೇಂಜರ್ʼ
ಅರುಣಾಚಲ ಪ್ರದೇಶದವರು ನಾಯಿ ಮಾಂಸ ಸೇವಿಸುತ್ತಾರೆ ಎಂದ ಕಾಮಿಡಿ ಶೋನ ಸ್ಪರ್ಧಿ ವಿರುದ್ಧ FIR
MUST WATCH
ಹೊಸ ಸೇರ್ಪಡೆ
CIBIL Score ನಿಂದ ಲೋನ್ ರದ್ದಾಗಿದ್ದು ಕೇಳಿದ್ದೇವೆ… ಮದುವೆ ರದ್ದಾಗಿದ್ದು ಕೇಳಿದ್ದೀರಾ?
Darshan: ವಿಡಿಯೋ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ನಟ ದರ್ಶನ್
Hunsur: ಅಪರಿಚಿತ ವೃದ್ದರ ಶವ ಪತ್ತೆ
Shimoga: ವಿಮಾನದಿಂದ ಜಿಗಿದಾಗ ಪ್ಯಾರಚೂಟ್ ತೆರೆಯದೆ ಹೊಸನಗರ ಮೂಲದ ಅಧಿಕಾರಿ ಸಾವು
Delhi Polls Results 2025:ದೆಹಲಿಯಲ್ಲಿ ಸತತ 3ನೇ ಅವಧಿಗೂ ಕಾಂಗ್ರೆಸ್ ಶೂನ್ಯ ಸಂಪಾದನೆ!?